ಯಾರೇ ನೀ ನೀಳವೇಣಿ?


Team Udayavani, Oct 13, 2017, 6:30 AM IST

celebrities-hot-in-saree.jpg

ಬಹುದೊಡ್ಡ ಕಲ್ಯಾಣ ಮಂಟಪ. ಮದುಮಗನ ಸಹೋದರ ಸಂಬಂಧಿಗಳೆನಿಸಿಕೊಂಡ ಸಾಧಾರಣ 35ರ ಒಳಗಿನ ಯುವತಿಯರು ಹಾಗೂ ಪುಟ್ಟ ಪುಟ್ಟ ಹೆಣ್ಣು ಮಕ್ಕಳು ಒಂದೇ ರೀತಿಯಲ್ಲಿ ಅಲಂಕರಿಸಿಕೊಂಡಿದ್ದರು. ಜಡೆಯನ್ನು ಉದ್ದಕ್ಕೆ ಹೆಣೆದು, ಕುಚ್ಚು ಕಟ್ಟಿ , ಜಡೆಗೆ ಮೇಲಿನಿಂದ ಕೆಳಗಿನವರೆಗೂ ಜಡೆಬಿಲ್ಲೆಯಿಂದ ವಿನ್ಯಾಸಗೊಳಿಸಿದ್ದರು. ಜೊತೆಗೆ ಮಂಗಳೂರು ಮಲ್ಲಿಗೆಯನ್ನು ತಲೆಯ ಮೇಲ್ಭಾಗದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಮುಡಿದುಕೊಂಡಿದ್ದರು. ಜರತಾರಿ ಸೀರೆ, ಹೊಸ ನಮೂನೆಯ ರವಿಕೆ ತೊಟ್ಟು , ಕೈಯ ತುಂಬಾ ಮ್ಯಾಚಿಂಗ್‌ ಬಳೆ, ಹಣೆಗೆ ಹೊಂದುವಂಥ ಬೊಟ್ಟು , ಒಂದು ಕೈಗೆ ವಂಕಿ, ಸೊಂಟಕ್ಕೆ ಪಟ್ಟಿ , ಕುತ್ತಿಗೆ, ಕಿವಿಗಳಿಗೆ ಚಿನ್ನದ ಆಭರಣಗಳನ್ನು ಧರಿಸಿ ಬಹಳ ಸುಂದರವಾಗಿ ಶೋಭಿಸುತ್ತಿದ್ದರು. 

ಇತ್ತೀಚೆಗೆ ಹತ್ತಿರದ ಸಂಬಂಧಿಯೊಬ್ಬರ ಮದುವೆಗೆ ಹೋಗಿದ್ದೆವು. ಅವರದ್ದು ಅವಿಭಕ್ತ ಕುಟುಂಬ. ಮನೆಯಿಂದ ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು, ಮೊಮ್ಮಕ್ಕಳು ಹಾಗೆಯೇ ಮನೆಗೆ ಕಾಲಿಟ್ಟಿರುವ ಸೊಸೆಯಂದಿರು ಹೀಗೆ ಎಲ್ಲರೂ ಸೇರಿದರೆ ಸರಿಸುಮಾರು 100 ಜನರು ಸಮಾರಂಭಗಳಿಗೆ ಸಾಕ್ಷಿಯಾಗುತ್ತಾರೆ.

ಬಹುದೊಡ್ಡ ಕಲ್ಯಾಣ ಮಂಟಪ, ಮದುಮಗನ ಸಹೋದರ ಸಂಬಂಧಿಗಳೆನಿಸಿಕೊಂಡ ಸಾಧಾರಣ 35ರ ಒಳಗಿನ ಯುವತಿಯರು ಹಾಗೂ ಪುಟ್ಟ ಪುಟ್ಟ ಹೆಣ್ಣು ಮಕ್ಕಳು ಒಂದೇ ರೀತಿಯಲ್ಲಿ ಅಲಂಕರಿಸಿಕೊಂಡಿದ್ದರು. ಜಡೆಯನ್ನು ಉದ್ದಕ್ಕೆ ಹೆಣೆದು, ಕುಚ್ಚು ಕಟ್ಟಿ , ಜಡೆಗೆ ಮೇಲಿನಿಂದ ಕೆಳಗಿನವರೆಗೂ ಜಡೆಬಿಲ್ಲೆಯಿಂದ ವಿನ್ಯಾಸಗೊಳಿಸಿದ್ದರು. ಜೊತೆಗೆ ಮಂಗಳೂರು ಮಲ್ಲಿಗೆಯನ್ನು ತಲೆಯ ಮೇಲ್ಭಾಗದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಮುಡಿದುಕೊಂಡಿದ್ದರು. ಜರತಾರಿ ಸೀರೆ, ಹೊಸ ನಮೂನೆಯ ರವಿಕೆ ತೊಟ್ಟು , ಕೈಯ ತುಂಬಾ ಮ್ಯಾಚಿಂಗ್‌ ಬಳೆ, ಹಣೆಗೆ ಹೊಂದುವಂಥ ಬೊಟ್ಟು , ಒಂದು ಕೈಗೆ ವಂಕಿ, ಸೊಂಟಕ್ಕೆ ಪಟ್ಟಿ , ಕುತ್ತಿಗೆ, ಕಿವಿಗಳಿಗೆ ಚಿನ್ನದ ಆಭರಣಗಳನ್ನು ಧರಿಸಿ ಬಹಳ ಸುಂದರವಾಗಿ ಶೋಭಿಸುತ್ತಿದ್ದರು. ವಯ್ನಾರದಿಂದ ಬಳುಕುತ್ತಾ ಅತ್ತಿತ್ತ ಹೋಗುತ್ತಿದ್ದವರನ್ನೇ ಎಲ್ಲರೂ ಮತ್ತೂಮ್ಮೆ ನೋಡುತ್ತಿದ್ದರು. ಪುಟ್ಟಕಿಶೋರಿಯರಂತೂ ರೇಷ್ಮೆಯ ಲಂಗ ಪೋಲಕವನ್ನು ಧರಿಸಿ, ಬೈತಲೆ ಬೊಟ್ಟನ್ನು ಹಾಕಿಕೊಂಡು ಚಿಗರೆಮರಿಗಳಂತೆ ಅತ್ತಿಂದಿತ್ತ ಓಡಾಡುತ್ತಿದ್ದುದನ್ನು ನೋಡಲು ಆಪ್ಯಾಯಮಾನವಾಗಿತ್ತು.

“ಇrಟ್ರೆ ತೊಟ್ರೆ ಪುಟ್ಟಕ್ಕನೂ ಚಂದ’ ಎನ್ನುವ ಗಾದೆಯಿದೆ, ಅದಕ್ಕೇ ಹಿರಿಯರು ಹೇಳುತ್ತಿದ್ದುದು, “ಮನೆಗೊಂದು ಹೆಣ್ಣುಮಗು ಬೇಕೇ ಬೇಕು’ ಅಂತ. ಕಣ್ಣಿಗೆ ಬೇಕಾದ ಹಾಗೆ ತಮ್ಮ ಹೆಣ್ಣುಮಕ್ಕಳನ್ನು ಅಲಂಕರಿಸಿ ಕಣ್ತುಂಬಿಕೊಳ್ಳುತ್ತಾರೆ ಹೆತ್ತವರು. 

ನೀಳ ಜಡೆಯ ಹೆಣ್ಣು ಮಕ್ಕಳನ್ನು ನೋಡುತ್ತಿದ್ದಂತೆ ನನ್ನ ಮನಸ್ಸು ಅದೆಷ್ಟೋ ವರ್ಷಗಳ ಹಿಂದಕ್ಕೆ ನೆಗೆದಿತ್ತು. ಆಗಿನ್ನೂ ಎಂಟು ಅಥವಾ ಹತ್ತು ವರ್ಷಗಳಿರಬಹುದು. ಈಗಿನವರಂತೆ ನಮ್ಮ ತಲೆಕೂದಲನ್ನು ಕತ್ತರಿಸುತ್ತಲೇ ಇರಲಿಲ್ಲ. ಹಾಗೆ ಕತ್ತರಿಸಿದರೆ ಅದು ಅಶುಭ ಎಂದು ಭಾವಿಸಿದ್ದರು ಎಲ್ಲರೂ. ಎಲ್ಲರಿಗೂ ತಕ್ಕಮಟ್ಟಿಗೆ ಉದ್ದಕೂದಲು ಇರುತ್ತಿತ್ತು.

ಅಂದಿನ ದಿನಗಳಲ್ಲಿ ಮಲ್ಲಿಗೆ ಹೂವು ಯಾವಾಗಲೂ ಸಿಗುತ್ತಿರಲಿಲ್ಲ. ಅದಕ್ಕೂ ಒಂದು ಕಾಲ ಅಂತ ಇರುತ್ತಿತ್ತು. ಚೈತ್ರ-ವೈಶಾಖ ಮಾಸಗಳಲ್ಲಿ ದಂಡಿಯಾಗಿ ಮೊಗ್ಗು ಮಾರುಕಟ್ಟೆಗೆ ಬರುತ್ತಿತ್ತು. ಬುಟ್ಟಿಗಳಲ್ಲಿ ತುಂಬಿ ರಸ್ತೆಯಲ್ಲಿ “”ಮಲ್ಗೆ ಹೂ ಬೇಕೇನÅಮ್ಮಾ” ಅಂತ ಮಾರಿಕೊಂಡು ಮಧ್ಯಾಹ್ನದ ಹೊತ್ತಿಗೇ ಬರುತ್ತಿದ್ದರು. ಚಟಾಕು, ಪಾವು, ಸೇರಿನ ಲೆಕ್ಕದಲ್ಲಿ ಹೂವನ್ನು ಕೊಳ್ಳಬೇಕಾಗಿತ್ತು. ಹೆಣ್ಣು ಮಕ್ಕಳಿರುವ ಎಲ್ಲರ ಮನೆಗಳಲ್ಲೂ ಮೊಗ್ಗನ್ನು ಖರೀದಿಸುತ್ತಿದ್ದರು.

“ಮೊಗ್ಗಿನ ಜಡೆ’ ಎಂದರೆ ಎಲ್ಲ ಮಕ್ಕಳೂ ಕುಣಿದಾಡುತ್ತಿದ್ದರು. ಅಕ್ಕಪಕ್ಕದ ಮನೆಯ ಹೆಂಗಸರು ಒಟ್ಟಾಗಿ ಸೇರಿಕೊಂಡು ಅಗಲವಾದ ಬಾಳೆಪಟ್ಟಿಯನ್ನು ಜಡೆಯ ಆಕಾರಕ್ಕೆ ಕತ್ತರಿಸಿ, ಒಂದೇ ಮಗ್ಗುಲಲ್ಲಿ ಎರಡೂ ಬದಿಗಳಲ್ಲಿ ಮೊಗ್ಗನ್ನು ಉದ್ದಕ್ಕೆ ಒತ್ತಾಗಿ ಪೋಣಿಸಿ, ಮಧ್ಯೆ ಮಧ್ಯೆ ಮರುಗ, ಪಚ್ಚೆ ತೆನೆ, ಗುಲಾಬಿಗಳನ್ನು ಇಟ್ಟು ಸೂಜಿನೂಲಿನಿಂದ ಹೊಲಿಯುತ್ತಿದ್ದರು. ನಂತರ ಮಕ್ಕಳ ತಲೆಯನ್ನು ಬಾಚಿ, ಚೌರಿಯ ಸಹಾಯದಿಂದ ಉದ್ದಕ್ಕೆ ಜಡೆಯನ್ನು ಹೆಣೆದು, ತುದಿಯಲ್ಲಿ ಬಣ್ಣ ಬಣ್ಣದ ವೆಲ್ವೆಟ್‌, ಮುತ್ತುಗಳಿಂದ ಮಾಡಿದ ಕುಚ್ಚುಗಳಿಂದ ಅಲಂಕರಿಸುತ್ತಿದ್ದರು. ಅನಂತರ ಜಡೆಗೆ ಹೊಲಿದು ಸಿದ್ಧಪಡಿಸಿಟ್ಟ ಬಾಳೆಯ ಪಟ್ಟೆಯ ಜಡೆಯನ್ನು ಇಟ್ಟು ಮತ್ತೂಮ್ಮೆ ದೂರ ದೂರಕ್ಕೆ ಹೊಲಿಗೆ ಹಾಕಿ ಭದ್ರಗೊಳಿಸುತ್ತಿದ್ದರು.

ಜಡೆ ಶೃಂಗಾರಗೊಂಡ ನಂತರ ರೇಷ್ಮೆ ಲಂಗ ಧರಿಸಿ ಮನೆ ಮನೆಗೆ ತೆರಳಿ ಅತ್ಯಂತ ಆನಂದದಿಂದ ಜಡೆಯನ್ನು ತೋರಿಸಿ ಬರುತ್ತಿದ್ದರು. ಈಗಿನ ಕಾಲದಂತೆ ಮೊಬೈಲ್‌ ಇಲ್ಲವಾದ್ದರಿಂದ ತಂದೆಯ ಜೊತೆ ಫೋಟೋ ಸ್ಟುಡಿಯೋಗಳಿಗೆ ತೆರಳಿ, ಹಿಂದೆ ಒಂದು ಕನ್ನಡಿಯಲ್ಲಿ ಜಡೆಯ ಸಂಪೂರ್ಣ ಚಿತ್ರಣ ಬರುವಂತೆ ಮಾಡಿ ಮುಂದಿನಿಂದ ಫೋಟೋ ತೆಗೆಸುತ್ತಿದ್ದರು. ನಂತರ ಫೋಟೋಗಳಿಗೆ ಫ್ರೆàಮ್‌ ಹಾಕಿ ಗೋಡೆಯ ಮೇಲೆ ತೂಗು ಹಾಕುತ್ತಿದ್ದರು. ಈಗಲೂ ಹಲವರ ಮನೆಯಲ್ಲಿ ಮಕ್ಕಳ ಮೊಗ್ಗಿನ ಜಡೆಯ ಭಾವಚಿತ್ರವನ್ನು ಕಾಣಬಹುದು.

ಮಕ್ಕಳ ಆನಂದ ಅಲ್ಲಿಗೇ ಮುಗಿಯುತ್ತಿರಲಿಲ್ಲ. ಸಂಜೆಯಾಗುತ್ತಿದ್ದಂತೆ ಅರೆಬಿರಿಯುತ್ತಾ ಮಲ್ಲಿಗೆಯ ಕಂಪು ಮನೆಯನ್ನಾವರಿಸುತ್ತಿತ್ತು. ತಲೆಗೆ ಭಾರವೆನಿಸುತ್ತಿದ್ದರೂ ತೆಗೆಯಲು ಮನಸ್ಸಿಲ್ಲ. ಎಲ್ಲಿ ಕಳಚಿ ಬೀಳುತ್ತದೋ ಎನ್ನುವ ಹೆದರಿಕೆಯಿಂದ ನಡಿಗೆ ನಿಧಾನವಾಗುತ್ತಿತ್ತು. ಮಲಗುವಾಗ ತೆಗೆಯದೆ ವಿಧಿಯೇ ಇರುತ್ತಿರಲಿಲ್ಲ. ಹೊಲಿದ ದಾರವನ್ನು ಕತ್ತರಿಸಿ ಜಡೆಯಿಂದ ಮೊಗ್ಗಿನ ಜಡೆಯನ್ನು ಬೇರ್ಪಡಿಸಿ ಹೊರಗೆ ಗಾಳಿಗೆ ತೆರೆದಿಡುತ್ತಿದ್ದರು. ಮರುದಿನ ಮತ್ತೆ ಜಡೆಗಿಟ್ಟು ಹೊಲಿದರೆ ಸಾಯಂಕಾಲದವರೆಗೂ ಇರುತ್ತಿತ್ತು.

ಗೊರಟೆ ಹೂವಿನ ಕಾಲದಲ್ಲಿ ಅಕ್ಕಪಕ್ಕದ ಮನೆಗಳಿಂದ ಮೊಗ್ಗುಗಳನ್ನು ಬಿಡಿಸಿ ತಂದು ಜಡೆ ಹಾಕಿಸಿಕೊಂಡು ನವರಾತ್ರಿಯ ಸಮಯವಾದು ದರಿಂದ ಮನೆ ಮನೆಗೆ ಬೊಂಬೆ ನೋಡಲು ಹೋಗುತ್ತಿದ್ದರು. ಹೀಗೆ ಹೆಣ್ಣುಮಕ್ಕಳು ಹೂವು, ಹೂವಿನ ಜಡೆ ಎಂದರೆ ಪ್ರಾಣಬಿಡುತ್ತಿದ್ದ ಒಂದು ಕಾಲವೂ ಇತ್ತು ಎಂದರೆ ನಂಬಲು ಕಷ್ಟವಾಗುತ್ತದೆ.

ಈಗಿನ ದಿನಗಳಲ್ಲಿ ಹೆಣ್ಣಿನ ಚಿತ್ರವೇ ಬದಲಾಗಿದೆ. ಯಾರಿಗೂ ಉದ್ದವಾಗಿ ಕೂದಲು ಬೆಳೆಸುವ ಇಚ್ಛೆ ಇರುವುದಿಲ್ಲ. ಬಾಬ್‌ಕಟ್‌, ಬಾಯ್‌ಕಟ್‌ ಸಾಮಾನ್ಯವಾಗಿ ಹೋಗಿದೆ. ಸಮಯದ ಅಭಾವವೋ, ಆರೈಕೆಯ ಕೊರತೆಯೋ, ಫ್ಯಾಷನ್ನೋ ದೇವರಿಗೇ ಗೊತ್ತು. ಇನ್ನು ಜಡೆ ಹೆಣೆಯುವುದಂತೂ ದೂರದ ಮಾತು. ಇಂದಿನ ಹೆಣ್ಮಕ್ಕಳಿಗೆ ಹೂವೆಂದರೆ ಯಾಕೋ ಅಪ್ರಿಯ. ಶಾಲೆಗಳಲ್ಲೂ ಹೂವನ್ನು ಮುಡಿದು ಬರಬಾರದೆಂದು ನಿರ್ಬಂಧ ಹೇರುತ್ತಾರೆ. ಅಪರೂಪಕ್ಕೊಮ್ಮೆ ಹೂವನ್ನು ಮುಡಿದುಕೊಳ್ಳುತ್ತಾರೆಂದರೆ ಅದು ಮಲ್ಲಿಗೆ ಅಥವಾ ಗುಲಾಬಿ ಹೂಗಳು ಮಾತ್ರ. ಸೇವಂತಿಗೆ, ಸಂಪಿಗೆ ಮುಂತಾದ ಹೂಗಳು ದೇವರಿಗೆ ಮಾತ್ರ ಸೀಮಿತವಾಗಿದೆ. ಹೆಣ್ಣುಮಕ್ಕಳ ಮನಸ್ಸನ್ನು ಹೂವಿಗೆ ಹೋಲಿಸುತ್ತಾರೆ. ಹೂವಿನಂಥ ಮನದ ಒಡತಿಗೆ ಹೂವಿನ ಮೇಲೇಕೋ ದ್ವೇಷ, ಗೊತ್ತೇ ಆಗೋಲ್ಲ.

ಇಂಥ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ, ನೋಡುತ್ತ ಅಭ್ಯಾಸವಾಗಿದ್ದ ನನಗೆ ಅಂದಿನ ಮದುವೆಯಲ್ಲಿ ಓಡಾಡುತ್ತಿದ್ದ ನೀಳವೇಣಿಯರ ಅಂದಚೆಂದ ಆಕರ್ಷಣೆ ಉಂಟುಮಾಡಿದ್ದು ಆಶ್ಚರ್ಯವೇನಲ್ಲ. ಅದು ನಿಜವೋ ಸುಳ್ಳೋ ಎಂದು ನನ್ನನ್ನು ನಾನೇ ಚಿವುಟಿಕೊಂಡು ನಂತರ ನಿಜವೆಂದು ನಂಬಬೇಕಾಯಿತು.

ಭಾರತೀಯ ನಾರಿ ಎಂದಾಕ್ಷಣ ಕಣ್ಮುಂದೆ ಸುಳಿಯುವ ಚಿತ್ರವೆಂದರೆ ಸೀರೆ, ನೀಳವಾದ ಜಡೆ, ತಲೆತುಂಬಾ ಹೂವು, ಕೈತುಂಬಾ ಬಳೆ, ಹಣೆಯಲ್ಲಿ ಬೊಟ್ಟು. ಇದಕ್ಕೆಲ್ಲ ಸಾಕ್ಷಿಯಾದದ್ದು ಅಂದಿನ ಮದುವೆ ಮನೆಯಲ್ಲಿನ ನೀರೆಯರು. ಇಂತಹ ಆಸಕ್ತಿ ಇವರಿಗೆ ಕಡೆಯವರೆಗೂ ಉಳಿಯಲಿ ಎಂದು ನನ್ನ ಮನಸ್ಸು ಕಾಣದ ದೇವರಲ್ಲಿ ಮೊರೆಯಿಟ್ಟಿತ್ತು.

– ಪುಷ್ಪಾ ಎನ್‌.ಕೆ. ರಾವ್‌

ಟಾಪ್ ನ್ಯೂಸ್

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.