ಕಾಶ್ಮೀರದಲ್ಲಿ ಎನ್ ಕೌಂಟರ್; ಭಗ್ನ ಪ್ರೇಮಕ್ಕೆ ಉಗ್ರ ಬಲಿ

Team Udayavani, Oct 10, 2017, 6:00 AM IST

umer-khalid-terrorist.jpg

ಶ್ರೀನಗರ: ಸೇನಾ ಶಿಬಿರಗಳ ಮೇಲೆ ದಾಳಿ ಸೇರಿದಂತೆ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಕಮಾಂಡರ್‌ವೊಬ್ಬನನ್ನು ಸೋಮವಾರ ಭದ್ರತಾ ಪಡೆಗಳು ಹತ್ಯೆಗೈದಿವೆ. ಕಣಿವೆ ರಾಜ್ಯದಲ್ಲಿ ಇಂತಹ ಎನ್‌ಕೌಂಟರ್‌ಗಳೇನೂ ಹೊಸತಲ್ಲ. ಆದರೆ, ಸೋಮವಾರ ನಡೆದ ಪಾಕಿಸ್ತಾನಿ ನಾಗರಿಕ, ಉಗ್ರ ಉಮರ್‌ ಖಾಲಿದ್‌ ಎನ್‌ಕೌಂಟರ್‌ನಲ್ಲೊಂದು ಇಂಟರೆಸ್ಟಿಂಗ್‌ ಸ್ಟೋರಿ ಮತ್ತು ಸಖತ್‌ ಟ್ವಿಸ್ಟ್‌ ಇದೆ.

ಹೌದು, ಇದೊಂದು “ಲವ್‌, ಸೆಕ್ಸ್‌ ಮತ್ತು ಧೋಕಾ’ದ ಕತೆ. ಜೈಶ್‌ ಕಮಾಂಡರ್‌ ಉಮರ್‌ ಖಾಲಿದ್‌ನ ಎನ್‌ಕೌಂಟರ್‌ ಹಿಂದಿನ ಘಟನೆಗಳ ಎಳೆಗಳನ್ನು ಬಿಡಿಸುತ್ತಾ ಹೋದರೆ, “ಇದೇನು ಬಾಲಿವುಡ್‌ ಸಿನಿಮಾದ ಕತೆಯೇ’ ಎಂಬ ಪ್ರಶ್ನೆ ಮೂಡದೇ ಇರದು. ಉಗ್ರ ಖಾಲಿದ್‌ನ ಹತ್ಯೆಯ ಹಿಂದೆ ಭಗ್ನ ಪ್ರೇಮವೊಂದು ಕೆಲಸ ಮಾಡಿದೆ. ಕಾಶ್ಮೀರದ 20ರ ಆಸುಪಾಸಿನ ಯುವತಿಯೊಬ್ಬಳ ಆಕ್ರೋಶದ ಬೆಂಕಿಯು ಉಮರ್‌ನನ್ನು ಸುಟ್ಟುಹಾಕಿದೆ.

ಅವನು ಸಾಯಬೇಕು ಅಷ್ಟೆ: ಕಳೆದ ವರ್ಷ ನೇರವಾಗಿ ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್‌ ಅಧಿಕಾರಿಯ ಕಚೇರಿಗೆ ಆಗಮಿಸಿದ್ದ ಯುವತಿಯು ಹೇಳಿದ್ದಿಷ್ಟು  “ಉಮರ್‌ ಖಾಲಿದ್‌ ಸಾಯಬೇಕು. ನನಗೆ ಬೇಕಾಗಿರುವುದು ಅಷ್ಟೆ. ಅವನಿರುವ ಜಾಗಕ್ಕೆ ನಾನು ನಿಮ್ಮನ್ನು ಕರೆದೊಯ್ಯುತ್ತೇನೆ. ನಂತರದ ಕೆಲಸವನ್ನು ನೀವು ಮುಗಿಸಿಬಿಡಿ.’ ಹೀಗೆಂದು ಹೇಳಿದ ಯುವತಿಯ ನಿಷ್ಠುರ ಹಾಗೂ ಆಕ್ರೋಶಭರಿತ ಮಾತುಗಳನ್ನು ಕೇಳಿ ಅಲ್ಲಿದ್ದ ಪೊಲೀಸರೇ ದಂಗಾಗಿದ್ದರು. ಬೇರೇನೂ ಯೋಚಿಸಲು ಹೋಗದೇ “ಓಕೆ ಡನ್‌’ ಎಂದು ತಲೆಯಾಡಿಸಿದ್ದರು.

ಆಕೆಯ ಕೋಪಕ್ಕೆ ಕಾರಣವೇನು?: ಇಲ್ಲೇ ಇರುವುದು “ರಿಯಲ್‌ ಪ್ರೇಮ ಕತೆ’. ಉಮರ್‌ ಖಾಲಿದ್‌ನನ್ನು ಕೊಲ್ಲಲು ಬಯಸಿದ್ದ ಆ ಯುವತಿ ಬೇರಾರೂ ಅಲ್ಲ. ಅವನ ಗರ್ಲ್ಫ್ರೆಂಡ್‌. ಆತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವಳು. ಇವರಿಬ್ಬರ ಪ್ರೇಮದ ಫ‌ಲವಾಗಿ ಆಕೆಯ ಗರ್ಭದಲ್ಲಿ ಕೂಸು ಹುಟ್ಟುವುದರಲ್ಲಿತ್ತು. ವಿಷಯ ತಿಳಿದೊಡನೆ ಖುಷಿಯಿಂದ ತೇಲಾಡಿದ್ದ ಆಕೆ ಉಮರ್‌ನತ್ತ ಧಾವಿಸಿ, “ನೀನು ನನ್ನ ಮಗುವಿಗೆ ಅಪ್ಪನಾಗುತ್ತಿದ್ದೀಯ’ ಎಂದು ಹೇಳಿ ಸಂಭ್ರಮಿಸಿದ್ದಳು. ಆದರೆ, ಅವನ ಪ್ರತಿಕ್ರಿಯೆ ಬಗ್ಗೆ ಅವಳ ನಿರೀಕ್ಷೆ ಸುಳ್ಳಾಗಿತ್ತು. “ನನಗೂ ನಿನ್ನ ಹೊಟ್ಟೆಯಲ್ಲಿರುವ ಮಗುವಿಗೂ ಯಾವುದೇ ಸಂಬಂಧವಿಲ್ಲ’ ಎಂದು ಕಡ್ಡಿಮುರಿದಂತೆ ಹೇಳಿ ತೆರಳಿದ್ದ. ಆಕೆಯ ಹೃದಯ ಚೂರಾಗಿತ್ತು. ನಂತರ, ಈ ವಿಷಯ ಮನೆಯವರಿಗೆ ಗೊತ್ತಾದರೆ ಸಮಸ್ಯೆಯಾದೀತು ಎಂದು ಅಂಜಿದ ಆಕೆ, ಪಂಜಾಬ್‌ನ ಜಲಂಧರ್‌ಗೆ ತೆರಳಿ ಗರ್ಭಪಾತ ಮಾಡಿಸಿಕೊಂಡಿದ್ದಳು. ಭ್ರೂಣವನ್ನು ಹತ್ಯೆಗೈದು ವಾಪಸ್‌ ಬರುತ್ತಲೇ, “ಉಮರ್‌ ಖಾಲಿದ್‌ನನ್ನು ನಿರ್ನಾಮ ಮಾಡದೇ ವಿರಮಿಸುವುದಿಲ್ಲ’ ಎಂಬ ಶಪಥ ಮಾಡಿದ್ದಳು.

ಆಪರೇಷನ್‌ ಲವರ್‌ಬಾಯ್‌: ಕಳೆದ 8 ವರ್ಷಗಳಲ್ಲಿ ಹಲವು ಬಾರಿ ಜೈಶ್‌ ಕಮಾಂಡರ್‌ ಖಾಲಿದ್‌ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದ. ಲವರ್‌ಬಾಯ್‌ ಆಗಿದ್ದ ಆತ, ಸಾಯುವ ಸಮಯದಲ್ಲೂ ಮೂವರು ಗರ್ಲ್ಫ್ರೆಂಡ್‌ಗಳನ್ನು ಹೊಂದಿದ್ದ. ಕೆಲ ದಿನಗಳ ಹಿಂದೆ ಆ ಯುವತಿಯು ಮೊದಲೇ ತಿಳಿಸಿದಂತೆ, ಖಾಲಿದ್‌ನ ಚಲನವಲನಗಳು, ಆತ ಇರುವ ಪ್ರದೇಶ, ಹೆಚ್ಚಾಗಿ ಭೇಟಿ ನೀಡುವ ಸ್ಥಳ… ಇವೆಲ್ಲದರ ಬಗ್ಗೆ ಮಾಹಿತಿ ಕೊಟ್ಟಿದ್ದಳು. ಅದರಂತೆ, ಭದ್ರತಾ ಪಡೆಗಳು ಕಾರ್ಯಾಚರಣೆಗಿಳಿದಿದ್ದವು. 

ಆದರೂ, ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಆತ ಯಶಸ್ವಿಯಾಗಿದ್ದ. ಸೋಮವಾರ ಆತ ಸೋಪೋರ್‌ಗೆ ಭೇಟಿ ನೀಡುವ ಮಾಹಿತಿಯು ಯುವತಿಯ ಕಡೆಯಿಂದಲೇ ಸಿಕ್ಕಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ವಿಶೇಷ ಕಾರ್ಯಾಚರಣೆ ತಂಡ(ಎಸ್‌ಒಜಿ), ಅವನು ಸೋಪೋರ್‌ ತಲುಪುತ್ತಲೇ ಸುತ್ತುವರಿಯಿತು. ಕೂಡಲೇ ಉಗ್ರ ಖಾಲಿದ್‌ ಗುಂಡಿನ ಮಳೆಗರೆಯಲು ಆರಂಭಿಸಿದ. 4 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆದು, ಕೊನೆಯಲ್ಲಿ ಆತನನ್ನು ಹತ್ಯೆಗೈಯ್ಯಲಾಯಿತು. ಈ ಮೂಲಕ ಒಂದೆಡೆ, ಭಗ್ನ ಪ್ರೇಮಿಯ ಸೇಡೂ ತೀರಿತು, ಮತ್ತೂಂದೆಡೆ ಕಣಿವೆ ರಾಜ್ಯದ ಉಗ್ರ ಕಮಾಂಡರ್‌ವೊಬ್ಬನ ಕತೆಯೂ ಅಂತ್ಯವಾಯಿತು.

ಎನ್‌ಕೌಂಟರ್‌: ಯೋಧ ಹುತಾತ್ಮ
ಜಮ್ಮು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಸೋಮವಾರ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಉಗ್ರರ ಗುಂಡಿಗೆ ಸುಬೇದಾರ್‌ ರಾಜ್‌ಕುಮಾರ್‌ ಬಲಿಯಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ತದನಂತರ, ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲೂ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

ಟಾಪ್ ನ್ಯೂಸ್

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.