ಜೈವಿಕ ಉದ್ಯಾನವನದಲ್ಲಿ ಹಾರುವ ಹೂಗಳ ಲೋಕ


Team Udayavani, Oct 11, 2017, 11:21 AM IST

Butterfly-Spirit-Animal-5.jpg

ಬೆಂಗಳೂರು: ಮೈ ತುಂಬ ಬಣ್ಣಬಣ್ಣ ದ ಆಕರ್ಷಕ ಚಿತ್ತಾರ ಹೊದ್ದಿರುವ ಚಿಟ್ಟೆಗಳು ಎಲ್ಲರನ್ನು ಆಕರ್ಷಿಸುತ್ತವೆ. ನಾಲ್ಕು ರೀತಿಯ ಜೀವನ ಕ್ರಮ ಹೊಂದಿರುವ ಚಿಟ್ಟೆಗಳ ಚಲನವಲನವೇ ನೋಡಲು ಅತ್ಯಂತ ಮನಮೋಹಕವಾಗಿರುತ್ತವೆ.

ರಾಜ್ಯ ಅರಣ್ಯ ಇಲಾಖೆ ಮತ್ತು ಬೆಂಗಳೂರು ಚಿಟ್ಟೆ ಕ್ಲಬ್‌ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿಟ್ಟೆಗಳ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಮೂಲಕ ಚಿಟ್ಟೆಗಳ ಜೀವನ, ವಾಸಿಸುವ ವಿಧಾನ ಇತ್ಯಾದಿ ಸೇರಿದಂತೆ ಅವುಗಳಿಗೆ ಸಂಬಂಧಿಸಿದ ಹತ್ತಾರು ಕುತೂಹಲಕಾರಿ ಅಂಶಗಳನ್ನು ತೆರೆದಿಡಲಾಗಿದೆ.

ಚಿಟ್ಟೆಯ ಜಾಡು ಹಿಡಿಯಲು ಉದ್ಯಾನವನದ ಸುತ್ತಲೂ ಒಂದು ದಿನದಲ್ಲೇ ಚಿಟ್ಟೆ ತಜ್ಞರು ಹಾಗೂ ಪರಿಸರ ಪ್ರೇಮಿಗಳನ್ನು ಒಳಗೊಂಡಿರುವ 10 ತಂಡಗಳು ಈ ಸರ್ವೇ ನಡೆಸಿವೆ. 97 ಪ್ರಭೇದದ ಚಿಟ್ಟೆಗಳ ಜತೆಗೆ ಒಂಟಿಯಾಗಿ ಹಾರಾಡುವ ಸುಮಾರು 5200 ಚಿಟ್ಟೆಗಳನ್ನು ಗುರುತಿಸಲಾಗಿದೆ.

ಚಿಟ್ಟೆಗಳ ಸಂತತಿ: ಯಾವ ಪ್ರಭೇದಕ್ಕೆ ಸೇರಿದ ಚಿಟ್ಟೆ ಅತಿ ಹೆಚ್ಚು ಪ್ರಮಾಣದಲ್ಲಿದೆ ಎಂಬುದನ್ನು ಸಮೀಕ್ಷೆ ವೇಳೆ ಕಲೆಹಾಕಲಾಗಿದೆ. ಒರಿಯೆಂಟಲ್‌ ಲೆಮನ್‌ ಎಮಿಗ್ರೆಂಟ್‌ ಹೆಸರಿನ 639 ಚಿಟ್ಟೆಗಳು, ಒರಿಯಂಟಲ್‌ ಕಾಮನ್‌ ಗ್ರಾಸ್‌ ಯೆಲ್ಲೋ 438, ರೆಡ್‌ ಲೈನ್‌ ಸ್ಮಾಲ್‌ ಗ್ರಾಸ್‌ ಯೆಲ್ಲೋ 377, ಇಂಡಿಯನ್‌ ಪಿಯೋನಿಯರ್‌ 332, ಒರಿಯಂಟಲ್‌ ಕಾಮನ್‌ ಲಿಯೋಪಡ್‌ ಹೆಸರಿನ 261 ಚಿಟ್ಟೆ ಪತ್ತೆಯಾಗಿದೆ.

ಹಾಗೆಯೇ ವಿವಿಧ ಪ್ರಭೇದಕ್ಕೆ ಸೇರಿದ ಚಿಟ್ಟೆಗಳು ಕುಟುಂಬವಾರು ಪತ್ತೆಯಾಗಿದೆ. ಹೆಸ್ಪರೈಡೀ ಪ್ರಭೇದದ 195, ಲೈಸಿನಿಡೀ ಪ್ರಭೇದದ 709, ನಿಂಪ್ಯಾಲಿಡೀ ಪ್ರಭೇದದ 1209, ಪ್ಯಾಪಿಲಿಯೋನಿಡೀ ಪ್ರಭೇದದ 366 ಹಾಗೂ ಪಯೇರಿಡೀ ಪ್ರಭೇದಕ್ಕೆ ಸೇರಿದ 2715 ಚಿಟ್ಟಿಗಳನ್ನು ಒಳಗೊಂಡಂತೆ 5194 ಚಿಟ್ಟೆಗಳು ಒಂಟಿಯಾಗಿ ಹಾರಾಡುತ್ತಿರುವುದು ಕಂಡುಬಂದಿದೆ. ರಿಯಾಡಿನಿಡೀ ಪ್ರಭೇದಕ್ಕೆ ಸೇರಿದ ಒಂದೇ ಒಂದು ಚಿಟ್ಟೆ ಸಿಕ್ಕಿಲ್ಲ.

ಚಿಟ್ಟೆಗಳ ವಲಸೆ: ಹವಾಮಾನದ ವೈಪರಿತ್ಯ ಹಾಗೂ ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಚಿಟ್ಟೆಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ಹಾಗೆಯೇ ಬೇರೆ ಬೇರೆ ಪ್ರದೇಶದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೂ ಚಿಟ್ಟೆಗಳು ಬರುತ್ತಿರುತ್ತವೆ. ಭಾರತೀಯ ಚಿಟ್ಟೆಗಳಾದ ಕಾಮನ್‌ ಕ್ರೌವ್‌, ಬಡಲ್‌ ಬ್ರಾಂಡೆಡ್‌ ಕ್ರೌವ್‌, ಬ್ಲೂ ಟೈಗರ್‌ ಮತ್ತು ಡಾರ್ಕ್‌ ಟೈಗರ್‌ ಚಿಟ್ಟೆಗಳು ಮಾನ್ಸೂನ್‌ ಮೊದಲು ಪಶ್ಚಿಮ ಘಟ್ಟದಿಂದ ವಲಸೆ ಬರುತ್ತವೆ. ಸೆಪ್ಟೆಂಬರ್‌- ಅಕ್ಟೋಬರ್‌ನಲ್ಲಿ ವಾಪಾಸ್‌ ಅಲ್ಲಿಗೆ ಹೋಗುತ್ತವೆ. ಅಲ್ಬೋಟ್ರೋಸ್‌ ಚಿಟ್ಟೆಗಳು ಪ್ರತಿವರ್ಷ ಜನವರಿಯಲ್ಲಿ ಪಶ್ಚಿಮ ಘಟ್ಟದಿಂದ ವಲಸೆ ಬರುತ್ತದೆ.

ಚಿಟ್ಟೆಯ ಜೀವನಚಕ್ರ: ಚಿಟ್ಟೆಗಳು ಲೆಪಿಡೊಪ್ಟೆರಾ ಆರ್ಡರ್ಗೆ ಕೀಟ ಪ್ರಭೇದಕ್ಕೆ ಸೇರಿದವು. ಇವುಗಳಿಗೆ ಹುಟ್ಟುವಾಗ ರೆಕ್ಕೆಗಳು ಇರುವುದಿಲ್ಲ. ಮೊಟ್ಟೆಯೊಳಗಿನ ಗರ್ಭಾವಸ್ಥೆಯಿಂದ ಗೂಡುಕಟ್ಟುವವರೆಗೂ ಕೀಟದ ರೂಪದಲ್ಲಿ ಇರುತ್ತದೆ. ನಾಲ್ಕೈದು ವಾರದ ನಂತರ ಚಿಟ್ಟೆಯಾಗಿ ಮಾರ್ಪಾಟಾಗುತ್ತದೆ. ಬಹುತೇಕ ಚಿಟ್ಟೆಗಳು ಹಗಲಿನಲ್ಲಿ ಮಾತ್ರ ಕ್ರಿಯಾಶೀಲವಾಗಿರುತ್ತದೆ. ಚಿಟ್ಟೆಗಳು ಒಂದು ವಾರದಿಂದ ಒಂದು ವರ್ಷದ ಆಯಸ್ಸು ಹೊಂದಿರುತ್ತದೆ ಎಂಬುದು ಚಿಟ್ಟೆ ತಜ್ಞರ ಅಭಿಪ್ರಾಯ.

ರೆಕ್ಕೆ ರಚನೆಯಲ್ಲೂ ವ್ಯತ್ಯಾಸ: ಚಿಟ್ಟೆಗಳು ತಮ್ಮ ಬಣ್ಣಬಣ್ಣದ ರೆಕ್ಕೆಗಳಿಂದಲೇ ಪ್ರಸಿದ್ಧತೆ ಪಡೆದಿದೆ. ಚಿಟ್ಟೆಗಳ ರೆಕ್ಕೆಗಳು ಅವುಗಳ ಪ್ರಭೇದಕ್ಕೆ ಹೊಂದಿಕೊಂಡಂತೆ ಗಾತ್ರ, ಬಣ್ಣದ ವ್ಯತ್ಯಾಸ ಇರುತ್ತದೆ. ಚಿಟ್ಟೆಗಳು ಹಾರುವಾಗ ರೆಕ್ಕೆಯನ್ನು ಅರಳಿಸುತ್ತದೆ ಹಾಗೂ ಆಯಾಸವಾಗಿ ಕುಳಿತುಕೊಂಡಾಗ ರೆಕ್ಕೆಯನ್ನು ಸೇರಿಕೊಂಡು ಸಣ್ಣಕ್ಕೆ ಪಟಪಟನೆ ಹೊಡೆದುಕೊಳ್ಳುತ್ತಿರುತ್ತವೆ.

* ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.