ಆತ್ಮೀಯತೆಯಿದ್ದರೆ ಸಮಾಜ ಅಭಿವೃದ್ಧಿ ಸಾಧ್ಯ
Team Udayavani, Oct 6, 2017, 12:18 PM IST
ತಾಳಿಕೋಟೆ: ಪ್ರತಿಯೊಬ್ಬರಲ್ಲಿಯೂ ದ್ವೇಷ ಅಸೂಯೆಗಳನ್ನು ಇಟ್ಟುಕೊಳ್ಳಬಾರದು. ಸಾಮಾಜಿಕವಾಗಿ ಯಾರೇ ಬೆಳೆದರು ಅವನು ನಮ್ಮವ ಎಂಬ ಆತ್ಮೀಯತೆ ಯಿಂದ ನಡೆದುಕೊಳ್ಳುತ್ತಾ ಸಾಗಿದರೆ ಸಮಾಜದಲ್ಲಿ ಒಗ್ಗಟ್ಟು ಮೂಡುವುದರೊಂದಿಗೆ ಸಮಾಜ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ವಾಲ್ಮೀಕಿ ಸಮಾಜದ ಅಧ್ಯಕ್ಷ ಎಲ್.ಬಿ. ಕೊಡೇಕಲ್ಲ ಹೇಳಿದರು.
ವಾಲ್ಮೀಕಿ ಸಮಾಜದ ವತಿಯಿಂದ ವಾಲ್ಮೀಕಿ ಸಮುದಾಯ ಭವನದ ನಿರ್ಮಾಣದ ಜಾಗದಲ್ಲಿ ಏರ್ಪಡಿಸಲಾದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಬರೆಯುವುದರ ಮೂಲಕ ಎಲ್ಲ ಸಮಾಜಗಳ ಅಂಕುಡೊಂಕುಗಳನ್ನು ತಿದ್ದಿದ್ದಾರೆ. ಅಂತಹ ದೇವ ಸ್ವರೂಪಿಯನ್ನು ಹೊಂದಿರುವ ಮಹಿರ್ಷಿ ವಾಲ್ಮೀಕಿ ಸಮಾಜದವರಾದ ನಾವು ಎಲ್ಲ ಸಮಾಜಬಾಂಧವರೊಂದಿಗೆ ಪ್ರೀತಿ ವಿಶ್ವಾಸಗಳಿಸಿಕೊಳ್ಳಬೇಕಾಗಿದೆ ಎಂದ ಅವರು, ಸಮಾಜದ ಜನರಲ್ಲಿ ಒಗ್ಗಟ್ಟು ಎಂಬುದು ಹೆಚ್ಚಾದಂತೆ ಸಮಾಜವು ಅಭಿವೃದ್ಧಿ ಹೊಂದುತ್ತಾ ಮುನ್ನಡೆಯುತ್ತದೆ ಎಂದು ಮಹರ್ಷಿ ಮಾಲ್ಮೀಕಿಯವರ ಜೀವನ ಚರಿತ್ರೆಯನ್ನು
ಮಾರ್ಮಿಕವಾಗಿ ವಿವರಿಸಿದರು.
ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಸಮಾಜದ ಮುಖಂಡರು ಪುಷ್ಪಹಾರ ಹಾಕಿ ಗೌರವಿಸಿ, ಪೂಜೆ ಸಲ್ಲಿಸಿದರು. ವಾಲ್ಮೀಕಿ ಸಮಾಜದ ಕಾರ್ಯದರ್ಶಿ ಕಾಶಿನಾಥ ಪಾಟೀಲ, ಯಮನೂರಿ ಬರದೇನಾಳ, ಅಶೋಕ ಸಿನೇಸಪೂರ, ಹಣಮಂತ್ರಾಯ ಬಾಗೇವಾಡಿ, ಮಂಜುನಾಥ ಬರದೇನಾಳ, ಬಸವರಾಜ ದೇವದುರ್ಗ, ಸಂಗು ಇಂಗಳಗಿ, ರಾಮು ಪಾಟೀಲ, ರಮೇಶ ಮುದ್ದೇಬಿಹಾಳ, ರಮೇಶ ಇಂಗಳಗಿ, ಮಹಾಂತೇಶ ಬಾಗೇವಾಡಿ, ಕಾಶಿನಾಥ ಒಡಗೇರಿ, ವಾಸು ಕ್ವಾಟಿ, ಭೀಮಣ್ಣ ಬಡಿಗೇರ, ಸದಾನಂದ ಅಂಬಳನೂರ, ಮಹಾದೇವಪ್ಪ ಒಣಕ್ಯಾಳ, ಮಲ್ಲು ಬೆಸಟ್ಯಾಳ, ಪರಶುರಾಮ ಗುಡದಿನ್ನಿ, ಯಮನಪ್ಪ ನಾಗೂರ, ಮಹಾಂತಪ್ಪ ವಠಾರ, ಮಹಮಂತರಾಯ ಮೇಲಿನಮನಿ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.