ಹೆದ್ದಾರಿ, ಸರ್ವಿಸ್ ರಸ್ತೆ ದುರಸ್ತಿ
Team Udayavani, Oct 9, 2017, 10:19 AM IST
ಮಹಾನಗರ: ಸುರತ್ಕಲ್‌ನಿಂದ ಬಿ.ಸಿ.ರೋಡ್ ವರೆಗೆ ಕೆಟ್ಟು ಹೋಗಿರುವ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಯ ಸಮಸ್ಯೆಯ ಕುರಿತು ಎನ್‌ಎಚ್‌ಎಐ ಪ್ರೊಜೆಕ್ಟ್ ಡೈರೆಕ್ಟರ್ ಆಹ್ವಾನದ ಮೇರೆಗೆ ನಾಗರಿಕ ಸಮಿತಿಯಿಂದ ಸಮಾಲೋಚನ ಸಭೆ
ಜರಗಿತು. ಸುಭಾಶ್ಚಂದ್ರ ಶೆಟ್ಟಿ ಹೊಸಬೆಟ್ಟು ಸಭೆಯ ನೇತೃತ್ವ ವಹಿಸಿದ್ದರು.
ಹೆದ್ದಾರಿಯಲ್ಲಿ ಉದ್ಭವಿಸಿರುವ ಅಪಾಯಕಾರಿ ಹೊಂಡವನ್ನು ಗ್ರಾನ್ಯುಲಾಕ್ ಸಬ್ ಬೇಸ್ ಮೂಲಕ ಹೋಲ್‌ಗಳನ್ನು ಡಾಮರು ಮಿಶ್ರಿತ ಜಲ್ಲಿಯಿಂದ ತುರ್ತಾಗಿ ಮುಚ್ಚಬೇಕು. ಸರ್ವಿಸ್ ರಸ್ತೆಯನ್ನು ಮಳೆಯ ಕಾರಣ ಡಾಮರು ಹಾಕಲಾಗದಿದ್ದರೂ ಯಾವಾಗಲೂ ಸಂಚಾರ ಯೋಗ್ಯ ಸ್ಥಿತಿಯಲ್ಲಿ ಇಡಬೇಕು ಎಂದು ಸಮಿತಿ ನೀಡಿದ ವಿಚಾರದ ಬಗ್ಗೆ, ಮರುದಿನವೇ ಕೊಟ್ಟಾರದಿಂದ ಎನ್‌ಐಟಿಕೆಯವರೆಗೆ ಪ್ರೊಜೆಕ್ಟ್ ಡೈರೆಕ್ಟರ್ ಸ್ಯಾಮುವೆಲ್ ಸ್ಯಾಮ್ಸನ್ ಸಮಿತಿಯ ಪದಾಧಿಕಾರಿಗಳು ಗುತ್ತಿಗೆದಾರರ ಜತೆ ಪರಿಶೀಲಿಸಿದ್ದರು.
ಹಣದ ಸಮಸ್ಯೆ ಇದ್ದರೂ, ಟೆಂಡರ್ ಆಗಿರುವ ಕೆಲಸವನ್ನು ತುರ್ತುನೆಲೆಯಲ್ಲಿ ಮುಗಿಸಲು ಒಪ್ಪಂದ ಪತ್ರಕ್ಕೆ ಸಹಿ
ಹಾಕಲಾಯಿತು.
ಎನ್‌ಐಟಿಕೆ ಬಳಿಯ ಟೋಲ್ ಬಗ್ಗೆ ಮಾತನಾಡಿ, ಹೆಜಮಾಡಿ ಟೋಲ್ ಪ್ರಾರಂಭ ಆದ ಕೂಡಲೇ ಎನ್‌ಐಟಿಕೆ ಟೋಲ್ ಅನ್ನು ಮುಚ್ಚಲಾಗುವುದು ಎಂದು 2016ರ ಜನವರಿಯಲ್ಲಿ ಎನ್‌ಎಚ್‌ಎಐ ಕೇಂದ್ರ ಕಚೇರಿಯಲ್ಲಿ ನಿರ್ಧಾರವಾಗಿದೆ. ಆದರೂ ಎನ್‌ಐಟಿಕೆ ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದ್ದು, ಇದನ್ನು ಕೂಡಲೇ ಹೆಜಮಾಡಿಯೊಂದಿಗೆ ವಿಲೀನಗೊಳಿಸಬೇಕೆಂಬ ಮನವಿಗೆ ಸ್ಪಂದಿಸಿದ ಪ್ರೊಜೆಕ್ಟ್ ಡೈರೆಕ್ಟರ್, ಈ ಬಗ್ಗೆ ಕೂಡಲೇ ಕ್ರಮ ಜರಗಿಸುವುದಾಗಿ ಭರವಸೆ ನೀಡಿರುತ್ತಾರೆ.
ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಕಾರ್ಯದರ್ಶಿ ರಾಘ ವೇಂದ್ರ ಟಿ.ಎನ್., ಉಲ್ಲಾಸ್ ಶೆಟ್ಟಿ, ಸುಧಾಕರ
ಪೂಂಜ, ಹಮೀದ್ ಕಾನ, ಎಂ.ಬಿ. ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಮದ್ಯ, ರಾಖೀ ಪಿಂಟೊ, ಬಾಲಕೃಷ್ಣ ಶೆಟ್ಟಿ ಕೆಂಚನಕೆರೆ, ನಟರಾಜ್, ನಿತ್ಯಾನಂದ, ಬಿ.ಎಂ. ಸನಿಲ್, ಯಶ್ವಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.