ಮಂಗಳೂರು: 2 ರೌಡಿ ನಿಗ್ರಹ ದಳ ಅಸ್ತಿತ್ವಕ್ಕೆ
Team Udayavani, Oct 9, 2017, 12:19 PM IST
ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ರೌಡಿಗಳ ಅಟ್ಟಹಾಸ ಮಿತಿ ಮೀರುತ್ತಿದ್ದು, ಇದನ್ನು ಮಟ್ಟ ಹಾಕಲು ಈಗ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎರಡು ರೌಡಿ ನಿಗ್ರಹ ದಳಗಳನ್ನು ಸ್ಥಾಪಿಸುವ ಮಹತ್ವದ ತೀರ್ಮಾನವನ್ನು ಪೊಲೀಸ್ ಇಲಾಖೆ ಕೈಗೊಂಡಿದೆ.
ಒಂದು ರೌಡಿ ನಿಗ್ರಹ ದಳವನ್ನು ದಕ್ಷಿಣ ಪೊಲೀಸ್ ಉಪ ವಿಭಾಗ ಹಾಗೂ ಇನ್ನೊಂದನ್ನು ಉತ್ತರ ಉಪ ವಿಭಾಗ ವ್ಯಾಪ್ತಿಯಲ್ಲಿ ರಚಿಸಿ ಆದೇಶ ಹೊರಡಿಸಲಾಗಿದೆ. ಉಳ್ಳಾಲ, ಕೊಣಾಜೆ, ಕಂಕನಾಡಿ ನಗರ ಸೇರಿದಂತೆ ಮಂಗಳೂರು ದಕ್ಷಿಣ ಉಪ ವಿಭಾಗ ವ್ಯಾಪ್ತಿಯಲ್ಲಿ ಎಸಿಪಿ ರಾಮ ರಾವ್ ನೇತೃತ್ವದಲ್ಲಿ ಎಂಟು ಮಂದಿ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ರೌಡಿ ನಿಗ್ರಹ ದಳವನ್ನು ಎರಡು ದಿನಗಳ ಹಿಂದೆಯಷ್ಟೇ ರಚಿಸಲಾಗಿದೆ. ಹಾಗೆಯೇ ಪಣಂಬೂರು, ಸುರತ್ಕಲ್, ಮೂಲ್ಕಿ, ಬಜಪೆ, ಮೂಡಬಿದಿರೆ, ಮಂಗಳೂರು ಗ್ರಾಮಾಂತರ, ಕಾವೂರು ಸೇರಿದಂತೆ ಉತ್ತರ ಉಪ ವಿಭಾಗದಲ್ಲಿ ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದಲ್ಲಿ ಇನ್ನೊಂದು ರೌಡಿ ನಿಗ್ರಹ ದಳ ಕೂಡ ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ. ಆ ಮೂಲಕ ಈ ಎರಡು ಉಪ ವಿಭಾಗಳಲ್ಲಿ ರೌಡಿ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕುವುದಕ್ಕೆ ಪೊಲೀಸ್ ಇಲಾಖೆ ತೀರ್ಮಾನಿಸಿರುವುದು ಗಮನಾರ್ಹ. ಆದರೆ ಸದ್ಯಕ್ಕೆ ಸೆಂಟ್ರಲ್ ಉಪ ವಿಭಾಗ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ದಳ ಸ್ಥಾಪಿಸುವ ಚಿಂತನೆ ಸದ್ಯಕ್ಕೆ ಪೊಲೀಸ್ ಇಲಾಖೆ ಮುಂದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ.26ರಿಂದ ಅ.4ರ ವರೆಗೆ ಅಂದರೆ ಕಳೆದ ಒಂದು ವಾರದ ಅವಧಿಯಲ್ಲಿ ರೌಡಿಗಳ ಅಟ್ಟಹಾಸ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಮೂವರು ಬಲಿಯಾಗಿದ್ದು ಸಾರ್ವಜನಿಕರೂ ಬೆಚ್ಚಿ ಬೀಳುವ ವಾತಾವರಣ ನಿರ್ಮಾಣವಾಗಿದೆ. ಫರಂಗಿಪೇಟೆಯಲ್ಲಿ ಸೆ.26, ಅ.4ರಂದು ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ರೌಡಿಗಳ ಅಟ್ಟಹಾಸ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರು ರೌಡಿ ನಿಗ್ರಹ ದಳ ರಚನೆ ಮಾಡುವ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.
18 ವರ್ಷಗಳ ಹಿಂದೆ ರೌಡಿ ನಿಗ್ರಹ ದಳ ಇತ್ತು
ಮಂಗಳೂರು ಪೊಲೀಸ್ ಕಮಿಷನರೇಟ್ ರಚನೆ ಆಗುವುದಕ್ಕೆ ಮೊದಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮಟ್ಟದಲ್ಲಿ ರೌಡಿ ನಿಗ್ರಹ ದಳ ಇತ್ತು. ಎ.ಎಂ. ಪ್ರಸಾದ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ 1995 ರಲ್ಲಿ ಆಗ ದಕ್ಷ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಜಯಂತ್ ವಿ. ಶೆಟ್ಟಿ ನೇತೃತ್ವದಲ್ಲಿ ರೌಡಿ ನಿಗ್ರಹ ದಳ ರಚನೆಯಾಗಿತ್ತು. ಇದು ಆ ಬಳಿಕ ಬಂದ ಎಸ್‌ಪಿ ಎನ್.ಎಸ್.ಮೇಘರಿಕ್ ಅವರ ಕಾಲದಲ್ಲಿಯೂ ಮುಂದುವರಿದು 1999 ರ ತನಕ ಸಕ್ರಿಯವಾಗಿತ್ತು.
ಹಿನ್ನೆಲೆ:
1994- 95ರ ಅವಧಿಯಲ್ಲಿ ಜಿಲ್ಲೆಯಲ್ಲಿ ರೌಡಿಗಳ ಚಟುವಟಿಕೆ ಜಾಸ್ತಿ ಇತ್ತು. ಇಲ್ಲಿನ ರೌಡಿಗಳಿಗೆ ಮುಂಬಯಿನ ಛೋಟಾ ರಾಜನ್ ಮತ್ತಿತರ ಭೂಗತ ಪಾತಕಿಗಳ ಸಂಪರ್ಕವೂ ಇದ್ದು, ಅವರ ಕೆಲವು ಮಂದಿ ಸಹಚರರು ಇಲ್ಲಿ ಕಾರ್ಯಾಚರಿಸುತ್ತಿದ್ದರು. 1995ರಲ್ಲಿ ಪೊಳಲಿಯಲ್ಲಿ ರೌಡಿ ಕಮಲಾಕ್ಷ ಕೊಲೆಯಾಗಿದ್ದು, ಆತನ ದೇಹವನ್ನು ನಗರದ ಎಸ್‌ಸಿಎಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಯ ಆವರಣದಲ್ಲಿ ದೊಡ್ಡ ಸಂಖ್ಯೆಯ ಜನ ಸೇರಿದ್ದರು. ಆಗ ವಿರೋಧಿ ಗ್ಯಾಂಗ್‌ನವರು ಪೊಲೀಸರ ಸಮ್ಮುಖದಲ್ಲಿಯೇ ಇನ್ನೊ°ಂದು ಗ್ಯಾಂಗಿನ ಅರ್ಜುನನಿಗೆ ಚೂರಿಯಿಂದ ಇರಿದಿದ್ದರು. ರೌಡಿಗಳ ಅಟ್ಟಹಾಸವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಎಸ್‌ಪಿ ಎ.ಎಂ. ಪ್ರಸಾದ್ ಅವರು ಇನ್ಸ್‌ಪೆಕ್ಟರ್ ಜಯಂತ್ ವಿ. ಶೆಟ್ಟಿ ನೇತೃತ್ವದಲ್ಲಿ ರೌಡಿ ನಿಗ್ರಹ ದಳವನ್ನು ರಚಿಸಿದ್ದರು.
ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಬಗೆಗೆ ಪರಿಣತರನ್ನು ಒಳಗೊಂಡ ಈ ತಂಡ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದ ರೌಡಿಗಳ ಪಟ್ಟಿ ತಯಾರಿಸಿ ಅವರ ಇತಿಹಾಸವನ್ನು ಕೆದಕಿ, ಸಕ್ರಿಯರಾಗಿದ್ದ ರೌಡಿಗಳ ಮೇಲೆ ಕೇಸು ದಾಖಲಿಸಿತ್ತು. ಕೆಲವರ ಮೇಲೆ ಗೂಂಡಾ ಕಾಯ್ದೆ ಹಾಕಲು ಶಿಫಾರಸು ಮಾಡಿತ್ತು. ಇನ್ನೂ ಕೆಲವರನ್ನು ಠಾಣೆಗೆ ಕರೆಸಿ ಪರೇಡ್ ಮಾಡಿಸಿ ಮುಚ್ಚಳಿಕೆಯನ್ನು ಬರೆಸಿ, ಎಚ್ಚರಿಕೆ ನೀಡಿ ಬಿಡುಗಡೆ ಮಾಡಿತ್ತು. ಇದರ ಪರಿಣಾಮವಾಗಿ ಮಂಗಳೂರು ನಗರ ಮತ್ತು ಜಿಲ್ಲೆಯಲ್ಲಿ 1997ರ ವೇಳೆಗೆ ಶೇ. 70 ರಷ್ಟು ಹಾಗೂ 1999ರ ವೇಳೆಗೆ ಶೇ. 90 ರಷ್ಟು ರೌಡಿ ಚಟುವಟಿಕೆಗಳು ಕಡಿಮೆಯಾಗಿದ್ದವು.
ಎರಡು ರೌಡಿ ನಿಗ್ರಹ ದಳ ಅಸ್ತಿತ್ವಕ್ಕೆ
“ಮಂಗಳೂರು ದಕ್ಷಿಣ ಉಪ ವಿಭಾಗದಲ್ಲಿ ಎಸಿಪಿ ರಾಮರಾವ್ ನೇತೃತ್ವದಲ್ಲಿ ಎರಡು ದಿನಗಳ ಹಿಂದೆ ರೌಡಿ ನಿಗ್ರಹ ದಳ ರಚಿಸಲಾಗಿದೆ. ಉತ್ತರ ಉಪ ವಿಭಾಗದಲ್ಲಿ ಅಲ್ಲಿನ ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದಲ್ಲಿ ಇನ್ನೊಂದು ರೌಡಿ ನಿಗ್ರಹ ದಳವನ್ನು ರಚಿಸಲಾಗುವುದು. ಹಳೆಯ ರೌಡಿಗಳು, ಹೊಸ ರೌಡಿಗಳು ಮತ್ತು ಸಕ್ರಿಯವಾಗಿರುವ ರೌಡಿಗಳನ್ನು ಪಟ್ಟಿ ಮಾಡಿ ಅವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡುವ ಮತ್ತು ಇತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಉಳ್ಳಾಲದ ಜುಬೈರ್ ಕೊಲೆ ಪ್ರಕರಣದಲ್ಲಿ ಆರೋಪಿಗಳ ಸುಳಿವು ಲಭಿಸಿದೆ. ಶೀಘ್ರದಲ್ಲಿ ಬಂಧಿಸಲಾಗುವುದು.’
ಟಿ.ಆರ್.ಸುರೇಶ್, ನಗರ ಪೊಲೀಸ್ ಆಯುಕ್ತರು.
ಜಿಲ್ಲೆಯಲ್ಲಿ 1000 ರೌಡಿಗಳ ಪಟ್ಟಿ ಸಿದ್ಧ
“ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸುಮಾರು 1000 ರೌಡಿಗಳು ಲಿಸ್ಟ್‌ನಲ್ಲಿದ್ದಾರೆ. ಅವರಲ್ಲಿ ಸಕ್ರಿಯರಾಗಿರುವ ರೌಡಿಗಳನ್ನು ಆಗಿಂದಾಗ್ಗೆ ಕರೆಸಿ ಎಚ್ಚರಿಕೆ ನೀಡಲಾಗುತ್ತದೆ. ತಾನು ಅಧಿಕಾರ ವಹಿಸಿದ ಬಳಿಕ ಎರಡು ಬಾರಿ ಈ ಪ್ರಕ್ರಿಯೆ ನಡೆಸಲಾಗಿದೆ. ಇದು ಮುಂದುವರಿಯಲಿದೆ. ಫರಂಗಿಪೇಟೆ ನಮ್ಮ ವ್ಯಾಪ್ತಿಗೆ ಬರುತ್ತಿದ್ದರೂ ಕೃತ್ಯದಲ್ಲಿ ಭಾಗಿಯಾದವರು ಹಾಗೂ ಕೊಲೆಯಾದವರು ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯವರು. ಇದರ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ.’
ಸುಧೀರ್ ಕುಮಾರ್ ರೆಡ್ಡಿ, ಎಸ್‌ಪಿ, ದಕ್ಷಿಣ ಕನ್ನಡ.
ಡೆಡಿಕೇಟೆಡ್ ಟೀಂ ಬೇಕು
“ರೌಡಿ ನಿಗ್ರಹದಲ್ಲಿ ಅರ್ಪಣಾ ಮನೋಭಾವದ ಪೊಲೀಸ್ ತಂಡ ಇರ ಬೇಕು. ರೌಡಿಗಳ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಫಾಲೊ ಮಾಡುತ್ತಿರ ಬೇಕು. ಹಾಗೆ ಮಾಡಿದ್ದರಿಂದ ನಮಗೆ ಆಗ ಸಾರ್ವಜನಿಕರಿಂದ ಸರ್ವ ಸಹಕಾರ ಲಭಿಸಿತ್ತು. 20- 25 ವರ್ಷಗಳ ಹಿಂದೆ ಕಂಪ್ಯೂಟರ್ ಇರಲಿಲ್ಲ. ಈಗ ತಂತ್ರಜ್ಞಾನ ಬೆಳೆದಿದೆ. ಗಾಂಜಾ ವ್ಯವಹಾರವೂ ಥಳಕು ಹಾಕಿಕೊಂಡಿದೆ. ಹಾಗಾಗಿ ರೌಡಿ ನಿಗ್ರಹ ದಳದಲ್ಲಿ ನುರಿತ ಸಿಬಂದಿಯ ಆವಶ್ಯಕತೆಯಿದೆ.’
ಜಯಂತ್ ವಿ. ಶೆಟ್ಟಿ, ನಿವೃತ್ತ ಡಿವೈಎಸ್‌ಪಿ
ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.