ಗುಜರಾತ್‌ಗೆ ಶರಣಾದ ಜೈಪುರ
Team Udayavani, Oct 7, 2017, 11:20 AM IST
ಜೈಪುರ: ಪ್ರೊ ಕಬಡ್ಡಿ ಲೀಗ್ ಐದರ ಜೈಪುರ ಚರಣದ ಮೊದಲ ಪಂದ್ಯದಲ್ಲಿ ಎ ವಲಯದ ಅಗ್ರಸ್ಥಾನಿ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವು ತೀವ್ರ ಪೈಪೋಟಿ ನೀಡಿದ ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ ತಂಡವನ್ನು 29-23 ಅಂಕಗಳಿಂದ ಸೋಲಿಸಿತು.
ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ನೀರಸವಾಗಿ ಆಡಿದ್ದವು.ಆದರೆ ದ್ವಿತೀಯ ಅವಧಿಯಲ್ಲಿ ಜೈಪುರ ಮತ್ತು ಗುಜರಾತ್ ಭರ್ಜರಿಯಾಗಿ ಆಡಿದ್ದವು. ಇದರಿಂದ ಅಂಕ ಬಹುತೇಕ ಸಮಬಲದಿಂದಲೇ ಸಾಗಿದ್ದವು. ಆದರೆ ಪಂದ್ಯ ಮುಗಿಯಲು ಒಂದು ನಿಮಿಷ ವಿರುವಾಗ ಚಂದ್ರನ್ ರಂಜಿತ್ ಎರಡು ಅಂಕ ಪಡೆದು ಜೈಪುರವನ್ನು ಆಲೌಟ್ ಮಾಡಿಸಿದ್ದರಿಂದ ಗುಜರಾತ್ ಗೆಲ್ಲುವಂತಾಯಿತು.
ಭರ್ಜರಿ ರೈಡ್ ಮಾಡಿದ ಚಂದ್ರನ್ ರಂಜಿತ್ 7 ಅಂಕ ಪಡೆದರೆ ಸಚಿನ್ 6 ಅಂಕ ಮತ್ತು ಪರ್ವೇಶ್ 4 ಅಂಕ ಗಳಿಸಿದರು. ಸೋತ ಜೈಪುರ ತಂಡದ ಪರ ನಾಯಕ ಜಸ್ವೀರ್ ಸಿಂಗ್ 5 ಅಂಕ ಗಳಿಸಿದರೆ ಪವನ್ 4 ಮತ್ತು ತುಷಾರ್ ಪಾಟೀಲ್ 3 ಅಂಕ ಪಡೆದರು. ಪವನ್ ಮತ್ತು ತುಷಾರ್ ಪಾಟೀಲ್ ಅವರಿಂದ ಉತ್ತಮ ಆಟ ಪ್ರದರ್ಶಿಸಲು ವಿಫಲರಾದರು.
ಈ ಗೆಲುವಿನಿಂದ ಗುಜರಾತ್ ತಾನಾಡಿದ 19 ಪಂದ್ಯಗಳಿಂದ 12ನೇ ಗೆಲುವು ದಾಖಲಿಸಿ ಒಟ್ಟು 72 ಅಂಕಗಳೊಂದಿಗೆ ಎ ವಲಯದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತಲ್ಲದೇ ಸೂಪರ್ ಪ್ಲೇ ಆಫ್ಗೆ ತೇರ್ಗಡೆ ಖಚಿತಗೊಳಿಸಿತು. ಇದೇ ವೇಳೆ ಸೋತ ಜೈಪುರಕ್ಕೆ ಮುನ್ನಡೆಯುವ ಹಾದಿ ಕಠಿನಗೊಂಡಿದೆ. ಜೈಪುರ ತವರಿನಲ್ಲಿ ಗರಿಷ್ಠ ಪಂದ್ಯಗಳಲ್ಲಿ ಗೆದ್ದರಷ್ಟೇ ಮುನ್ನಡೆಯುವ ಅವಕಾಶವಿದೆ. ಜೈಪುರ ಶನಿವಾರದ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಎದುರಿಸಲಿದೆ.
ಅಂಕ ಖಾತೆ ತೆರೆದ ಗುಜರಾತ್
ಅಂಕ ಖಾತೆ ತೆರೆದ ಗುಜರಾತ್ ಮೊದಲ ಎರಡು ನಿಮಿಷಗಳಲ್ಲಿ ಮೂರಂಕ ಗಳಿಸಿ ಮುನ್ನಡೆ ಸಾಧಿಸಿತು. ಆಬಳಿಕ ಉಭಯ ತಂಡಗಳು ನಿಧಾನಗತಿಯಲ್ಲಿ ಆಡಿದ್ದರಿಂದ ಮೊದಲ 10 ನಿಮಿಷ ಮುಗಿದಾಗ 5-5 ಸಮಬಲದಲ್ಲಿದ್ದವು. ಮೊದಲ ಅವಧಿಯ ಆಟ ಮುಗಿದಾಗ ಉಭಯ ತಂಡಗಳು ಮತ್ತೆ 11-11 ಸಮಬಲ ಸ್ಥಾಪಿಸಿದ್ದವು.
ದ್ವಿತೀಯ ಅವಧಿಯಲ್ಲಿಯೂ ಉಭಯ ತಂಡಗಳು ಸಮಬಲದ ಹೋರಾಟ ನೀಡಿದ್ದರಿಂದ ಅಂಕ ಕೂಡ ಒಂದೇ ರೀತಿ ಸಾಗಿದ್ದವು. ಆದರೆ ಪಂದ್ಯ ಮುಗಿಯಲು ಒಂದು ನಿಮಿಷವಿರುವಾಗ ಚಂದ್ರನ್ ರಂಜಿತ್ ಸೂಪರ್ ರೈಡ್ ಮೂಲಕ ಜೈಪುರವನ್ನು ಆಲೌಟ್ ಮಾಡಿಸಿದ್ದರಿಂದ ಗುಜರಾತ್ ಗೆಲುವಿನ ನಗೆ ಚೆಲ್ಲಿತು. ಈ ನಾಲ್ಕು ಅಂಕದಿಂದ ಗುಜರಾತ್ 28-22ರಿಂದ ಮುನ್ನಡೆ ಸಾಧಿಸಿತಲ್ಲದೇ ಅಂತಿಮವಾಗಿ 29-23ರಿಂದ ಜಯಭೇರಿ ಬಾರಿಸಿತು.
ಬೆಂಗಾಲ್‌ಗೆ 25-19 ಅಂತರದ ಗೆಲುವು
ದಿನದ ಎರಡನೇ ಪಂದ್ಯದಲ್ಲಿ ಎ ವಲಯದ ಮೂರನೇ ಸ್ಥಾನಿ ಪುನೇರಿ ಪಲ್ಟಾನ್ಸ್ ತಂಡವನ್ನು ಬಿ ವಲಯದ ಬೆಂಗಾಲ್ ವಾರಿಯರ್ ತಂಡವು 25-19 ಅಂಕಗಳಿಂದ ಉರುಳಿಸಿದೆ. ಈ ಸೋಲಿನಿಂದ ಪುನೇರಿ ತಂಡದ ಸತತ ಐದು ಗೆಲುವಿನ ಸರಮಾಲೆ ಅಂತ್ಯಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.