ಅಲಾಸ್ಕಾ ಪಶ್ಚಿಮ ಕರಾವಳಿಯಲ್ಲಿ 6.6 ತೀವ್ರತೆಯ ಭೂಕಂಪ
Team Udayavani, Oct 9, 2017, 10:41 AM IST
ವಾಷಿಂಗ್ಟನ್: ಅಮೆರಿಕದ ಅಲಾಸ್ಕಾದ ಪಶ್ಚಿಮ ಕರಾವಳಿಯಲ್ಲಿ 6.6 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ. ಆದರೂ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ ಎಂದವರು ಹೇಳಿದ್ದಾರೆ.
ಭೂಕಂಪವು ಸುಮಾರು 111.8 ಕಿ.ಮೀ. (69 ಮೈಲು) ನೆಲದಾಳದಲ್ಲಿ ಕೇಂದ್ರೀಕೃತವಾಗಿತ್ತು. ಸುಮಾರು 8,000 ಮಂದಿ ವಾಸಿಸಿಕೊಂಡಿರುವ ಅಲೇಶ್ಯನ್ ಪರ್ಯಾಯ ದ್ವೀಪದ ಬುಲ್ಡೀರ್ ದ್ವೀಪದ ಸುಮಾರು 60 ಕಿ.ಮೀ. ಪೂರ್ವಕ್ಕೆ ಈ ಕೇಂದ್ರ ಬಿಂದು ಇದ್ದುದು ಕಂಡುಬಂದಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ.
ಬುಲ್ಡೀರ್ ದ್ವೀಪವಾಸಿಗಳು ಭೂಕಂಪವನ್ನು ತಾಳಿಕೊಳ್ಳಬಲ್ಲ ರಚನೆಗಳಲ್ಲಿ ವಾಸಿಸಿಕೊಂಡಿದ್ದಾರೆ. ಹಾಗಿದ್ದರೂ ಭೂಕಂಪಕ್ಕೆ ತುತ್ತಾಗುವಂತಹ ರಚನೆಗಳು ಕೂಡ ಈ ದ್ವೀಪದಲ್ಲಿವೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ಹೇಳಿದೆ.
ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಈ ತನಕ ಸುನಾಮಿ ಹೆದ್ದೆರೆಗಳು ಏಳುವ ಅಪಾಯದ ಸೂಚನೆಯನ್ನು ಕೊಟ್ಟಿಲ್ಲ. ಅಂತೆಯೇ ಭೂಕಂಪದಿಂದಾಗಿ ಯಾವುದೇ ಸಾವು ನೋವು, ನಾಶ ನಷ್ಟ ಉಂಟಾದ ವರದಿಗಳೂ ಈ ನತಕ ಬಂದಿಲ್ಲ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.