ಆಸೀಸ್ ವೇಗಕ್ಕೆ ಭಾರತ ಪುಡಿಪುಡಿ
Team Udayavani, Oct 11, 2017, 11:58 AM IST
ಗುವಾಹಟಿ: ಆಸ್ಟ್ರೇಲಿಯದ ಎಡಗೈ ವೇಗಿ ಜಾಸನ್ ಬೆಹ್ರೆಂಡಾಫ್ì ದಾಳಿಗೆ ಬೆದರಿದ ಭಾರತ ಮಂಗಳವಾರದ ದ್ವಿತೀಯ ಟಿ-20 ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದೆ. ಇದರೊಂದಿಗೆ ಸರಣಿ 1-1 ಸಮಬಲಕ್ಕೆ ಬಂದಿದೆ. ನಿರ್ಣಾ ಯಕ ಪಂದ್ಯ ಅ. 13ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 118 ರನ್ನುಗಳ ಸಣ್ಣ ಮೊತ್ತಕ್ಕೆ ಆಲೌಟ್ ಆಯಿತು. ಜವಾಬಿತ್ತ ಆಸ್ಟ್ರೇಲಿಯ 15. 3 ಓವರ್‌ಗಳಲ್ಲಿ 2 ವಿಕೆಟಿಗೆ 122 ರನ್ ಬಾರಿಸಿ ಜಯ ಸಾಧಿಸಿತು. ವಾರ್ನರ್ ಮತ್ತು ಹೆನ್ರಿಕ್ಸ್ 13 ರನ್ ಆಗುವಷ್ಟರಲ್ಲಿ ವಾಪಸಾದರೂ ಮುರಿಯದ 3ನೇ ವಿಕೆಟಿಗೆ ಜತೆಗೂಡಿದ ಹೆನ್ರಿಕ್ಸ್ (62) ಮತ್ತು ಹೆಡ್ (48) ತಂಡವನ್ನು ಯಾವುದೇ ಒತ್ತಡವಿಲ್ಲದೆ ದಡ ಸೇರಿಸಿದರು.
ಆತಿಥೇಯರ ಅಗ್ರ ಕ್ರಮಾಂಕದ ಮೇಲೆ ಘಾತಕ ದಾಳಿ ನಡೆಸಿದ ಬೆಹ್ರೆಂಡಾಫ್ì 21 ರನ್ ವೆಚ್ಚದಲ್ಲಿ 4 ವಿಕೆಟ್ ಉಡಾಯಿಸಿ ಪಂದ್ಯಶ್ರೇಷ್ಠರೆನಿಸಿದರು. ಇದು ಗುವಾಹಟಿಯ “ಬರ್ಸಾಪಾರ ಸ್ಟೇಡಿಯಂ’ನಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯ. ಟಾಸ್ ಗೆದ್ದ ಆಸ್ಟ್ರೇಲಿಯದ ನಾಯಕ ಡೇವಿಡ್ ವಾರ್ನರ್ ರಾತ್ರಿಯ ಮಂಜಿಗೆ ಬೆದರಿ ನಿರೀಕ್ಷೆಯಂತೆ ಭಾರತಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟರು. ಇದರಲ್ಲಿ ಭರಪೂರ ಯಶಸ್ಸನ್ನೇ ಕಂಡರು. ಭಾರತಕ್ಕೆ ಆರಂಭಿಕ ಕುಸಿತದಿಂದ ಚೇತರಿ ಸಲು ಸಾಧ್ಯವಾಗಲೇ ಇಲ್ಲ. ಸ್ಪಿನ್ನರ್ ಆ್ಯಡಂ ಝಂಪ (19ಕ್ಕೆ 2), ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ (20ಕ್ಕೆ 1), ವೇಗಿ ನಥನ್ ಕೋಲ್ಟರ್ ನೈಲ್ (23ಕ್ಕೆ 1) ಬೌಲಿಂಗ್ ಆಕ್ರಮಣ ಕೂಡ ಬಿರುಸಿನಿಂದ ಕೂಡಿತ್ತು.
ಭಾರತದ ಪರ 27 ರನ್ ಮಾಡಿದ ಕೇದಾರ್ ಜಾಧವ್ ಅವರದೇ ಗರಿಷ್ಠ ಗಳಿಕೆ. 25 ರನ್ ಮಾಡಿದ ಹಾರ್ದಿಕ್ ಪಾಂಡ್ಯ ಅವರದು ಅನಂತರದ ಹೆಚ್ಚಿನ ಗಳಿಕೆ. ಮೊದಲ ಓವರಿನಲ್ಲೇ 2 ವಿಕೆಟ್! ಬೆಹೆಹ್ರೆಂಡಾಫ್ ಅವರ ಮೊದಲ ಓವರಿ ನಲ್ಲೇ 2 ವಿಕೆಟ್ ಬೀಳುವುದರೊಂದಿಗೆ ಟೀಮ್ ಇಂಡಿಯಾ ತೀವ್ರ ಸಂಕಟಕ್ಕೆ ಸಿಲುಕಿತು. 8 ರನ್ ಮಾಡಿದ ರೋಹಿತ್ ಶರ್ಮ 4ನೇ ಎಸೆತದಲ್ಲಿ ಲೆಗ್ ಬಿಫೋರ್ ಬಲೆಗೆ ಬಿದ್ದರೆ, ಅಂತಿಮ ಎಸೆತದಲ್ಲಿ ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯದೆ ಎದುರಾಳಿ ನಾಯಕ ವಾರ್ನರ್‌ಗೆ ಕ್ಯಾಚಿತ್ತು ವಾಪಸಾದರು. ಬೆಹ್ರೆಂಡಾಫ್ìಗೆ ವಿಕೆಟ್ ಒಪ್ಪಿಸುವ ಮುನ್ನ ರೋಹಿತ್ ಶರ್ಮ 2 ಬೌಂಡರಿಗಳ ರುಚಿ ತೋರಿಸಿದ್ದರು.
ಬೆಹ್ರೆಂಡಾಫ್ì ಅವರ ದ್ವಿತೀಯ ಓವರಿನಲ್ಲಿ ಪೆವಿಲಿಯನ್ ಸೇರುವ ಸರದಿ ಮನೀಷ್ ಪಾಂಡೆ ಅವರದಾಗಿತ್ತು. ಕೇವಲ 6 ರನ್ ಮಾಡಿದ ಪಾಂಡೆ ಕೀಪರ್ ಪೇನ್‌ಅವರಿಗೆ ಕ್ಯಾಚ್ ನೀಡಿದರು. ಮುಂದಿನ ಓವರಿನಲ್ಲಿ ಶಿಖರ್ ಧವನ್ (2) ವಿಕೆಟ್ ಹಾರಿಸಿದರು. ಅಲ್ಲಿಗೆ ಭಾರತ 27 ರನ್ನಿಗೆ 4 ವಿಕೆಟ್ ಉದುರಿಸಿಕೊಂಡಿತು.
ಜಾಧವ್ ಮತ್ತು ಧೋನಿ ಸೇರಿಕೊಂಡು 5ನೇ ವಿಕೆಟಿಗೆ ಒಂದಿಷ್ಟು ಹೋರಾಟ ಸಂಘಟಿಸಿ ಕುಸಿತಕ್ಕೆ ತಡೆಯಾದರು. ಇವರಿಬ್ಬರ ಜತೆಯಾಟದಲ್ಲಿ 33 ರನ್ ಒಟ್ಟುಗೂಡಿತು. 13 ರನ್ ಮಾಡಿದ ಧೋನಿಯನ್ನು ಸ್ಟಂಪಿಂಗ್ ಬಲೆಗೆ ಬೀಳಿಸಿದ ಝಂಪ ಈ ಜೋಡಿ ಯನ್ನು ಬೇರ್ಪಡಿಸಿದರು.
ಸ್ಕೋರ್‌ಪಟ್ಟಿ
ಭಾರತ
ರೋಹಿತ್ ಶರ್ಮ ಎಲ್‌ಬಿಡಬ್ಲ್ಯು ಬೆಹ್ರೆಂಡಾಫ್ì 8
ಶಿಖರ್ ಧವನ್ ಸಿ ವಾರ್ನರ್ ಬಿ ಬೆಹ್ರೆಂಡಾಫ್ì 2
ವಿರಾಟ್ ಕೊಹ್ಲಿ ಸಿ ಮತ್ತು ಬಿ ಬೆಹ್ರೆಂಡಾಫ್ì 0
ಮನೀಷ್ ಪಾಂಡೆ ಸಿ ಪೇನ್ ಬಿ ಬೆಹ್ರೆಂಡಾಫ್ì 6
ಕೇದಾರ್ ಜಾಧವ್ ಬಿ ಝಂಪ 27
ಎಂ.ಎಸ್. ಧೋನಿ ಸ್ಟಂಪ್ಡ್ ಪೇನ್ ಬಿ ಝಂಪ 13
ಹಾರ್ದಿಕ್ ಪಾಂಡ್ಯ ಸಿ ಕ್ರಿಸ್ಟಿಯನ್ ಬಿ ಸ್ಟೊಯಿನಿಸ್ 25
ಭುವನೇಶ್ವರ್ ಸಿ ಹೆನ್ರಿಕ್ಸ್ ಬಿ ನೈಲ್ 1
ಕುಲದೀಪ್ ಯಾದವ್ ಸಿ ಪೇನ್ ಬಿ ಟೈ 16
ಜಸ್‌ಪ್ರೀತ್ ಬುಮ್ರಾ ರನೌಟ್ 7
ಚಾಹಲ್ ಔಟಾಗದೆ 3
ಇತರ 10
ಒಟ್ಟು (20 ಓವರ್‌ಗಳಲ್ಲಿ ಆಲೌಟ್) 118
ವಿಕೆಟ್ ಪತನ: 1-8, 2-8, 3-16, 4-27, 5-60, 6-67, 7-70, 8-103, 9-115.
ಬೌಲಿಂಗ್:
ಜಾಸನ್ ಬೆಹ್ರೆಂಡಾಫ್ì 4-0-21-4
ನಥನ್ ಕೋಲ್ಟರ್ ನೈಲ್ 4-0-23-1
ಆ್ಯಂಡ್ರೂ ಟೈ 4-0-30-1
ಆ್ಯಡಂ ಝಂಪ 4-0-19-2
ಮಾರ್ಕಸ್ ಸ್ಟೊಯಿನಿಸ್ 4-0-20-1
ಆಸ್ಟ್ರೇಲಿಯ
ಆರನ್ ಫಿಂಚ್ ಸಿ ಕೊಹ್ಲಿ ಬಿ ಭುವನೇಶ್ವರ್ 8
ಡೇವಿಡ್ ವಾರ್ನರ್ ಸಿ ಕೊಹ್ಲಿ ಬಿ ಬುಮ್ರಾ 2
ಮೊಸಸ್ ಹೆನ್ರಿಕ್ಸ್ ಔಟಾಗದೆ 62
ಟ್ರ್ಯಾವಿಸ್ ಹೆಡ್ ಔಟಾಗದೆ 48
ಇತರ 2
ಒಟ್ಟು (15.3 ಓವರ್‌ಗಳಲ್ಲಿ 2 ವಿಕೆಟಿಗೆ) 122
ವಿಕೆಟ್ ಪತನ: 1-11, 2-13.
ಬೌಲಿಂಗ್:
ಭುವನೇಶ್ವರ್ ಕುಮಾರ್ 3-0-9-1
ಜಸ್‌ಪ್ರೀತ್ ಬುಮ್ರಾ 3-0-25-1
ಹಾರ್ದಿಕ್ ಪಾಂಡ್ಯ 2-0-13-0
ಕುಲದೀಪ್ ಯಾದವ್ 4-0-46-0
ಯಜುವೇಂದ್ರ ಚಾಹಲ್ 3.3-0-29-0
ಪಂದ್ಯಶ್ರೇಷ್ಠ: ಜಾಸನ್ ಬೆಹ್ರೆಂಡಾಫ್ì
3ನೇ ಟಿ-20 ಪಂದ್ಯ
ಅ. 13: ಹೈದರಾಬಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.