ಕಾರಂತರ ನಿವಾಸ, ವಸ್ತು ಸಂಗ್ರಹಾಲಯ ಉದ್ಘಾಟನೆ


Team Udayavani, Oct 11, 2017, 11:51 AM IST

11-Mng–7.jpg

ಪುತ್ತೂರು : ಜ್ಞಾನಪೀಠ ಪುರಸ್ಕೃತ ಮೇರು ಸಾಹಿತಿ ಡಾ| ಶಿವರಾಮ ಕಾರಂತರ ಸಾಹಿತ್ಯ ತಪೋವನ, ಕರ್ಮಭೂಮಿ ಪುತ್ತೂರಿನ ಬಾಲವನವನ್ನು ಸಾಹಿತ್ಯ ಸಾಧಕರಾದ ಗೋವಿಂದ ಪೈ, ಕುವೆಂಪು ಅವರ ಸ್ಮಾರಕಗಳಂತೆ ‘ರಾಷ್ಟ್ರೀಯ ಸ್ಮಾರಕ’ ವಾಗಿಸುವ ಕೆಲಸ ಆಗಬೇಕು ಎಂದು ಸಂಸದ ಹಾಗೂ ಕಾದಂಬರಿಕಾರ ಎಂ. ವೀರಪ್ಪ ಮೊಲಿ ಅಭಿಪ್ರಾಯಪಟ್ಟರು.

ಪುತ್ತೂರು ಬಾಲವನದಲ್ಲಿ ಡಾ| ಶಿವರಾಮ ಕಾರಂತರ 115ನೇ ಜನ್ಮದಿನೋತ್ಸವ, ಪುನಶ್ಚೇತನಗೊಂಡ ಕಾರಂತರ ಮನೆ ಹಾಗೂ ಹಾಗೂ ಗ್ರಂಥ ಕೊಠಡಿ ಲೋಕಾರ್ಪಣೆ ನೆರವೇರಿಸಿ, ಕಾರಂತ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವಿಶ್ವಕೋಶ, ಬಾಲಪ್ರಪಂಚ ಮತ್ತು ವಿಜ್ಞಾನ ಪ್ರಪಂಚ ಕೃತಿಗಳನ್ನು ಆಧುನೀಕರಿಸುವ ಕೆಲಸ ಸರಕಾರದಿಂದ ನಡೆಯಬೇಕು. ಯಕ್ಷಗಾನವನ್ನು, ಬ್ಯಾಲೆಯನ್ನು ವರ್ತಮಾನದ ಬೆಳಕಿನಲ್ಲಿ ಜಗತ್ತಿಗೆ ನೀಡಿದ ಈ ಬಾಲವನ ದಲ್ಲಿ ಯಕ್ಷಗಾನ ಸಂಶೋ ಧನ ಕೇಂದ್ರ ನಿರ್ಮಾಣ ವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಾರಂತರಿಂದ ಬಾಲವನದಲ್ಲಿಯೇ ಸುಮಾರು 40 ಕೃತಿಗಳು ಹುಟ್ಟು ಪಡೆದಿವೆ. ಗದ್ಯ ಸಾಹಿತ್ಯಕ್ಕೆ ಕಾರಂತರ ಕೊಡುಗೆ
ಅಪಾರ. ಇಂದಿನ ಯುವ ಸಾಹಿತಿಗಳಿಗೆ ಕಾರಂತರು ಸ್ಪೂರ್ತಿ. ವೈಚಾರಿಕ ಪ್ರಜ್ಞೆಯನ್ನು ಉಳಿಸಿಕೊಂಡು ಬರೆದ ಕಾರಂತರು ನಾಸ್ತಿಕವಾದಿ, ಮೂಲ ಭೂತವಾದಿಯೂ ಅಲ್ಲ. ಅವರ ಕಾದಂಬರಿ ಗಳ ಮೇಲೆ ಪಾಶ್ಚಿಮಾತ್ಯ ದೇಶಗಳ ನೆರಳು ಬೀಳುವುದೇ ಇಲ್ಲ. ಅಂತಹ ಅದ್ಭುತ ಸಾಹಿತ್ಯ ಋಷಿ ಅವರಾಗಿದ್ದರು ಎಂದು ಬಣ್ಣಿಸಿದರು.

ಅಭಿವೃದ್ಧಿಗೆ ಕ್ರಮ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಬಾಲವನವನ್ನು ಜನಾಕರ್ಷಣೆಯ ಕೇಂದ್ರವನ್ನಾಗಿಸಲು ಈಗಾಗಲೇ ಹಲವಾರು ಕಾಮಗಾರಿ ನಡೆಸಲಾಗಿದೆ. ಕಾರಂತರು ಬದುಕಿ ಬಾಳಿದ ಈ ಬಾಲವನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಕೆಲಸ ಮಾಡಲಿದೆ. ಇದಕ್ಕೆ ಸಾರ್ವಜನಿಕ ವಲಯದಿಂದಲೂ ಸಹಕಾರವೂ ದೊರೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ  ಯಕ್ಷಗಾನ ಡಿಪ್ಲೊಮಾ ಕೋರ್ಸ್‌ ಆರಂಭಿಸುವ ಚಿಂತನೆಯಿದ್ದು, ಇದನ್ನು ಆರಂಭಿಸಿದಲ್ಲಿ ಪುತ್ತೂರಿನ ಕಾರಂತರ ಬಾಲವನಕ್ಕೆ ಮೊದಲ ಆದ್ಯತೆ ನೀಡಬೇಕು. ರಾಜ್ಯದಲ್ಲೇ ಪಡುಮಲೆ, ಬಾಲವನ ಅಭಿವೃದ್ಧಿಯೊಂದಿಗೆ ಪುತ್ತೂರು ತಾಲೂಕು ಅಧ್ಯಯನ ಕೇಂದ್ರ ಯೋಗ್ಯವಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು
ನಡೆಸಲಿದ್ದೇವೆ ಎಂದರು.

ತಾ. ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಪುಡಾ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ, ನಗರಸಭೆ ಸದಸ್ಯೆ ಜೆಸಿಂತಾ ಮಸ್ಕರೇನಸ್‌, ಬಾಲವನ ಈಜುಕೊಳ ಸಮಿತಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಬಾಲವನ ಸಮಿತಿಯ ಭವಾನಿಶಂಕರ್‌, ಎಸ್‌.ಕೆ. ಆನಂದ್‌, ಮಂಜುಳಾ ಭಾಸ್ಕರ್‌, ವಾರ್ತಾಧಿಕಾರಿ ಖಾದರ್‌ ಶಾ ಉಪಸ್ಥಿತರಿದ್ದರು.

ವೈದೇಹಿರಿಗೆ ಬಾಲವನ ಪ್ರಶಸ್ತಿ
ಸಭಾ ಕಾರ್ಯಕ್ರಮ ಆರಂಭದಲ್ಲಿ ಪುನಶ್ಚೇತನಗೊಂಡಿರುವ ಕಾರಂತರ ನಿವಾಸ ಲೋಕಾರ್ಪಣೆ ಮತ್ತು ಕಾರಂತರ
ವಸ್ತು ಸಂಗ್ರಹಾಲಯ ಉದ್ಘಾಟನೆ ನಡೆಯಿತು. ಅಪರಾಹ್ನ ವಿದ್ಯಾರ್ಥಿಗಳಿಂದ ವಿಚಾರಗೋಷ್ಠಿ, ಖ್ಯಾತ ಲೇಖಕಿ ವೈದೇಹಿ ಅವರಿಗೆ ಬಾಲವನ ಪ್ರಶಸ್ತಿ ಪ್ರದಾನ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರಂತರ ಕನಸು
ಕಾರಂತರ ಪುತ್ರಿ, ಒಡಿಸ್ಸಿ ನೃತ್ಯ ಕಲಾವಿದೆ ಕ್ಷಮಾ ರಾವ್‌ ಮಾತನಾಡಿ, ಕಾರಂತರ ಮೂಲ ದೃಷ್ಟಿಕೋನವನ್ನು ಇಟ್ಟುಕೊಂಡು ಅಭಿವೃದ್ಧಿ ಕೆಲಸ ನಡೆಯಬೇಕು. ಬಾಲವನದಲ್ಲಿ ಪ್ರಕೃತಿಯೊಂದಿನ ಪಾಠದ ಶಾಲೆ ಕಾರಂತರ ಕನಸಾಗಿತ್ತು. ಇಲ್ಲಿನ ಪ್ರಕೃತಿಯನ್ನು ಕಾರಂತ ಜೈವಿಕ ವನವಾಗಿ ನಿರ್ಮಿಸಿಬೇಕು. ಕಾರಂತರ ವಿವಿಧ ಚಿತ್ರಗಳ ಗ್ಯಾಲರಿ ನಿರ್ಮಿಸಿ ಅದಕ್ಕೆ ‘ಹುಚ್ಚು ಮನಸ್ಸಿನ ಹತ್ತು ಮುಖ’ಎಂಬ ಹೆಸರಿಡಬೇಕು ಎಂದರು.

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Uppinangady: ರಸ್ತೆ ಬದಿ ಬಿದ್ದ ಕಂಟೈನರ್‌ ಲಾರಿ

Uppinangady: ರಸ್ತೆ ಬದಿ ಬಿದ್ದ ಕಂಟೈನರ್‌ ಲಾರಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ

Shri Dharmasthala: ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ

Kumbra

Kukke: ಅಭಯ ಆಂಜನೇಯ ಗುಡಿಯಿಂದ ಕಳವು

missing

Missing Case: ಬೆಳ್ತಂಗಡಿ; ಯುವತಿ ಕಾಣೆ: ದೂರು ದಾಖಲು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.