ಮೊದಲ ಪ್ರೇಮದ ಮಧುರ ನೆನಪುಗಳು
Team Udayavani, Oct 6, 2017, 11:37 AM IST
ಲೈಫಲ್ಲಿ ಒಂದ್ಸಲ’ ಎಂಬ ಚಿತ್ರವೊಂದು ಆರಂಭವಾಗಿದೆ. ಈ ಚಿತ್ರವನ್ನು ಬಿ.ವಿ. ಸ್ವಾಮಿ ನಿರ್ದೇಶಿಸುತ್ತಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಅನುಭವವಿರುವ ಸ್ವಾಮಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾವಿದು. ಇದೊಂದು ಜರ್ನಿ ಕಥೆಯಾಗಿದ್ದು, ಹೊಸ ಬಗೆಯಿಂದ ಕೂಡಿರುತ್ತದೆಯಂತೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸ್ವಾಮಿ, “ಲೈಫಲ್ಲಿ ಒಂದ್ಸಲ ಏನಾದರೂ ಸಾಧಿಸಬೇಕು ಎನ್ನುವ ಕನಸು ಎಲ್ಲರಲ್ಲೂ ಇರುತ್ತದೆ. ಇಲ್ಲಿ ಜೀವನದಲ್ಲಿ ಫಸ್ಟ್ ಲವ್ ಬರುವುದು ಒಂದೇ ಸಾರಿ. ಆ ನಂತರ ಏರು ಪೇರುಗಳು ಇದ್ದೇ ಇರುತ್ತೆ. ಆದರೆ, ಈ ಸಿನಿಮಾ ಮೂಲಕ ಆ ಮಧುರ ನೆನಪುಗಳು ಮತ್ತು ಜೀವನಕ್ಕೆ ಸಂಬಂಧಿಸಿದ ಮೌಲ್ಯಗಳನ್ನು ಹೇಳ ಹೊರಟಿದ್ದೇವೆ. ತಮಗೆ ತೋಚಿದ್ದನ್ನು ಮಾಡುವ ಹುಡುಗರು. ಕೊನೆಗೆ ಅವರು ತಲು ಪಿದ ಜಾಗ. ಸರಿ
ತಪ್ಪುಗಳ ಚಡಪಡಿಕೆಯನ್ನೂ ಇಲ್ಲಿ ಹೇಳಲು ಹೊರಟಿದ್ದೇವೆ’ ಎಂದು ಚಿತ್ರದ ಬಗ್ಗೆ ಹೇಳಿದರು ಬಿ.ವಿ.ಸ್ವಾಮಿ.
ಅಂದಹಾಗೆ, ಈ ಚಿತ್ರದಲ್ಲಿ ಬಹುತೇಕ ಹೊಸಬರೇ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಐದು ಪ್ರಮುಖ ಪಾತ್ರಗಳಿವೆ. ಮೂವರು ನಾಯಕರು. ಇಬ್ಬರು ನಾಯಕಿಯರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸುತ್ತಿರುವ ಐದು ಜನ ಹೊಸ ಪ್ರತಿಭೆಗಳನ್ನು ಫೆಬ್ರವರಿ 11ರಂದು ನಡೆಯುವ ಆಡಿಯೋ ಬಿಡುಗಡೆಯ ದಿನವೇ ಪರಿಚಯ ಮಾಡುವ ಉದ್ದೇಶ ನಿರ್ದೇಶಕರದು. ಹೊಸ ಕಲಾವಿದರನ್ನು ಜನರಿಗೆ ವಿಭಿನ್ನವಾಗಿ ಪರಿಚಯಿಸಬೇಕೆಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರಂತೆ. ಡಿಸೆಂಬರ್ 31ರ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷದ ಆಚರಣೆಯ ಜೊತೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ ನಿರ್ದೇಶಕ ಸ್ವಾಮಿ.
ಪ್ರಿಯಾಂಕ ತ್ಯಾಗರಾಜ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೂಲತಃ ಇವರು ಐ.ಟಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ “ಈ ಚಿತ್ರದ ಟೈಟಲ್‌ನಲ್ಲೇ ಕುತೂಹಲ ಇದೆ. ಕೆಲವರಿಗೆ ಇದು ಅಡ್ವೆಂಚರ್ ಸಿನಿಮಾ ಅನಿಸಿದರೆ, ಇನ್ನು ಕೆಲವರಿಗೆ ಮಿಸ್ಟ್ರಿ ಅನಿಸಬಹುದು ಅಥವಾ ಲವ್ ಸ್ಟೋರಿ ಅನಿಸಬಹುದು. ಚಿತ್ರದ ಒನ್‌ಲೈನ್ ನನಗೆ ತುಂಬಾ ಇಷ್ಟವಾಯಿತು. ಹೀಗಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ’ ಎಂಬುದು ಪ್ರಿಯಾಂಕಾ ಮಾತು. ಈ ಚಿತ್ರದ ಸಹ ನಿರ್ಮಾಪಕರಾದ ಸುರೇಶ್ ಅವರಿಗೂ ಇದು ಮೊದಲ ಚಿತ್ರ. ಈ ಹಿಂದೆ, “ಮಿ. ಅಂಡ್ ಮಿಸಸ್ ರಾಮಾಚಾರಿ’ ಮತ್ತು “ಜೆಸ್ಸಿ’ ಚಿತ್ರಗಳಲ್ಲಿ ನಟಿಸಿದ್ದ ಇವರ ಇಬ್ಬರು ಪುತ್ರರಾದ ಜಯಪ್ರಕಾಶ್ ಮತ್ತು ಜಯಂತ್ ಗೌಡ ಅವರು ಈ ಚಿತ್ರದಲ್ಲೂ ನಟಿಸುತ್ತಿದ್ದಾರಂತೆ. ಚಿತ್ರದ ಚಿತ್ರೀಕರಣ ಮೈಸೂರು, ಮಡಿಕೇರಿ, ಮಂಗಳೂರು, ಗುಲ್ಬರ್ಗಾ, ಬೀದರ್ ಸುತ್ತ ಮುತ್ತ ನಡೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.