ಟೀಮ್‌ ಇಂಡಿಯಾ-ಆಸೀಸ್‌ ಟಿ20 ಟೈಮ್‌


Team Udayavani, Oct 7, 2017, 11:17 AM IST

07-23.jpg

ರಾಂಚಿ: ಭಾರತದ ಕ್ರೀಡಾ ಪ್ರೇಮಿಗಳಿಗೆ ಪ್ರೊ ಕಬಡ್ಡಿ, ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌, ರಣಜಿ ಹಾಗೂ ಚುಟುಕು ಕ್ರಿಕೆಟ್‌ ಸಮರವನ್ನು ಏಕಕಾಲದಲ್ಲಿ ವೀಕ್ಷಿಸುವ ಅಪೂರ್ವ ಅವಕಾಶ! ಈ “ಫ‌ುಲ್‌ ನ್ಪೋರ್ಟ್ಸ್ ಪ್ಯಾಕೇಜ್‌’ಗೆ ಅ. 7ರ ಶನಿವಾರ ಸಾಕ್ಷಿಯಾಗಲಿದೆ. ಭಾರತ-ಆಸ್ಟ್ರೇಲಿಯ ತಂಡಗಳು 3 ಪಂದ್ಯಗಳ ಸರಣಿಯ ಮೊದಲ ಟಿ-20 ಪಂದ್ಯದಲ್ಲಿ ಸೆಣಸಲಿವೆ. ತಾಣ, ಧೋನಿ ಊರಾದ ರಾಂಚಿ. 

ಏಕದಿನದಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇ ಲಿಯಕ್ಕೆ 4-1 ಸೋಲಿನೇಟು ನೀಡಿದ ಭಾರತವೀಗ ಇದೇ ಆತ್ಮವಿಶ್ವಾಸದಲ್ಲಿ ಚುಟುಕು ಕ್ರಿಕೆಟ್‌ ಸರಣಿಯಲ್ಲೂ ಕಾಂಗರೂ ಪಡೆಯನ್ನು ಉರುಳಿಸುವ ಯೋಜನೆಯಲ್ಲಿದೆ. ಏಕದಿನದ ಸರಣಿ ಗೆಲುವು ಭಾರತವನ್ನು ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿಸಿತ್ತು. ಟಿ-20 ಯಶಸ್ಸು ಟೀಮ್‌ ಇಂಡಿಯಾವನ್ನು ಗರಿಷ್ಠ ದ್ವಿತೀಯ ಸ್ಥಾನಕ್ಕೆ ಕೊಂಡೊಯ್ಯಲಿದೆ. ಆದರೆ ಇದಕ್ಕೆ 3-0 ಕ್ಲೀನ್‌ಸ್ವೀಪ್‌ ಸಾಹಸ ಅಗತ್ಯ.

ಭಾರತದ್ದೇ ಮೇಲುಗೈ: ಸದ್ಯ ರ್‍ಯಾಂಕಿಂಗ್‌ ಲೆಕ್ಕಾಚಾರದಲ್ಲಿ ಈ ಎರಡೂ ತಂಡಗಳು ಬಹಳ ಕೆಳಗಿವೆ. ಭಾರತ 5ನೇ ಸ್ಥಾನದಲ್ಲಿದ್ದರೆ (115 ಅಂಕ), ಆಸ್ಟ್ರೇಲಿಯ ಏಳರಲ್ಲಿದೆ (110). ಆಸೀಸ್‌ ಎದುರಿನ ಸಾಧನೆಯ ಲೆಕ್ಕಾಚಾರದಲ್ಲಿ ಭಾರತದ್ದೇ  ಮೇಲುಗೈ. 9-3 ಗೆಲುವಿನ ದಾಖಲೆ ಟೀಮ್‌ ಇಂಡಿಯಾ ಪರವಾಗಿದೆ. ಆಸ್ಟ್ರೇಲಿಯದಲ್ಲಿ ಆಡಲಾದ ಕಳೆದ ವರ್ಷಾರಂಭದ ಸರಣಿಯಲ್ಲಿ 3-0 ಕ್ಲೀನ್‌ಸ್ವೀಪ್‌ ಸಾಧಿಸಿದ್ದು “ಮೆನ್‌ ಇನ್‌ ಬ್ಲೂ’ ಪರಾಕ್ರಮಕ್ಕೆ ಸಾಕ್ಷಿ. ಭಾರತ-ಆಸ್ಟ್ರೇಲಿಯ ನಡುವೆ 5 ದ್ವಿಪಕ್ಷೀಯ ಟಿ-20 ಸರಣಿಗಳನ್ನು ಆಡಲಾಗಿದ್ದು, ಭಾರತ ಮೂರನ್ನು ತನ್ನದಾಗಿಸಿಕೊಂಡಿದೆ. ಒಂದರಲ್ಲಷ್ಟೇ ಸೋತಿದೆ. ಇನ್ನೊಂದು ಸರಣಿ 1-1 ಸಮಬಲಗೊಂಡಿದೆ.

ಟಿ-20 ಕ್ರಿಕೆಟ್‌ನಲ್ಲಿ ಫೇವರಿಟ್‌ ತಂಡಗಳನ್ನು ಗುರುತಿಸಬಾರದು ಎಂಬ ಮಾತಿದೆ. ಕಾರಣ, ಇಲ್ಲಿ ಏನೂ ಸಂಭವಿಸಬಹುದು. ಕೇವಲ ಒಂದು ಓವರ್‌, ಒಬ್ಬ ಆಟಗಾರನಿಂದ ಇಡೀ ಪಂದ್ಯದ ದಿಕ್ಕೇ ಬದಲಾಗಬಲ್ಲದು. ಆದರೂ ಆಸ್ಟ್ರೇಲಿಯ ವಿರುದ್ಧ ಭಾರತ ಮೇಲುಗೈ ಸಾಧಿಸಬಹುದು ಎಂಬುದು ಅನೇಕರ ಲೆಕ್ಕಾಚಾರ.

ಭಾರತದ ಬೌಲಿಂಗ್‌ ವೈವಿಧ್ಯ: ಏಕದಿನದಲ್ಲಿ ಭಾರತ ಪ್ರತಿಯೊಂದು ವಿಭಾಗದಲ್ಲೂ ಪ್ರಭುತ್ವ ಸಾಧಿಸಿತ್ತು. ಬ್ಯಾಟಿಂಗ್‌, ಬೌಲಿಂಗ್‌ ವೆರೈಟಿ ಟೀಮ್‌ ಇಂಡಿಯಾದ ಹೆಚ್ಚುಗಾರಿಕೆಯಾಗಿತ್ತು. ಇನ್ನೊಂದೆಡೆ ಚಾಂಪಿ ಯನ್ನರಿಗೆ ತಕ್ಕ ಆಟವನ್ನು ಪ್ರದರ್ಶಿಸಲು ವಿಫ‌ಲವಾದ ಆಸ್ಟ್ರೇಲಿಯ ಬಹುತೇಕ ಎಲ್ಲ ವಿಭಾಗಗಳಲ್ಲೂ ಹಿಂದುಳಿದಿತ್ತು. 20 ಓವರ್‌ಗಳ ಕ್ರಿಕೆಟ್‌ನಲ್ಲಿ ಈವರೆಗೆ ಗಮನಾರ್ಹ ನಿರ್ವಹಣೆ ತೋರದ ಆಸೀಸ್‌, ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲಿದೆ ಎಂದು ಭಾವಿಸುವುದು ತಪ್ಪಾಗಬಹುದು.

ಅವಳಿ ಸ್ಪಿನ್ನರ್‌ಗಳಾದ ಅಶ್ವಿ‌ನ್‌, ಜಡೇಜ ಗೈರಲ್ಲೂ ಭಾರತ ಚುಟುಕು ಕ್ರಿಕೆಟಿಗೆ ಅಗತ್ಯವಿರುವ ಸಮರ್ಥ ಪಡೆಯನ್ನೇ ಹೊಂದಿದೆ. 38ರ ಹರೆಯದ ಆಶಿಷ್‌ ನೆಹ್ರಾ ಆಯ್ಕೆ ಅಚ್ಚರಿಯಾಗಿ ಕಂಡರೂ ಅವರ ಡೆತ್‌ ಓವರ್‌ ಸಾಮರ್ಥ್ಯದ ಬಗ್ಗೆ ಈಗಲೂ ವಿಶ್ವಾಸ ಇಡಬಹುದಾಗಿದೆ. ಇವರಿಗೆ ಭುವನೇಶ್ವರ್‌, ಬುಮ್ರಾ ತಕ್ಕ ಜತೆಗಾರರಾಗಿ ಗೋಚರಿಸುತ್ತಾರೆ. ಸ್ಪಿನ್ನಿಗೆ ಕುಲದೀಪ್‌, ಚಾಹಲ್‌, ಪಟೇಲ್‌, ಜಾಧವ್‌ ಇದ್ದಾರೆ. ಏಕದಿನ ಸರಣಿಶ್ರೇಷ್ಠ ಪಾಂಡ್ಯ ಇಲ್ಲಿಯೂ ಸುಂಟರಗಾಳಿಯಾಗುವುದು ಖಂಡಿತ.

ಧವನ್‌ ಮರಳಿದ್ದರಿಂದ ಬ್ಯಾಟಿಂಗ್‌ ವಿಭಾಗ ಹೆಚ್ಚು ಬಲಿಷ್ಠವಾಗಿದೆ. ರೋಹಿತ್‌, ಕೊಹ್ಲಿ, ಪಾಂಡೆ, ಧೋನಿ, ಜಾಧವ್‌, ಕಾರ್ತಿಕ್‌ ಅವರಿಂದ ಉತ್ತಮ ಆಟವನ್ನು ನಿರೀಕ್ಷಿಸಲಾಗಿದೆ. ಅಂದಹಾಗೆ ಭಾರತ ಕೊನೆಯ ಸಲ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಸೋತದ್ದು 2012ರ ವಿಶ್ವಕಪ್‌ನಲ್ಲಿ!

ಆಸೀಸ್‌ ಹೋರಾಟ ನಿರೀಕ್ಷೆ: ವಾರ್ನರ್‌, ಫಿಂಚ್‌, ಸ್ಮಿತ್‌, ಹೆಡ್‌ ಆಸ್ಟ್ರೇಲಿಯದ ಬ್ಯಾಟಿಂಗ್‌ ಹೀರೋಗಳು. ಏಕದಿನದಲ್ಲಿ ಮಿಂಚಿದ ಸ್ಟೊಯಿನಿಸ್‌ ಇಲ್ಲಿಲ್ಲ. ಫಾಕ್ನರ್‌ ಅವರನ್ನೂ ಮನೆಗೆ ಕಳಿಸಲಾಗಿದೆ. ಬದಲು ಆಲ್‌ರೌಂಡರ್‌ಗಳಾದ ಹೆನ್ರಿಕ್ಸ್‌, ಕ್ರಿಸ್ಟಿಯನ್‌ ಸೇರ್ಪಡೆಗೊಂಡಿದ್ದಾರೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಫಾರ್ಮ್ ಬಗ್ಗೆ ಅನುಮಾನವಿದೆ. ಎಡಗೈ ವೇಗಿ ಬೆಹೆಡಾಫ್ì ಪಾದಾರ್ಪಣೆಯ ಕ್ಷಣಗಣನೆಯಲ್ಲಿದ್ದಾರೆ. ಕೋಲ್ಟರ್‌ ನೈಲ್‌, ಕಮಿನ್ಸ್‌, ಝಂಪ, ರಿಚರ್ಡ್‌ಸನ್‌ ಬೌಲಿಂಗ್‌ ಕೈಚಳಕ ತೋರಬೇಕಾದ ಅಗತ್ಯವಿದೆ. ಆಗಷ್ಟೇ ನಿಜವಾದ ಟಿ-20 ಜೋಶ್‌ ನಿರೀಕ್ಷಿಸಲು ಸಾಧ್ಯ.

ಟಾಪ್ ನ್ಯೂಸ್

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.