ಪಾಕ್ ಪಲ್ಟಿ: ಲಂಕಾ 2-0 ಕ್ಲೀನ್‌ಸ್ವೀಪ್
Team Udayavani, Oct 11, 2017, 11:42 AM IST
ದುಬಾೖ: ದುಬಾೖಯಲ್ಲಿ ನಡೆದ ಡೇ-ನೈಟ್ ಟೆಸ್ಟ್ ಮುಖಾ ಮುಖೀಯಲ್ಲಿ ಪಾಕಿಸ್ಥಾನಕ್ಕೆ 68 ರನ್ನುಗಳ ಸೋಲುಣಿಸಿದ ಶ್ರೀಲಂಕಾ 2 ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧನೆಗೈದಿದೆ. ತನ್ನ ತವರನ್ನು ಯುಎ ಇಗೆ ವರ್ಗಾಯಿಸಿಕೊಂಡ ಬಳಿಕ ಪಾಕಿಸ್ಥಾನ ಇಲ್ಲಿ ಅನುಭವಿಸಿದ ಮೊದಲ ಸರಣಿ ಸೋಲು ಇದಾಗಿದೆ.
317 ರನ್ ಗುರಿ ಪಡೆದ ಪಾಕಿಸ್ಥಾನ 52ಕ್ಕೆ 5 ವಿಕೆಟ್ ಉದುರಿಸಿಕೊಂಡು 4ನೇ ದಿನವೇ ಸೋಲಿನ ಭೀತಿಗೆ ಸಿಲುಕಿತ್ತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಸದ್ ಶಫೀಕ್ ಮತ್ತು ನಾಯಕ ಸಫìರಾಜ್ ಅಹ್ಮದ್ ದಿಟ್ಟ ಹೋರಾಟ ವೊಂದನ್ನು ನಡೆಸಿದರು. ದಿನದಾಟದ ಅಂತ್ಯಕ್ಕೆ 5 ವಿಕೆಟಿಗೆ 198 ರನ್ ಮಾಡಿದ ಪಾಕಿಸ್ಥಾನಕ್ಕೂ ಗೆಲುವಿನ ಸಾಧ್ಯತೆ ಯೊಂದು ತೆರೆದುಕೊಂಡಿತು.
ಆದರೆ ಅಂತಿಮ ದಿನ ಪಾಕ್ ಸರಿಯಾಗಿ 50 ರನ್ ಸೇರಿಸಿ 248ಕ್ಕೆ ಆಲೌಟ್ ಆಯಿತು. ಆಫ್ಸ್ಪಿನ್ನರ್ ದಿಲುÅವಾನ್ ಪೆರೆರ 5 ವಿಕೆಟ್ ಕಿತ್ತು ಲಂಕಾ ಜಯವನ್ನು ಸಾರಿದರು.ಈ ನಡುವೆ ಅಸದ್ ಶಫೀಕ್ ಹೋರಾಟದ ಶತಕವೊಂದರ ಮೂಲಕ 112 ರನ್ ಬಾರಿ ಸಿದರು (176 ಎಸೆತ, 10 ಬೌಂಡರಿ). ಸಫìರಾಜ್ 68 ರನ್ ಮಾಡಿದರು (130 ಎಸೆತ, 5 ಬೌಂಡರಿ). ಇವರಿಬ್ಬರ 6ನೇ ವಿಕೆಟ್ ಜತೆಯಾಟದಲ್ಲಿ 173 ರನ್ ಬಂತು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ-482 ಮತ್ತು 96. ಪಾಕಿಸ್ಥಾನ-262 ಮತ್ತು 248 (ಶಫೀಕ್ 112, ಸಫìರಾಜ್ 68, ಪೆರೆರ 98ಕ್ಕೆ 5, ಹೆರಾತ್ 57ಕ್ಕೆ 2).
ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ: ದಿಮುತ್ ಕರುಣರತ್ನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.