ನಕಲಿ ನೋಟು ನೀಡಿ ಸಾರ್ವಜನಿಕರಿಗೆ ಮೋಸ
Team Udayavani, Oct 7, 2017, 12:01 PM IST
ಕೋಟ: ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಅಂಗಡಿ ಹಾಗೂ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ನಟಿಸಿ ಐನೂರು ರೂ ಮುಖ ಬೆಲೆಯ ಹಲವು ನಕಲಿ ನೋಟುಗಳನ್ನು ಚಲಾವಣೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡಿದ ಘಟನೆ ಗುರುವಾರ ಸಾಸ್ತಾನ ಮೀನು ಮಾರುಕಟ್ಟೆ ಸಮೀಪ ಸಂಭವಿಸಿದೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೋರ್ವ ಇಲ್ಲಿನ ಅಂಗಡಿಯೊಂದಕ್ಕೆ ಭೇಟಿ ನೀಡಿ ಸ್ವಲ್ಪ ಸಾಮಾನು ಖರೀದಿ ಮಾಡಿ ನಕಲಿ ನೋಟನ್ನು ನೀಡಿ ಚಿಲ್ಲರೆ ಪಡೆದ, ಅನಂತರ ಮೀನು ಮಾರುಕಟ್ಟೆಗೆ ತೆರಳಿ ಮೀನು ವ್ಯಾಪಾರ ನಡೆಸಿ ನಾಲ್ಕೈದು ಮಂದಿಗೆ ಈ ನೋಟನ್ನು ನೀಡಿದ್ದಾನೆ ಹಾಗೂ ಸುಮಾರು ಎರಡು ಗಂಟೆಗಳ ಕಾಲ ಇದೇ ಪರಿಸರದಲ್ಲಿ ಓಡಾಡುತ್ತಿದ್ದ ಎನ್ನಲಾಗಿದೆ.
ಸಂಜೆ ವೇಳೆ ಅಂಗಡಿಯವರು ಬೇರೆ ಗಿರಾಕಿಗಳಿಗೆ ಈ ನೋಟು ನೀಡಿದಾಗ ನಕಲಿ ಎಂಬ ಸಂಶಯ ವ್ಯಕ್ತವಾಗಿದ್ದು, ಅನಂತರ ಪರಿಶೀಲಿಸಿದಾಗ ಅವುಗಳು ಕಲರ್ ಝೆರಾಕ್ಸ್ ಮಾಡಿದ ಕಾಗದಗಳು ಎಂದು ತಿಳಿದು ಬಂತು ಆಗ ಎಲ್ಲರೂ ಮೋಸ ಹೋಗಿರುವುದು ತಿಳಿಯಿತು. ನೋಟನ್ನು ಸ್ವಲ್ಪವೂ ಅನುಮಾನ ಬಾರದಂತೆ ಝೆರಾಕ್ಸ್ ಮಾಡಿ ಕಟ್ಟಿಂಗ್ ಮಾಡಲಾಗಿತ್ತು.
ಮಹಿಳೆಯರೇ ಟಾರ್ಗೆಟ್: ಅಂಗಡಿ, ಮೀನು ಮಾರುಕಟ್ಟೆ ಎಲ್ಲ ಕಡೆಗಳಲ್ಲಿ ಮಹಿಳೆಯರ ಬಳಿಯೇ ಈತ ವ್ಯವಹಾರ ನಡೆಸಿದ್ದು, ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಮೋಸಗೊಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸರಿಂದ ತನಿಖೆ : ಸಾರ್ವಜನಿಕರು ಸಂಜೆ ವೇಳೆ ಕೋಟ ಪೊಲೀಸರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ನೋಟುಗಳನ್ನು ವಶಕ್ಕೆ ಪಡೆದು ನಕಲಿ ಎಂದು ದೃಢಪಡಿಸಿದ್ದಾರೆ ಹಾಗೂ ಆರೋಪಿಯನ್ನು ಪತ್ತೆ ಹಚ್ಚಲು ತನಿಖೆ ಕೈಗೊಂಡದ್ದಾರೆ.
ಪ್ರಯೋಜನಕ್ಕಿರದ ಸಿ.ಸಿ. ಕೆಮರಾಗಳು
ಆರೋಪಿಯನ್ನು ಪತ್ತೆ ಹಚ್ಚುವ ಸಲುವಾಗಿ ಇಲ್ಲಿನ ಕೆಲವು ಅಂಗಡಿಗಳ ಸಿ.ಸಿ.ಕೆಮರಾಗಳನ್ನು ಪರಿಶೀಲನೆ ನಡೆಸಲಾಯಿತು. ರಸ್ತೆ ಪಕ್ಕದಲ್ಲಿರುವ ಕಟ್ಟಡದ ಸಿ.ಸಿ. ಕೆಮರಾಗಳನ್ನು ಅಂಗಡಿ ಬಾಗಿಲ ತನಕ ಮಾತ್ರ ಕವರ್ ಆಗುವಂತೆ ವ್ಯವಸ್ಥೆ ಮಾಡಿರುವುದರಿಂದ ಆರೋಪಿಯ ಚಹರೆ ಪತ್ತೆ ಹಚ್ಚಲು ಕಷ್ಟವಾಗಿದೆ.
ಒಂದು ವೇಳೆ ಕೆಮರಾ ರಸ್ತೆ ಕವರ್ ಆಗುವಂತಿದ್ದರೆ ಆರೋಪಿಯ ಕುರಿತು ಸುಳಿವು ಸುಲಭವಾಗಿ ದೊರೆಯುತ್ತಿತ್ತು ಎನ್ನಲಾಗಿದೆ. ಆದ್ದರಿಂದ ಎಲ್ಲ ಕಡೆ ರಸ್ತೆ ಆಸು-ಪಾಸಿನಲ್ಲಿರುವ ಸಿ.ಸಿ.ಕೆಮರಾಗಳನ್ನು ರಸ್ತೆಯ ಚಿತ್ರಣ ಕವರ್ ಆಗುವಂತೆ ವ್ಯವಸ್ಥೆ ಮಾಡಿದರೆ ಇಂತಹ ತುರ್ತು ಸಂದರ್ಭದಲ್ಲಿ ಸಹಾಯವಾಗುತ್ತದೆ ಎಂಬ ಅಭಿ ಪ್ರಾಯ ಸಾರ್ವಜನಿಕರಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.