ರಸ್ತೆ ದುರಸ್ತಿ ಆಗ್ರಹಿಸಿ ಪ್ರತಿಭಟನೆ
Team Udayavani, Oct 6, 2017, 10:21 AM IST
ಬೆಂದೂರ್‌ವೆಲ್ : ಇಲ್ಲಿಂದ ಕರಾವಳಿ ವೃತ್ತದವರೆಗಿನ ರಸ್ತೆ ದುರಸ್ತಿ, ಡಾಮರು ಕಾಮಗಾರಿ ಮತ್ತು ನವೀಕೃತ ನೀರಿನ ಪೈಪ್ ಅಳವಡಿಸುವಂತೆ ಆಗ್ರಹಿಸಿ ನಾಗರಿಕರು ಮತ್ತು ರಿಕ್ಷಾ ಚಾಲಕರು ಬೆಂದೂರ್‌ವೆಲ್ ವೃತ್ತದಲ್ಲಿ ಗುರುವಾರ
ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್. ಪಿ. ಚಂಗಪ್ಪ ಮಾತನಾಡಿ, ಬೆಂದೂರ್ ವೆಲ್, ಕರಾವಳಿ ಮತ್ತು ಪಂಪ್‌ವೆಲ್
ವೃತ್ತದ ರಸ್ತೆಗಳು ಕಳೆದ ಹತ್ತು ವರ್ಷಗಳಿಂದ ದುಃಸ್ಥಿತಿಯಲ್ಲಿದ್ದು, ಪಾಲಿಕೆ, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಯಾವುದೇ ಕಾಮಗಾರಿ ನಡೆಸದೆ ತೇಪೆ ಹಾಕುವುದರಲ್ಲೇ ಮಗ್ನರಾಗಿದ್ದಾರೆ. ಪ್ರತಿಭಟನೆಯ ಎಚ್ಚರಿಕೆ ನೀಡಿದಾಗ ಜಿಲ್ಲಾಡಳಿತವು ರಸ್ತೆಯ ಗುಂಡಿ ಮುಚ್ಚಲು ಕೆಂಪು ಕಲ್ಲು ಹಾಕಲು ಮುಂದಾಗಿದೆ. ಇದರಿಂದ ಧೂಳು ಹೆಚ್ಚಾಗಲಿದೆ. ಸಂಪೂರ್ಣ ರಸ್ತೆಯನ್ನು ಕಾಂಕ್ರೀಟೀಕೃತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ನಗರದ ಅನೇಕ ರಸ್ತೆಗಳಲ್ಲಿ ಒಳಚರಂಡಿ ಇಲ್ಲ. ಫುಟ್‌ಪಾತ್ ಸರಿಯಾಗಿಲ್ಲದೆ ರಸ್ತೆಯಲ್ಲಿ ನಡೆದುಕೊಂಡು ಹೋಗು
ವಂತಾಗಿದೆ ಎಂದು ತಿಳಿಸಿದರು.
ಶೌಚಾಲಯ ನಿರ್ಮಿಸಿ
ಪಂಪ್‌ವೆಲ್‌ನಿಂದ ಬೆಂದೂರ್‌ವೆಲ್‌ಗೆ ಒಂದು ಆ್ಯಂಬುಲೆನ್ಸ್ ಆಗಮಿಸಲು 30 ನಿಮಿಷ ಬೇಕು. ನಗರದಲ್ಲಿಯೇ ಪಂಪ್
ವೆಲ್ ವೃತ್ತ ಅತಿ ಹೆಚ್ಚು ಜನಜಂಗುಳಿ ಇರುವಂತಹ ಪ್ರದೇಶವಾಗಿದ್ದು, ಹೊರ ಭಾಗದಿಂದ ನಗರಕ್ಕೆ ಬಂದು ಸೇರುವ ಈ ಸ್ಥಳದಲ್ಲಿ ಶೌಚಾಲಯದ ಅಗತ್ಯವಿದೆ. ಪಾಲಿಕೆಯ ಇ-ಟಾಯ್ಲೆಟ್‌ನ್ನು ಯಾರೂ ಉಪಯೋಗಿಸುವುದಿಲ್ಲ. ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಂದೂರ್‌ವೆಲ್ ವೃತ್ತದ ಬಳಿ ಕೆಲ ನಿಮಿಷಗಳ ಕಾಲ ಸಾಂಕೇತಿಕ ರಸ್ತೆ ತಡೆ ಮಾಡಲಾಯಿತು. ನ್ಯಾಯವಾದಿ
ದಿನೇಶ್, ಉದ್ಯಮಿಗಳಾದ ಪ್ರದೀಪ್ ಆಳ್ವ, ಎನ್.ಜಿ. ನಾಗೇಶ್ ಹಾಗೂ ಸ್ಥಳೀಯ ರಿಕ್ಷಾ ಚಾಲಕರು, ಸಾರ್ವಜನಿಕರು
ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.