ಸಂಗೀತ ಉಪವಾಸ ಕೆಡವಿಲ್ಲ


Team Udayavani, Oct 7, 2017, 7:45 AM IST

bh10.jpg

ಸಾರಂಗಿ ನಂಬಿ ಬದುಕೋದು ಕಷ್ಟವೇ,  ಆದರೆ  ಜನರ ಮಧ್ಯೆ ಹಾಡಿ ಕೊಂಡು ಹೇಗೆಲ್ಲಾ ಬದುಕಬಹುದು ಅನ್ನೋದನ್ನು ವಾಸು ದೀಕ್ಷಿತ್‌ ಇಲ್ಲಿ ವಿವರಿಸಿದ್ದಾರೆ. 

ಸಂಗೀತಕ್ಕೆ ಪ್ಲಾಟ್‌ಫಾರ್ಮ್ ಬೇಕು. ಅಲ್ಲಿ ಹಾಡಬೇಕು. ಜನ ಅಲ್ಲಿಗೆ ಬಂದು ಕೇಳಬೇಕು, ಚಪ್ಪಾಳೆ ತಟ್ಟಬೇಕು- ಹಾಡೋರಿಗೆ ಹೀಗೆಲ್ಲಾ ಕನಸಿರುತ್ತದೆ. ಇದನ್ನು ಉಲ್ಟಾ ಮಾಡಿ­ದವರು ಗಾಯಕ ವಾಸು ದೀಕ್ಷಿತ್‌. ಇವರೇ ಜನರ ಮಧ್ಯೆ ನಿಂತು, “ರಾಗೀ ತಂದಿರಾ ಭಿಕ್ಷಕೆ ರಾಗೀ ತಂದೀರಾ’ ಅಂತ ಹಾಡಿ ನಿಬ್ಬೆರಗು ಮೂಡಿಸಿದರು. ಆರಂಭದಲ್ಲಿ “ಇದೇನಪ್ಪಾ, ಹೀಗೂ ಉಂಟೇ ?’ ಅಂತ ಅನ್ನೋ ಹೊತ್ತಿಗೆ ವಾಸು ಎಲ್ಲಾ ದಿಕ್ಕನ್ನು ತನ್ನ ಕಡೆಗೆ ಸೆಳೆದುಕೊಂಡರು. 

ಹಾಡುಗಳಿರುವುದೇ ಪ್ರೀತಿ ಪ್ರೇಮ  ಮರ ಸುತ್ತುವುದು, ಹಾಗೂ ವಿಷಾದದ ಸುತ್ತಮುತ್ತ. ಇದು ಎಲ್ಲರಿಗೂ ಗೊತ್ತಿದೆ. ಆದರೆ ವಾಸು ಅದನ್ನು ಇನ್ನೊಂದು ಮಟ್ಟಕ್ಕೆ ತೆಗೆದು ಕೊಂಡು ಹೋಗಿದ್ದಾರೆ. ಹಿಂದೆ ಪುರಂದರ ದಾಸರು, ಕನಕದಾಸರು, ಬಸವಣ್ಣ ನವರು ಸಮಾಜದ ಅಂಕುಡೊಂಕುಗಳನ್ನೇ ಹಾಡಾಗಿಸುತ್ತಿದ್ದರು. ವಾಸು ಇದನ್ನು ಈಗಿನ ಜನಕ್ಕೆ ಮನಮುಟ್ಟವ ರೀತಿಯಲ್ಲಿ  ಡಿಫ‌ರೆಂಟಾಗಿ ಮುಂದಿಡು­ತ್ತಿದ್ದಾರೆ. ಇದಕ್ಕಾಗಿ ಸ್ವಾರಾತ್ಮ, ವಾಸುದೀಕ್ಷಿತ್‌ ಕಲೆಕ್ಟೀವ್‌ ಅನ್ನೋ ಎರಡು ಬ್ಯಾಂಡ್‌ಗಳು ಇವೆ.  

ನನ್ನ ಹಾಡಿಗೆ  ಪ್ಲಾಟ್‌ ಫಾರಂ ಸಿಗುತ್ತಾ ಅಂತ ಕಾಯೋಕೆ ಆಗೋಲ್ಲ. ನನ್ನ ಪ್ಲಾಟ್‌ ಫಾರಂ ನಾನೇ ಕ್ರಿಯೇಟ್‌ ಮಾಡಿಕೊಳ್ಳಬೇಕು.  ನಾವು ಹಾಡಿದ ಕಡೆಯೇ ಪ್ಲಾಟ್‌ ಫಾರಂ. ಇದು ಜನರಿಗೆ ಡಿಫ‌ರೆಂಟ್‌ ಅಂತ ಅನಿಸಿರುತ್ತೆ. ಆದರೆ  ನನಗೆ ಡಿಫ‌ರಂಟ್‌ ಅನಿಸಲಿಲ್ಲ. ನಾನು ಯೋಚನೆ ಮಾಡೋದೇ ಹಾಗಿರಬೇಕು ಅಂತಾರೆ ವಾಸು. ಸಂಗೀತ ಅನ್ನೋದು ಕೇವಲ ಮನರಂಜನೆಯಲ್ಲ. ಅದರಲ್ಲಿ ಸಾಮಾಜಿಕ ಸಂದೇಶ ಕೂಡ ಇರಬೇಕು ಅನ್ನೋದು ಇವರ ನಿಯಮ.  

ಸಾಮಾಜಿಕ ಕಾಳಜಿ ಮೂಡಿಸಲು, ಕಸದ ಸಮಸ್ಯೆ, ಕಾವೇರಿ ಸಮಸ್ಯೆ, ರಾಜಕೀಯ ಮೇಲಾಟಗಳ ಬಗ್ಗೆ… ಹೀಗೆ ಸಂದರ್ಭಕ್ಕೆ ತಕ್ಕ ಹಾಡುಗಳು ಇವರಲ್ಲಿ ಉಂಟು. ಈ ಯೋಚನೆ ಬಂದಿದ್ದಾರೂ ಹೇಗೆ ಸಾರ್‌, ಎಂದು ಪ್ರಶ್ನಿದರೆ ಅವರು ಹೇಳ್ತಾರೆ;  ಗೊತ್ತಿಲ್ಲ, ನಾನು ಫೈನ್‌ ಆರ್ಟ್ಸ್ ಓದಿದ್ದು. ಆಗ ಕಲೆ ಎಂದರೆ ಏನು, ಕಲಾವಿದರ ಮನೋಸ್ಥಿತಿ ಹೇಗಿರಬೇಕು ಅನ್ನೋದನ್ನು ಹೇಳುತ್ತಿದ್ದರು. ಇದರ ಪ್ರಭಾವ ಕೂಡ ನನ್ನ ಮೇಲೆ ಆಗಿರಬಹುದು…

ವಾಸು ಮೇನ್‌ಸ್ಟಿಮ್‌ ಸಂಗೀತದಿಂದ ದೂರ. ಸಾಮಾ­ನ್ಯವಾಗಿ ಇಂಥ ಹಾಡುಗಳನ್ನು ಕೇಳ್ಳೋದು ಕಡಿಮೆ. ಹೀಗಾಗಿ ಇವರ ಮನೆಯ ಟಿವಿಯಲ್ಲಿ ಯಾವುದೇ ಚಿತ್ರಸಂಗೀತದ ಹಾಡುಗಳನ್ನು ಕೇಳ್ಳೋದಿಲ್ಲ. ನಾನು ಮೇನ್‌ಸ್ಟಿàಮ್‌ನಿಂದ ದೂರ ನಿಂತಿರುವುದು ಕೂಡ ನನ್ನ ಹಾಡಿನ ಭಿನ್ನ ಶೈಲಿಗೆ ಕಾರಣ ಇರಬಹುದು.  ನಾನು ಪ್ಲೇಬ್ಯಾಕ್‌ ಸಿಂಗರ್‌ ಅಲ್ಲ. ನನ್ನ ಹಾಡಿಗೆ ನಾನೇ ಟ್ಯೂನ್‌ ಮಾಡಿ, ನಾನೇ ಹಾಡಬೇಕು. ಆಗ ನನ್ನ ಎಕ್ಸ್‌ಪ್ರೆಷನ್‌ ಚೆನ್ನಾಗಿರುತ್ತದೆ.

ಬೇರೆಯವರ ಸಂಗೀತಕ್ಕೆ ನಾನು ಹಾಡುವುದು ತಕ್ಷಣಕ್ಕೆ ಆಗೋಲ್ಲ. ಸಂಗೀತ ಅನ್ನೋದು ಅಂತ­ರಂಗದ ಕಾರ್ಖಾನೆಯಿಂದ ಬರಬೇಕು ಅಲ್ವೇ? ಅಂತಾರೆ ವಾಸು. ಎಲ್ಲರದೂ ಒಂದು ದಾರಿ, ನಿಮ್ಮದು ಇನ್ನೊಂದು ದಾರಿ. ಈ ದಾರಿಯಲ್ಲಿ ನಡೆಯೋದು ಕಷ್ಟವಾ­ಗೋಲ್ವೇ? ಎಂದು ಕೇಳಿದ್ದಕ್ಕೆ- “ಕಳೆದ ಹತ್ತು ವರ್ಷದಿಂದ ಬ್ಯಾಂಡ್‌ ನಂಬಿ ಬದುಕ್ತಿದ್ದೇನೆ.

ಜನಕ್ಕೆ ಈಗ ನನ್ನ ಹಾಡು, ಅದರ ಮಾಧುರ್ಯ ಎರಡೂ ಅರ್ಥವಾಗಿದೆ. ಎಲ್ಲ ಕಡೆ ಕರೆಯುತ್ತಿದ್ದಾರೆ. ಆದರೆ ಎಂದೂ ಸಂಗೀತ ನನ್ನನ್ನು ಉಪವಾಸ ಕೆಡವಿಲ್ಲ. ನನಗೆ ರಾತ್ರೋರಾತ್ರಿ ಹೆಸರು ಗಳಿಸಬೇಕು ಅನ್ನೋ ನಿರೀಕ್ಷೆ ಕೂಡ ಇಲ್ಲ. ಸಂಗೀತ ಹಾಡಬೇಕು, ಅದೂ ನನ್ನ ಶೈಲಿಯಲ್ಲಿ ಅನ್ನೋದಷ್ಟೇ ನನ್ನ ಗುರಿ’ ಎನ್ನುತ್ತಾರೆ ವಾಸು. 

ಟಾಪ್ ನ್ಯೂಸ್

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

9

Puttur: ಅಮರ್‌ ಜವಾನ್‌ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

5

ಅಮೆಜಾನ್‌ನಲ್ಲಿ ಶೀಘ್ರ 14,000 ಉದ್ಯೋಗ ಕಡಿತ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.