ಲಂಡನ್‌ನಿಂದ ಮರಳಿದ ನವಾಜ್ ಷರೀಫ್ ಅಳಿಯ ಸಫ್ದರ್ ಅರೆಸ್ಟ್
Team Udayavani, Oct 9, 2017, 11:34 AM IST
ಇಸ್ಲಾಮಾಬಾದ್ : ಪದಚ್ಯುತ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಅಳಿಯ ಹಾಗೂ ಮಾಜಿ ಸೇನಾ ಕ್ಯಾಪ್ಟನ್ ಮುಹಮ್ಮದ್ ಸಫ್ದರ್ ಹಾಗೂ ಅವರ ಪತ್ನಿ ಮರ್ಯಾಮ್ ನವಾಜ್ ಅವರನ್ನು ಪಾಕಿಸ್ಥಾನದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಂದು ಸೋಮವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ, ಆತನ ವಿರುದ್ಧ ವಿಚಾರಣೆಗೆ ಬಾಕಿ ಇರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದರು.
ಷರೀಫ್ ಅಳಿಯ ಮುಹಮ್ಮದ್ ಸಫ್ದರ್ ಅವರು ಇಂದು ಲಂಡನ್‌ನಿಂದ ಇಲ್ಲಿಗೆ ಆಗಮಿಸಿದಾಗ ಅವರನ್ನು ರಾಷ್ಟ್ರೀಯ ಉತ್ತರದಾಯಿ ದಳ (ಎನ್‌ಎಬಿ) ಇಲ್ಲಿನ ಬೇನಜೀರ್ ಭುಟ್ಟೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಪತ್ನಿ ಮರ್ಯಾಮ್ ನವಾಜ್ ಜತೆಗೆ ವಶಕ್ಕೆ ತೆಗೆದುಕೊಂಡಿತು.
ಕಳೆದ ಸೆ.8ರಂದು ಪಾಕಿಸ್ಥಾನದ ರಾಷ್ಟ್ರೀಯ ಉತ್ತರದಾಯಿ ದಳ (ನ್ಯಾಬ್) ಪಾಕ್ ಪ್ರಧಾನಿ ನವಾಜ್ ಷರೀಫ್, ಅವರ ಪುತ್ರಿ ಮರ್ಯಾಮ್, ಪುತ್ರರಾದ ಹುಸೇನ್ ಮತ್ತು ಹಸನ್ ಹಾಗೂ ಅಳಿಯ ಸಫ್ದರ್ ವಿರುದ್ಧ ಭ್ರಷ್ಟಾಚಾರದ ದೂರನ್ನು ದಾಖಲಿಸಿತ್ತು.
ನವಾಜ್ ಷರೀಫ್ ಅವರ ಕುಟುಂಬದವರು ಲಂಡನ್‌ನಲ್ಲಿ ಹೊಂದಿರುವ ಆಸ್ತಿಪಾಸ್ತಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಭಷ್ಟಾಚಾರ ನಿಗ್ರಹ ದಳದ ನ್ಯಾಯಮಂಡಳಿಯ ಮುಂದೆ ಹಾಜರಾಗಲು ಷರೀಫ್ ಅಳಿಯ ಸಫ್ದರ್ ಮತ್ತು ಪತ್ನಿ ಮರ್ಯಾಮ್ ನವಾಜ್ ಲಂಡನ್‌ನಿಂದ ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆದ್ದ ಬೆನ್ನಲ್ಲೇ ಎಲಾನ್ ಮಸ್ಕ್ ಆಸ್ತಿ 24 ಲಕ್ಷ ಕೋಟಿಗೇರಿಕೆ!
Canada; ಖಲಿಸ್ಥಾನಿಗಳ ಇರುವಿಕೆ ಒಪ್ಪಿಕೊಂಡ ಪ್ರಧಾನಿ ಜಸ್ಟಿನ್ ಟ್ರಾಡೋ
Donald Trump ಗೆದ್ದಿದ್ದಕ್ಕೆ ಮದ್ವೆ ಆಗಲ್ಲ, ಮಕ್ಕಳ ಹೆರಲ್ಲ:ಸ್ತ್ರೀಯರ ಪ್ರತಿಜ್ಞೆ
City Lockdown; ಮುಲ್ತಾನ್ ದಾಖಲೆಯ ಮಾಲಿನ್ಯ: ನಗರ ಲಾಕ್‌ಡೌನ್!
Pakistan: ರೈಲು ನಿಲ್ದಾಣದಲ್ಲಿ ಭೀಕರ ಸ್ಫೋಟ… 20 ಮಂದಿ ಮೃ*ತ್ಯು, 30 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.