ಕೋಪಂ ತಾಪಂ ಭುವನಂ!
Team Udayavani, Oct 6, 2017, 11:20 AM IST
“ಇದು ರಿಮೇಕ್ ಆಗಿದ್ದರೂ, ನಮ್ಮ ನೇಟಿವಿಟಿಗೆ ಹೆಚ್ಚು ಒತ್ತು ಕೊಟ್ಟು ಮಾಡಿದ್ದೇವೆ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಬೇಕು…’
– ಹೀಗೆ ಹೇಳುತ್ತಾ ಹೋದರು ನಿರ್ದೇಶಕ ರಘು. ಅವರು ಹೇಳಿದ್ದು, “ಕಿಡಿ’ ಸಿನಿಮಾ ಬಗ್ಗೆ. ಇದು ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. “ಕಿಡಿ’ ಚಿತ್ರ ಕುರಿತು ಹೇಳಲೆಂದೇ, ಪತ್ರಕರ್ತರ ಜತೆ ಕುಳಿತಿದ್ದರು ರಘು. “ಒಳ್ಳೆಯ ಚಿತ್ರವಾಗಲು ಮುಖ್ಯವಾಗಿ ಒಳ್ಳೆಯ ತಂಡ ಬೇಕು. ಅದು ಇಲ್ಲಿ ಸಿಕ್ಕಿದ್ದರಿಂದ “ಕಿಡಿ’ ಹೊಸಬಗೆಯ ಚಿತ್ರವಾಗಿ ಮೂಡಿಬಂದಿದೆ. ನಿರ್ಮಾಪಕರು ಕೊಟ್ಟ ಸಹಕಾರದಿಂದ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಉಳಿದದ್ದು ಪ್ರೇಕ್ಷಕರು ಕೊಡುವ ತೀರ್ಪಿನ ಮೇಲೆ ನಿಂತಿದೆ’ ಎಂದು ಹೇಳಿ ಸಮ್ಮನಾದರು ರಘು.
ನಾಯಕ ಭುವನ್ ಚಂದ್ರ ಅವರಿಗೆ “ಕಿಡಿ’ ಮೇಲೆ ಎಲ್ಲಿಲ್ಲದ ಪ್ರೀತಿ ಮತ್ತು ನಂಬಿಕೆ. ಈ ಹಿಂದೆ ಅವರು “ಸಿರಿವಂತ’ ಚಿತ್ರದಲ್ಲಿ ವಿಷ್ಣುವರ್ಧನ್ ಪುತ್ರನಾಗಿ ನಟಿಸಿದ್ದರು. ಅದಾದ ಮೇಲೊಂದು ಚಿತ್ರ ಮಾಡಿದ್ದರು. ಆ ಬಳಿಕ ಒಂದು ಗ್ಯಾಪ್ ಆಗಿತ್ತು. ಒಳ್ಳೆಯ ಸಿನಿಮಾ ಮೂಲಕವೇ ಬರಬೇಕು ಅಂತ ಒಂದಷ್ಟು ಸಿನಿಮಾಗಳನ್ನು ನೋಡಿದ ಭುವನ್ ಚಂದ್ರ ಅವರಿಗೆ, ಮಲಯಾಳಂನ “ಕಲಿ’ ಸಿನಿಮಾ ಇಷ್ಟವಾಗಿದೆ. ಅದು ನಿರ್ಮಾಪಕರಿಗೂ ಇಷ್ಟವಾಗಿದ್ದರಿಂದ ಚಿತ್ರ ಸೆಟ್ಟೇರಿದೆ.
“ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡೆ. ಒಳ್ಳೆಯ ಟೀಮ್ ಜತೆಗಿತ್ತು. ಅಪ್ಪು ವೆಂಕಟೇಶ್ ಬಳಿ ಆ್ಯಕ್ಷನ್ ತರಬೇತಿ ಪಡೆದೆ. ಉಳಿದಂತೆ ಸಹ ಕಲಾವಿದರ ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ.
ನಾನಿಲ್ಲಿ ಬ್ಯಾಂಕ್‌ವೊಂದರ ಉದ್ಯೋಗಿಯಾಗಿ ನಟಿಸಿದ್ದೇನೆ. ಕೋಪ ಜಾಸ್ತಿ ಮಾಡಿಕೊಳ್ಳುವ ಹುಡುಗನ ಪಾತ್ರವದು. ಅದು ಹೆಚ್ಚಾದಾಗ, ಏನೆಲ್ಲಾ ಆಗುತ್ತೆ ಅನ್ನೋದೇ ಸಿನಿಮಾ’ ಅಂದರು ಭುವನ್‌ಚಂದ್ರ. ನಾಯಕಿ ಪಲ್ಲವಿ ಅವರಿಗೆ ಇದು ಎರಡನೇ ಚಿತ್ರ. ಈ ಹಿಂದೆ “ಪ್ರೇಮ ಗೀಮ ಜಾನೇದೋ’ ಚಿತ್ರದ ಬಳಿಕ ಈ ಚಿತ್ರ ಒಪ್ಪಿಕೊಂಡರಂತೆ. ಅವರು ಒಪ್ಪಲು ಕಾರಣ, ಪಾತ್ರ ಮತ್ತು ಕಥೆಯಂತೆ. ಅವರಿಲ್ಲಿ ಕೋಪಿಷ್ಟ ಹುಡುಗನ ಕೋಪವನ್ನು ತಣ್ಣಗೆ ಮಾಡುವಂತಹ ಪಾತ್ರವಂತೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲೇ ನೋಡಬೇಕಂತೆ. ಆ ಹುಡುಗನ ಲವ್ವರ್ ಆಗಿ ಅಕೆ, ಏನೇನು ಮಾಡುತ್ತಾಳೆ
ಎಂಬುದು ಸಸ್ಪೆನ್ಸ್ ಅಂದರು ಪಲ್ಲವಿ.
ಸಂಗೀತ ನಿರ್ದೇಶಕ ಎಮಿಲ್ ಇಲ್ಲಿ ನಾಲ್ಕು ಹಾಡುಗಳನ್ನು ಕೊಟ್ಟಿದ್ದಾರಂತೆ. ಎಲ್ಲಾ ರೀತಿಯ ಹಾಡುಗಳು ಇಲ್ಲಿವೆ. ಈಗಾಗಲೇ ಕೇರಳದಲ್ಲಿ “ಕಿಡಿ’ ಚಿತ್ರದ ಟ್ರೇಲರ್ ಜೋರು ಸುದ್ದಿಯಾಗಿದೆ ಅಂದರು ಅವರು.
ಡ್ಯಾನಿ ಕುಟ್ಟಪ್ಪ, ಇಲ್ಲಿ ಲಾರಿ ಡ್ರೈವರ್ ಆಗಿ ನಟಿಸಿದ್ದಾರಂತೆ. ಒಳ್ಳೆಯ ತಂಡದ ಜತೆ ಕೆಲಸ ಮಾಡಿದ ಖುಷಿ ನನಗಿದೆ ಅಂದರು ಅವರು. “ಉಗ್ರಂ’ ಮಂಜು ಅವರಿಲ್ಲಿ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರವನ್ನು ನಾಗರಾಜ್, ಧನಂಜಯ್, ಮಲ್ಲಿಕಾರ್ಜುನ್ ಸೇರಿ ನಿರ್ಮಿಸಿದ್ದು, ಖುಷಿ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.