“ಹಿಂದೂ’ ವಿರುದ್ಧ ಜಾಗತಿಕ ಷಡ್ಯಂತ್ರ


Team Udayavani, Oct 8, 2017, 11:05 AM IST

hindu-jagatika.jpg

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಪರಸ್ಪರ ಬದ್ಧ ವೈರಿಗಳಾಗಿರುವ ಮತ್ತು ಒಬ್ಬರು ಮತ್ತೂಬ್ಬರನ್ನು ಕಂಡರೆ ವಿಷಕಾರಿಕೊಳ್ಳುವ ಇವ್ಯಾಂಜಲಿಸ್ಟ್‌ಗಳು, ಜಿಹಾದಿಗಳು ಮತ್ತು ಕಮ್ಯೂನಿಸ್ಟರು ಭಾರತದಲ್ಲಿ ಮಾತ್ರ ಹಿಂದೂಗಳ ವಿರುದ್ಧ ಒಂದಾಗಿದ್ದಾರೆ. ಗೌರಿ ಲಂಕೇಶ್‌ ಸೇರಿದಂತೆ, ಪನ್ಸಾರೆ, ಧಾಬೋಲ್ಕರ್‌ ಹಾಗೂ ಕಲಬುರಗಿ ಹತ್ಯೆ ಪ್ರಕರಣಗಳಲ್ಲಿ ಹಿಂದುತ್ವವಾದಿಗಳ ವಿರುದ್ಧ ಆರೋಪಗಳನ್ನು ಮಾಡುತ್ತಿರುವುದು ಹಿಂದೂ ವಿರೋಧಿ ಜಾಗತಿಕ ಷಡ್ಯಂತ್ರದ ಒಂದು ಭಾಗ ಎಂದು ಯುವ ಬ್ರಿಗೇಡ್‌ನ‌ ರಾಜ್ಯ ಸಂಯೋಜಕ ಚಕ್ರವರ್ತಿ ಸೂಲಿಬೆಲೆ ವಿಶ್ಲೇಷಿಸಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ನಂತರದ ವಿದ್ಯಾಮಾನಗಳ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಶನಿವಾರ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ “ಎಂಡಪಂಥೀಯರ ಹತ್ಯೆ ಬಲಪಂಥೀಯರ ಮೇಲೆ ಆರೋಪ ಏಕೆ?’ ಎಂಬ ಸಾರ್ವಜನಿಕ ಜನಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಲ್‌ ಇಂಡಿಯಾ ಕ್ರಿಶ್ಚಿಯನ್‌ ಕೌನ್ಸಿಲ್‌ (ಎಐಸಿಸಿ) ಎಂಬ ಸಂಘಟನೆ ಭಾರತೀಯರನ್ನು ದೂಷಣೆ ಮಾಡಲು ಇಲ್ಲಿನ ಎನ್‌ಜಿಒಗಳಿಗೆ ಹಣ ನೀಡುತ್ತದೆ. ಭಾರತಕ್ಕೆ ಸಂಭಂಧಿಸಿದ ಯಾವುದೇ ವಿಷಯವಾಗಲಿ ಅದರ ಬಗ್ಗೆ ದೂಷಣೆ ಮಾಡುವುದೇ ಆ ಎನ್‌ಜಿಒಗಳ ಟಾಸ್ಕ್. ಈ ಕೆಲಸ ಮಾಡುವ ಬಹುತೇಕ ಸಂಘಟನೆಗಳನ್ನು ಕಮ್ಯೂನಿಸ್ಟರು ಮುನ್ನಡೆಸುತ್ತಿದ್ದಾರೆ.

ಭಾರತವನ್ನು ದೂಷಿಸುವ ಈ ಟಾಸ್ಕ್ ಕಂಪ್ಲಿಟೆಡ್‌ ಎನ್‌ಜಿಒಗಳ ಮೇಲೆ ತಮ್ಮ “ಸೌಧ’ ಕಟ್ಟಿಕೊಳ್ಳುವ ಕಮ್ಯೂನಿಸ್ಟರು ಜಿಹಾದಿಗಳ ನೆರವು ಪಡೆಯುತ್ತಾರೆ. ಆದರೆ, ಈ ಷಡ್ಯಂತ್ರ ಯಾವತ್ತೂ ಫ‌ಲಿಸುವುದಿಲ್ಲ. ಷಡ್ಯಂತ್ರ ನಡೆಸಿದಷ್ಟು ಭಾರತ ಗಟ್ಟಿಯಾಗುತ್ತದೆ, ಹಿಂದೂಗಳ ಒಗ್ಗಟ್ಟಾಗುತ್ತಾರೆ. ಅಂತಿಮವಾಗಿ ಭಾರತ ಗೆಲ್ಲುತ್ತದೆ ಎಂದರು.

ಹಿಂದೂ ಧರ್ಮದ ಕೆಲವು ಆಚರಣೆಗಳನ್ನು ವಿರೋಧಿಸಿದ್ದಕ್ಕೆ ರಾಜರಾಮ್‌ ಮೋಹನ್‌ರಾಯ್‌ ಅವರಿಗೆ ರಾಜ ಎಂಬ ಬಿರುದು ಕೊಟ್ಟಿದ್ದು ಇದೇ ಇವ್ಯಾಂಜಲಿಸ್ಟ್‌ಗಳು. ಅದೇ ರೀತಿ ಅರುಂಧತಿರಾಯ್‌ಗೆ ಬೂಕರ್‌ ಪ್ರಶಸ್ತಿ ಸಿಕ್ಕಿತು. ಭಾರತವನ್ನು ಜಾಗತಿಕ ಮಟ್ಟದಲ್ಲಿ ಅವಮಾನಿಸಿದ್ದಕ್ಕೆ ಮದರ್‌ ತೆರೆಸಾಗೆ “ಸೇಂಟ್‌ಹುಡ್‌’ ಪ್ರಶಸ್ತಿ ಮತ್ತು ಸ್ಲಮ್‌ಡಾಗ್‌ ಮಿಲೇನಿಯರ್‌ ಸಿನಿಮಾಗೆ ಆಸ್ಕರ್‌ ಪ್ರಶಸ್ತಿ ಕೊಡಲಾಯಿತು.

ಈಗ ಗೌರಿ ಲಂಕೇಶ್‌ ಹತ್ಯೆ ವಿಚಾರ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತಿರುವ ನಟ ಪ್ರಕಾಶ್‌ ರೈಗೆ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕರೆ ಅಚ್ಚರಿಯೇನಲ್ಲ. ಶೋಷಣೆಯ ವಿರುದ್ಧ ಬಲಪಂಥೀಯರು  ಧರ್ಮ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತಾರೆ. ಆದರೆ, ಶೋಷಣೆಯ ವಿರುದ್ಧ ಗನ್‌ ಎತ್ತುವವರು ಬಲಪಂಥೀಯರು. ಸಂಘದ ಪ್ರಮುಖರೊಬ್ಬರು ನಿಧನರಾದಾಗ “ನೋ ಚಿಯರ್‌, ನೋ ಟಿಯರ್‌’ ಎಂದು ಗೌರಿ ಲಂಕೇಶ್‌ ಹೇಳಿದ್ದರು.

ಹಾಗಾದರೆ, ಅವರು ಸತ್ತಾಗ ಇದೇ ರೀತಿಯ ಪ್ರತಿಕ್ರಿಯೆಗಳು ಬಂದಾಗ “ಸಾವಿಗೆ ಸಂಭ್ರಮ’ ಎಂದು ಹೇಳುವುದು ಎಷ್ಟು ಸರಿ ಎಂದು ಸೂಲಿಬೆಲೆ ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಹಿಂದೂ ವಿಧಿಜ್ಞ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ವಕೀಲ ವಿರೇಂದ್ರ ಇಚ್ಚಲ್‌ಕರಂಜೀಕರ್‌, ಹೈಕೋರ್ಟ್‌ ವಕೀಲ ಎನ್‌.ಪಿ. ಅಮೃತೇಶ್‌, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ್‌ಗೌಡ ವಿಚಾರಗಳನ್ನು ಮಂಡಿಸಿದರು. 

ಸಾಧು-ಸಂತರು, ಹಿಂದೂ ಸಂಘನೆಗಳನ್ನು ಟಾರ್ಗೆಟ್‌ ಮಾಡುವುದು. ಹಿಂದೂ ವ್ಯಕ್ತಿ ಸತ್ತರೆ ಮೌನ, ಮತ್ತೂಬ್ಬರು ಸತ್ತರೆ ತಕ್ಷಣ ಪ್ರತಿಕ್ರಿಯೆ, ಆತ್ಮಹತ್ಯೆಯನ್ನು ಕೊಲೆಯಂದು, ಕೊಲೆ ಆಗಿದ್ದರೆ ಅದನ್ನು ಆತ್ಮಹತ್ಯೆ ಎಂದು ಬಿಂಬಿಸುವ ವ್ಯವಸ್ಥಿತ ಷಡ್ಯಂತ್ರ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ. ಇತ್ತಿಚಿಗೆ ನಡೆದ ಐಜಿಪಿ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಹಿಂದೂ ಮುಖಂಡರು ಮತ್ತು ಹಿಂದೂ ಸಂಘಟನೆಗಳನ್ನು ಟಾರ್ಗೆಟ್‌ ಮಾಡಿ ಎಂದು ಹೇಳಲಾಗಿದೆ.

ಗೌರಿ ಲಂಕೇಶ್‌ ಹತ್ಯೆ ಆರೋಪಿಗಳ ಸುಳಿವು ಸಿಕ್ಕಿದೆ. ಆದರೆ, ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಹಾಸ್ಯಾಸ್ಪದ. ಗೌರಿ ಲಂಕೇಶ್‌, ಕಲಬುರಗಿ, ಪಾನ್ಸಾರೆ, ದಾಬೋಲ್ಕರ್‌ ಹತ್ಯೆಗಳ ಹಿಂದೆ ಸನಾತನ ಸಂಸ್ಥೆ ಅಲ್ಲ, ನಕ್ಸಲರ ಕೈವಾಡವಿದೆ, ಪ್ರಗತಿಪರರಿಗೆ ಇರುವಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯ ನಮಗೂ ಇದೆ.’
-ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್‌ ರಾಜ್ಯ ಸಂಯೋಜಕ

ಟಾಪ್ ನ್ಯೂಸ್

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.