ಯೋಗಿ ದುನಿಯಾದಲ್ಲಿ ಒಂದು ಸುತ್ತು!
Team Udayavani, Oct 9, 2017, 9:00 PM IST
“ಲೂಸ್ ಮಾದ’ ಯೋಗಿ ಈಗ ಮದುವೆಯ ಮೂಡ್‌ನಲ್ಲಿದ್ದಾರೆ. ನವೆಂಬರ್ 2 ರಂದು ಅವರ ಗೆಳತಿ ಸಾಹಿತ್ಯ ಅವರ ಕೈ ಹಿಡಿಯಲಿರುವ ಯೋಗಿ, ಈಗಾಗಲೇ ಮದುವೆಯ ಆಹ್ವಾನ ಪತ್ರಿಕೆ ಹಂಚುವ ಉತ್ಸಾಹದಲ್ಲಿದ್ದಾರೆ. ಇದರ ಬೆನ್ನಲ್ಲೇ ಯೋಗಿ ಹೊಸ ಚಿತ್ರಗಳನ್ನೂ ಒಪ್ಪಿದ್ದಾರೆ. ಸದ್ದಿಲ್ಲದೆಯೇ ಆ ಚಿತ್ರದ ಚಿತ್ರೀಕರಣದಲ್ಲೂ ಬಿಜಿಯಾಗಿದ್ದಾರೆ. ಇನ್ನು, ಅವರು ಅಭಿನಯದ “ದುನಿಯಾ 2′ ಚಿತ್ರದ ಶೀರ್ಷಿಕೆಗೆ ಅಂಟಿಕೊಂಡಿದ್ದ ಗೊಂದಲಕ್ಕೆ ಈಗ ತೆರೆಬಿದ್ದಿದೆ.
ಕೊನೆಗೂ ಹೊಸದೊಂದು ಶೀರ್ಷಿಕೆ ಇಟ್ಟು, ಬಿಡುಗಡೆ ಮಾಡಲು ಮುಂದಾಗಿದ್ದಾರೆ ಯೋಗಿ. ಹೌದು, “ದುನಿಯಾ 2′ ಚಿತ್ರದ ಶೀರ್ಷಿಕೆಯ ಗೊಂದಲ ನಿವಾರಣೆಯಾಗಿದೆ. ಆ ಚಿತ್ರವೀಗ, “ಯೋಗಿ ದುನಿಯಾ’ ಎಂದು ನಾಮಕರಣ ಮಾಡಲಾಗಿದೆ. ಈ ಹೆಸರಲ್ಲೇ ಚಿತ್ರ ರಿಲೀಸ್ ಆಗಲಿದೆ ಎಂದು ವಿವರ ಕೊಡುತ್ತಾರೆ ಯೋಗಿ. ಇದರೊಂದಿಗೆ ಯೋಗಿ ಈಗಾಗಲೇ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ “ಲಂಬೋದರ’ ಎಂದು ನಾಮಕರಣ ಮಾಡಲಾಗಿದೆ.
ಚಿತ್ರಕ್ಕೆ “ಬಸವನಗುಡಿ, ಬೆಂಗಳೂರು’ ಎಂಬ ಅಡಿಬರಹವಿದೆ. ಕೃಷ್ಣರಾಜ್ ಈ ಚಿತ್ರದ ನಿರ್ದೇಶಕರು. ವಿಶ್ವೇಶ್ವರ್ ಹಾಗೂ ರಾಘವೇಂದ್ರ ಭಟ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಎಂಟು ದಿನಗಳ ಕಾಲ ಚಿತ್ರೀಕರಣವನ್ನೂ ಮುಗಿಸಿದ್ದಾರೆ ಯೋಗಿ. “ಲಂಬೋದರ’ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಈ ಹಿಂದೆ ಮೂಡಿಬಂದ “ಸಿದ್ಲಿಂಗು’ ಜಾನರ್‌ನ ಸ್ಟೋರಿ ಇಲ್ಲಿದೆ. ಕೊಂಚ ವಿಭಿನ್ನ ಪ್ರಯತ್ನ ಎನ್ನಬಹುದು ಎಂಬುದು ಯೋಗಿ ಮಾತು.
ಅರವಿಂದ್ ಕಶ್ಯಪ್ ಕ್ಯಾಮೆರಾ ಹಿಡಿದರೆ, ಕಾರ್ತಿಕ್ ಶರ್ಮ ಸಂಗೀತವಿದೆ. ಅಚ್ಯುತ್ ಕುಮಾರ್, ಅರುಣ ಬಾಲರಾಜ್, ಧರ್ಮಣ್ಣ ಇತರರು ನಟಿಸುತ್ತಿದ್ದಾರೆ. ಯೋಗಿ ಇಲ್ಲಿ ನಾಯಕರಾದರೆ, ಅವರಿಗೆ ಆಕಾಂಕ್ಷ ನಾಯಕಿಯಾಗಿ ಕಾಣಿಸಿಕಕೊಳ್ಳುತ್ತಿದ್ದಾರೆ. ಹೊಸ ತಂಡ, ಹೊಸತನದ ಕಥೆಯೊಂದಿಗೆ ಚಿತ್ರ ಶುರುಮಾಡಿದೆ. ಸದ್ಯಕ್ಕೆ ಮದುವೆಯ ಓಡಾಟದಲ್ಲಿ ಬಿಜಿಯಾಗಿರುವ ಯೋಗಿ, ತಮ್ಮ ಮದುವೆ ಬಳಿಕ “ಯೋಗಿ ದುನಿಯಾ’ ಚಿತ್ರವನ್ನು ರಿಲೀಸ್ ಮಾಡಲಿದ್ದಾರಂತೆ. ಅದಾದ ಬಳಿಕ ಇನ್ನೂ ಎರಡು ಕಥೆಗಳನ್ನು ಒಪ್ಪಿದ್ದು, ಆ ಕುರಿತು ಮಾತುಕತೆ ನಡೆಯುತ್ತಿದೆ.
ಹೊಸ ಹುಡುಗ ಶಿವು ಎಂಬುವವರು, ಪಕ್ಕಾ ಕಮರ್ಷಿಯಲ್ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಅದಕ್ಕೆ ಶಿವಮೊಗ್ಗ ಮೂಲದವರು ನಿರ್ಮಾಪಕರು. ಅದು ಯೋಗಿ ಅವರ ವೃತ್ತಿ ಜೀವನದಲ್ಲಿ ಬೇರೆ ರೀತಿಯ ಚಿತ್ರವಾಗಲಿದೆಯಂತೆ. ಈ ನಡುವೆ ನವೆಂಬರ್ 2 ರಂದು ನಡೆಯಲಿರುವ ಅವರ ವಿವಾಹಕ್ಕೆ ಅಭಿಮಾನಿಗಳಿಗೂ ಆಹ್ವಾನ ಇಟ್ಟಿದ್ದಾರೆ. ಎಲ್ಲರೂ ಬರಬಹುದು. ಎಲ್ಲರಿಗೂ ಒಂದೇ ರೀತಿಯ ವ್ಯವಸ್ಥೆ ಇರಲಿದೆ. ಯಾವ ವಿಷಯದಲ್ಲೂ ಅಭಿಮಾನಿಗಳನ್ನು ಕಡೆಗಣಿಸುವುದಿಲ್ಲ ಎಂಬುದು ಯೋಗಿ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.