ಭಾರತದ ವಿಶ್ವ ಫ‌ುಟ್‌ಬಾಲ್‌ ಹೆಜ್ಜೆ


Team Udayavani, Oct 6, 2017, 6:10 AM IST

PTI10_4_2017_000130B.jpg

ಹೊಸದಿಲ್ಲಿ: ಅಕ್ಟೋಬರ್‌ ಆರರ ಶುಕ್ರವಾರ ಭಾರತೀಯ ಫ‌ುಟ್‌ಬಾಲ್‌ ಇತಿ ಹಾಸದ ಸ್ಮರಣೀಯ ದಿನ. ವಿಶ್ವಕಪ್‌ ಫ‌ುಟ್‌ಬಾಲ್‌ನಲ್ಲಿ ಭಾರತದ ಮೊದಲ ಹೆಜ್ಜೆ ಮೂಡಲಿರುವ ಸಂಭ್ರಮದ ಕ್ಷಣ. ಕ್ರಿಕೆಟ್‌ ಪ್ರಿಯರ ನಾಡಿನಲ್ಲಿ ಕಾಲ್ಚೆಂಡಿನ ಮಹಾಸಂಗ್ರಾಮವೊಂದನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ. 

ಹೌದು, ಈವರೆಗೆ ಯಾವುದೇ ವಯೋ ಮಿತಿಯ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ನಲ್ಲಿ ಆಡುವ ಅವಕಾಶವನ್ನೇ ಪಡೆಯದ ಭಾರತ ದಿಢೀರನೇ ಜಾಗತಿಕ ಫ‌ುಟ್‌ಬಾಲ್‌ ನಕಾಶೆಯಲ್ಲಿ ತನ್ನದೊಂದು ಮುದ್ರೆಯೊತ್ತಿದೆ. ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಅತ್ಯಧಿಕ ಸಂಖ್ಯೆಯ ವೀಕ್ಷಕರನ್ನು, ಅಭಿಮಾನಿಗಳನ್ನು, ಅಭಿಮಾನದ ಅತಿರೇಕವನ್ನು ಹೊಂದಿರುವ ಫ‌ುಟ್‌ಬಾಲ್‌ನಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಮುಂದಡಿ ಇರಿಸಿದೆ.  

ಮೊದಲ ಬಾರಿಗೆ ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ ಆತಿಥ್ಯ ಭಾರತಕ್ಕೆ ಒಲಿದಿರುವುದು ಮಹಾಭಾಗ್ಯವೇ ಸರಿ. ಇದರ ಜತೆಗೆ ವಿಶ್ವಕಪ್‌ ಫ‌ುಟ್‌ಬಾಲ್‌ ಇತಿಹಾಸದಲ್ಲೇ ಭಾರತ ತನ್ನ ಮೊದಲ ಪಂದ್ಯವನ್ನು ಶುಕ್ರವಾರ ರಾತ್ರಿ ಆಡಲಿಳಿಯಲಿದೆ. “ಎ’ ಗುಂಪಿನ ಈ ಪಂದ್ಯದಲ್ಲಿ ಭಾರತದ ಎದುರಾಳಿಯಾಗಿರುವ ತಂಡ ಬಲಿಷ್ಠ ಅಮೆರಿಕ. ಹೊಸದಿಲ್ಲಿಯ “ಜವಾಹರಲಾಲ್‌ ನೆಹರೂ ಸ್ಟೇಡಿಯಂ’ನಲ್ಲಿ ಈ ಪಂದ್ಯ ಸಾಗಲಿದೆ.

ನಿದ್ರಾವಸ್ಥೆಯಲ್ಲಿ ಭಾರತ!
ಫ‌ುಟ್‌ಬಾಲ್‌ನಲ್ಲಿ ಇನ್ನೂ ನಿದ್ರಾವಸ್ಥೆಯಲ್ಲೇ ಇರುವ ಭಾರತ ಈ ಕೂಟದಲ್ಲಿ ಅಮೋಘ ಪ್ರದರ್ಶನ ನೀಡಲಿದೆ, ಪವಾಡ ಸಾಧಿಸಲಿದೆ ಎಂಬ ನಿರೀಕ್ಷೆ ಯಾರಲ್ಲೂ ಇಲ್ಲ. ಭಾರತಕ್ಕೆ ಇಲ್ಲಿ ಅವಕಾಶ ಲಭಿಸಿರುವುದು ಕೇವಲ ಆತಿಥೇಯ ರಾಷ್ಟ್ರ ಎಂಬ ಕಾರಣಕ್ಕಾಗಿ ಮಾತ್ರ. ಈ ಅವಕಾಶವನ್ನು ಉತ್ತಮ ಪ್ರದರ್ಶನದ ಮೂಲಕ ಸಾರ್ಥಕಪಡಿಸಿಕೊಳ್ಳಲಿ ಎಂಬುದಷ್ಟೇ ಕ್ರೀಡಾಭಿಮಾನಿಗಳ ಹಾರೈಕೆ.

ಯುಎಸ್‌ಎ ಕೇವಲ ಭಾರತದೆದುರು ಅಷ್ಟೇ ಅಲ್ಲ, “ಎ’ ವಿಭಾಗದಲ್ಲೇ ನೆಚ್ಚಿನ ತಂಡವಾಗಿದೆ. ಇಲ್ಲಿನ ಆಟಗಾರರೆಲ್ಲರೂ “ಮೇಜರ್‌ ಲೀಗ್‌ ಸಾಕರ್‌’ನಲ್ಲಿ ಈಗಾಗಲೇ ತಮ್ಮ ಕಾಲ್ಚಳಕ ಪ್ರದರ್ಶಿಸಿದ್ದಾರೆ. ಕೆಲವರು ಅಗ್ರಮಾನ್ಯ ಯುರೋಪಿಯನ್‌ ಕ್ಲಬ್‌ಗಳನ್ನೂ ಪ್ರತಿನಿಧಿಸಿದ್ದಾರೆ. ಆದರೆ ಅಮೆರಿಕದ ಆಟಗಾರ ರಂತೆ ಭಾರತದ ಫ‌ುಟ್ಬಾಲಿಗರು ಈವರೆಗೆ ಯಾವುದೇ ವೃತ್ತಿಪರ ಅಕಾಡೆಮಿಗಳಲ್ಲಿ ಪಾಲ್ಗೊಂಡವರಲ್ಲ. ಪೋರ್ಚುಗೀಸ್‌ ಕೋಚ್‌ ಲೂಯಿಸ್‌ ನಾರ್ಟನ್‌ ಡಿ ಮಾಟೋಸ್‌ ಮಾರ್ಗದರ್ಶನದಲ್ಲಿ ಕೇವಲ 7 ತಿಂಗಳ ಹಿಂದಷ್ಟೇ ಭಾರತ ಒಂದು ತಂಡವಾಗಿ ರೂಪುಗೊಂಡಿದೆ. 

ಪವಾಡ ನಿರೀಕ್ಷಿಸಬೇಡಿ!
2015ರ ಫೆಬ್ರವರಿಯಿಂದ ಅಂಡರ್‌-17 ತಂಡದ ಕೋಚ್‌ ಆಗಿದ್ದ ಜರ್ಮನಿಯ ನಿಕೋಲಾಯ್‌ ಆ್ಯಡಂ ಅವರನ್ನು ಉಚ್ಚಾಟಿಸಿದ ಬಳಿಕ ಮಾಟೋಸ್‌ ಈ ಹುದ್ದೆಗೆ ಏರಿದ್ದರು. ದೇಶಾದ್ಯಂತದ ಫ‌ುಟ್‌ಬಾಲ್‌ ಪ್ರತಿಭೆಗಳನ್ನು ಹುಡುಕಿ ತೆಗೆದು ತಂಡವನ್ನು ಕಟ್ಟಿದ ಹೆಗ್ಗಳಿಕೆ ಆ್ಯಡಂಗೆ ಸಲ್ಲುತ್ತದೆ. ಮಾಟೋಸ್‌ ಈ ತಂಡದಲ್ಲಿ ಇನ್ನಷ್ಟು ಸುಧಾರಣೆಯನ್ನೇನೋ ತಂದಿದ್ದಾರೆ. ಆದರೆ ಇವರಿಂದ ಯಾವುದೇ ಪವಾಡವನ್ನು ನಿರೀಕ್ಷಿಸಬೇಡಿ ಎಂದು ಕೂಟದ ಮೊದಲೇ ಹೇಳಿದ್ದಾರೆ!

ಅಮೆರಿಕ ಹಾಗೂ ಯುರೋಪ್‌ ಫ‌ುಟ್‌ಬಾಲ್‌ ಸಾಮರ್ಥ್ಯ-ಗುಣಮಟ್ಟಕ್ಕೂ ಭಾರತದ ಆಟಕ್ಕೂ ಭಾರೀ ಅಂತರವಿದೆ. ಭಾರತ ಗೋಲು ಬಾರಿಸಲು ಮುಂದಾಗುವ ಬದಲು ರಕ್ಷಣಾ ವಿಭಾಗದಲ್ಲಿ ತನ್ನ ಸಾಮರ್ಥ್ಯವನ್ನು ಮೀಸಲಿರಿಸಿದರೆ ಸಕಾರಾತ್ಮಕ ಫ‌ಲಿತಾಂಶ ಕಾಣ ಬಹುದೇನೋ ಎನ್ನುತ್ತಾರೆ ಮಾಟೋಸ್‌. 

ಇಲ್ಲಿ ಆರಡಿ, 2 ಇಂಚು ಎತ್ತರದ ಜೀಕ್ಸನ್‌ ಸಿಂಗ್‌ ಪಾತ್ರ ನಿರ್ಣಾಯಕವಾಗಲಿದ್ದು, ಇವರು ಮಿಡ್‌ಫಿàಲ್ಡ್‌ ನಲ್ಲಿ ಅಮರ್‌ಜೀತ್‌ ಸಿಂಗ್‌ ಮತ್ತು ಸುರೇಶ್‌ ಸಿಂಗ್‌ ಅವರಿಗೆ ಹೆಚ್ಚಿನ ನೆರವು ನೀಡಬಹುದು ಎಂಬ ನಿರೀಕ್ಷೆ ಇದೆ.

ಕಳೆದ ವರ್ಷದ “ಬ್ರಿಕ್ಸ್‌’ ಕೂಟದಲ್ಲಿ ಬ್ರಝಿಲ್‌ ವಿರುದ್ಧ ಆಕರ್ಷಕ ಗೋಲು ಹೊಡೆದ ಕೋಮಲ್‌ ಥಾಟಲ್‌ ಆವರಿಂದ ಉತ್ತಮ ಆಟವನ್ನು ನಿರೀಕ್ಷಿಸಲಾಗಿದೆ. ಸ್ಟ್ರೈಕರ್‌ ಅನಿಕೇತ್‌ ಜಾಧವ್‌, ಲೆಫ್ಟ್ ಫ‌ುಲ್‌ ಬ್ಯಾಕ್‌ ಸಂಜೀವ್‌ ಸ್ಟಾಲಿನ್‌, ರೈಟ್‌ ಫ‌ುಲ್‌ಬಾÂಕ್‌ ಹೆಂಡ್ರಿ ಆ್ಯಂಟನಿ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇರಿಸಿದೆ. ಕನಿಷ್ಠ ಡ್ರಾ ಸಾಧಿಸಿದರೂ ಅದು ಭಾರತದ ಮಹಾನ್‌ ಸಾಧನೆಯಾಗಲಿದೆ.

ಲಘುವಾಗಿ ಕಾಣೆವು…
ಈ ಸಂದರ್ಭದಲ್ಲಿ ಅಮೆರಿಕದ ಕೋಚ್‌ ಜಾನ್‌ ಹಾಕ್‌ವರ್ತ್‌, “ಭಾರತವನ್ನು ಯಾವ ಕಾರಣಕ್ಕೂ ಲಘುವಾಗಿ ಪರಿಗಣಿಸುವುದಿಲ್ಲ. ನಾವು ಅವರೆದುರು ಹಿಂದೊಮ್ಮೆ ಆಡಿ ಮೇಲುಗೈ ಸಾಧಿಸಿದ್ದೇವೆ. ಆದರೆ ಇಲ್ಲಿ ಆತಿಥ್ಯದ ಹುರುಪು, ಜೋಶ್‌ ಇದೆ. ಆತಿಥೇಯ ತಂಡವನ್ನು ಕೂಟದ ಮೊದಲ ಪಂದ್ಯದಲ್ಲೇ ಎದುರಿಸುವುದು ವಿಭಿನ್ನ ಸವಾಲು’ ಎಂದಿದ್ದಾರೆ.
ಅರ್ಹತಾ ಸುತ್ತಿನಲ್ಲಿ ಆಡಿದ ಅಮೆರಿಕದ 17 ಆಟಗಾರರು ವಿಶ್ವಕಪ್‌ ತಂಡದಲ್ಲಿದ್ದಾರೆ. ಆ ಕೂಟದಲ್ಲಿ ಮೆಕ್ಸಿಕೋಗೆ ಪೆನಾಲ್ಟಿಯಲ್ಲಿ ಶರಣಾದ ಅಮೆರಿಕ ದ್ವಿತೀಯ ಸ್ಥಾನ ಸಂಪಾದಿಸಿತ್ತು.

ಮೆಚ್ಚಿನ ಅಗ್ರ 5 ಭಾರತೀಯ ಫ‌ುಟ್ಬಾಲ್‌ ಆಟಗಾರರು
ಧೀರಜ್‌ ಸಿಂಗ್‌

ನೀಳಕಾಯದ ಈತ ಭಾರತ ತಂಡದ ಗೋಲ್‌ ಕೀಪರ್‌. ಪೆನಾಲ್ಟಿ ಶೂಟೌಟ್‌ಗಳನ್ನು ತಡೆಯುವುದರಲ್ಲಿ ನಿಷ್ಣಾತ. ಈ ಕೂಟದಲ್ಲಿ ಇವರ ಸೇವೆ ನಿರ್ಣಾಯಕ.

ಸಂಜೀವ್‌ ಸ್ಟಾಲಿನ್‌
ಕರ್ನಾಟಕದ ಈತ ರಕ್ಷಣಾ ವಿಭಾಗದಲ್ಲಿ ಆಡುತ್ತಾರೆ. ಚಂಡೀಗಢದಲ್ಲಿ ತರಬೇತಾಗಿದ್ದಾರೆ. ಫ್ರೀಕಿಕ್‌ಗೆ ಹೆಸರುವಾಸಿ. ಇವರ ಫ್ರೀಕಿಕ್‌ಗಳು ಪರಿಣಾಮಕಾರಿ.

ಅಮರ್‌ಜಿತ್‌ ಸಿಂಗ್‌
ಮಣಿಪುರದ ಈ ಹುಡುಗ ತಂಡದ ನಾಯಕ. ಕೋಚ್‌ ಮ್ಯಾಟೋಸ್‌ಗೆ ಅಚ್ಚುಮೆಚ್ಚು. ಬಹಳ ಶಾಂತ ಸ್ವಭಾವ. ಮಿಡ್‌ಫಿàಲ್ಡ್‌ನಲ್ಲಿ ಚುರುಕಾಗಿ ಆಡುತ್ತಾರೆ.

ಕೋಮಲ್‌ ಥಾಟಲ್‌
ಸಿಕ್ಕಿಂ ಆಟಗಾರ. ಮಿಡ್‌ಫಿàಲ್ಡರ್‌. ಈತ ಎದುರಾಳಿಯ ರಕ್ಷಣಾ ವ್ಯವಸ್ಥೆಯನ್ನು ಭೇದಿಸುವ ಚತುರ. ಜೊತೆಗೆ ಗೋಲುಗಳನ್ನು ಬಾರಿಸುವ ನಿಷ್ಣಾತ.

ಅನಿಕೇತ್‌ ಜಾಧವ್‌
ಮಹಾರಾಷ್ಟ್ರದ ಆಟಗಾರ. ಮುನ್ಪಡೆಯಲ್ಲಿ ಬಹಳ ಗಟ್ಟಿಗ. ಜರ್ಮನಿಯ ಫ‌ುಟ್‌ಬಾಲ್‌ ದಿಗ್ಗಜ ಪಾಲ್‌ ಬ್ರೆಟ್ನರ್‌ರಿಂದಲೇ ಕಾಲ್ಚಳಕಕ್ಕೆ ಭೇಷ್‌ ಅನಿಸಿಕೊಂಡಿದ್ದಾರೆ.

ಭಾರತ ತಂಡ
ಗೋಲ್‌ ಕೀಪರ್
: ಧೀರಜ್‌ ಸಿಂಗ್‌, ಪ್ರಭ್‌ಸುಖನ್‌ ಗಿಲ್‌, ಸನ್ನಿ ದಾಲೀವಾಲ್‌.
ಡಿಫೆಂಡರ್: ಬೋರಿಸ್‌ ಸಿಂಗ್‌, ಜೀತೇಂದ್ರ ಸಿಂಗ್‌, ಅನ್ವರ್‌ ಅಲಿ, ಸಂಜೀವ್‌ ಸ್ಟಾಲಿನ್‌, ಹೆಂಡ್ರಿ ಆ್ಯಂಟನಿ, ನಮಿತ್‌ ದೇಶಪಾಂಡೆ.
ಮಿಡ್‌ ಫೀಲ್ಡರ್: ಅಮರ್‌ಜಿತ್‌ ಸಿಂಗ್‌ ಕಿಯಾಮ್‌ (ನಾಯಕ), ಸುರೇಶ್‌ ಸಿಂಗ್‌, ನಿತೊಯಿನ್‌ಗಂಭ ಮೀಟಿ, ಅಭಿಜಿತ್‌ ಸರ್ಕಾರ್‌, ಕೋಮಲ್‌ ಥಾಟಲ್‌, ಲಾಲೆಂಜ್‌ ಮಾವಿಯ, ಜೀಕ್ಸನ್‌ ಸಿಂಗ್‌, ನೊಗ್ಡಂಬ ನೊರೆಮ್‌, ರಾಹುಲ್‌ ಪ್ರವೀಣ್‌, ಮೊಹಮ್ಮದ್‌ ಶಾಜಹಾನ್‌.
ಫಾರ್ವರ್ಡ್ಸ್‌: ರಹೀಮ್‌ ಅಲಿ, ಅನಿಕೇತ್‌ ಜಾಧವ್‌

ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌: ಇಂದಿನ ಪಂದ್ಯಗಳು
1. ಗ್ರೂಪ್‌ ಎ: ಕೊಲಂಬಿಯಾ-ಘಾನಾ
ಸ್ಥಳ: ಹೊಸದಿಲ್ಲಿ, ಆರಂಭ: ಸಂಜೆ 5.00

2. ಗ್ರೂಪ್‌ ಬಿ: ನ್ಯೂಜಿಲ್ಯಾಂಡ್‌-ಟರ್ಕಿ
ಸ್ಥಳ: ನವೀ ಮುಂಬಯಿ, ಆರಂಭ: ಸಂಜೆ 5.00

3. ಗ್ರೂಪ್‌ ಎ: ಭಾರತ-ಯುಎಸ್‌ಎ 
ಸ್ಥಳ: ಹೊಸದಿಲ್ಲಿ, ಆರಂಭ: ರಾತ್ರಿ 8.00

4. ಗ್ರೂಪ್‌ ಬಿ: ಪರಗ್ವೆ-ಮಾಲಿ
ಸ್ಥಳ: ನವೀ ಮುಂಬಯಿ, ಆರಂಭ: ರಾತ್ರಿ 8.00

ಟಾಪ್ ನ್ಯೂಸ್

da

BBK11: ದೈತ್ಯರನ್ನೇ ಮಣ್ಣು ಮುಕ್ಕಿಸಿ ಮಹತ್ವದ ಟಾಸ್ಕ್ ನಲ್ಲಿ ಮಿಂಚಿದ ಧನರಾಜ್

Women’s Ashes: Another win for Australia

Women’s Ashes: ಆಸ್ಟ್ರೇಲಿಯಕ್ಕೆ ಮತ್ತೊಂದು ಗೆಲುವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

Kadaba ಮರ್ದಾಳ: ಮನೆಗೆ ನುಗ್ಗಿ ಕಳ್ಳತನ

Kadaba ಮರ್ದಾಳ: ಮನೆಗೆ ನುಗ್ಗಿ ಕಳ್ಳತನ

Sabarimala: Over 2 lakh devotees watch Makar Jyoti

Sabarimala: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಮಕರ ಜ್ಯೋತಿ ವೀಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Australian Open-2025: Wawrinka out; Fritz wins

Australian Open-2025: ವಾವ್ರಿಂಕ ಔಟ್‌; ಫ್ರಿಟ್ಜ್  ಗೆಲುವು

Women’s Ashes: Another win for Australia

Women’s Ashes: ಆಸ್ಟ್ರೇಲಿಯಕ್ಕೆ ಮತ್ತೊಂದು ಗೆಲುವು

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

1-asddads

India Open Badminton ಇಂದಿನಿಂದ:ಭಾರತದ ದೊಡ್ಡ ತಂಡದಿಂದ ದೊಡ್ಡ ನಿರೀಕ್ಷೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Australian Open-2025: Wawrinka out; Fritz wins

Australian Open-2025: ವಾವ್ರಿಂಕ ಔಟ್‌; ಫ್ರಿಟ್ಜ್  ಗೆಲುವು

da

BBK11: ದೈತ್ಯರನ್ನೇ ಮಣ್ಣು ಮುಕ್ಕಿಸಿ ಮಹತ್ವದ ಟಾಸ್ಕ್ ನಲ್ಲಿ ಮಿಂಚಿದ ಧನರಾಜ್

Women’s Ashes: Another win for Australia

Women’s Ashes: ಆಸ್ಟ್ರೇಲಿಯಕ್ಕೆ ಮತ್ತೊಂದು ಗೆಲುವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.