ಜೆಸಾಂ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ಕಾಯ
Team Udayavani, Oct 7, 2017, 4:39 PM IST
ರಾಯಚೂರು: ಲೋಪದೋಷದಿಂದ ಕೂಡಿರುವ ಹೊಸ ಮೀಟರ್‌ಗಳನ್ನು ಅಳವಡಿಸಿದ್ದಲ್ಲದೇ, ಗ್ರಾಹಕರು
ವಿದ್ಯುತ್ ಬಳಕೆಗಿಂತಲೂ ಅಧಿಕ ಬಿಲ್ ಹಣ ವಸೂಲಿ ಮಾಡುತ್ತಿರುವ ಜೆಸ್ಕಾಂ ವಿರುದ್ಧ ಕ್ರಮ ಕೈಗೊಳ್ಳಬೇಕು
ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ) ಕಾರ್ಯಕರ್ತರು ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ನಗರದ ಕೊಳಚೆ ಪ್ರದೇಶಗಳಾದ ಸಿಯಾತಲಾಬ್, ಎಲ್‌ಬಿಎಸ್ ನಗರ, ಚಂದ್ರಬಂಡಾ ರಸ್ತೆಯಲ್ಲಿರುವ ಹಳೇ ಮತ್ತು ಹೊಸ ಆಶ್ರಯ ಕಾಲನಿ, ನವಾಬಗಡ್ಡ, ಹರಿಜನವಾಡ ಸೇರಿ ಇನ್ನಿತರ
ಬಡಾವಣೆಗಳಲ್ಲಿ ವಿದ್ಯುತ್ ಬಳಕೆಗಿಂತ ಅಧಿಕವಾಗಿ ಬಿಲ್ ಹಾಕಲಾಗುತ್ತಿದೆ. ಕೂಲಿ ನಂಬಿ ಬಾಳುವ ಈ ಜನರಿಗೆ ಇದರಿಂದ ಅನಗತ್ಯ ಹೊರೆಯಾಗುತ್ತಿದೆ ಎಂದು ದೂರಿದರು.
ಹಳೇ ಮೀಟರ್ ಬದಲಿಗೆ ಲೋಪದೋಷಗಳಿಂದ ಕೂಡಿದ ಹೊಸ ಮೀಟರ್‌ಗಳನ್ನು ಅವೈಜ್ಞಾನಿಕವಾಗಿ
ಅಳವಡಿಸುತ್ತಿದ್ದಾರೆ. ಹೊಸ ಮೀಟರ್ ಅಳವಡಿಕೆಯಲ್ಲಿ ತಾಂತ್ರಿಕ ದೋಷಗಳನ್ನು ಗಮನಿಸಬೇಕಾದ
ಇಂಜಿನಿಯರ್ ಖಾಸಗಿಯವರಿಗೆ ಗುತ್ತಿಗೆ ನೀಡುತ್ತಿದ್ದಾರೆ.
ಪ್ರತಿ ತಿಂಗಳು ವಿದ್ಯುತ್ ಬಿಲ್ ಗಳನ್ನು ನೀಡದೇ ಮೀಟರ್ ರೀಡರ್ ಗಳನ್ನು ನೀಡಿ ಬಡವರಿಗೆ ಸಮಸ್ಯೆ
ಸಿಲುಕುವಂತೆ ಮಾಡುತ್ತಿದ್ದಾರೆ. ಈ ಕೂಡಲೇ ಗ್ರಾಹಕರಿಗೆ ಆಗಿರುವ ಅನ್ಯಾಯ ಸರಿಪಡಿಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಖಲೀಲ್ ಪಾಷಾ, ಜಿಲ್ಲಾ ಉಪಾಧ್ಯಕ್ಷ ಬಂದೇನವಾಜ್, ಮೆಹಬೂಬ್ ಪಟೇಲ್, ಮೋಹಿನ್ ಖಾನ್, ಹಾಲಿ ಮಸ್ತಾನ್, ಸೈಯದ್ ಫಾರೂಕ್, ತಾಹೀರ್ ಪಾಷಾ, ರಾಜು, ಅಂಜಿ, ಶೇಖ್ ಫಾರೂಕ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Maski ಅಕ್ರಮ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.