ವಾಮಂಜೂರಿನ ಚಾಲನಾ ಪರೀಕ್ಷಾ  ಕೇಂದ್ರ ಮೇಲ್ದರ್ಜೆಗೆ


Team Udayavani, Oct 9, 2017, 12:32 PM IST

9-Mng—-7.jpg

ಮಹಾನಗರ: ನಗರ ಹೊರ ವಲಯದ ಕೊಣಾಜೆಯಲ್ಲಿ ವಾಹನ ಚಾಲನಾ ಪರವಾನಿಗೆ ನೀಡುವ ‘ಹೈಟೆಕ್‌ ಡ್ರೈವಿಂಗ್‌ ಟೆಸ್ಟ್‌ಟ್ರ್ಯಾ ಕ್‌’ ಕಾಮಗಾರಿ ಆರಂಭಿಸುವ ಮೊದಲು, ಪ್ರಸ್ತುತ ಕಾರ್ಯಾಚರಿಸುತ್ತಿರುವ ವಾಮಂಜೂರಿನ ವಾಹನ ಚಾಲನಾ  ಪರೀಕ್ಷಾ ಕೇಂದ್ರವನ್ನೇ ಮೇಲ್ದರ್ಜೆಗೇರಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರವನ್ನು ಮೊದಲ ಹಂತದಲ್ಲಿ ಉನ್ನತಿಗೇರಿಸಲಾಗುತ್ತದೆ. ಇಲ್ಲಿನ “ಡ್ರೈವಿಂಗ್‌ ಟೆಸ್ಟ್‌ ಯಾರ್ಡ್‌’ ಸಂಪೂರ್ಣ ಕಲ್ಲು- ಜಲ್ಲಿ- ಮಣ್ಣಿನಿಂದ ತುಂಬಿದ್ದು, ಮೊದಲ ಬಾರಿಗೆ ಪರೀಕ್ಷೆ ಎದುರಿಸುವವರಿಗೆ ಕಷ್ಟವಾಗುತ್ತಿದೆ ಎಂಬ ಕಾರಣದಿಂದ ಯಾರ್ಡ್‌ನ ಸೀಮಿತ ಭಾಗಕ್ಕೆ ಇಂಟರ್‌ ಲಾಕ್‌ ಅಳವಡಿಸಲು ನಿರ್ಧರಿಸಲಾಗಿದೆ. ಈ ಮೂಲಕ ಚಾಲನಾ ಪರವಾನಿಗೆ ಪಡೆಯಲು ಬರುವವರಿಗೆ ಆರಾಮವಾಗಿ ಟೆಸ್ಟ್‌ ಕೊಡಲು ಸಾಧ್ಯವಾಗಬಹುದು.

ಪರವಾನಿಗೆ ಪಡೆಯಲು ಬರುವ ವರಿಗೆ ಉಳಿದುಕೊಳ್ಳಲು ರೆಸ್ಟ್‌ ರೂಂ ಹಾಗೂ ಶೌಚಾಲಯ ನಿರ್ಮಾಣವಾಗಲಿದೆ. ವಾಹನ ಸವಾರರು ಕುಳಿತುಕೊಳ್ಳಲು ಇನ್ನಷ್ಟು ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಕೇಂದ್ರದ ನಾಲ್ಕೂ
ಬದಿಗಳಲ್ಲಿ ಕಾಂಪೌಂಡ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

ವಾಮಂಜೂರು ಟ್ರ್ಯಾಕ್‌ಗೂ ಹೈಟೆಕ್‌ ಸ್ಪರ್ಶ!
ಎರಡನೇ ಹಂತದಲ್ಲಿ ವಾಮಂಜೂರು ಕೇಂದ್ರವನ್ನು ಮತ್ತಷ್ಟು ಸುಸಜ್ಜಿತಗೊಳಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ. 8 ಮಾದರಿಯಲ್ಲಿ ಸುಸಜ್ಜಿತ ಹಾಗೂ ಆಟೋಮೆಟಿಕ್‌ ರೀತಿಯ ಟ್ರ್ಯಾ ಕ್‌ ಸಹಿತ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ಅಳವಡಿಸಲು
ತೀರ್ಮಾನಿಸಲಾಗಿದೆ. ಅತ್ಯಾಧುನಿಕ ರೀತಿಯ ‘ಹೈಟೆಕ್‌ ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾ ಕ್‌’ ಇಲ್ಲಿ ಬರುವ ಸಾಧ್ಯತೆ ಇದೆ. ಇದು
ಈಡೇರಿದರೆ, “ಡ್ರೈವಿಂಗ್‌ ಟೆಸ್ಟ್‌ ಟ್ರ್ಯಾ ಕ್‌’ನಲ್ಲಿ ಬೈಕ್‌ ಮತ್ತು ಕಾರುಗಳಿಗೆ ಪ್ರತ್ಯೇಕ ಟ್ರ್ಯಾಕ್‌ಗಳಿರುತ್ತವೆ.
 
‘ಎಂಟು’ ಆಕಾರ, ‘ಎಸ್‌’ ಆಕಾರ, ಹಿಂದೆ-ಮುಂದೆ ಚಾಲನೆ ಇತ್ಯಾದಿ ವ್ಯವಸ್ಥೆಗಳಿರುತ್ತವೆ. ಮಳೆಯಿಂದ ತೊಂದರೆಯಾಗದಂತೆ ಟ್ರ್ಯಾಕ್‌ನಲ್ಲಿ 17 ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತದೆ. ಡ್ರೈವಿಂಗ್‌ ಟೆಸ್ಟ್‌ ಸಂದರ್ಭ ಬೈಕ್‌ ಅಥವಾ ಕಾರು ಸಮರ್ಪಕ ರೀತಿಯಲ್ಲಿ ಚಾಲನೆ ಮಾಡಿದ್ದರೆ, ಈ ಸೆನ್ಸಾರ್‌ ಕಂಪ್ಯೂಟರಿಗೆ ಮಾಹಿತಿ ರವಾನಿಸುತ್ತದೆ.

ವಾಮಂಜೂರು ಕೇಂದ್ರದಲ್ಲಿ 2 ಎಕರೆಯಷ್ಟು ಸ್ಥಳಾವಕಾಶವಿದ್ದು, ಇಲ್ಲಿ ವಾಹನ ಚಾಲನಾ ಪರವಾನಿಗೆ ಪಡೆಯಲು ಸವಾರರು ಸಂಕಷ್ಟಪಡುವ ಸ್ಥಿತಿ ಇದೆ. ಜಲ್ಲಿ- ಕಲ್ಲು- ಮಣ್ಣು ಆವೃತವಾಗಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ವಾಹನ ಓಡಿಸುವವರು ಪರೀಕ್ಷಾ ಭಯದಿಂದ ಎಡವುತ್ತಾರೆ. ರಾಜ್ಯದ ಇತರ ಭಾಗದಲ್ಲಿ ಸುಸಜ್ಜಿತ ಟ್ರ್ಯಾಕ್‌ ಇರುವುದರಿಂದ ಮಂಗಳೂರಿನ ಟ್ರ್ಯಾಕ್‌ ಅನ್ನು ಮೇಲ್ದರ್ಜೆ ಗೇರಿಸಬೇಕು ಎಂಬ ಆಗ್ರಹವೂ ಕೇಳಿ ಬಂದಿತ್ತು. ಜತೆಗೆ ಇಲ್ಲಿ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಸವಾರರು ನಿತ್ಯ ದೂರು ಸಲ್ಲಿಸುತ್ತಿದ್ದರು.

ದಿನಕ್ಕೆ 100 ಜನರು
ವಾಮಂಜೂರಿನಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನದವರೆಗೆ 100ರಿಂದ 125ರಷ್ಟು ಜನರು ವಾಹನ ಚಾಲನಾ ಪರೀಕ್ಷೆಯಲ್ಲಿ
ಭಾಗವಹಿಸುತ್ತಾರೆ. ಮಂಗಳೂರಿನ ಇನ್‌ ಸ್ಪೆಕ್ಟರ್‌ ಸೇರಿದಂತೆ 2-3 ಅಧಿಕಾರಿಗಳು ಇಲ್ಲಿಕಾರ್ಯ ನಿರ್ವಹಿಸುತ್ತಾರೆ. ಈ ಮಧ್ಯೆ, ಸುರತ್ಕಲ್‌ ಆರ್‌ಟಿಒ ಕಚೇರಿ ಪ್ರತ್ಯೇಕವಾಗಿಆರಂಭಿಸಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ವೆಂಬರ್‌ಗಿಂತ ಮೊದಲು ಇದು ತೆರೆದುಕೊಳ್ಳಲಿದೆ. ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿಯೂ ಇದೇ ಸಮಯದಲ್ಲಿ ಆರಂಭವಾಗಲಿದ್ದು, ಈ ಎರಡೂ ಕೇಂದ್ರಗಳನ್ನು ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರಕ್ಕೆ ಜೋಡಿಸಲು ತೀರ್ಮಾನಿಸಲಾಗಿದೆ.

ಶುರುವಾಗದ ‘ಭಾರೀ ವಾಹನಗಳ ತರಬೇತಿ ಸಂಸ್ಥೆ’
ಲಾರಿ, ಬಸ್ಸು ಸೇರಿದಂತೆ ಘನ ವಾಹನಗಳ ತರಬೇತಿಯನ್ನು ಇಲ್ಲಿಯವರೆಗೆ ಖಾಸಗಿಯವರೇ ನೀಡುತ್ತಿದ್ದರು. ಆದರೆ, ಇಲ್ಲಿ ಪಾರದರ್ಶಕತೆಯ ಕೊರತೆ ಕಾಣಿಸುತ್ತಿದ್ದು, ಅಪಘಾತಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಮನಗಂಡ ಸರಕಾರ ಸಾರಿಗೆ ಇಲಾಖೆಯ ಮೂಲಕವೇ ಘನ ವಾಹನಗಳ ಚಾಲಕರಿಗೆ ತರಬೇತಿ ನೀಡಲು ನಿರ್ಧರಿಸಿತ್ತು. ಇದಕ್ಕಾಗಿ ಮಂಗಳೂರಿನಲ್ಲಿ ‘ಭಾರೀ ವಾಹನಗಳ ತರಬೇತಿ ಸಂಸ್ಥೆ’ ಆರಂಭಕ್ಕೆ ಸರಕಾರ ಮುಂದಡಿ ಇಟ್ಟಿದೆ. ಸಚಿವ
ಸಂಪುಟದಲ್ಲಿ 15 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಇನ್ನೂ ಈ ಯೋಜನೆ ಆರಂಭ ಹಂತವನ್ನು ಕಂಡಿಲ್ಲ. ನೂತನ ಸಂಸ್ಥೆಯು ನಗರ ಹೊರಭಾಗ ಕೊಣಾಜೆಯ ಪಿ.ಎ. ಎಂಜಿನಿಯರಿಂಗ್‌ ಕಾಲೇಜಿನ ಸಮೀಪದಲ್ಲಿ ಸ್ಥಾಪನೆಯಾಗಲಿದೆ. ಪಕ್ಕದಲ್ಲೇ ‘ಹೈಟೆಕ್‌ ಡ್ರೈವಿಂಗ್‌ ಟೆಸ್ಟ್‌ಟ್ರ್ಯಾಕ್‌’ ನಿರ್ಮಾಣವಾಗಲಿದ್ದು, ವಾಹನಗಳ
“ಇನ್‌ಸ್ಪೆಕ್ಷನ್‌ ಟೆಸ್ಟಿಂಗ್‌ ಸೆಂಟರ್‌’ ಕೂಡ ಆರಂಭವಾಗಲಿದೆ. ಆದರೆ, ಈ ಮೂರೂ ವ್ಯವಸ್ಥೆಗಳು ಯಾವಾಗ ಆರಂಭವಾಗಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ

ವಾಮಂಜೂರಿನಲೇ ಡ್ರೈ ವಿಂಗ್‌ ಟೆಸ್ಟ್..!
ಕೊಣಾಜೆಯಲ್ಲಿ ಸುಸಜ್ಜಿತ ಡ್ರೈವಿಂಗ್‌ ಟ್ರ್ಯಾ ಕ್‌ ನಿರ್ಮಾಣಗೊಂಡರೆ, ಮಂಗಳೂರಿನಲ್ಲಿ ಎಲ್‌ಎಲ್‌ಆರ್‌ (ಕಲಿಕಾ ಚಾಲನಾ ಪರವಾನಿಗೆ) ಪಡೆದು, ಮೊದಲ ಚಾಲನಾ ಪರೀಕ್ಷೆ ನಡೆಸಲು ಕೊಣಾಜೆಗೆ ಹೋಗುವ ಬಗ್ಗೆ ಪ್ರಸ್ತಾವನೆ ಇತ್ತು. ಆದರೆ, ಇದರಲ್ಲಿ ಈಗ ಬದಲಾವಣೆ ಆಗಿದೆ. ಅದರಂತೆ, ಕೊಣಾಜೆಯಲ್ಲಿ ಘನವಾಹನಗಳ ಪರವಾನಿಗೆ ನವೀಕರಣಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಮುಂದೆಯೂ ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರದಲ್ಲೇ ಟೆಸ್ಟ್‌ ನಡೆಸಬೇಕಾಗಿದೆ. ಈ ಮಧ್ಯೆ, ಸುರತ್ಕಲ್‌ ಆರ್‌ಟಿಒ ಕಚೇರಿ ನವೆಂಬರ್‌ ಒಳಗೆ ಉದ್ಘಾಟನೆಗೊಳ್ಳುವ ಕಾರಣದಿಂದ ಈ ವ್ಯಾಪ್ತಿಯವರೂ ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರಕ್ಕೆ ಬಂದು ಟೆಸ್ಟ್‌ ನೀಡಬೇಕಾಗಿದೆ. ಬಂಟ್ವಾಳದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭವಾಗುತ್ತಿದ್ದು, ಇಲ್ಲಿನವರೂ ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರದಲ್ಲೇ ಟೆಸ್ಟ್‌ ನೀಡಬೇಕಾಗಿದೆ. ಇದರಿಂದ ಹೆಚ್ಚುವ ಒತ್ತಡ ನಿಭಾಯಿಸಲು ವಾಮಂಜೂರು ಟ್ರ್ಯಾಕನ್ನೇ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ.

ಶೀಘ್ರದಲ್ಲೇ ಕಾಮಗಾರಿ  
ಕೊಣಾಜೆಯಲ್ಲಿ ‘ಭಾರೀ ವಾಹನಗಳ ತರಬೇತಿ ಸಂಸ್ಥೆ’ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದಕ್ಕೂ ಮೊದಲು ವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ‘ಡ್ರೈವಿಂಗ್‌ ಟೆಸ್ಟ್‌ ಯಾರ್ಡ್‌’ಗೆ ಇಂಟರ್‌ಲಾಕ್‌ ಅಳವಡಿಸಲು ಉದ್ದೇಶಿಸಲಾಗಿದೆ. ಜತೆಗೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು. ಶೀಘ್ರದಲ್ಲಿ ಇದರ ಕಾಮಗಾರಿ ನಡೆಯಲಿದೆ. 
ಜಿ.ಎಸ್‌. ಹೆಗಡೆ, ಉಪ ಸಾರಿಗೆ
ಆಯುಕ್ತರು, ಮಂಗಳೂರು

ಟಾಪ್ ನ್ಯೂಸ್

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.