ರಾಜ್ಯದ ಪಾರಂಪರಿಕ ಉತ್ಪನ್ನ “ಮೈಸೂರು ಸಿಲ್ಕ್
Team Udayavani, Oct 7, 2017, 9:38 AM IST
ಬೆಂಗಳೂರು: ರಾಜ್ಯದ ಪಾರಂಪರಿಕ ಉತ್ಪನ್ನವಾದ “ಮೈಸೂರು ಸಿಲ್ಕ್’ ಸೀರೆಗಳಿಗೆ ಶತಮಾನಕ್ಕಿಂತಲೂ ಹೆಚ್ಚಿನ
ಇತಿಹಾಸವಿದೆ. ಕರ್ನಾಟಕದ ಹೆಮ್ಮೆಯ ಈ ಉತ್ಪನ್ನ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿರುವುದು ಪ್ರಶಂಸನೀಯ
ಎಂದು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ತಿಳಿಸಿದರು.
ಶುಕ್ರವಾರ ಅವರು ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್‌ನಲ್ಲಿ ಕೆಎಸ್‌ಐಸಿ ಅ.6 ರಿಂದ 13ರವರೆಗೆ ಆಯೋಜಿಸಿ
ರುವ ಮೈಸೂರು ಸಿಲ್ಕ್ ಸೀರೆಗಳ ಮತ್ತು ಇತರೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಮಾತನಾಡಿ ದರು. 1981ರಲ್ಲಿ ಕೆಎಸ್‌ಐಸಿ ಕಂಪನಿಯಾಗಿ ಪರಿವರ್ತನೆ ಗೊಂಡು ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಸಂಸ್ಥೆಯ ಏಳಿಗೆಗೆ ಶ್ರಮಿಸಿರುವ ಎಲ್ಲರಿಗೂ ಧನ್ಯವಾದಗಳು. ನಿಗಮದ ಅಭಿವೃದ್ಧಿಯಲ್ಲಿ ಗ್ರಾಹಕರ ಪಾತ್ರವೂ
ಮಹತ್ವ ದ್ದಾಗಿದೆ. ತನ್ನ ಹೊಳಪನ್ನು ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡಿರುವುದೇ ಮೈಸೂರು ರೇಷ್ಮೆಯ
ವಿಶೇಷ. 50ರಿಂದ 60 ವರ್ಷಗಳ ಕಾಲ ಮೈಸೂರು ಸಿಲ್ಕ್ (ವಿಂಟೇಜ್) ಸೀರೆಗಳನ್ನು ಸುರಕ್ಷಿತವಾಗಿ ಕಾಪಾಡಿಕೊಂಡು
ಬಂದಿರುವ ಮಹಿಳೆಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ನನಗೆ ಸಂತೋಷವೆನಿಸುತ್ತದೆ ಎಂದರು.
ಕೆಎಸ್‌ಐಸಿ ಅಧ್ಯಕ್ಷ ಎಂ.ಕೆ. ಸೋಮಶೇಖರ್ ಮಾತನಾಡಿ, ಗ್ರಾಹಕರು ನಮ್ಮ ಸಂಸ್ಥೆಯ ಮೇಲಿಟ್ಟಿರುವ ಪ್ರೀತಿ, ವಿಶ್ವಾಸದಿಂದಲೇ ಇಂದು ಮೈಸೂರು ಸಿಲ್ಕ್ ಈ ಮಟ್ಟಕ್ಕೆ ಬೆಳೆಯಲು ಕಾರಣ. ಅದೇ ರೀತಿ ಕೆಎಸ್‌ಐಸಿ
ಸಂಸ್ಥೆಯು 107 ವರ್ಷಗಳನ್ನು ಪೂರೈಸುತ್ತಿದ್ದರೂ ಗುಣ ಮಟ್ಟದಲ್ಲಿ ರಾಜಿ ಮಾಡಿ ಕೊಂಡಿಲ್ಲ. ಅಪ್ಪಟ ರೇಷ್ಮೆ ಎಳೆ
ಗಳಿಂದ ನೇಯ್ಗೆ ಮಾಡುವ ಈ ಸೀರೆಗಳಿಗೆ ಚಿನ್ನ ಮತ್ತು ಬೆಳ್ಳಿಯ ಜರಿಯನ್ನೇ ಬಳಸುತ್ತಿರು ವುದು ವಿಶೇಷ. ಆದ
ರಿಂದಾಗಿ ಮೈಸೂರು ಸಿಲ್ಕ್ ಸೀರೆಗಳಿಗೆ ಹಾಗೂ ಇದರ ಉತ್ಪನ್ನಗಳಿಗೆ ಸದಾ ಕಾಲ ಬೇಡಿಯಿದೆ. ಕೆಳ ಹಾಗೂ ಮಧ್ಯಮ ವರ್ಗದವರಿಗೂ ಕೈಗೆಟುವ ಬೆಲೆಗಳಲ್ಲಿ ರೇಷ್ಮೆ ಸೀರೆಗಳು ದೊರಕುವಂತೆ ಮಾಡುವ ಸಲುವಾಗಿ ಇತೀ¤ಚೆಗೆ ಚನ್ನಪಟ್ಟಣದ ಘಟಕದಲ್ಲಿ ರೇಷ್ಮೆ ಸೀರೆಗಳ ನೇಯ್ಗೆ ಕೆಲಸವನ್ನು ಆರಂಭಿಸಿದ್ದೇವೆ ಎಂದರು.
ವಿಜೇತರಿಗೆ ಬಹುಮಾನ: ಈ ಸಂದರ್ಭದಲ್ಲಿ ವಿಂಟೇಜ್ ಮೈಸೂರು ಸಿಲ್ಕ್ ಸೀರೆಗಳ ಸ್ಪರ್ಧೆಯಲ್ಲಿ ವಿಜೇತರಾದ
ಮೂವರಿಗೆ 18 ಸಾವಿರ ರೂ. ಮೌಲ್ಯದ ಚೆಕ್ ಮತ್ತು ಪ್ರಶಸ್ತಿ ಫಲಕವನ್ನು ಹಾಗೂ ಮೂವರಿಗೆ ಸಮಾಧಾನಕರ ಬಹುಮಾನವಾಗಿ 5,000 ರೂ. ಮೌಲ್ಯ ಚೆಕ್ ಅನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಕೆಎಸ್‌ಐಸಿ ವ್ಯವಸ್ಥಾಪಕ
ನಿರ್ದೇಶಕಿ ಶ್ರೀಮತಿ ನೀಲಾ ಮಂಜುನಾಥ್ ಹಾಗೂ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.