ಶತಮಾನೋತ್ಸವ ಸಂಭ್ರಮದಲ್ಲಿ  ಪೆರುವಾಯಿ ಅನುದಾನಿತ ಶಾಲೆ 


Team Udayavani, Oct 9, 2017, 4:56 PM IST

9-15.jpg

ಪೆರುವಾಯಿ: ಬ್ರಿಟಿಷರ ಆಡಳಿತದ ಅವಧಿಯಲ್ಲಿ ಅನುಮತಿ ಪಡೆದು ಹಲವು ಸಾಧಕರನ್ನು ಸಮಾಜಕ್ಕೆ ನೀಡಿರುವ ಪೆರುವಾಯಿ ಕೊಲ್ಲತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವದ ಹೊಸ್ತಿಲಲ್ಲಿದೆ.

1917ರಲ್ಲಿ ಸ್ಥಾಪನೆ
ಅತ್ಯಂತ ಗ್ರಾಮೀಣ ಭಾಗವಾಗಿರುವ ವಿಟ್ಲ-ಮಾಣಿಲ ರಸ್ತೆಯ ಪೆರುವಾಯಿ ಕೊಲ್ಲತ್ತಡ್ಕದಲ್ಲಿ 1917ರಲ್ಲಿ ಈ ಶಾಲೆ ಸ್ಥಾಪನೆಗೊಂಡಿದೆ. ಆರಂಭದಲ್ಲಿ 1ರಿಂದ 5ನೇ ತರಗತಿವರೆಗೆ ಇದ್ದರೆ, ಬಳಿಕ 7ನೇ ತರಗತಿ ವರೆಗೆ ವಿಸ್ತರಿಸಲಾಯಿತು. ಪ್ರಸ್ತುತ ನಾಲ್ವರು ಶಿಕ್ಷಕರು ಹಾಗೂ 124 ವಿದ್ಯಾರ್ಥಿಗಳಿದ್ದಾರೆ. ಪೆರುವಾಯಿ ಗ್ರಾಮದ 10 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಇಲ್ಲಿಯೇ ವಿದ್ಯಾರ್ಜನೆ ಮಾಡಿ ಇಂದು ಅಮೆರಿಕ, ಶಾರ್ಜಾ, ಸೌದಿ ಅರೇಬಿಯಾ ಮೊದಲಾದ ಕಡೆಗಳಲ್ಲಿ ಉದ್ಯೋಗದಲ್ಲಿದ್ದಾರೆ. ಇದೊಂದು ಗ್ರಾಮೀಣ ಭಾಗವಾಗಿದ್ದು, ಕೆಲವೇ ಕಿ.ಮೀ. ಅಂತರದಲ್ಲಿ ಕೇರಳವನ್ನು ಸಂಪರ್ಕಿಸಲಾಗುತ್ತದೆ.

ವ್ಯಕ್ತಿತ್ವ ವಿಕಸನ 
ನೀರು ಉಳಿಸುವ ಉದ್ದೇಶದಿಂದ ಶಾಲೆಯ ಸಮೀಪವೇ ಇಂಗುಗುಂಡಿ ನಿರ್ಮಿಸಲಾಗಿದ್ದು, ಇದರಿಂದಲೇ ಶಾಲೆಗೆ ನೀರು ಸರಬರಾಜು ನಡೆಯುತ್ತಿದೆ. ಮೂರು ಎಕರೆ ಜಾಗದಲ್ಲಿ ಮೈದಾನ, ಶಾಲೆಯ ಸುತ್ತಲೂ ತೊಂಡೆಕಾಯಿ, ಬಸಳೆ, ತೆಂಗಿನ ಮರಗಳನ್ನು ಬೆಳೆ ಸಲಾಗುತ್ತಿದೆ. ತರಕಾರಿಯನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಉಪ ಯೋಗಿಸಲಾಗುತ್ತಿದೆ. ಪ್ರತಿ ವರ್ಷವೂ ಶಾಲೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತುಳುನಾಡಿನ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಆಟಿದ ಕೂಟ, ಕೆಸರ್ಡೊಜಿ ದಿನ ಕಾರ್ಯಕ್ರಮ ನಡೆಸಲಾಗುತ್ತಿದೆ. ಅದಲ್ಲದೆ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ಕೂಡ ನೀಡಲಾಗುತ್ತಿದೆ.

ಅಭಿವೃದ್ಧಿ ಕಾಮಗಾರಿ ನಡೆದಿಲ್ಲ 
ಇಲ್ಲಿ ಅಕ್ಷರ ದಾಸೋಹ ಹಾಗೂ ಶೌಚಾಲಯ ಕಟ್ಟಡ ಹೊರತುಪಡಿಸಿ ಬೇರೆ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಪುರಾತನ ಕಟ್ಟಡ, ಹೆ‌ಂಚಿನ ಮಾಡು ಇಂದಿಗೂ ಇದೆ. ಮತ್ತೂಂದು ಕೊಠಡಿಯಲ್ಲಿ ಕಂಪ್ಯೂಟರ್‌ ತರಬೇತಿ, ಕನ್ನಡದ ಜತೆಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ. ಕಳೆದ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಇಲ್ಲಿನ ಮುಖ್ಯ ಶಿಕ್ಷಕ ಕುಂಞಿ ನಾಯ್ಕ ಹಾಗೂ ಶಾಲೆಯ ಸಂಚಾಲಕರಾಗಿ ಸಚಿನ್‌ ಅಡ್ವಾಯಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ರಾಜೇಂದ್ರ ರೈ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಕಂಪ್ಯೂಟರ್‌ ಶಿಕ್ಷಕಿ ಸಹಿತ ಗೌರವ
ಶಿಕ್ಷಕರಿಗೆ ಇಲ್ಲಿಯ ಖಾಯಂ ಶಿಕ್ಷಕರು ವೇತನ ನೀಡುತ್ತಿದ್ದಾರೆ.

ಮೂಲ ಸೌಲಭ್ಯಗಳ ಪೂರೈಕೆ
ಶಾಲೆಯ ಹಲವು ಮೂಲ ಸೌಲಭ್ಯ ಪೂರೈಸುವುದರೊಂದಿಗೆ ಅರ್ಥಪೂರ್ಣವಾಗಿ ಶತಮಾನೋತ್ಸವ ಸಂಭ್ರಮ ಆಚರಿಸಲು ಸಮಿತಿ ತೀರ್ಮಾನಿಸಿದೆ. ರಂಗಮಂದಿರ, ಆಫೀಸ್‌ ಕೊಠಡಿ, ಗ್ರೀನ್‌ ರೂಂ, ವಾಚನಾಲಯ, ಪ್ರಯೋಗಾಲಯ, ತರಗತಿ ಕೋಣೆಗಳಿಗೆ ಟೈಲ್ಸ್‌, ಶೌಚಾಲಯ ನಿರ್ಮಾಣ, ಕಂಪ್ಯೂಟರ್‌ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ, ಎಲ್‌.ಕೆ.ಜಿ. ಹಾಗೂ ಯು.ಕೆ.ಜಿ. ತರಗತಿ ಆರಂಭ, ಗೌರವ ಶಿಕ್ಷಕರಿಗೆ ಗೌರವಧನ ನೀಡುವ ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಶತಮಾನೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ.
ಕುಂಞ ನಾಯ್ಕ,
ಶಾಲಾ ಮುಖ್ಯ ಶಿಕ್ಷಕ

ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

1

Ratan Naval Tata: ರತನ್‌ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು

ಟೆಸ್ಟ್‌ ತಂಡದಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ಕ್ರಿಕೆಟ್‌ ನಲ್ಲಿ ಏನಾಗುತ್ತಿದೆ?

Pakistan Cricket: ಟೆಸ್ಟ್‌ನಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ತಂಡದಲ್ಲಿ ಏನಾಗುತ್ತಿದೆ?

Vijayalakshmi Darshan

Darshan; ವಿಜಯಲಕ್ಷ್ಮೀ ಪೋಸ್ಟ್‌ ವೈರಲ್: ದರ್ಶನ್‌ ಬಿಡುಗಡೆಯ ಸೂಚನೆ?

salman-khan

Mumbai: ಬಿಗ್‌ ಬಾಸ್‌ ಶೂಟಿಂಗ್‌ ಅರ್ಧದಲ್ಲೇ ಬಿಟ್ಟು ಆಸ್ಪತ್ರೆಗೆ ಧಾವಿಸಿದ ಸಲ್ಮಾನ್‌ ಖಾನ್

INDvsBAN: India’s young speedster Mayank Yadav joins the special record club

INDvsBAN: ವಿಶೇಷ ದಾಖಲೆ ಕ್ಲಬ್‌ ಸೇರಿದ ಭಾರತದ ಯುವ ವೇಗಿ ಮಯಾಂಕ್‌ ಯಾದವ್

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

27

Uppinangady: ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಬಸ್‌; ಚಾಲಕ ಸಾವು

9

Arrestted: ರೈಲು ನಿಲ್ದಾಣದಲ್ಲಿ ಹಲ್ಲೆ ಪ್ರಕರಣ; ನಾಲ್ವರ ಬಂಧನ

Sulya: ರಿಕ್ಷಾ ಚಾಲಕ ಆತ್ಮಹತ್ಯೆ

Sulya: ರಿಕ್ಷಾ ಚಾಲಕ ಆತ್ಮಹತ್ಯೆ

Bantwal: ಬಿ.ಸಿ.ರೋಡಿನ ವ್ಯಕ್ತಿ ಕುಸಿದು ಬಿದ್ದು ಮೃತ್ಯು

Bantwal: ಬಿ.ಸಿ.ರೋಡಿನ ವ್ಯಕ್ತಿ ಕುಸಿದು ಬಿದ್ದು ಮೃತ್ಯು

12

Subramanya: ಮನೆ ಮನೆಗೆ ಕೇರ್ಪಡ ದೇವಳದ ಹುಲಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1

Ratan Naval Tata: ರತನ್‌ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು

3-kottigehara

Kottigehara: ಕೌ ಗಾರ್ಡ್ ಗೆ ಬಿದ್ದು ಬೆಂಗಳೂರು ಪ್ರವಾಸಿಗನಿಗೆ ಗಾಯ

ಟೆಸ್ಟ್‌ ತಂಡದಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ಕ್ರಿಕೆಟ್‌ ನಲ್ಲಿ ಏನಾಗುತ್ತಿದೆ?

Pakistan Cricket: ಟೆಸ್ಟ್‌ನಿಂದ ಬಾಬರ್‌ಗೆ ಗೇಟ್‌ ಪಾಸ್;‌ ಪಾಕ್‌ ತಂಡದಲ್ಲಿ ಏನಾಗುತ್ತಿದೆ?

Vijayalakshmi Darshan

Darshan; ವಿಜಯಲಕ್ಷ್ಮೀ ಪೋಸ್ಟ್‌ ವೈರಲ್: ದರ್ಶನ್‌ ಬಿಡುಗಡೆಯ ಸೂಚನೆ?

1-kampli-1

Kampli- ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.