ಎನ್‌ಎಸ್‌ಎಸ್‌ನಿಂದ ಸಮಾಜಮುಖೀ ಕಾರ್ಯ
Team Udayavani, Oct 11, 2017, 12:11 PM IST
ಹುಣಸೂರು: ಎನ್‌ಎಸ್‌ಎಸ್ ಎಂದರೆ ಒಂದು ರಾಷ್ಟ್ರೀಯ ಚಳುವಳಿ, ಇಲ್ಲಿ ಭಾವೈಕ್ಯತೆ, ಜಾತ್ಯತೀತತೆ, ಸಮಾನತೆ, ಸಾಮಾಜಿಕ ನ್ಯಾಯ, ಗ್ರಾಮೀಣ ಬದುಕಿನ ಪರಿಚಯ ಸೇರಿದಂತೆ ಹಲವು ಮಜಲುಗಳನ್ನು ಪ್ರಸ್ತುತ ಪಡಿಸುವುದೇ ಆಗಿದೆ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ.ಎನ್.ಪೂಜಾರ್ ಅಭಿಪ್ರಾಯಪಟ್ಟರು.
ಹುಣಸೂರು ತಾಲೂಕಿನ ಹನಗೋಡಿನಲ್ಲಿ ಹುಣಸೂರು ಸರಕಾರಿ ಮಹಿಳಾ ಕಾಲೇಜು ವತಿಯಿಂದ ಆಯೋಜಿಸಿದ್ದ ಮೈಸೂರು ವಿವಿಯ ಜಿಲ್ಲಾ ಮಟ್ಟದ ಅಂತರ ಕಾಲೇಜುಗಳ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ಶಿಕ್ಷಣಕ್ಕೆಷ್ಟು ಶಕ್ತಿ ಇದೆಯೋ., ಅದಕ್ಕೆ ಪೂರಕವಾಗಿ ದೇಶಕಟ್ಟುವ, ರಾಷ್ಟ್ರಭಕ್ತಿ ಮೆರೆವ ರಾಷ್ಟ್ರೀಯ ಸೇವಾ ಯೋಜನೆಗೂ ಅಷ್ಟೇ ಪರಿಪೂರ್ಣ ವಿದ್ಯಾರ್ಥಿಗಳನ್ನು ಸಷ್ಟಿಸುವ ಶಕ್ತಿಯಿದೆ ಎಂಬುದು ಸಾಬೀತಾಗಿದೆ. 1969ರಲ್ಲಿ ಗಾಂಧೀಜಿ ಹುಟ್ಟು ಹಾಕಿದ ಎನ್‌ಎಸ್‌ಎಸ್ ಘಟಕವು ಕೇವಲ 37 ವಿವಿಗಳಲ್ಲಿ ಮಾತ್ರ ಆರಂಭಗೊಂಡಿತು, ಇಂದು ದೇಶದ 750 ವಿವಿಗಳಲ್ಲಿ 50ಲಕ್ಷ, ಕರ್ನಾಟಕದಲ್ಲಿ 5 ಲಕ್ಷ ಸ್ವಯಂ ಸೇವಕರಿದ್ದಾರೆ. ಈ ಯೋಜನೆಯು ಶಿಕ್ಷಣಕ್ಕೆ ತಳಪಾಯವಾಗಿದ್ದು ಎಲ್ಲರೂ ಇದರಲ್ಲಿ ತೊಡಗಿಕೊಳ್ಳಬೇಕು ಎಂದರು.
ಮೆಸೂರು ವಿವಿಯ ಉಪಕುಲಪತಿ ಪ್ರೋ ದಯಾನಂದ್ ಮಾನೆ ಮಾತನಾಡಿ ಗುಣಾತ್ಮಕ ಮತ್ತು ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ನೀಡುವ ಪರಿಸರ ಕಾಳಜಿ, ವ್ಯಕ್ತಿತ್ವ ವಿಕಸನಕ್ಕೆ ಮೆಟ್ಟಿಲಾಗಿರುವ ಎನ್‌ಎಸ್‌ಎಸ್, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸಮಾಜಮುಖೀ ಕಾರ್ಯಕ್ರಮ ಸೇರಿದಂತೆ ಎಲ್ಲವನ್ನು ಕಲ್ಪಿಸಿಕೊಡಲಿದೆ. ಇಂತಹ ಜಿಲ್ಲಾ ಮಟ್ಟದ ಶಿಬಿರವನ್ನು ಕಾಡಂಚಿನ ಪ್ರದೇಶದಲ್ಲಿ ಆಯೋಜಿಸುವ ಮೂಲಕ ಸ್ತುತ್ಯರ್ಹ ಕಾರ್ಯ ಮಾಡಲಾಗಿದೆ ಎಂದು ಪ್ರಶಂಸಿಸಿದರು.
ರಾಜ್ಯ ಮಟ್ಟದ ಶಿಬಿರ ಆಯೋಜಿಸಿ: ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ಎಚ್.ಪಿ.ಮಂಜುನಾಥ್ ವಿದ್ಯಾರ್ಥಿಗಳಲ್ಲಿ ಎಲ್ಲ ರಂಗವನ್ನು ಗೆಲ್ಲಿಸುವ ರಾಷ್ಟ್ರೀಯ ಸೇವಾ ಯೋಜನೆಯು ಮಾನವೀಯ ಮೌಲ್ಯಗಳನ್ನು ಬೆಳೆಸಲಿದೆ, ತಾವು ಕೂಡ ಎನ್‌ಎಸ್‌ಎಸ್ ವಿದ್ಯಾರ್ಥಿಯಾಗಿದ್ದೆ, ಆ ಮೂಲಕವೇ ನಾಯಕತ್ವ, ಸಮುದಾಯ ಸೇವಾ ಪರಿಕಲ್ಪನೆ ಅಳವಡಿಸಿಕೊಂಡಿದ್ದೇನೆ. ತಾಲೂಕಿನಲ್ಲಿ ರಾಜ್ಯ ಮಟ್ಟದ ಎನ್‌ಎಸ್‌ಎಸ್ ಶಿಬಿರ ನಡೆಸಲು ಅವಕಾಶ ಕಲ್ಪಿಸಿದ್ದೆ ಆದಲ್ಲಿ ನಡೆಸಲು ಉತ್ಸುಕರಾಗಿದ್ದೇವೆಂದರು.
ಸಂಶೋಧನೆಗೆ ಹೊಸ ಆಯಾಮ: ವಿವಿಯ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್ ಶಿಬಿರಾರ್ಥಿಗಳಲ್ಲಿ ಎನ್‌ಎಸ್‌ಎಸ್ ಒಳ್ಳೆ ವಿಚಾರಗಳನ್ನು ನಿಮ್ಮ ತಲೆಗೆ ತುಂಬಲಿದೆ, ಮನಪರಿವರ್ತನೆ ಮಾಡಲಿದೆ, ನಡವಳಿಕೆಯಲ್ಲಿ ಬದಲಾವಣೆಯನ್ನು ಕಾಣಿಸಲಿದೆ, ದುವರ್ತನೆಗಳು ದೂರವಾಗಲಿದೆ, ನೈತಿಕ ಶಕ್ತಿ ತುಂಬಲಿದೆ, ಮೌಲ್ಯವನ್ನು ಬಿತ್ತಲಿದೆ ಹೊಸ ಆಯಾಮ ಸಷ್ಠಿಸಲಿದೆ ಎಂದರು.
ಗ್ರಾಪಂ ಅಧ್ಯಕ್ಷ ಎಚ್.ಬಿ.ಮಧು, ತಾಪಂ ಸದಸ್ಯೆ ರೂಪಾ, ಜಿಪಂ ಮಾಜಿ ಸದಸ್ಯ ಸಿ.ಟಿ.ರಾಜಣ್ಣ, ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಜ್ಞಾನಪ್ರಕಾಶ್, ಸಲಹಾ ಸಮಿತಿ ಸದಸ್ಯ ಹನಗೋಡು ನಟರಾಜ್ ಮಾತನಾಡಿದರು. ಶಿಬಿರದ ಸಂಯೋಜಕ ಕೆ.ಎಸ್.ಬಾಸ್ಕರ್, ಸಹ ಶಿಬಿರಾಧಿಕಾರಿ ನಂಜುಂಡಸ್ವಾಮಿ ವಾರಕಾಲ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ತಾಪಂ ಸದಸ್ಯೆ ಮಂಜುಳಾ, ಗ್ರಾಪಂ ಸದಸ್ಯರಾದ ಇಮಿ¤ಯಾಜ್‌ಪಾಷ, ಪೂಜಾ, ಮಂಗಳ, ಕಾಲೇಜು ಸಿಡಿಸಿ ಸದಸ್ಯರಾದ ಗೋವಿಂದರಾಜಗುಪ್ತ, ಡಾ.ವೃಷಬೇಂದ್ರಪ್ಪ, ಪ್ರಾಂಶುಪಾಲ ವೆಂಕಟೇಶಯ್ಯ, ದಾ.ರಾ.ಮಹೇಶ್ ಇತರರಿದ್ದರು. ಉದ್ಘಾಟನಾ ಸಮಾರಂಭದ ಅಂಗವಾಗಿ ಇಡೀ ಗ್ರಾಮದಲ್ಲಿ ಜಾಥಾ ನಡೆಸಿದ ಸ್ವಯಂಸೇವಕರು, ಕಾರ್ಯಕ್ರಮಕ್ಕಾಗಮಿಸಿದ ಅತಿಥಿಗಳನ್ನು ಗ್ರಾಪಂ ಕಚೇರಿ ಬಳಿಯಿಂದ ವೀರಗಾಸೆ, ಡೊಳ್ಳುಕುಣಿತದೊಂದಿಗೆ ಮೆರವಣಿಗೆ ಮೂಲಕ ಗ್ರಾಮಸ್ಥರು ವೇದಿಕೆಗೆ ಕರೆತಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.