ದೆಹಲಿಯಲ್ಲಿ ಪಟಾಕಿ ನಿಷೇಧ: ಸುಪ್ರೀಂ ತೀರ್ಪು


Team Udayavani, Oct 10, 2017, 6:30 AM IST

Ban-court-800-10.jpg

ನವದೆಹಲಿ: ದೆಹಲಿ ಹಾಗೂ ಎನ್‌ಸಿಆರ್‌ ಪ್ರದೇಶಗಳಲ್ಲಿ ಅ.31ರ ವರೆಗೆ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿ ಸುಪ್ರೀಂಕೋರ್ಟ್‌ ಸೋಮವಾರ ಆದೇಶ ಹೊರಡಿಸಿದೆ. 

ಸೆ.12 ರಂದು ಪಟಾಕಿಗಳ ಮೇಲಿನ ಮಾರಾಟಕ್ಕೆ ಅನುಮತಿ ನೀಡಲಾಗಿತ್ತಾದರೂ, ಇದೀಗ ದೀಪಾವಳಿ ಹಿನ್ನೆಲೆಯಲ್ಲಿ ಪುನಃ ನಿಷೇಧ ಆದೇಶ ಹೊರಡಿಸಲಾಗಿದೆ. ಸುಪ್ರೀಂ ಆದೇಶವನ್ನು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಬೆಂಬಲಿಸಿದೆ.

ದೀಪಾವಳಿ ಬಳಿಕ ಭಾರೀ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿರುವ ಹಿನ್ನೆಲೆ ಯಲ್ಲಿ ಈ ತೀರ್ಪು ನೀಡಲಾಗಿದೆ. ಆದರೆ ಈ ಆದೇಶ ಟ್ವಿಟರ್‌ನಲ್ಲಿ ಭಾರಿ ಮಾತಿನ ಸಮರಕ್ಕೆ ವೇದಿಕೆಯಾಗಿದೆ. ಲೇಖಕ ಚೇತನ್‌ ಭಗತ್‌ ಈ ಬಗ್ಗೆ ಟ್ವೀಟ್‌ ಮಾಡಿದ್ದು, “ಪಟಾಕಿಗಳಿಲ್ಲದೇ ಮಕ್ಕಳು ದೀಪಾವಳಿ ಆಚರಿಸುವುದು ಹೇಗೆ? ಮೊಹರಂನಲ್ಲಿ ರಕ್ತ ಹರಿಸುವುದನ್ನೂ ನಿಷೇಧಿ ಸುವ ಧೈರ್ಯವನ್ನು ಯಾಕೆ ತೋರುವುದಿಲ್ಲ? ದೀಪಾವಳಿಯಲ್ಲಿ ಪಟಾಕಿ ನಿಷೇಧಿಸುವುದು ಕ್ರಿಸ್‌ಮಸ್‌ನಲ್ಲಿ ಕ್ರಿಸ್‌ಮಸ್‌ ಟ್ರೀ ನಿಷೇಧಿಸು ವುದಕ್ಕೆ ಮತ್ತು ಬಕ್ರೀದ್‌ನಲ್ಲಿ ಕುರಿ ನಿಷೇಧಿಸು ವುದಕ್ಕೆ ಸಮನಾಗಿದೆ. ನಿಷೇಧದ ಬದಲಿಗೆ ನವೀನ ಚಿಂತನೆಗಳನ್ನು ಪ್ರೋತ್ಸಾಹಿಸಿ’ ಎಂದು ಹೇಳಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದು, “ದೀಪಾವಳಿ ದೀಪಗಳ ಹಬ್ಬ. ಪಟಾಕಿ ನಮ್ಮ ಸಂಸ್ಕೃತಿ ಎಂದು ಪರಿಗಣಿಸಬೇಡಿ’ ಎಂದಿದ್ದಾರೆ.

1000 ಕೋಟಿ ರೂ. ನಷ್ಟ! 
ಸುಪ್ರೀಂಕೋರ್ಟ್‌ ನಿರ್ಧಾರ ತಮಿಳು ನಾಡಿನ ಶಿವಕಾಶಿಗೆ ಭಾರಿ ಹೊಡೆತ ನೀಡಲಿದೆ. ಇಲ್ಲಿನ ಪಟಾಕಿ ತಯಾರಕರಿಗೆ ಸುಮಾರು 1000 ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಲಿದೆ ಎನ್ನಲಾಗಿದೆ. ದೀಪಾವಳಿ ಸಮಯದಲ್ಲೇ ನಮಗೆ ಲಾಭ ಸಿಗುತ್ತದೆ. ಪಟಾಕಿಯಿಂದ ವರ್ಷದಲ್ಲಿ ಒಂದೇ ದಿನ ಮಾಲಿನ್ಯವಾಗುತ್ತದೆ. ಆದರೆ ವಾಹನಗಳಿಂದ ದಿನದ 24 ಗಂಟೆಯೂ ಮಾಲಿನ್ಯ ಉಂಟಾಗುತ್ತದೆ. ಆದರೆ, ಈ ಬಗ್ಗೆ ಯಾರೂ ಯಾವುದೇ ಕ್ರಮ ಕೈಗೊಳ್ಳು ವುದಿಲ್ಲ ಎಂದು ಶಿವಕಾಶಿ ಪಟಾಕಿ ತಯಾರ ಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.