ದಲಿತತ್ವದಿಂದ ದೇಶ ನಿರ್ಮಾಣ ಮಾಡಿ
Team Udayavani, Oct 6, 2017, 12:29 PM IST
ಹುಬ್ಬಳ್ಳಿ: ಹಿಂದುತ್ವದಿಂದಲ್ಲ, ದಲಿತತ್ವದಿಂದ ದೇಶ ನಿರ್ಮಾಣ ಮಾಡುವುದು ಅವಶ್ಯಕ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು. ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ದಲಿತ ಸಾಹಿತಿ, ಪತ್ರಕರ್ತರ ದ್ವಿತೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುತ್ವ ತತ್ವದಿಂದ ದೇಶ ನಿರ್ಮಾಣ ಮಾಡಬೇಕೆಂದು ಮೇಲ್ವರ್ಗದ ಕೆಲ ಮುಖಂಡರು ಹೇಳುತ್ತಾರೆ. ಆದರೆ ದಲಿತತ್ವದಿಂದ ದೇಶವನ್ನು ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಬೇಕು. ನಮ್ಮದು ದಲಿತರ ರಾಷ್ಟ್ರ, ದ್ರಾವಿಡರ ರಾಷ್ಟ್ರ, ದಲಿತತ್ವದಿಂದ ದೇಶ ಕಟ್ಟುವುದು ಅಗತ್ಯ. ನಮಗೆ ಬೇಕಿರುವುದು ಹಿಂದುತ್ವದ ದೇಶವಲ್ಲ, ರಾಷ್ಟ್ರೀಯ ಭಾವೈಕ್ಯತೆಯ ದೇಶ ಎಂದರು.
ದಲಿತರು ವೈದಿಕ ಸಂಪ್ರದಾಯದಿಂದ ಹೊರಗೆ ಬರಬೇಕು. ವೈದಿಕ ಸಂಪ್ರದಾಯ ಆಚರಣೆ ಮಾಡುವವರೆಗೂ ಶೋಷಣೆ ನಿಲ್ಲುವುದಿಲ್ಲ. ಮನೆಯಲ್ಲಿ ಗದ್ದುಗೆ ಮೇಲಿನ ಎಲ್ಲ ದೇವರ ಮೂರ್ತಿಗಳನ್ನು ಹೊರಗಿಟ್ಟು ದಲಿತರಿಗೆ ನ್ಯಾಯ ನೀಡಿದ ಬುದ್ಧ, ಬಸವ, ಅಂಬೇಡ್ಕರ ಫೋಟೋಗಳನ್ನು ಮಾತ್ರ ಪೂಜೆ ಮಾಡಬೇಕು.
ಆಗ ಮಾತ್ರ ವಿಚಾರಗಳು ಸೃಷ್ಟಿಯಾಗಲು ಸಾಧ್ಯ ಎಂದು ತಿಳಿಸಿದರು. ಗಣೇಶ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಆದರೆ ದಲಿತ ಕೇರಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಪ್ರೇರೇಪಿಸಲಾಗುತ್ತದೆ. ಇದೆಲ್ಲ ಮತೀಯ ವಾದಿಗಳ ಷಡ್ಯಂತ್ರವಾಗಿದ್ದು, ಇದನ್ನು ದಲಿತರು ಅರಿತುಕೊಳ್ಳಬೇಕು. ಧರ್ಮದ ಆಚರಣೆ ಧಿಕ್ಕರಿಸಬೇಕು ಎಂದರು.
ಮೀಸಲಾತಿ ದಲಿತರಾಗಬೇಡಿ: ಮೀಸಲಾತಿ ದಲಿತರಾಗದೇ ನಾವು ಅಂಬೇಡ್ಕರ ದಲಿತರಾಗಬೇಕು. ಆಗ ಅಂಬೇಡ್ಕರ ಅವರು ಅನುಭವಿಸಿದ ನೋವು ನಮಗೆ ಗೊತ್ತಾಗುತ್ತದೆ. ನಮ್ಮ ಹಿರಿಯರು ಅನುಭವಿಸಿದ ಶೋಷಣೆ ನಮ್ಮ ಅರಿವಿಗೆ ಬರುತ್ತದೆ ಎಂದರು.
ಬುದ್ಧ, ಬಸವಣ್ಣನಿಂದ ನ್ಯಾಯ ಸಿಕ್ಕಿದೆ: ದಲಿತರಿಗೆ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರಿಂದ ನ್ಯಾಯ ಸಿಕ್ಕಿಲ್ಲ. ಹೋಮ ಹವನ, ಗುಡಿಗಳಲ್ಲಿರುವ ಕಲ್ಲುಗಳಿಂದ ನ್ಯಾಯ ಸಿಕ್ಕಿಲ್ಲ. ಆದರೆ ಬುದ್ಧ, ಬಸವನಿಂದ ನ್ಯಾಯ ಸಿಕ್ಕಿದೆ. ಸಹಸ್ರಾರು ವರ್ಷಗಳಿಂದ ಶೋಷಣೆಗೊಳಗಾದವರಿಗೆ ಡಾ| ಬಿ.ಆರ್.ಅಂಬೇಡ್ಕರನಿಂದ ಅನ್ನ ಸಿಕ್ಕಿದೆ ಎಂದರು.
ಹಿರಿಯ ಕವಿ ಡಾ| ಸಿದ್ದಲಿಂಗಯ್ಯ ಮಾತನಾಡಿ, ದಲಿತರು ಕೀಳರಿಮೆಯಿಂದ ಹೊರಬಂದು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮೇಲ್ವರ್ಗದ ಶಿಕ್ಷಣ ಪದ್ಧತಿಯೇ ದಲಿತರಲ್ಲಿ ಕೀಳರಿಮೆ ಮೂಡಲು ಮುಖ್ಯ ಕಾರಣ. ಪಠ್ಯಪುಸ್ತಕದಲ್ಲಿನ ಪಾಠಗಳು ಮೇಲ್ವರ್ಗದವರ ಪರವಾಗಿವೆ. ಶಿಕ್ಷಣದ ಮಾನದಂಡ ಬದಲಾಗದ ಹೊರತು ಹಿಂದುಳಿದವರಿಗೆ ನ್ಯಾಯ ಸಿಗುವುದಿಲ್ಲ ಎಂದರು.
ಬಿಡಿಎಸ್ಎ ರಾಷ್ಟ್ರೀಯ ಅಧ್ಯಕ್ಷ ಡಾ| ಎಸ್.ಪಿ. ಸುಮನಾಕ್ಷರ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಹಾರಾಷ್ಟ್ರ ಮಾಜಿ ಸಚಿವ ಬಬನರಾವ್ ಫೂಲಪ್, ಜಿತೇಂದರ್ ಮನು, ಮಾಜಿ ಸಂಸದ ಐ.ಜಿ. ಸನದಿ, ಉಮೇಶ ಬಮ್ಮಕ್ಕನವರ, ಜಯ ಸುಮನಾಕ್ಷರ, ಎಸ್.ಎಚ್. ಬಿಸನಳ್ಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kundapura: ಹೆಮ್ಮಾಡಿ; 4 ರಸ್ತೆ ಸೇರುವಲ್ಲಿ ಒಂದೂ ತಂಗುದಾಣವಿಲ್ಲ!
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.