ಪುಡಿರೌಡಿಗಳ ಕೃತ್ಯಕ್ಕೆ ಪೊಲೀಸರ ಕಡಿವಾಣ

Team Udayavani, Oct 9, 2017, 10:01 AM IST

gul-1.jpg

ಕಲಬುರಗಿ: ಈಗಾಗಲೇ ಕುಖ್ಯಾತ ರೌಡಿಗಳನ್ನು ಕೋಕಾ ಕಾಯ್ದೆ ಹಾಗೂ ಎನ್‌ಕೌಂಟರ್‌ ಮೂಲಕ ಸದೆ ಬಡೆದಿರುವ ಪೊಲೀಸ್‌ ಇಲಾಖೆ ಈಗ ಚಿಗುರು ಮೀಸೆಯ ಹುಡುಗರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದನ್ನು ಗಮನಿಸಿ ಚಿವುಟಿ ಹಾಕಲು ಮುಂದಾಗಿದ್ದಾರೆ.

ಕುಖ್ಯಾತ ರೌಡಿಗಳಾದ ಮಾರ್ಕೇಟ್‌ ಸತೀಶ ಹಾಗೂ ಇತರರನ್ನು ಕೋಕಾ ಕಾಯ್ದೆ ಅಳವಡಿಸಿ ಜೈಲಿಗೆ ಅಟ್ಟಿದ್ದರಿಂದ ಹಾಗೂ ಕಳೆದ ಆ.2ರಂದು ನಂದೂರ ಬಳಿ ಕುಖ್ಯಾತ ರೌಡಿ ಕರಿಚಿರತೆಯನ್ನು ಎನ್‌ಕೌಂಟರ್‌ ಮಾಡುವ ಮೂಲಕ ರೌಡಿಗಳಿಗೆ ಕಠಿಣ ಸಂದೇಶ ರವಾನಿಸಲಾಗಿತ್ತು.

ಈ ಘಟನೆ ನಡೆಯುವ ಎರಡು ದಿನಗಳ ಮುಂಚೆಯೇ ಫರತಾಬಾದ ವಲಯದಲ್ಲಿ ಅಪಹರಣ ಮಾಡಿದ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಲಾಗಿತ್ತು. ಇದನ್ನೆಲ್ಲ ಅವಲೋಕಿಸಿದ ಕೆಲವು ಕುಖ್ಯಾತ ರೌಡಿಗಳು ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದರಿಂದ ಹಿಂದೆ ಸರಿದರಲ್ಲದೇ ಕೆಲವರು ಕಲಬುರಗಿಯಿಂದ ಕಾಲ್ಕಿತ್ತಿದ್ದರು. 

ಇವರ ನಡುವೆ ಚಿಗುರು ಮೀಸೆ ಬರುವ ಮುನ್ನವೇ ಕೆಲವು ಯುವಕರು ಅಪರಾಧ ಪ್ರಕರಣಗಳಿಗೆ ಕಾಲಿಡಲಾರಂಭಿಸಿದರು. ಆದರೆ ಈ ಕುರಿತು ಪೊಲೀಸ್‌ ಇಲಾಖೆ ಮಾಹಿತಿ ಕಲೆ ಹಾಕಲಾರಂಭಿಸಿದರು. ಜೊತೆಗೆ ಕೆಲವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದರು. ಇದಕ್ಕೂ ಸಹ ಬಗ್ಗದ ಹಿನ್ನೆಲೆಯಲ್ಲಿ ಪೊಲೀಸರು ಹುಡುಗರ ಮನೆಗೆ ಬೆಳ್ಳಂಬೆಳಗ್ಗೆ ಭೇಟಿ ನೀಡಿ ಪಾಲಕರಿಗೆ ನಿಮ್ಮ ಹುಡುಗರು ಹಾದಿ ಬಿಡುತ್ತಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಕಾಲಿಡುತ್ತಿದ್ದಾರೆ. ಅವರಿಗೆ ಬುದ್ಧಿ ಹೇಳಿ ಎಂದು ಎಚ್ಚರಿಸಿದ್ದರು. ಜತೆಗೆ ಮನಪರಿವರ್ತನೆಗೂ ಇಲಾಖೆ ಮುಂದಾಗಿದೆ.

ರವಿವಾರ ನಡೆದ ಫೈರಿಂಗ್‌ನಲ್ಲಿ ಗಾಯಗೊಂಡ ಚೇತನ ಹಾಗೂ ಶಿವಕುಮಾರ ನಾಲ್ಕು ದಿನದ ಹಿಂದೆ ಹಣದ ಸಂಬಂಧ ಇಬ್ಬರು ಯುವಕರನ್ನು ಚಾಕುವಿನಿಂದ ಇರಿದಿದ್ದರು. ಚೇತನ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ರವಿವಾರ ಬೆಳಗ್ಗೆ ಇವರಿಬ್ಬರು ಹಾಗೂ ಸಂಗಡಿಗರು ದರೋಡೆಗೆ ಹೊಂಚು ಹಾಕಿದ್ದನ್ನು ಅರಿತ ಪೊಲೀಸರು ದಾಳಿ ನಡೆಸಿ ಫೈರಿಂಗ್‌ ಮೂಲಕ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಅದರಂತೆ ನಗರದ ಕೆಲವು ಪಡ್ಡೆ ಹುಡುಗರನ್ನು ಪೊಲೀಸ್‌ ಪರೇಡ್‌ ಮೂಲಕ ಎಚ್ಚರಿಕೆ ಸಹ ನೀಡಿದ್ದಾರೆ. ಒಟ್ಟಾರೆ ಈ ಎಲ್ಲ ಅಂಶಗಳನ್ನು ಅವಲೋಕಿಸಿದರೆ ಪೊಲೀಸ್‌ ಇಲಾಖೆ ಅಪರಾಧ ಮುಕ್ತ ಜಿಲ್ಲೆಯನ್ನಾಗಿಸಲು ಕಾರ್ಯ ಪ್ರವೃತ್ತರಾಗಿರುವುದು ಕಂಡುಬರುತ್ತಿದೆ.

ಈಶಾನ್ಯ ವಲಯ ಐಜಿಪಿ ಅಲೋಕ್‌ಕುಮಾರ ಅವರು ಈ ಹಿಂದೆ ಕಲಬುರಗಿ ಎಸ್‌ಪಿ ಆಗಿ ಕಾರ್ಯ ನಿರ್ವಹಿಸಿದ್ದರಿಂದ ಎಲ್ಲ ಆಯಾಮಗಳ ಅಪರಾಧ ಪ್ರಕರಣಗಳ ಮಾಹಿತಿ ಅವರಿಗಿದೆ. ಜತೆಗೆ ಹಗಲಿರುಳು ಎಲ್ಲ ಚಟುವಟಿಕೆಗಳ ಮೇಲೆ ನಿಗಾ ವಹಿಸಿರುವುದು ಪೊಲೀಸ್‌ ಇಲಾಖೆ ಕಾರ್ಯಶೈಲಿಗೆ ಬಲ ಬಂದಿದ್ದದೇ ಪಡ್ಡೆ ಹುಡುಗರಿಗೆ ನಡುಕ ಹುಟ್ಟಲಾರಂಭಿಸಿದೆ.

ಮಹಿಳಾ ಪಿಎಸ್‌ಐ ಶೌರ್ಯ: ರವಿವಾರ ಬೆಳಗ್ಗೆ ನಡೆದ ದಾಳಿಯಲ್ಲಿ ರಾಘವೇಂದ್ರ ಠಾಣೆ ಪಿಎಸ್‌ಐ ಅಕ್ಕಮಹಾದೇವಿ ಅವರು ತಮ್ಮ ಜೀವನದ ಹಂಗು ತೊರೆದು ರೌಡಿ ಶೀಟರ್‌ಗಳ ಮೇಲೆ ದಾಳಿ ನಡೆಸಿ ಫೈರಿಂಗ್‌ ಮಾಡಿರುವುದು ಒಂದು ಸಾಹಸವೇ ಸರಿ. ಇದನ್ನು ನೋಡಿದರೇ ಅಪರಾಧಕ್ಕೆ ಕಾಲಿಡುತ್ತಿರುವರಿಗೆ ಇದೇ ಗತಿ ಎನ್ನುವ ಸಂದೇಶವನ್ನು ಸ್ಪಷ್ಟವಾಗಿ ಸಾರಿರುವುದು ಕಂಡು ಬರುತ್ತದೆ. ರಾಜ್ಯದ ಇತಿಹಾಸದಲ್ಲೇ ಮಹಿಳಾ ಪಿಎಸ್‌ಐ ಒಬ್ಬರು ದಾಳಿ ನಡೆಸಿ ರೌಡಿಗಳ ಮೇಲೆ ಫೈರಿಂಗ್‌ ಮಾಡಿರುವುದು ಇದೇ ಮೊದಲೆಂಬುದು ಪೊಲೀಸ್‌ ಇಲಾಖೆ ಸೇವಾ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ. 

ಪಿಎಸ್‌ಐ ಅಕ್ಕಮಹಾದೇವಿ ಹಾಗೂ ಪೇದೆ ಪ್ರಹ್ಲಾದ ಕುಲಕರ್ಣಿ ಅವರಿಗೆ ಐಜಿಪಿ ಅವರು ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ ಅಲ್ಲದೆ ಸಿಎಂ ಸೇವಾ ಪದಕಕ್ಕೆ ಶಿಫಾರಸ್ಸು ಮಾಡಿರುವುದು ಪೊಲೀಸರ ಆತ್ಮಸ್ಥೈರ್ಯ ಹೆಚ್ಚಳಕ್ಕೆ ಪ್ರೋತ್ಸಾಹಿಸುವಂತಿದೆ. 

ಮುಕ್ತ ಸಂಚಾರಕ್ಕೆ ದಿಟ್ಟ ಕ್ರಮ: ಅಪರಾಧ ಪ್ರಕರಣ ಹತ್ತಿಕ್ಕುವ ಜತೆಗೆ ಕಲಬುರಗಿ ನಗರದಲ್ಲಿ ಹದಗೆಟ್ಟ ಸಂಚಾರಿ ವ್ಯವಸ್ಥೆಗೆ ಸುಧಾರಣಾ ಕ್ರಮ ಕೈಗೊಂಡಿರುವುದು ಶ್ಲಾಘನೀಯಕ್ಕೆ ಪಾತ್ರವಾಗುತ್ತಿದೆ. ಸೂಪರ್‌ ಮಾರ್ಕೇಟ್‌ನಲ್ಲಿ ಸಂಚರಿಸಬೇಕೆಂದರೆ ದೇವರೇ ಬಲ್ಲ ಎನ್ನುವ ಸ್ಥಿತಿಯಿತ್ತು. ಆದರೀಗ ಸುಗಮ ರೀತಿಯಲ್ಲಿ ಸಂಚಾರ ನಡೆದಿರುವುದು ಮೆಚ್ಚುಗೆಗೆ ಪಾತ್ರವಾಗಿ

ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

aane

Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.