ಮಿದುಳು ಕಾಯಿಲೆಗೆ ಚಿಕಿತ್ಸೆ ಸಾಧ್ಯ: ಡಾ| ಜಿ. ಶಂಕರ್
Team Udayavani, Oct 6, 2017, 7:30 AM IST
ಉಡುಪಿ: ಇಂಟರ್‌ವೆನ್ಶನ್ ನ್ಯೂರೋ ಚಿಕಿತ್ಸೆಯಿಂದ ಮಿದುಳಿಗೆ ಸಂಬಂಧಿಸಿದ ಅನೇಕ ಕಾಯಿಲೆ ಗಳನ್ನು ಗುಣಪಡಿಸಲು ಸಾಧ್ಯವಿದೆ. ಮಿದುಳಿನ ಕಾಯಿಲೆಗಳ ಚಿಕಿತ್ಸೆಯ ಬಗ್ಗೆ ಜನತೆಗೆ ಹೆಚ್ಚು ಅರಿವಿಲ್ಲ. ಹೀಗಾಗಿ ಅರಿವು ಮೂಡಿಸುವ ಆವಶ್ಯಕತೆಯಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಹೇಳಿದರು.
ಆದರ್ಶ ಸೂಪರ್ ಸ್ಪೆಷಾಲಿಟಿ ಸೆಂಟರ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಾಡೋಜ ಡಾ| ಜಿ. ಶಂಕರ್ ಅವರ ಹುಟ್ಟಹಬ್ಬದ ಪ್ರಯುಕ್ತ ಅ. 5ರಂದು ಆದರ್ಶ ಆಸ್ಪತ್ರೆಯಲ್ಲಿ ನಡೆದ ಕಿಡ್ನಿ ವೈಫಲ್ಯ, ಕ್ಯಾನ್ಸರ್ ರೋಗಿಗಳಿಗೆ ಧನ ಸಹಾಯ ವಿತರಣೆ ಹಾಗೂ ಆದರ್ಶ ಆಸ್ಪತ್ರೆಯ ಇಂಟರ್‌ವೆನ್ಶನ್ ನ್ಯೂರೋ ಸರ್ಜರಿ ವಿಭಾಗ ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
800 ರೋಗಿಗಳಿಗೆ ನೆರವು
ಬಡವರ ಬಗ್ಗೆ ಕಾಳಜಿ ವಹಿಸಿ ಟ್ರಸ್ಟ್ ವತಿಯಿಂದ ಅನೇಕ ಬಡ ರೋಗಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಆದರ್ಶ ಆಸ್ಪತ್ರೆಯ 34 ಮಂದಿ ಕಿಡ್ನಿ ವೈಫಲ್ಯ ಮತ್ತು ಕ್ಯಾನ್ಸರ್ ಪೀಡಿತ ಪ್ರತಿಯೊಬ್ಬರಿಗೆ ತಲಾ 25,000 ರೂ. ಆರ್ಥಿಕ ಸಹಾಯ ವಿತರಿಸಲಾಗುತ್ತದೆ. ವಿವಿಧ ಆಸ್ಪತ್ರೆಗಳ 800 ರೋಗಿಗಳಿಗೆ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯ ನೀಡಲಾಗಿದೆ ಎಂದು ಹೇಳಿದರು.
ಆದರ್ಶ ಆಸ್ಪತ್ರೆಯ ಹಿರಿಯ ನರರೋಗ ಶಸ್ತ್ರ ಚಿಕಿತ್ಸಾ ತಜ್ಞ ಪ್ರೊ| ಎ. ರಾಜಾ ಮಾತನಾಡಿ, ಇಂಟರ್‌ವೆನ್ಶನ್ ನ್ಯೂರೋ ಸರ್ಜರಿ ವಿಭಾಗದಿಂದ ಮಿದುಳಿನ ರಕ್ತನಾಳದ ಊತ, ಅಶುದ್ಧ ರಕ್ತ ನಾಳಗಳ ಸಮಸ್ಯೆ, ಮಿದುಳಿನ ಗೆಡ್ಡೆ, ಬೆನ್ನುಹುರಿ ಸಮಸ್ಯೆ ಮೊದಲಾದ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತ¤ದೆ. ಪಾರ್ಶ್ವವಾಯು ಉಂಟಾದರೆ ಆ ರೋಗಿ 6 ತಾಸಿನ ಒಳಗೆ ಆಸ್ಪತ್ರೆ ತಲುಪಿದರೆ ಕಾಲಿನ ರಕ್ತ ನಾಳದ ಮೂಲಕ ಕ್ಯಾಥೆಟರ್ ತೂರಿಸಿ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಭಾಗಕ್ಕೆ ಚುಚ್ಚುಮದ್ದು ನೀಡಿ ಶೀಘ್ರ ಗುಣಮುಖರಾಗುವಂತೆ ಮಾಡಲಾಗುತ್ತದೆ. ರೋಗಿಗೆ ಚಿಕಿತ್ಸೆ ನೀಡುವುದರ ಜತೆಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾಗುತ್ತದೆ ಎಂದರು.
ಡಾ| ಜಿ. ಶಂಕರ್ ಹುಟ್ಟಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿದರು. ಆಸ್ಪತ್ರೆಯ ವತಿಯಿಂದ ಅವರನ್ನು ಸಮ್ಮಾನಿಸಿ, ಶುಭ ಹಾರೈಸಲಾಯಿತು.
ನ್ಯೂರೋ ಸರ್ಜನ್ ಡಾ| ಜಸ್‌ಪ್ರೀತ್ ಸಿಂಗ್, ಡಾ| ಪ್ರಶಾಂತ್ ಶೆಟ್ಟಿ, ಡಾ| ಮೋಹನ್‌ದಾಸ್ ಶೆಟ್ಟಿ, ನಗರಸಭೆಯ ಪೌರಾಯುಕ್ತ ಮಂಜುನಾಥಯ್ಯ ಉಪಸ್ಥಿತರಿದ್ದರು. ಆಸ್ಪತ್ರೆಯ ನಿರ್ದೇಶಕ ಡಾ| ಜಿ. ಚಂದ್ರಶೇಖರ್ ಪ್ರಸ್ತಾವನಗೈದು, ಸ್ವಾಗತಿಸಿದರು. ಡಿಯಾಗೋ ಕ್ವಾಡ್ರಸ್ ನಿರೂಪಿಸಿದರು.
ಕಿಡ್ನಿ ಕಾಯಿಲೆಯ ರೋಗಿಗಳಿಗೆ ಡಯಾಲಿಸಿಸ್‌ಗೆ ಪ್ರತೀ ತಿಂಗಳು 20,000 ರೂ. ಬೇಕಾಗುತ್ತದೆ. ಹೀಗಾಗಿ ಬಡವರು ತಮ್ಮ ಮನೆ, ಆಸ್ತಿ ಮಾರಾಟ ಮಾಡಿ ಚಿಕಿತ್ಸೆ ವೆಚ್ಚ ಭರಿಸುತ್ತಾರೆ. ಡಾ| ಜಿ. ಶಂಕರ್ ಟ್ರಸ್ಟ್ ವತಿಯಿಂದ ನೀಡುವ ಆರ್ಥಿಕ ಸಹಕಾರ ಬಡವರಿಗೆ ಅನುಕೂಲ ವಾಗುತ್ತದೆ. 1 ಲಕ್ಷಕ್ಕಿಂತಲೂ ಅಧಿಕ ಬಡವರಿಗೆ ಟ್ರಸ್ಟ್ ವತಿಯಿಂದ ವಿಮಾ ಕಾರ್ಡ್ ಕೂಡ ನೀಡಲಾಗಿದೆ. ಆದರ್ಶ ಆಸ್ಪತ್ರೆ ಬಡರೋಗಿಗಳ ಆರ್ಥಿಕ ಸಹಕಾರಕ್ಕೆ ಕೈಜೋಡಿಸಿದೆ.
- ಡಾ| ಚಂದ್ರಶೇಖರ್, ಆದರ್ಶ ಆಸ್ಪತ್ರೆ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.