ತಿಪ್ಪೆಯಲ್ಲಿ ಸಿಕ್ಕಿದ್ದ ಮಗು ಅಮೆರಿಕಕ್ಕೆ ದತ್ತು ಪಕ್ಕಾ
Team Udayavani, Oct 11, 2017, 10:01 AM IST
ಬೆಳಗಾವಿ: ಮೂರೂವರೆ ವರ್ಷಗಳ ಹಿಂದೆ ತಿಪ್ಪೆಯಲ್ಲಿ ಸಿಕ್ಕಿದ್ದ ಅನಾಥ ಮಗುವನ್ನು ಅಮೆರಿಕಕ್ಕೆ ದತ್ತು ನೀಡಲು ಧಾರವಾಡ ಹೈಕೋರ್ಟ್ ಹಸಿರು ನಿಶಾನೆ ತೋರಿದ್ದು, ಇನ್ನು ಕೆಲವೇ ದಿನಗಳಲ್ಲಿ ಅನಾಥ ಮಗು ವಿದೇಶಕ್ಕೆ ತೆರಳಲಿದೆ. ಮಗುವನ್ನು ಅಮೆರಿಕಕ್ಕೆ ದತ್ತು ನೀಡಲು ಧಾರವಾಡ ಹೈಕೋರ್ಟ್ ಪೀಠದ ನ್ಯಾ. ಶ್ರೀನಿವಾಸ ಹರೀಶಕುಮಾರ ಮಂಗಳವಾರ ಆದೇಶ ಹೊರಡಿಸಿದರು. ನಗರದ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲ ಕಲ್ಯಾಣ ಕೇಂದ್ರದ ಅನಾಥ ಆಶ್ರಮದಲ್ಲಿ ವಾಸಿಸುತ್ತಿರುವ ಮಗು ಕೆಲವೇ ದಿನಗಳಲ್ಲಿ ಅಮೆರಿಕಕ್ಕೆ ದತ್ತು ಹೋಗಲಿದೆ ಎಂದು “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.
ನಾಲ್ಕು ಮಕ್ಕಳವರೆಗೆ ದತ್ತು ಅವಕಾಶ: 3-4 ದಿನಗಳಿಂದ ವಾದ ಆಲಿಸಿದ ಹೈಕೋರ್ಟ್ ಪೀಠ ಮಗುವನ್ನು ದತ್ತು ನೀಡಲು ಒಪ್ಪಿಗೆ ನೀಡಿದೆ. ಈ ಮೊದಲು ಮಗುವನ್ನು ಆನಿವಾಸಿ ಭಾರತೀಯ ದಂಪತಿಗೆ ನೀಡಲು ಬೆಳಗಾವಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರಾಕರಿಸಿತ್ತು. ಈಗಾಗಲೇ ಒಂದು ಹೆಣ್ಣು ಮಗುವನ್ನು ದತ್ತು ಪಡೆದ ದಂಪತಿಗೆ ಮತ್ತೆ ಎರಡನೇ ಹೆಣ್ಣು ಮಗು ಏಕೆ ಎಂದು ಪ್ರಶ್ನಿಸಿ ಆದೇಶ ನೀಡಲು ಒಪ್ಪಿಗೆ ಸೂಚಿಸಿರಲಿಲ್ಲ. ಆದೇಶ ಪ್ರಶ್ನಿಸಿ ಗಂಗಮ್ಮ ಚಿಕ್ಕುಂಬಿಮಠ ಬಾಲ ಕಲ್ಯಾಣ ಕೇಂದ್ರ ಹೈಕೋರ್ಟ್ ಮೆಟ್ಟಿಲೇರಿತ್ತು. ಯಾವುದೇ ದಂಪತಿ ನಾಲ್ಕು ಮಗುವಿನವರೆಗೆ ದತ್ತು ಪಡೆಯಲು ಅವಕಾಶವಿದೆ. ಹೀಗಾಗಿ ಎರಡನೇ ಮಗುವನ್ನು ದತ್ತು ನೀಡಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖೀಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.