ಸೆಲ್ಫಿ ತೆಗೆಯೋಣ ಬನ್ನಿ
Team Udayavani, Oct 13, 2017, 6:35 AM IST
ಭೂಮಿ ಮೇಲೆ ಹೇಗೆ ಸೆಲ್ಫಿ ಹುಚ್ಚು ಇದೆಯೋ ಹಾಗೇ ಅಂತರಿಕ್ಷಯಾನದಲ್ಲಿಯೂ ಸೆಲ್ಫಿ ಕ್ಲಿಕ್ಕಿಸಿ ಬರುವುದು ಸಾಮಾನ್ಯ ಆಗಿ ಬಿಟ್ಟಿದೆ. ಮನುಷ್ಯ ಸೆಲ್ಫಿ ತೆಗೆದ್ರೆ ಆಶ್ಚರ್ಯ ಪಡಬೇಕಾಗಿಲ್ಲ, ಅಮೆರಿಕದಲ್ಲಿ ನಾಸಾ ಮಂಗಳಗ್ರಹಕ್ಕೆ ಕಳಿಸಿದಂಥ ಕ್ಯೂರಿಯಾಸಿಟಿ ರೋವರ್ ಅಲ್ಲಿ ಅಡ್ಡಾಡೋ ಹೊತ್ತಿಗೆ ತನ್ನ ಸೆಲ್ಫಿ ತೆಗೆದು ಕಳಿಸಿಕೊಟ್ಟಿತ್ತಂತೆ.
ಎಸ್‌ಎಸ್‌ಎಲ್‌ಸಿ ಮುಗಿಯುತ್ತಿದ್ದ ಹಾಗೆ, ಈಗಿನ ಮಕ್ಳು ಬ್ಯಾಗ್ ಬೇಕು, ಕೊಡೆ ಬೇಕು ಅನ್ನೋ ಕಾಲ ಹೋಗಿ ಬಿಟ್ಟಿದೆ. ಈಗ ಶಾಲೆ ಮುಗಿದ್ರೆ ಸಾಕು, ಪಿಯುಸಿಗೆ ಸೇರೋವಾಗ ಮನೆಯಲ್ಲಿ ಮೊಬೈಲ್ ಬೇಕು ಅನ್ನೋ ಹಠ ಹಿಡಿದು ಕೂತುಬಿಡೋ ಜಾಯಮಾನ ಆಗಿ ಬಿಟ್ಟಿದೆ. ಈಗ ಆಧುನಿಕತೆ ಬದಲಾಗ್ತಾ ಸೆಲ್ಫಿ ಅನ್ನೋ ಟ್ರೆಂಡ್‌ಗೆ ವಾಲಿ ಬಿಟ್ಟಿದೆ. ಜನತೆ ಸೆಲ್ಫಿ ಜೊತೆ ಸೇರಿ ಮಾನವೀಯತೆಯನ್ನು ಮರೆತುಬಿಡುತ್ತಿದ್ದಾರೆ ಏನೋ ಅನ್ನಿಸುತ್ತಿದೆ. ದೇಶದ ಉನ್ನತ ಹುದ್ದೆಯಿಂದ ಹಿಡಿದು ಪುಟ್ಟ ಮಕ್ಕಳವರೆಗೂ ಸೆಲ್ಫಿಯದ್ದೇ ಹವಾ. ದಿನದಲ್ಲಿ ಹೆಚ್ಚಿನ ಕಾಲ ಸೆಲ್ಫಿಯಲ್ಲೇ ಮುಳುಗಿ ಹೋಗುತ್ತದೆ.
ಹಿಂದೆ ಪುಟ್ಟ ಮಗು ಊಟ ಮಾಡಿಲ್ಲ ಅಂದ್ರೆ ಬೆಳದಿಂಗಳ ಚಂದಿರನ ತೋರಿದ್ರೆ ಮಗುವಿಗೆ ಊಟ ಮಾಡಿಸುತ್ತಿದ್ದರು ಅಮ್ಮಂದಿರು. ಆದ್ರೆ ಈಗ ಮಗು ಊಟ ಮಾಡಿಲ್ಲ ಅಂತ ಹಠ ಹಿಡಿದ್ರೆ ಮೊಬೈಲ್‌ನಲ್ಲಿ ತನ್ನ ಮುಖನಾ ತೋರಿದ್ರೆ ಆ ಮಗುವಿಗೆ ತಾನು ಊಟಮಾಡಿದ್ದೇ ಗೊತ್ತಾಗಲ್ಲ. ಅಂದ್ರೆ ಕಂದಮ್ಮಗಳಿಗೂ ಸೆಲ್ಫಿ ಬಗ್ಗೆ ಅತೀ ಮೋಹ ಉಂಟಾಗ್ತಾ ಇದೆ ಅಲ್ವ !
ಇನ್ನೂ ಸೆಲ್ಫಿನಾ ಯಾವ ಯಾವ ಕಡೆಯಿಂದ ನಿಂತು ತೆಗೆದ್ರೆ ಹೇಗೆ ಬರುತ್ತೆ ಅನ್ನೋದು ಚಿಂತೆ. ಜನ ಸೆಲ್ಫಿ ಕಡೆ ವಾಲಿದ್ದಾರೋ, ಅಲ್ಲ ಸೆಲ್ಫಿ ಜನ ಕಡೆ ವಾಲಿದೆಯೋ ಗೊತ್ತಾಗ್ತಾ ಇಲ್ಲ.
ಸಮಾಜ ಎಷ್ಟು ಬದಲಾಗಿದೆ ಅಂದ್ರೆ ಕಣ್ಣ ಎದುರಲ್ಲಿ ಟ್ಯಾಂಕರ್ ಹೊತ್ತಿ ಉರೀತಾ ಇದ್ರು ಜನ ಫೋಟೋ ತೆಗೆಯೋದ್ರಲ್ಲಿ ಬಿಝಿಯಾಗಿ, ನಾನು ತೆಗ ಫೋಟೋನೆ ವಾಟ್ಸಾಪ್‌ಲ್ಲಿ ಮೊದು ಅಪ್‌ಡೇಟ್ ಆಗ್ಬೇಕು, ಫೇಸುಕ್‌ನಲ್ಲಿಯೂ ನನ್ ಫೋಟೋಗೆ ಹೆಚ್ಚು ಲೈಕ್ ಬರ್ಬೇಕು ಅಂತೆಲ್ಲ ಯೋಚೆ°ಯಲ್ಲಿ ಇರ್ತಾರೆ. ಅವ್ರ ಎಲ್ಲಾ ಕೆಲ್ಸ ಮುಗಿದ್ ಮೇಲೆ ಬೇಕಿದ್ರೆ “ಏನಾದ್ರೂ ಆಯ್ತಾ?’ ಎಂದು ಕೇಳಲು ಬರ್ತಾರೆ. ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡವರು ತುಂಬ ಜನ. ಪ್ರಾಣಿಗಳ ಮುಂದೆ ಸೆಲ್ಫಿ ತೆಗೆಯಲು ಹೋಗಿ ಅದರ ಬಾಯಿಗೆ ಆಹಾರವಾಗಿ ಹೋದವರೂ ಇದ್ದಾರೆ, ಇನ್ನು ಜಲಪಾತ ನೋಡಲು ಹೋಗಿ ನೀರು ಜೊತೆ ಹರಿದು ಹೋದವರೂ ಕಮ್ಮಿಯಿಲ್ಲ, ಸೆಲ್ಫಿ ಒಳಗಡೆ ಎಷ್ಟರ ಮಟ್ಟಿಗೆ ಹೋಗಿಬಿಡುತ್ತಾರೆ ಅಂದ್ರೆ ಇತ್ತೀಚೆಗೆ ನಡೆದ ಘಟನೆ ನೆನಪಿಗೆ ಬರುತ್ತದೆ. ಕಲ್ಯಾಣಿಯಲ್ಲಿ ಹುಡುಗ ನೀರಿನಲ್ಲಿ ಮುಳುಗಿದಾಗ ಆ ದೃಶ್ಯ ಹೇಗೋ ಅವನ ಸ್ನೇಹಿತರ ಸೆಲ್ಫಿ ಒಳಗಡೆ ಸೆರೆಯಾಗ್ತಾ ಇದ್ದು ಸೆಲ್ಫಿ ಗುಂಗಿನಲ್ಲಿ ಮುಳುಗಿದ್ದ ಫ್ರೆಂಡ್ಸ್‌ಗೆ ಅದು ಗೊತ್ತೇ ಆಗಲಿಲ್ಲ. ಸೆಲ್ಫಿ ಸಾವಿನಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳೊ ದೇಶ ಅಂದರೆ ಅದು ನಮ್ಮ ಭಾರತವೇ.
ಇನ್ನೂ ಮುಂದಿನ ದಿನಗಳಲ್ಲಿ ಮನೆಯಲ್ಲಿ ಪ್ರಾಣ ಹೋಗಿರೋ ವ್ಯಕ್ತಿಯ ಚಿತೆಯ ಮುಂದೆ ಸೆಲ್ಫಿ ತೆಗೆದು ಜಾಲತಾಣಗಳಲ್ಲಿ ಅದಕ್ಕೆ ಸರಿದೂಗೋ ಕಮೆಂಟ್‌ಗಳನ್ನು ಹಾಕಿಟ್ಟು ಎಷ್ಟು ಲೈಕ್ ಬರುತ್ತವೆ ಅಂತ ಕಾದು ನೋಡೋ ಪರಿಸ್ಥಿತಿ ಬರಬಹುದು ಅನ್ನಿಸುತ್ತೆ.
ಸೆಲ್ಫಿ ಕ್ಲಿಕ್ಕಿಸುವಾಗ ಮೊಬೈಲನ್ನು ಕೈಯಲ್ಲಿ ತಮಗೆ ಬೇಕಾದ ರೀತಿಯಲ್ಲಿ ಹಿಡಿಯಲು ಕಷ್ಟ ಅನ್ನೋ ಚಿಂತೆಗೂ ಸೆಲ್ಫಿ ಸ್ಟಿಕ್‌ಗಳು ಬಂದಿವೆ. ಭೂಮಿ ಮೇಲೆ ಸೆಲ್ಫಿ ಹುಚ್ಚು ಹಿಡಿಸಿದಂತೆ ಇನ್ನು ಅಂತರಿಕ್ಷಯಾನದಲ್ಲಿಯೂ ಸೆಲ್ಫಿ ಕ್ಲಿಕ್ಕಿಸಿ ಬರುವುದು ಸಾಮಾನ್ಯ ಆಗಿ ಬಿಟ್ಟಿದೆ. ಮನುಷ್ಯ ಸೆಲ್ಫಿ ತೆಗೆದ್ರೆ ಆಶ್ಚರ್ಯ ಪಡಬೇಕಾಗಿಲ್ಲ, ಆದರೆ ಅಮೆರಿಕದಲ್ಲಿ ನಾಸಾ ಮಂಗಳಗ್ರಹಕ್ಕೆ ಕಳಿಸಿದಂಥ ಕ್ಯೂರಿಯಾಸಿಟಿ ರೋವರ್ ಅಲ್ಲಿ ಅಡ್ಡಾಡೋ ಹೊತ್ತಿಗೆ ತನ್ನ ಸೆಲ್ಫಿ ತೆಗೆದು ಕಳಿಸಿಕೊಟ್ಟಿತ್ತಂತೆ!ಸ್ವತಃ ಛಾಯಾಗ್ರಾಹಕನೇ ಸೆರೆಹಿಡಿದ ತನ್ನ ಸ್ವಂತ ಚಿತ್ರದ ಹೆಸರೇ ಸೆಲ್ಫಿ. ಛಾಯಾಗ್ರಹಣದ ಬೆಳವಣಿಗೆ ಆಗ್ತಾ ಇದ್ದ ಹಾಗೆ ಸೆಲ್ಫಿ ಎಂಬ ಹೆಸರು ಪ್ರಚಲಿತ ಆಗಿದ್ದು ಮಾತ್ರ ಈ ಶತಮಾನದ ಪ್ರಾರಂಭದಲ್ಲಿ ಎನ್ನಬಹುದು.
ಮೊದಲ ಸೆಲ್ಫಿಯು ಕ್ಲಿಕ್ ಆಗಿದ್ದು 1839ರಲ್ಲಿ ಎಂದು ಹೇಳಲಾಗುತ್ತದೆ.ಈ ಸೆಲ್ಫಿಯಿಂದ ಸಮಾಜ ಎಷ್ಟು ಹದಗೆಟ್ಟಿದೆ ಎಂದರೆ ಕ್ಲಿಕ್ ಮಾಡಿದ ಸೆಲ್ಫಿಯಲ್ಲಿ “ತಾನು ಚೆನ್ನಾಗಿ ಕಾಣಿಸುತ್ತಿಲ್ಲ, ನನಗೆ ಚಿಕಿತ್ಸೆ ನೀಡಿ’ ಎಂದು ಡಾಕ್ಟರ್ ಬಳಿ ಓಡುವವರೂ ಇದ್ದಾರೆ. ಒಳ್ಳೆಯ ಸೆಲ್ಫಿ ಬರಬೇಕೆಂದು ಅದಕ್ಕೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ವರದಿಯೂ ಸಿಗುತ್ತಿದೆ. ಈ ಸೆಲ್ಫಿ ಮನುಷ್ಯನ ಭಾವನೆಗಳಿಗೆ ಸವಾಲಾಗಿ ಮಾನಸಿಕ ತೊಂದರೆಗಳಿಗೆ ದಾರಿಯಾಗುತ್ತಿದೆ ಎಂದು ಹಲವು ತಜ್ಞರು ಹೇಳಿಕೊಂಡಿದ್ದಾರೆ.
ಈ ಸೆಲ್ಫಿ ಜೊತೆಗೆ “ವೆಲ್ಫಿ’ ಎಂಬುದು ಬಂದಿದೆ. ಪ್ರಸಿದ್ಧ ಸಿನೆಮಾ ಡೈಲಾಗ್‌ಗಳನ್ನು ಹೇಳುತ್ತ ರೆಕಾರ್ಡ್ ಮಾಡಿ ವಿಶ್ವವ್ಯಾಪಿ ಜಾಲತಾಣದಲ್ಲಿ ಹರಿದಾಡುವ ವಿಡಿಯೋಗಳು ಸಹ ಸೆಲ್ಫಿಗಳೇ ಆಗಿವೆ. “ಡಬ್ ಸ್ಮ್ಯಾಶ್’ ಎನ್ನುವ ಆ್ಯಪ್‌ಗೆ ಐದು ಕೋಟಿಗಿಂತ ಹೆಚ್ಚು ಬಳಕೆದಾರರು ಇದ್ದಾರೆ ಎಂಬುದು ತಿಳಿಯಬಹುದು.
ಈ ಸೆಲ್ಫಿ ಕ್ರೇಜ್‌ನಲ್ಲಿ ಇನ್ನೇನೆಲ್ಲ ಬರುತ್ತದೆಯೋ ಕಾದು ನೋಡಬೇಕಾಗಿದೆ.
– ದೀಕ್ಷಾ ಬಿ.,
ಎಸ್‌ಡಿಎಂ ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.