ಶಿಕ್ಷಕರ ಮಕ್ಕಳಿಗೆ ಸರಕಾರಿ ಶಾಲೆ ಕಡ್ಡಾಯವಿಲ್ಲ
Team Udayavani, Oct 11, 2017, 9:30 AM IST
ಬೆಳ್ತಂಗಡಿ: “ಸರಕಾರಿ ಶಾಲಾ ಶಿಕ್ಷಕರು ಕಡ್ಡಾಯವಾಗಿ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು ಎಂದು ಸರಕಾರಕ್ಕೆ ಸಮಿತಿಯೊಂದರಿಂದ ವರದಿಯಲ್ಲಿ ಶಿಫಾರಸು ಸಲ್ಲಿಕೆಯಾದ್ದೇನೋ ನಿಜ. ಆದರೆ ಅದನ್ನು ಜಾರಿಗೆ ತರುವುದಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಮಕ್ಕಳ ಶಿಕ್ಷಣದ ಆಯ್ಕೆಯ ಹಕ್ಕು ಪೋಷಕರದ್ದಾಗಿರುತ್ತದೆ’ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, “ಮುಂದಿನ ವರ್ಷದಿಂದ ಹೋಬಳಿಗೊಂದು ಸರಕಾರಿ ಪಬ್ಲಿಕ್ ಶಾಲೆ ತೆರೆದು ಖಾಸಗಿಗೆ ಸಡ್ಡು ಹೊಡೆಯುವಂತೆ ಶಿಕ್ಷಣ ನೀಡಲಾಗುವುದು. ಶಿಕ್ಷಕರಿಗೆ ವೇತನವಾಗದೇ ಡಿಡಿಪಿಐ, ಬಿಇಒಗೆ ವೇತನವಾಗಬಾರದು ಎಂದು ಆದೇಶ ನೀಡಲಾಗಿದೆ. ಅಲ್ಲದೆ, ಶಿಕ್ಷಕರಿಗೆ ನಿವೃತ್ತಿಗೆ ಮುನ್ನ 3 ಬಡ್ತಿ ಕಡ್ಡಾಯ ಮಾಡಲಾಗಿದೆ’ ಎಂದರು. “ಶಿಕ್ಷಣ ಕಿರಣ’ ಮೂಲಕ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿದ್ದು ಇದನ್ನೇ ಎಸ್ಸೆಸ್ಸೆಲ್ಸಿ ಬೋರ್ಡಿಗೂ ನೀಡಲಾಗಿದೆ. ಮುಂದಿನ ವರ್ಷ ಕೆಎಸ್‌ಆರ್‌ಟಿಸಿಗೂ ನೀಡಲಾಗುತ್ತಿದ್ದು ಮುಖ್ಯ ಶಿಕ್ಷಕರು ನಮೂದಿಸಿದ ವಿದ್ಯಾರ್ಥಿಗೆ ಶಾಲೆಗೇ ಬಸ್ ಪಾಸ್ ಬರಲಿದೆ. ಕೆಎಸ್‌ಆರ್‌ಟಿಸಿ ಕೌಂಟರ್‌ನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.