ಪ್ರತಿ ವಾರ್ಡ್‌ನಲ್ಲೂ ಮಾರುಕಟ್ಟೆ ಸಂಕೀರ್ಣ
Team Udayavani, Oct 9, 2017, 12:04 PM IST
ಸುರತ್ಕಲ್: ವಿಶೇಷ ಆರ್ಥಿಕ ನಿಧಿ ಯಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ 5 ಕೋಟಿ ರೂ. ಬಿಡುಗಡೆ ಮಾಡಿಸಿದ್ದು, ಇದರ ನೆರವಿನಿಂದ ಗಣೇಶಪುರದ ಕೈಕಂಬದಲ್ಲಿ 50 ಲ.ರೂ. ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣವಾಗಲಿದೆ ಎಂದು ಶಾಸಕ ಮೊಯಿದಿನ್ ಬಾವಾ ಹೇಳಿದರು.
ಗಣೇಶಪುರದಲ್ಲಿ ರವಿವಾರ ಮಾರುಕಟ್ಟೆ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕಾಟಿಪಳ್ಳ, ಕೃಷ್ಣಾಪುರ, ಕೂಳೂರು, ಕಾವೂರು ಸಹಿತ ವಿವಿಧೆಡೆ ಮಾರುಕಟ್ಟೆ ಸಂಕೀರ್ಣಗಳು ತಲೆ ಎತ್ತಲಿವೆ. ಈಗಾಗಲೇ ಕಾವೂರು, ಕೃಷ್ಣಾಪುರದಲ್ಲಿ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.
ಸ್ಥಳೀಯವಾಗಿ ನಾಗರಿಕರಿಗೆ ಒಂದೇ ಸೂರಿನಡಿ ನಿತ್ಯ ಬಳಕೆಯ ವಸ್ತುಗಳು ಲಭ್ಯವಾಗಬೇಕು. ಇದರಿಂದ ವೆಚ್ಚ,
ಸಮಯ ಉಳಿತಾಯವಾಗಲಿದೆ ಹಾಗೂ ಗುಣಮಟ್ಟದ ಪರಿಕರಗಳನ್ನು ಖರೀದಿಸಬಹುದಾಗಿದೆ ಎಂದರು.
ಉತ್ತರಕ್ಕೆ ಅತ್ಯಧಿಕ ಅನುದಾನ
ನಾಲ್ಕು ವರ್ಷಗಳ ಅವಧಿಯಲ್ಲಿ ಮಂಗಳೂರು ಉತ್ತರಕ್ಕೆ ವಿವಿಧ ಹಣಕಾಸು ಯೋಜನೆಯಡಿ, ಮುಖ್ಯಮಂತ್ರಿಗಳ
ವಿಶೇಷ ವಿವೇಚನೆಯಿಂದ ನೀಡಿದ ಅನುದಾನ ಸಹಿತ ಅಭಿವೃದ್ಧಿ ಕಾರ್ಯಗಳಿಗೆ ನೂರಾರು ಕೋಟಿ ಅನುದಾನ ಬಂದಿದೆ. ಮುಖ್ಯವಾಗಿ ಸುರತ್ಕಲ್ ಗಣೇಶಪುರ ಚತುಷ್ಪಥ ರಸ್ತೆಗೆ 62 ಕೋ.ರೂ., ಸುರತ್ಕಲ್ ಹೈಟೆಕ್ ಮಾರುಕಟ್ಟೆಗೆ 120 ಕೋ.ರೂ. ಸೇರಿದೆ. ನಗರ ಮತ್ತು ಗ್ರಾಮಾಂತರ ಮೂಲ ಸೌಕರ್ಯ ಯೋಜನೆಯಡಿ ರಸ್ತೆ ವಿಸ್ತರಣೆ, ಡಾಮರು ಕಾಮಗಾರಿಗಾಗಿ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದರು.
ವಸತಿ ಯೋಜನೆಯಡಿ 900 ಆಶ್ರಯ ಮನೆಗಳ ನಿರ್ಮಾಣಕ್ಕೆ ಭೂಮಿ ಗುರುತಿಸಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಕೇಂದ್ರದಿಂದ ಇದಕ್ಕೆ ಆರ್ಥಿಕ ನೆರವಿನ ಒಪ್ಪಿಗೆ ಬಂದ ತತ್‌ಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕರು ಹೇಳಿದರು.
ಮನಪಾ ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಮಾತನಾಡಿ, ಈ ಬಾರಿ ಸುರತ್ಕಲ್ ಕ್ಷೇತ್ರದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿಯೇ ಬೇಕಾಗುವ ಮಾರುಕಟ್ಟೆ, ಬಸ್ ನಿಲ್ದಾಣ, ರಸ್ತೆಗಳ ಅಭಿವೃದ್ಧಿಯಂತಹ ಕಾಮಗಾರಿಗಳಿಗೆ ದಾಖಲೆಯ ಅನುದಾನ ಬಿಡುಗಡೆ ಮಾಡಿಸುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. ಸುರತ್ಕಲ್ ಬೀಚ್ ನಗರಿಯಾಗಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೂ ಶಾಸಕರು ವಿಶೇಷ ಕ್ರಿಯಾಯೋಜನೆ ರೂಪಿಸಿ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಸ್ಥಳೀಯ ಕಾರ್ಪೊರೇಟರ್ ಬಶೀರ್ ಅಹ್ಮದ್, ಮಾಜಿ ಕಾರ್ಪೊರೇಟರ್ ಹರೀಶ್ ಕೆ., ಯುವ ಕಾಂಗ್ರೆಸ್‌ನ ಉತ್ತಮ್ ಆಳ್ವ, ಸುರತ್ಕಲ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಳಾ ಕಾಮತ್, ವೈ. ರಾಘವೇಂದ್ರ ರಾವ್, ನವೋದಯ ಸಂಘದ ಅಧ್ಯಕ್ಷ ಧರ್ಮೇಂದ್ರ, ಮುಖಂಡರಾದ ಪದ್ಮನಾಭ ಶೆಟ್ಟಿ, ಜೈಸನ್, ಹಬೀಬ್, ರೇಷ್ಮಾ,ಶಕೀನ, ರಘುರಾಂ, ಶಾಂತಾರಾಮ್, ರಾಜೇಶ್, ಶೇಖರ್ ಪೂಜಾರಿ, ಸಲೀಂ, ಹಮೀದ್ ಕಟ್ಲ, ಅಬೂಬಕರ್, ರವಿ ಶೆಟ್ಟಿ , ಪಾಲಿಕೆಯ
ಸುರತ್ಕಲ್ ವಲಯಾಯುಕ್ತ ರವಿಶಂಕರ್, ಎಂಜಿನಿಯರ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.ಉಪಾಧ್ಯಕ್ಷ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ನೂತನ ಮಾರುಕಟ್ಟೆ ಸಂಕೀರ್ಣವು 3,800 ಚದರ ಅಡಿ ವಿಸ್ತೀರ್ಣ ಇರಲಿದೆ. ಮೊದಲ ಹಂತದಲ್ಲಿ 50 ಲ.ರೂ, ಬಿಡುಗಡೆಯಾಗಿದ್ದು, ನೆಲ ಅಂತಸ್ತು ಹಾಗೂ ಪ್ರಥಮ ಅಂತಸ್ತು ನಿರ್ಮಾಣವಾಗಲಿದೆ. 120 ಚದರ ಅಡಿಯ ಒಟ್ಟು 16 ಅಂಗಡಿಗಳು ಇರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.