ಅಪ್ರಾಪ್ತ ವಯಸ್ಕ ಪತ್ನಿ ಜತೆ ಸೆಕ್ಸ್ ನಡೆಸಿದರೆ ಅತ್ಯಾಚಾರ
Team Udayavani, Oct 12, 2017, 6:35 AM IST
ಹೊಸದಿಲ್ಲಿ: ಅಪ್ರಾಪ್ತ ವಯಸ್ಸಿನ ಪತ್ನಿ ಜತೆಗೆ ಲೈಂಗಿಕ ಸಂಪರ್ಕ ನಡೆಸಿದರೆ ಅದನ್ನು ಅತ್ಯಾಚಾರವೆಂದೇ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪಿತ್ತಿದೆ. ಈ ಮೂಲಕ ಸಮ್ಮತಿ ಸೆಕ್ಸ್‌ಗೆ ಕಾನೂನು ಬದ್ಧ ವಯಸ್ಸು
18 ಎಂದು ನ್ಯಾಯಾಲಯ ನಿಗದಿಪಡಿಸಿದಂತಾಗಿದೆ. ಮದುವೆಯಾದ ಒಂದು ವರ್ಷದೊಳಗೆ ಅಪ್ರಾಪ್ತ ವಯಸ್ಸಿನ ಪತ್ನಿಯ ಜತೆ ಬಲವಂತಾಗಿ ಲೈಂಗಿಕ ಸಂಪರ್ಕ ನಡೆಸಲಾಗಿದೆ ಎಂದು ಆಕೆ ದೂರು ನೀಡಿದರೆ ಪೊಲೀಸರು ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ನ್ಯಾ| ಎಂ.ಬಿ.ಲೋಕುರ್ ಮತ್ತು ನ್ಯಾ| ದೀಪಕ್ ಗುಪ್ತಾ ನೇತೃತ್ವದ ನ್ಯಾಯಪೀಠ ಹೇಳಿದೆ. ವಿವಾಹವಾದ ಬಳಿಕ ಪತ್ನಿಯ ಜತೆಗೆ ಪತಿ ಬಲವಂತವಾಗಿ ನಡೆಸುವ ದೇಹ ಸಂಪರ್ಕವನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಬೇಕು ಎಂದು ಒತ್ತಾಯ ಕೇಳಿ ಬರುತ್ತಿರುವಂತೆಯೇ ಸುಪ್ರೀಂಕೋರ್ಟಿನ ಈ ತೀರ್ಪು ಮಹತ್ವದ್ದಾಗಿದೆ.
ಸದ್ಯ ಇರುವ ಕಾನೂನಿನಲ್ಲಿ ವೈರುಧ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಭಾರತೀಯ ದಂಡಸಂಹಿತೆ ಪರಿಚ್ಛೇದ 375ರ ಅಡಿಯಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ಪತ್ನಿಯ ಜತೆ ಸೆಕ್ಸ್ ಅನ್ನು ಅತ್ಯಾಚಾರ ಎಂದು ಪರಿಗಣಿಸುವಂತಿಲ್ಲ ಎಂದು ಉಲ್ಲೇಖೀಸಲಾಗಿದೆ. ಹೀಗಾಗಿ 15 ರಿಂದ 18 ವರ್ಷದವರೆಗಿನ ಬಾಲಕಿಯರನ್ನು ವಿವಾಹ ವಾಗುವುದು ಕಾನೂನ ಮಾನ್ಯತೆಯನ್ನು ಹೊಂದಿದಂದಾ ತಾಗುತ್ತದೆ. ಆದರೆ ಎಲ್ಲ ಕಾನೂನುಗಳಲ್ಲೂ ವಿವಾಹದ ಕನಿಷ್ಠ ವಯಸ್ಸು 18 ಆಗಿದೆ. ಈ ಗೊಂದಲ ಕಾನೂನು ತೊಡಕಿಗೆ ಕಾರಣವಾಗಿದೆ. ವೈರುಧ್ಯವನ್ನು ನಿವಾರಿಸುವ ದೃಷ್ಟಿಯಿಂದ ಸುಪ್ರೀಂಕೋರ್ಟ್‌ನ ಈ ಆದೇಶ ಮಹತ್ವದ್ದಾಗಿದೆ.
ಸಾಮಾಜಿಕ ನ್ಯಾಯ ಕಾನೂನುಗಳಿಗೆ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತಿಲ್ಲ. ಹಲವು ವರ್ಷಗಳಿಂದಲೂ ಈ ವೈರುಧ್ಯ ಚಾಲ್ತಿಯಲ್ಲಿದೆ. ಅಲ್ಲದೆ ಇದು ಸಂವಿಧಾನದ 14, 15 ಮತ್ತು 21ನೇ ಪರಿಚ್ಛೇದಕ್ಕೂ ವಿರುದ್ಧವಾಗಿದೆ. ಬಾಲ್ಯ ವಿವಾಹವನ್ನು ತಡೆಯಲು ಕೇಂದ್ರ ಸರಕಾರ ಕಠಿನ ಕ್ರಮಕೈಗೊಳ್ಳಬೇಕಿದೆ ಎಂದು ನ್ಯಾ| ಎಂ.ಬಿ. ಲೋಕೂರ್ ಮತ್ತು ನ್ಯಾ| ದೀಪಕ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಸುಮಾರು 2.3 ಕೋಟಿ ಬಾಲವಧುಗಳು ಇದ್ದಾರೆ. ಅವರ ಹಿತರಕ್ಷಣೆಯ ಹಿನ್ನೆಲೆ ಯಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ಮಹತ್ವದ್ದಾಗಿದೆ.
ಕರ್ನಾಟಕಕ್ಕೆ ಶ್ಲಾಘನೆ
ಮದುವೆಯಾಗುವ ವರನ ವಯಸ್ಸು 21ರೊಳಗೆ ಹಾಗೂ ವಧುವಿನ ವಯಸ್ಸು 18ರೊಳಗಿದ್ದರೆ ಅಂಥ ಮದುವೆ ಸಿಂಧುವಲ್ಲ ಎಂದು ಕರ್ನಾಟಕ ರಾಜ್ಯ ಸರಕಾರ ತಂದಿರುವ ಕಾನೂನಿನ ಬಗ್ಗೆ ಸುಪ್ರೀಂ ಮೆಚ್ಚುಗೆ ವ್ಯಕ್ತಪಡಿಸಿ, ಇತರ ರಾಜ್ಯಗಳೂ ಇಂಥ ಕಾನೂನು ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಪ್ರತ್ಯೇಕವಾಗಿ 57 ಪುಟಗಳ ತೀರ್ಪಿನಲ್ಲಿ ನ್ಯಾ| ಗುಪ್ತಾ ಮದುವೆಯೇ ಅಸಿಂಧು ಎಂದಾದ ಮೇಲೆ ಪತ್ನಿ ಅಥವಾ ಪತಿ ಎಂಬ ಸಂಬಂಧದ ಮಾತೇ ಇಲ್ಲ.
7 ವರ್ಷ ಜೈಲು ಶಿಕ್ಷೆ
ಈ ಆದೇಶದಿಂದಾಗಿ 15ಕ್ಕಿಂತಲೂ ಹೆಚ್ಚಿನ ವಯಸ್ಸಿನ ಅಪ್ರಾಪ್ತರನ್ನು ವಿವಾಹವಾದರೆ ಬಾಲ್ಯ ವಿವಾಹ ಕಾಯ್ದೆ ಅಡಿಯಲ್ಲಿ ಶಿಕ್ಷೆಯ ಜತೆಗೆ ಅಪ್ರಾಪೆ¤ಯನ್ನು ಅತ್ಯಾಚಾರ ನಡೆಸಿದ್ದಕ್ಕೆ ಭಾರತೀಯ ದಂಡ ಸಂಹಿತೆ ಅಡಿಯಲ್ಲೂ ಶಿಕ್ಷೆ ವಿಧಿಸಲಾಗುತ್ತದೆ. ಹೀಗಾಗಿ ಕನಿಷ್ಠ ಏಳು ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ. ಈ ಬಗ್ಗೆ ಅಪ್ರಾಪೆ¤ ಸ್ವತಃ ದೂರು ನೀಡಬಹುದು ಅಥವಾ ಅಪ್ರಾಪೆ¤ಯ ಪರವಾಗಿ ಇತರರು ದೂರು ನೀಡಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.