ನೀರು ಶುದ್ಧಿಕರಣಕ್ಕೆ ಎನ್‌ಐಟಿಕೆಯಿಂದ ಸರಳ ವಿಧಾನ


Team Udayavani, Oct 7, 2017, 12:08 PM IST

7-Mng—4.jpg

ಸುರತ್ಕಲ್‌: ಅಪಾಯಕಾರಿ ಆರ್ಸೆನಿಕ್‌ ಕಣಗಳನ್ನು ಬೇರ್ಪಡಿಸಿ ನೀರನ್ನು ಶುದ್ಧೀಕರಿಸುವ ಪೊರೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಿದ್ದು, ಎನ್‌ಐಟಿಕೆ ಈ ನಿಟ್ಟಿನಲ್ಲಿ ನಡೆಸಿದ ಸಂಶೋಧನೆಯಲ್ಲಿ ಪ್ರಗತಿ ಸಾಧಿಸಿದೆ.

ಇಲ್ಲಿನ ರಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ| ಅರುಣ್‌ ಇಸ್ಲೂರ್  ನೇತೃತ್ವದ ತಂಡ ಸಂಶೋಧನೆಯಲ್ಲಿ
ತೊಡಗಿದ್ದು, ಶೇ. 70ರಷ್ಟು ಪೊರೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೀರು ಶುದ್ಧೀಕರಿಸುವ ಯೋಜನೆ ಯಶಸ್ವಿಯಾಗಿದೆ. ಈಗಿರುವ ಪೊರೆ ತಂತ್ರಜ್ಞಾನ ವಿದೇಶದಲ್ಲಿ ಪ್ರಚಲಿತದಲಿದ್ದು, ದೇಶದಲ್ಲಿ ಸಾಮಾನ್ಯ ವ್ಯವಸ್ಥೆ ಮೂಲಕವೇ ನೀರು ಶುದ್ಧೀ ಕರಿಸುವ ವ್ಯವಸ್ಥೆಯಿದೆ.

ಆರ್ಸೆನಿಕ್‌ ಕಣಗಳು (ಮೆಟಲಾ ಯಿಡ್‌) ನಮ್ಮ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಕೆಂಪು ಕಲ್ಲಿನ ಪದರಗಳು ಇರುವುದರಿಂದ ಅಂತರ್ಜಲ ಶುದ್ಧವಾಗಿರುತ್ತದೆ. ದೇಶದ ಉತ್ತರ ಭಾಗದಲ್ಲಿ ಆರ್ಸೆನಿಕ್‌ ಕಂಡು ಬರುತ್ತಿದ್ದು, ಶುದ್ಧ ಕುಡಿಯುವ ನೀರು ಸಿಗುವುದು ಕಷ್ಟ .

ಕಣ್ಣಿಗೆ ಗೋಚರಿಸದಷ್ಟು ಸಣ್ಣ ಕಣಗಳ ರೂಪದಲ್ಲಿರುವ ಆರ್ಸೆನಿಕ್‌ ಭೂಮಿಯ ಮೇಲ್ಭಾಗದ ಮಣ್ಣಿನಿಂದ ಅಂತರ್ಜಲಕ್ಕೆ ಸೇರುತ್ತಿದ್ದು, ಇದನ್ನು ಅಪಾಯಕಾರಿ ಹಾಗೂ ಕಡಿಮೆ ಅಪಾಯಕಾರಿಗಳೆಂದು ಎರಡು ವಿಧದಲ್ಲಿ ವರ್ಗೀಕರಿಸಲಾಗಿದೆ.  ಆರ್ಸೆನಿಕ್‌ ಮೂರು ಮತ್ತು ಆರ್ಸೆನಿಕ್‌ ನಾಲ್ಕು ಅತ್ಯಂತ ಅಪಾಯಕಾರಿ. ಕಟ್ಟಡ ಕಟ್ಟಲು ಕಲ್ಲುಗಳನ್ನು ಒಡೆಯುವುದು, ಕ್ವಾರಿಗಳು ಮತ್ತು ಗಣಿಗಳಲ್ಲಿ ಹೆಚ್ಚಿನ ಚಟುವಟಿಕೆ ನಡೆಯುವಾಗ ಆರ್ಸೆನಿಕ್‌ ಅಂತರ್ಜಲವನ್ನು ಸೇರುತ್ತದೆ.

ರಾಜ್ಯದ 700 ಗ್ರಾಮದಲ್ಲಿ ಆರ್ಸೆನೆಕ್‌ ಮತ್ತು ಫ್ಲೋರೈಡ್‌ ಗಣನೀಯ ಪ್ರಮಾಣದಲ್ಲಿದೆ ಎಂದು ಕೇಂದ್ರ ಸರಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದ ವರದಿಯಲ್ಲಿ ತಿಳಿಸಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರೆಡೆ ಈ ಅಂಶಗಳು ಪತ್ತೆಯಾಗಿವೆ. ಅದನ್ನು ಈಗಿನ ಆರ್‌ಒ ಪದ್ಧತಿಯಲ್ಲಿ ಶುದ್ಧೀಕರಿಸಲಾಗುತ್ತಿದೆ.

ಅಪಾಯಕಾರಿ ಆರ್ಸೆನಿಕ್‌ ಅಂಶವು ಉಗುರುಗಳಲ್ಲಿ ಪತ್ತೆಯಾಗಿ ಬಳಿಕ ನಿಧಾನವಾಗಿ ಕಿಡ್ನಿ, ಜೀರ್ಣಾಂಗ ವ್ಯವಸ್ಥೆಯನ್ನು ಹಾಳುಗೆಡವುತ್ತದೆ.  

ಸಮುದ್ರದ ನೀರು ಸಂಸ್ಕರಣೆ
ರಾಜ್ಯ ಸರಕಾರದ ಪಂಚಾಯತ್‌ ರಾಜ್‌, ಗ್ರಾಮೀಣ ನೀರು ಸರಬರಾಜು ಇಲಾಖೆ ನೀರಿನ ಅಭಾವವಿರುವ ಗ್ರಾಮಗಳಿಗೆ ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಸಂಸ್ಕರಿಸಿ ಪೂರೈಸಲು ನಿರ್ಧರಿಸಿದ್ದು, 24 ಲಕ್ಷ ಲೀಟರ್‌ ನಿತ್ಯ ಕುಡಿಯುವ ನೀರನ್ನು ಸಮುದ್ರದಿಂದ ಸಂಸ್ಕರಿಸಿ ಪೂರೈಕೆ ಮಾಡಲು ಯೋಜನಾ ವರದಿ ನೀಡಲು ಎನ್‌ಐಟಿಕೆಗೆ ಸೂಚಿಸಿದೆ. ಪೊರೆ ತಂತ್ರಜ್ಞಾನದ ಮೂಲಕ ಪ್ರಥಮ ಪ್ರಾಯೋಗಿಕ ಘಟಕ ಕರಾವಳಿಯಲ್ಲಿ ಸ್ಥಾಪನೆಯಾಗುವ ಸಾಧ್ಯತೆಯಿದೆ.ಸರಕಾರದ ಪೊರೆ ತಂತ್ರಜ್ಞಾನದ ವಿಶೇಷ ತಾಂತ್ರಿಕ ಸಲಹೆಗಾರರೂ ಆಗಿರುವ ಡಾ| ಅರುಣ್‌ ಇಸ್ಲೂರ್ ಈ ಕುರಿತ ವರದಿಯನ್ನು ಸರಕಾರಕ್ಕೆ ನೀಡಲಿದ್ದಾರೆ.

ಪರಿಣಾಮಕಾರಿ ತಂತ್ರಜ್ಞಾನ
ನೀರನ್ನು ಕುದಿಸಿದರೂ ಆರ್ಸೆನಿಕ್‌ ಕಡಿಮೆಯಾಗದು. ಅದಕ್ಕೆ ಶುದ್ಧೀಕರಣವೇ ಪರಿಹಾರ. ಇದಕ್ಕಾಗಿ ಎನ್‌ಐಟಿಕೆ ರಸಾಯನ ಶಾಸ್ತ್ರ ವಿಭಾಗದಲ್ಲಿ 7 ವರ್ಷ ಗಳಿಂದ ಪೊರೆ ತಂತ್ರಜ್ಞಾನವನ್ನು ಬಳಸಿ ಮಿತವ್ಯಯದಲ್ಲಿ ನೀರನ್ನು ಶುದ್ಧೀಕರಿಸುವ ಸಂಶೋಧನೆ ನಡೆಯುತ್ತಿದೆ.

ಶೇ. 70ರಷ್ಟು ಯಶಸ್ಸು
ಶೇ. 70ರಷ್ಟು ಯಶಸ್ಸು ಸಿಕ್ಕಿದೆ. ಗುಣಮಟ್ಟದ ಹಾಗೂ ಮಿತವ್ಯಯದ ವಯರ್‌ಗಳನ್ನು ಬಳಸಿ ಪೊರೆ ತಂತ್ರಜ್ಞಾನದ ಮೂಲಕ ನೀರು ಫಿಲ್ಟರ್‌ ಮಾಡುವ ಯೋಜನೆ ಯಶಸ್ವಿಯಾದಲ್ಲಿ ಸಣ್ಣ ಜಾಗದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಅವಕಾಶವಾಗಲಿದೆ. ಜತೆಗೆ ಆರ್‌ಒ ತಂತ್ರಜ್ಞಾನಕ್ಕಿಂತ ಪೊರೆ ತಂತ್ರಜ್ಞಾನಕ್ಕೆ ಕಡಿಮೆ ವಿದ್ಯುತ್‌ ಸಾಕಾಗುತ್ತದೆ. ಇದರಲ್ಲಿ ಮರು ಬಳಕೆಗೂ ಅವಕಾಶವಿದೆ. ಸಂಶೋಧನೆ ಪೂರ್ಣಗೊಂಡು ಅದರ ಗುಣಮಟ್ಟ ಪರೀಕ್ಷೆ ಆದ ಬಳಿಕ ಬಳಸುವ ಯೋಜನೆ ಕುರಿತಂತೆ ಸರಕಾರಕ್ಕೆ ವರದಿ ಕಳಿಸಲಾಗುತ್ತದೆ .
ಡಾ| ಅರುಣ್‌ ಇಸ್ಲೂರ್ 
ಸಹ ಪ್ರಾಧ್ಯಾಪಕ, ರಸಾಯನ ಶಾಸ್ತ್ರ ವಿಭಾಗ, ಎನ್‌ಐಟಿಕೆ

ಟಾಪ್ ನ್ಯೂಸ್

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.