ಗಿರೀಶ್ ಕಾಸವಳ್ಳಿಗೆ ವಿಷ್ಣುವರ್ಧನ ದತ್ತಿ ಪ್ರಶಸ್ತಿ ಪ್ರದಾನ
Team Udayavani, Oct 7, 2017, 12:09 PM IST
ಬೆಂಗಳೂರು: ಕೌಟುಂಬಿಕ, ಧಾರ್ಮಿಕ ಹಾಗೂ ಸಂಬಂಧಗಳ ನಡುವಿನ ವಿಚಾರಗಳನ್ನು ವೈಜ್ಞಾನಿಕ ವಿಶ್ಲೇಷಣೆಗೊಳಪಡಿಸಿ ಸಿನಿಮಾದ ಮೂಲಕ ಸಮಾಜಕ್ಕೆ ನೈಜ ಸತ್ಯವನ್ನು ತಿಳಿಸುವ ಕೆಲಸ ಮಾಡುತ್ತಿರುವ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ ಸಂದಿರುವುದು ಸಮಂಜಸವಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಶ್ರೀಕೃಷ್ಮಪರಿಷನ್ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಲನಚಿತ್ರ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ “ಅಭಿನವ ಭಾರ್ಗವ ಡಾ.ವಿಷ್ಣುವರ್ಧನ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಖ್ಯಾತನಟ ದಿ.ವಿಷ್ಣುವರ್ಧನ್ ಮಾಡಿರುವ ಸಾಧನೆ ಅನನ್ಯವಾಗಿದ್ದು, ಸಮಾಜದಲ್ಲಿ ಅವರು ಭದ್ರಸ್ಥಾನ ಪಡೆದುಕೊಂಡಿದ್ದಾರೆ.
ಗಿರೀಶ್ ಕಾಸರವಳ್ಳಿ ಅವರು ಕನ್ನಡಕ್ಕೆ ಹಲವು ಸ್ವರ್ಣ ಪದಕಗಳನ್ನು ತಂದು ಕೊಡುವ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಡಿಗೆ ಹೆಸರು ತಂದಿದ್ದಾರೆ. ಪುಟ್ಟಣ್ಣ ಕಣಗಾಲ್, ಸತ್ಯಜಿತ್‌ರೇ ಸೇರಿದಂತೆ ಹಲವು ಖ್ಯಾತ ನಿರ್ದೇಶಕರ ಸಾಲಿನಲ್ಲಿ ಗಿರೀಶ್ ಕಾಸರವಳ್ಳಿ ನಿಲ್ಲುತ್ತಾರೆ. ಅವರಿಗೆ ಈ ಪ್ರಶಸ್ತಿ ಸಂದಿರುವುದು ಸಂತಸ ತಂದಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ನಿರ್ದೇಶಕ ಡಾ.ಗಿರೀಶ್ ಕಾಸರವಳ್ಳಿ, ಸಾಹಿತ್ಯ ಮತ್ತು ಸಿನಿಮಾಕ್ಕೆ ಬಹಳ ಹತ್ತಿರದ ನಂಟು ಇದೆ. ಆದರೆ, ನನಗೆ ರಾಜಕೀಯದ ನಂಟಿಲ್ಲ. ರಾಜಕಾರಣಿಗಳ ಒಳನಾಡ ಇಟ್ಟುಕೊಂಡಿಲ್ಲ. ಇವತ್ತು ಮಾತನಾಡುವ ಅವಕಾಶ ಸಿಕ್ಕಿರುವುದು ಸಂತಸದ ವಿಷಯ. ಕನ್ನಡ ಚಿತ್ರರಂಗದ ಧೀಮಂತರಲ್ಲಿ ವಿಷ್ಣು ಒಬ್ಬರು. ಅವರ ಸ್ಮಾರಕ ನಿರ್ಮಾಣದ ಕೆಲಸ ಬೇಗ ಆಗಲಿ ಎಂದರು.
ನಟ ವಿಷ್ಣುವರ್ಧನ್ ಹಾಗೂ ನಾನು ಈ ಕ್ಷೇತ್ರಕ್ಕೆ ಬಹುತೇಕ ಏಕಕಾಲಕ್ಕೆ ಕಾಲಿಟ್ಟೆವು. ನಾಗರಹಾವು, ಭೂತಯ್ಯನ ಮಗ ಅಯ್ಯು ಚಿತ್ರಗಳು ಅವರನ್ನು ಎತ್ತರಕ್ಕೆ ಕೊಂಡೊಯ್ದವು. ನಾನು ಸಾಕಷ್ಟು ಬಾರಿ ಅವರಿಗೆ ಕಥೆ ಹೇಳಲು ಮುಂದಾದೆ. ಅವರು ಕಥೆಯನ್ನು ಸಂಪೂರ್ಣ ಕೇಳಲು ಆಗುತ್ತಿರಲಿಲ್ಲ. ಇಲ್ಲವೇ ದಿನಾಂಕ ಸಿಗುತ್ತಿರಲಿಲ್ಲ. ಹೀಗೆ ಸಾಕಷ್ಟು ಬಾರಿ ಪ್ರಯತ್ನಪಟ್ಟರೂ ಅವರನ್ನು ನಮ್ಮ ಸಿನಿಮಾದಲ್ಲಿ ನಟಿಸಲು ಕರೆತರಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿದರು.
ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಉಪಸ್ಥಿತರಿದ್ದರು.
ತಾವು ವ್ಯಾಸಂಗ ಮಾಡಿದ್ದು ಔಷಧಶಾಸ್ತ್ರ. ಆಸೆಪಟ್ಟು ಈ ಕ್ಷೇತ್ರಕ್ಕೆ ಬಂದದ್ದಲ್ಲ. ಎಲ್ಲವೂ ಆಕಸ್ಮಿಕವಾಗಿದ್ದು, ಜೀವನದಲ್ಲಿ ಸಾಕಷ್ಟು ಆಕಸ್ಮಿಕಗಳು ನಡೆದಿವೆ. ಯಾವುದೂ ಉದ್ದೇಶಪೂರ್ವಕವಾಗಿ ಕೈಗೆ ಸಿಕ್ಕಿಲ್ಲ. ಕನ್ನಡ ಸಾಹಿತ್ಯ ಹಾಗೂ ಪೂನಾದಲ್ಲಿನ ಫಿಲಂ ಇನ್ಸ್‌ಟಿಟ್ಯೂಟ್‌ಗಳು ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ.
– ಡಾ.ಗಿರೀಶ್ ಕಾಸರವಳ್ಳಿ, ಹಿರಿಯ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.