ಹೀಗಿದೆ ನೋಡಿ ಗಾಂಧಿ ಗ್ರಾಮ ಪುರಸ್ಕೃತ ಕಾಳಗಿ ಪರಿಸ್ಥಿತಿ!
Team Udayavani, Oct 9, 2017, 10:22 AM IST
ಕಾಳಗಿ: ವಾರದ ಹಿಂದೆಯಷ್ಟೇ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ಕಾಳಗಿ ಗ್ರಾಮದಲ್ಲಿ ಹೆಜ್ಜೆಹೆಜ್ಜೆಗೂ ಅನೈರ್ಮಲ್ಯ ತಾಂಡವವಾಡುತ್ತಿದೆ.
ಚರಂಡಿ ನೀರು ರಸ್ತೆ ಮೇಲೆ ಹರಿದು ಪಾಚಿಗಟ್ಟಿದೆ. ರಸ್ತೆ ಬದಿಯಲ್ಲಿ ಕಸದ ರಾಶಿ ತುಂಬಿಕೊಂಡಿದೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಸಾರ್ವಜನಿಕರು ಬದುಕುವಂತಾಗಿದೆ.
ಸ್ವತ್ಛತೆ, ಎನ್‌ಆರ್‌ಜಿ ಕಾರ್ಯಕ್ರಮ, ಕರ ವಸೂಲಿ, ಬಸವ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಶುದ್ಧ ಕುಡಿಯುವ ನೀರು, ಬೀದಿ ದೀಪ ಹಾಗೂ ಸರ್ಕಾರದ ಎಲ್ಲ ಯೋಜನೆಗಳ ಸಮರ್ಪಕ ಬಳಕೆ ಹಿನ್ನೆಲೆಯಲ್ಲಿ ಕಾಳಗಿ ಗ್ರಾಪಂಗೆ ಗಾಂಧಿಗ್ರಾಮ ಪುರಸ್ಕಾರ ಲಭಿಸಿದೆ. ಆದರೆ ಗ್ರಾಮದಲ್ಲಿ ಎಲ್ಲಿಯೂ ಸ್ವತ್ಛತೆ ಕಂಡು ಬರುವುದಿಲ್ಲ.
ಚರಂಡಿ ನೀರು ಹರಿದು ಹೋಗಲು ದಾರಿ ಇಲ್ಲ. ಹಾಗಾಗಿ ಇಲ್ಲಿನ ಬಹುತೇಕ ಮನೆಗಳ ಎದುರು ನಿಲ್ಲುತ್ತಿದ್ದು, ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಇದರಿಂದ ಸೊಳ್ಳೆಗಳ ಸಂತಾನೋತ್ಪತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ. ರಸ್ತೆ ಬದಿ ಕಸದ ರಾಶಿ ತುಂಬಿ ತುಳುಕುತ್ತಿದ್ದು, ಗ್ರಾಪಂ ಅಧಿಕಾರಿಗಳು ಸ್ವತ್ಛತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮದ ನಿವಾಸಿ ರಮೇಶ ಕದಂ ಆರೋಪಿಸಿದ್ದಾರೆ.
ಗ್ರಾಮದ ಕೆಲವು ರಸ್ತೆಗಳನ್ನು ಮಾತ್ರ ವಾರಕ್ಕೊಮ್ಮೆ ಸ್ವತ್ಛ ಮಾಡುವ ಗ್ರಾಪಂ ಸಿಬ್ಬಂದಿ ಬಹುತೇಕ ರಸ್ತೆಗಳ ಕಡೆ ಒಮ್ಮೆಯೂ ನೋಡುವುದಿಲ್ಲ. ಸದ್ಯ ಮಳೆ ಆಗುತ್ತಿದೆ. ಹಾಗಾಗಿ ಚರಂಡಿ ಮತ್ತು ಮಳೆ ನೀರು ಮಿಶ್ರಣಗೊಂಡು ಗ್ರಾಮದಲ್ಲಿ ವಿಪರೀತ ಸೊಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಇನ್ನುಹಂದಿಗಳ ಹಾವಳಿ ಸಹ ಹೆಚ್ಚಾಗಿದ್ದು, ಚರಂಡಿಯಲ್ಲಿ ಬಿದ್ದೆದ್ದು ಮನೆಗಳಿಗೆ ನುಗುತ್ತಿವೆ. ಡೆಂಘೀ, ಚಿಕೂನ್‌ಗುನ್ಯಾ ದಂತ ರೋಗಗಳ ಭೀತಿಯಲ್ಲಿ ಬದುಕುತ್ತಿದ್ದೇವೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಬಳಕೆಯಲ್ಲಿಲ್ಲ ಸಾರ್ವಜನಿಕ ಶೌಚಾಲಯ: ಗ್ರಾಮದಲ್ಲಿ ಒಟ್ಟು ಐದು ಸಾರ್ವಜನಿಕ ಮಹಿಳಾ ಚಾಲಯಗಳಿವೆ. ಅದರಲ್ಲಿ 1ನೇ ಬ್ಲಾಕ್ ಮತ್ತು 4ನೇ ಬ್ಲಾಕ್ ಶೌಚಾಲಯಗಳು ಬಳಕೆಯಲ್ಲಿವೆ. ಹನುಮಾನ ಮಂದಿರ, ಅಪ್ಪರಾವ ಹಡಪದ ಅವರ ಮನೆ ಹಿಂದೆ ಹಾಗೂ ಪ್ಯಾಟಿಮಠದ
ಹತ್ತಿರವಿರುವ ಸಾರ್ವಜನಿಕ ಮಹಿಳಾ ಶೌಚಾಲಯಗಳಿವೆ ನೀರಿನ ವ್ಯವಸ್ಥೆ ಇಲ್ಲ. ಹಾಗಾಗಿ ಅವು ನಿರುಪಯುಕ್ತವಾಗಿವೆ. ಮೂರು ಸಾರ್ವಜನಿಕ ಮಹಿಳಾ ಶೌಚಾಲಯದ ಹತ್ತಿರ ನೀರಿನ ಅನುಕೂಲವಿದ್ದರೂ ಪೈಪ್‌ಲೈನ್ ವ್ಯವಸ್ಥೆ ಮಾಡಿಕೊಡದೆ ಗ್ರಾಪಂ ನಿರ್ಲಕ್ಷ್ಯಾ ವಹಿಸುತ್ತಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ ಆರೋಪಿಸಿದ್ದಾರೆ.
ಚೌವಡಿ ಕಟ್ಟೆ ಮುಖ್ಯಬಜಾರ ರಸ್ತೆ ತಗ್ಗು ಬಿದ್ದು ಮಳೆ ಹಾಗೂ ಚರಂಡಿ ನೀರು ತುಂಬಿಕೊಂಡಿದೆ. ಮರ್ಗಮ್ಮ ದೇವಿ ದೇವಸ್ಥಾನ ಪಕ್ಕ ಮತ್ತು ಸಾವಳಗೇರ ಮನೆ ಹತ್ತಿರ ಚರಂಡಿ ಸೇತುವೆ ಕಳಚಿ ಬಿದ್ದಿದ್ದು, ಕಬ್ಬಿಣದ ಸಲಾಕೆಗಳು ಮೇಲೆದ್ದು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿವೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಸ್ವತ್ಛತೆಗೆ ಪ್ರಾಮುಖ್ಯತೆ ನೀಡಿ ಸರ್ಕಾರ ನೀಡಿರುವ ಗಾಂಧಿ ಗ್ರಾಮ ಪುರಸ್ಕಾರದ ಮಾನ ಉಳಿಸುವರೇ ಎಂದು ಕಾಯ್ದು ನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.