ಅ. 9ರಂದು ಸಮೀಕ್ಷೆ  ಕಾರ್ಯಕ್ಕೆ  ಚಾಲನೆ: ನಳಿನ್‌

Team Udayavani, Oct 7, 2017, 11:41 AM IST

07-27.jpg

ಮಂಗಳೂರು: ಮೂಲ್ಕಿ- ಕಟೀಲು- ಕೈಕಂಬ- ಪೊಳಲಿ- ಬಿ.ಸಿ. ರೋಡು ಹಾಗೂ ತೊಕ್ಕೊಟ್ಟು – ಮುಡಿಪು- ಮೆಲ್ಕಾರ್‌ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸುವ ಕಾಮಗಾರಿಗೆ  ಅ. 9ರಂದು ಸಮೀಕ್ಷೆ ಕಾರ್ಯ  ಆರಂಭಗೊಳ್ಳಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರುವ ಸಂಸದರ ಕಚೇರಿಯಲ್ಲಿ  ಶುಕ್ರವಾರ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಕೇಂದ್ರ ಸರ ಕಾರದ ಭಾರತ ಮಾಲಾದಲ್ಲಿ  ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರ ರಾಷ್ಟ್ರೀಯ ಹೆದ್ದಾರಿ ಯಿಂದ- ಹೆದ್ದಾರಿಗೆ ಸಂಪರ್ಕ ಯೋಜನೆಯಲ್ಲಿ  ಈ  ಎರಡೂ ರಸ್ತೆ ಗಳನ್ನು  ಚತುಷ್ಪಥವಾಗಿ ಉನ್ನತೀಕರಣಗೊಳಿಸುವ  ಕಾಮಗಾರಿ ಕೈಗೊಳ್ಳ  ಲಾಗುತ್ತಿದೆ. ಒಟ್ಟು 90 ಕಿ.ಮೀ. ರಸ್ತೆ ಉನ್ನತೀ  ಕರಣ ಗೊಳ್ಳ ಲಿದೆ. ಇದರ ಸಮೀಕ್ಷೆ ಕಾರ್ಯವನ್ನು ಮುಂಬಯಿ ಸ್ಟೂಪ್‌ ಕನ್ಸಲ್ಟೆನ್ಸಿಗೆ ವಹಿಸಿ ಕೊಟ್ಟಿದ್ದು  ಅ. 9 ರಂದು ಚಾಲನೆ ನೀಡಲಾಗುವುದು ಎಂದರು.

ಬಂಟ್ವಾಳ-ಮೂಡಬಿದಿರೆ ಸೇರಿದಂತೆ 3 ರಸ್ತೆಗಳ ಅಭಿವೃದ್ದಿ
ಬಂಟ್ವಾಳ- ಸಿದ್ದಕಟ್ಟೆ- ಮೂಡ ಬಿದಿರೆ, ಕಲ್ಲಡ್ಕ- ವಿಟ್ಲ- ಚೇರ್ವತ್ತೂರು ಹಾಗೂ ಗುಂಡ್ಯ- ಸುಬ್ರಹ್ಮಣ್ಯ ರಸ್ತೆ  ಗಳನ್ನು  ಚತುಷ್ಪಥಗೊಳಿಸುವ ಯೋಜನೆ  ಗಳಿಗೆ ಈಗಾಗಲೇ ಮಂಜೂ  ರಾತಿ ದೊರಕಿದೆ. ಇದರಲ್ಲಿ  ಕಲ್ಲಡ್ಕ- ವಿಟ್ಲ-ಚೇರ್ವತ್ತೂರು ಹಾಗೂ ಗುಂಡ್ಯ- ಸುಬ್ರಹ್ಮಣ್ಯ ರಸ್ತೆಗಳು ಟೆಂಡರ್‌ ಪ್ರಕ್ರಿಯೆ ಯಲ್ಲಿವೆ. ಕೇಂದ್ರ ಲೋಕೋಪ ಯೋಗಿ ಇಲಾಖೆ ಇದನ್ನು  ಅನು ಷ್ಠಾನ ಗೊಳಿಸುತ್ತದೆ  ಎಂದು ನಳಿನ್‌ ಕುಮಾರ್‌ ತಿಳಿಸಿದರು.

ಅ. 30ರೊಳಗೆ ಹೆದ್ದಾರಿ ಗುಂಡಿ ಮುಚ್ಚಲು ಸೂಚನೆ
ರಾಷ್ಟ್ರೀಯ ಹೆದ್ದಾರಿಯಲ್ಲಿ  ಗುಂಡಿಗಳನ್ನು  ಮುಚ್ಚುವ ಕಾಮಗಾರಿ ನಡೆಸಲು ಮಳೆಯಿಂದಾಗಿ ಸಾಧ್ಯ ವಾಗಿರ ಲಿಲ್ಲ.  ಅಕ್ಟೋಬರ್‌ 30ರೊಳಗೆ  ಈ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲು ಹೆದ್ದಾರಿ ಪ್ರಾಧಿಕಾರಕ್ಕೆ  ಸೂಚಿಸ ಲಾಗಿದೆ ಎಂದು ಸಂಸದರು  ತಿಳಿಸಿದರು. 

ಬಿ.ಸಿ. ರೋಡು- ಗುಂಡ್ಯ ಚತುಷ್ಪಥ ಕಾಂಕ್ರೀಟ್‌  ರಸ್ತೆ  ಕಾಮಗಾರಿ ಪ್ರಾರಂಭ ಗೊಂಡಿದೆ. ಕೆಲವು ಕಡೆ ಇರುವ ಸಮಸ್ಯೆ ಗಳನ್ನು  ಬಗೆ ಹರಿ ಸಲು ಕ್ರಮ ಕೈಗೊಳ್ಳಲಾಗಿದೆ ಎಂದವರು ವಿವರಿಸಿದರು. ಪಂಪ್‌ವೆಲ್‌ ಹಾಗೂ ತೊಕ್ಕೊಟ್ಟು  ಫ್ಲೆಓವರ್‌ ಕಾಮಗಾರಿ ಗಳ ನಿಧಾನಗತಿಗೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಅವರು ತ್ವರಿತ ಗತಿಯಲ್ಲಿ ಮುಗಿಸುವಂತೆ ಸೂಚಿಸಿದರು. 

ರಾಷ್ಟ್ರೀಯ ಹೆದ್ದಾರಿ ಗುಂಡಿ ಮುಚ್ಚುವ ಕಾಮಗಾರಿಗೆ ಈಗಾಗಲೇ ಟೆಂಡರ್‌ ಕರೆಯ ಲಾಗಿದೆ. ಬಿ.ಸಿ. ರೋಡಿನಲ್ಲಿ  ಸರ್ವಿಸ್‌ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ  ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್‌ ವಿಜಯ ಕುಮಾರ್‌  ತಿಳಿಸಿದರು.

ಪಡೀಲ್‌ ರೈಲ್ವೇ ಕೆಳಸೇತುವೆ ಅ. 16ಕ್ಕೆ  ಸಂಚಾರಕ್ಕೆ  ಮುಕ್ತ
ರಾ.ಹೆ. 75ರಲ್ಲಿ ಪಡೀಲ್‌ನಲ್ಲಿ  ಹೊಸದಾಗಿ ನಿರ್ಮಾಣವಾಗಿರುವ ರೈಲ್ವೇ ಕೆಳಸೇತುವೆ ಅ. 16ರಂದು ಸಂಚಾರಕ್ಕೆ ತೆರವುಗೊಳಿಸಲಾಗುವುದು. ಬಳಿಕ ಹಳೆಯ ಕೆಳಸೇತುವೆಯನ್ನು ದುರಸ್ತಿ ಕಾಮಗಾರಿಗಳಿಗಾಗಿ  ಮುಚ್ಚ ಲಾಗುವುದು. ರೈಲುಗಳು ಸಂಚರಿಸುವಾಗ  ಸೇತುವೆ  ಕೆಳಗೆ ಸಾಗುವ ವಾಹನಗಳ ಮೇಲೆ ಮಲಿನಗೊಂಡ ನೀರು ಬೀಳುತ್ತಿರುವುದನ್ನುನಿಲ್ಲಿ ಸಲು ತಡೆಯನ್ನು ನಿರ್ಮಿಸಲಾಗುವುದು. ಪಂಪ್‌ವೆಲ್‌ ಹಾಗೂ ತೊಕ್ಕೊಟ್ಟು ಫ್ಲೆ$çಓವರ್‌ ಕಾಮಗಾರಿಗಳನ್ನು  ಮುಂದಿನ ಎಪ್ರಿಲ್‌ನೊಳಗೆ ಪೂರ್ಣ ಗೊಳಿ ಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ನಳಿನ್‌ ವಿವರಿಸಿದರು.

ಟಾಪ್ ನ್ಯೂಸ್

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಯಮುನಾ ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

Yamuna ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

1-astr

Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ullal

Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

9

Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್‌ ರಾಜ್ಯಭಾರ!

8

Mangaluru: ಕರಾವಳಿ ಉತ್ಸವ; ಮತ್ಸ್ಯ ಲೋಕದೊಳಗೆ ನಾವು!

4

Mulki: ವಾಹನ ನಿಲುಗಡೆ ನಿಷೇದವಿದ್ದರೂ ಪಾರ್ಕಿಂಗ್‌; ಸುಗಮ ಸಂಚಾರಕ್ಕೆ ಅಡ್ಡಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.