ಡೋಕ್ಲಾಂ ಸಮೀಪ ಚೀನ ಸೇನೆ ಜಮಾವಣೆ; ರಸ್ತೆ ಕಾಮಗಾರಿ
Team Udayavani, Oct 6, 2017, 11:01 AM IST
ಹೊಸದಿಲ್ಲಿ : ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್ಲಾಂ ಪ್ರದೇಶದಿಂದ ಕೇವಲ 12 ಕಿ.ಮೀ. ಆಚೆಗೆ ಚೀನ ತನ್ನ ಸೇನೆಯನ್ನು ಜಮಾಯಿಸಿದ್ದು ಅಲ್ಲಿನ ರಸ್ತೆಯನ್ನು ಅಗಲಗೊಳಿಸುವ ಕಾರ್ಯವನ್ನು ಬಿರುಸಿನಿಂದ ಆರಂಭಿಸಿದೆ.
ಭಾರತ ಮತ್ತು ಚೀನ ಸೇನೆ ಸುಮಾರು ಮೂರು ತಿಂಗಳ ಕಾಲ ಮುಖಾಮುಖೀಯಾಗಿದ್ದ ವಿವಾದಿತ ಡೋಕ್ಲಾಂ ಪ್ರದೇಶದಿಂದ ಕೇವಲ 12 ಕಿ.ಮೀ. ಆಚೆಗೆ ಚೀನ ಭಾರೀ ದೊಡ್ಡ ಸಂಖ್ಯೆಯಲ್ಲಿ ತನ್ನ ಸೇನೆಯನ್ನು ಜಮಾಯಿಸಿರುವುದು ಮತ್ತು ರಸ್ತೆ ಅಗಲಗೊಳಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಆರಂಭಿಸಿರುವುದು ಭಾರತಕ್ಕೆ ಕಳವಳದ ಸಂಗತಿಯಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಪಿಟಿಐ ವರದಿ ಮಾಡಿದೆ.
ಡೋಕ್ಲಾಂ ನ ಚುಂಬಿ ಕಣಿವೆಯಲ್ಲಿ ಚೀನ ಸೇನೆಯ ಬೃಹತ್ ಜಮಾವಣೆಯು ಉದ್ವಿಗ್ನತೆಯನ್ನು ಸೃಷ್ಟಿಸಿದೆ ಎಂದು ಭಾರತೀಯ ವಾಯು ಪಡೆ ಮುಖ್ಯಸ್ಥ, ಏರ್ ಚೀಫ್ ಮಾರ್ಶಲ್, ಬಿ ಎಸ್ ಧನೋವಾ ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.
“ವಿವಾದಿತ ಡೋಕ್ಲಾಂ ಪ್ರದೇಶದಿಂದ ಕೇವಲ 12 ಕಿ.ಮೀ. ಆಚೆಗೆ ಚೀನ ಸೇನೆ ಜಮಾವಣೆಯಾಗಿರುವುದು ಉಭಯ ದೇಶಗಳ ಸೇನಾ ಮುಖಾಮುಖೀ ಅಲ್ಲವಾದರೂ ಉದ್ವಿಗ್ನತೆಗೆ ಕಾರಣವಾಗಿದೆ. ಚುಂಬಿ ಕಣಿವೆಯಲ್ಲಿ ಚೀನ ಸೇನೆಯ ಕಾರ್ಯ ಚಟುವಟಿಕೆಗಳು ಮುಗಿದೊಡನೆಯೇ ಅದು ಅಲ್ಲಿಂದ ಹಿಂದೆ ಸರಿಯುವುದಾಗಿ ನಾವು ನಿರೀಕ್ಷಿಸುತ್ತೇವೆ’ ಎಂದು ಧನೋವಾ ಹೇಳಿರುವುದನ್ನು ಪಿಟಿಐ ಉಲ್ಲೇಖೀಸಿ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ
Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.