ಖರ್ಚಿನ ಲೆಕ್ಕಕೇಳುವ ಅಧಿಕಾರ ಸರ್ಕಾರಕ್ಕಿಲ್ಲ
Team Udayavani, Oct 13, 2017, 6:00 AM IST
ಬೆಂಗಳೂರು: ವಿಶೇಷ ಸಂದರ್ಭಗಳಲ್ಲಿ ಅಧಿವೇಶನ ಕರೆಯುವ ಅಧಿಕಾರ ತಮಗಷ್ಟೇ ಇದ್ದು, ವಜ್ರ ಮಹೋತ್ಸವದ ಲೆಕ್ಕ ಕೇಳುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ವಿಧಾನಸಭೆ ಸಚಿವಾಲಯ ತಿರುಗೇಟು ನೀಡಿದೆ. ಈ ಮೂಲಕ ಇದೇ ತಿಂಗಳ 25 ಮತ್ತು 26 ರಂದು ಆಯೋಜಿಸಲಾಗಿರುವ ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮ ವಿವಾದ ಮತ್ತಷ್ಟು ತಾರಕಕ್ಕೇರಿದೆ.
ಬುಧವಾರವಷ್ಟೇ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ಗಮನಕ್ಕೆ ತಾರದೆ ಸ್ಪೀಕರ್ ಮತ್ತು ಸಭಾಪತಿ ವಿಶೇಷ ಅಧಿವೇಶನ ದಿನಾಂಕ ನಿಗದಿ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಜತೆಗೆ, ಈ ಕಾರ್ಯಕ್ರಮಕ್ಕೆ 28 ಲಕ್ಷ ರೂ. ಬೇಕೇ ಎಂಬ ಬಗ್ಗೆ ಸಚಿವರು ತಗಾದೆ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯದ ನಿರ್ಧಾರವನ್ನು ಒಪ್ಪಿಕೊಳ್ಳಲು ಆಗದೇ, ಬಿಡಲೂ ಆಗದೇ ಖರ್ಚಿನ ಲೆಕ್ಕವನ್ನು ಮುಂದಿಟ್ಟುಕೊಂಡು ಸದ್ಯ ಅಧಿವೇಶನಕ್ಕೆ ತಡೆ ನೀಡಿದೆ.
ಸಂವಿಧಾನದ 176/1 ರ ಪ್ರಕಾರ ಅಧಿವೇಶನ ಕರೆಯುವ ಅಧಿಕಾರ ರಾಜ್ಯಪಾಲರಿಗೆ ಇದೆ. ರಾಜ್ಯಪಾಲರು ಹೊಸ ಸರ್ಕಾರ ಬಂದಾಗ ಆರಂಭದಲ್ಲಿ ಮತ್ತು ಪ್ರತಿ ವರ್ಷ ಆರಂಭದಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಆದರೆ, ಸರ್ಕಾರ ಅಧಿವೇಶನ ನಡೆಸುವ ದಿನಾಂಕವನ್ನು ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸಿ ರಾಜ್ಯಪಾಲರ ಅನುಮತಿಗೆ ಕಳುಹಿಸಿಕೊಡುತ್ತಾರೆ. ರಾಜ್ಯಪಾಲರ ಅನುಮತಿ ಪಡೆದು ವಿಧಾನಸಭೆ ಕಾರ್ಯದರ್ಶಿ ಅಧಿಕೃತ ಆದೇಶ ಹೊರಡಿಸುತ್ತಾರೆ.
ವಜ್ರ ಮಹೋತ್ಸವದ ವಿಶೇಷ ಅಧಿವೇಶನ ಕರೆಯುವ ಕುರಿತಂತೆ ನಡೆದ ಸಭೆಗಳಲ್ಲಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಎರಡು ಬಾರಿ ಭಾಗವಹಿಸಿ ಅಧಿವೇಶನ ನಡೆಸಲು ಸಹಮತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಅಲ್ಲದೇ ರಾಷ್ಟ್ರಪತಿಗೆ ಆಹ್ವಾನ ನೀಡಲು ತೆರಳುವ ಸಂದರ್ಭದಲ್ಲಿಯೂ ಮುಖ್ಯಮಂತ್ರಿಯ ಗಮನಕ್ಕೆ ತಂದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರನ್ನೂ ಜೊತೆಗೆ ಬರುವಂತೆ ಸ್ಪೀಕರ್ ಕೋಳಿವಾಡ ಕೇಳಿದ್ದರು ಎನ್ನಲಾಗಿದೆ.
ವಿಶೇಷ ಸಂದರ್ಭದಲ್ಲಿ ಅಧಿವೇಶನ ಕರೆಯುವ ಸಂಪ್ರದಾಯ ವಿಧಾನ ಸೌಧ ಆರಂಭದಿಂದಲೂ ನಡೆದುಕೊಂಡು ಬಂದಿದ್ದು, 1957 ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು, ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಸಾರ್ಕ್ ಸಮ್ಮೇಳನದ ಸಂದರ್ಭದಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಕೂಡ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಅಷ್ಟೆ ಅಲ್ಲದೇ ರಾಷ್ಟ್ರಪತಿಗಳಾಗಿದ್ದ ಎಪಿಜೆ ಅಬ್ದುಲ್ ಕಲಾಮ್ ಸುವರ್ಣ ಕರ್ನಾಕಟ ವರ್ಷಾಚರಣೆ ಸಂದರ್ಭದಲ್ಲಿ ಹಾಗೂ ಬೆಳಗಾವಿ ಸುವರ್ಣ ಸೌಧ ಉದ್ಘಾಟನೆ ಸಂದರ್ಭದಲ್ಲಿ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಸಂವಿಧಾನದ ನಿಯಮದ ಹೊರತಾಗಿ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದು, ಅದೇ ಸಂಪ್ರದಾಯವನ್ನು ಈ ಬಾರಿಯೂ ಮುಂದುವರೆಸಲಾಗುತ್ತಿದೆ ಎನ್ನುವುದು ವಿಧಾನಸಭೆ ಸಚಿವಾಲಯದ ವಾದ.
ವಿಧಾನಸಭೆ ಸಚಿವಾಲಯ ಶಾಸಕಾಂಗದ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಶಾಸಕಾಂಗದ ಕಾರ್ಯಕ್ರಮಗಳ ಲೆಕ್ಕವನ್ನು ಕೇಳಲು ಸರ್ಕಾರಕ್ಕೆ ಅಧಿಕಾರ ಇಲ್ಲ ಎನ್ನಲಾಗುತ್ತಿದೆ. ಶಾಸಕಾಂಗವೇ ಸರ್ಕಾರಕ್ಕೆ ಪ್ರತಿ ವರ್ಷ ಖರ್ಚು ಮಾಡಲು ಹಣ ನೀಡುತ್ತದೆ. ಹೀಗಾಗಿ ಕಾನೂನು ಸಚಿವರಿಗೆ ಶಾಸಕಾಂಗದ ಲೆಕ್ಕ ಕೇಳುವ ಅಧಿಕಾರ ಇಲ್ಲ ಎನ್ನುವುದು ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರ ವಾದ.
ಆದರೆ, ವಿಧಾನಸೌಧ ಲೋಕೋಪಯೋಗಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ವ್ಯಾಪ್ತಿಯಲ್ಲಿರುವುದರಿಂದ ಕಟ್ಟಡ ವಜ್ರಮಹೋತ್ಸವ ನಡೆಸುವ ಅಧಿಕಾರ ವಿಧಾನಸಭೆ ಸಚಿವಾಲಯಕ್ಕೆ ಇಲ್ಲ ಎಂಬ ವಾದ ಸರ್ಕಾರ ಮಾಡುತ್ತಿದೆ. ಅಲ್ಲದೇ ಬೆಳಗಾವಿಯಲ್ಲಿ ನಡೆಯುವ 10 ದಿನದ ಅಧಿವೇಶನಕ್ಕೆ 10 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಆದರೆ, ಕೇವಲ ಎರಡು ದಿನ ನಡೆಯುವ ಅಧಿವೇಶನಕ್ಕೆ 28 ಕೋಟಿ ವೆಚ್ಚ ಮಾಡುತ್ತಿರುವುದು ಹಣಕಾಸು ಇಲಾಖೆಯ ಹುಬ್ಬೇರಿಸುವಂತೆ ಮಾಡಿದೆ.
ರಾಷ್ಟ್ರಪತಿ ಬರ್ತಾರಾ ?
ವಿಧಾನಸೌಧದ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದ್ದು, ಈ ನಡುವೆಯೇ ಸರ್ಕಾರ ಮತ್ತು ವಿಧಾನಸಭೆ ಸಚಿವಾಲಯದ ನಡುವೆ ಸಂಘರ್ಷ ಏರ್ಪಟ್ಟಿದೆ.ಈ ರೀತಿಯ ಗೊಂದಲದ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಆಗಮಿಸುತ್ತಾರಾ ಎಂಬ ಚರ್ಚೆ ವಿಧಾನಸೌಧದ ಕಾರಿಡಾರ್‌ನಲ್ಲಿ ಕೇಳಿ ಬರುತ್ತಿದೆ. ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಯಾವುದೇ ಗೊಂದಲ ಇಲ್ಲದಿದ್ದರೆ ಮಾತ್ರ ಪಾಲ್ಗೊಳ್ಳುವ ಸಂಪ್ರದಾಯ ಇದೆ. ಸರ್ಕಾರ ಮತ್ತು ಸಚಿವಾಲಯದ ನಡುವೆಯೇ ಹೊಂದಾಣಿಕೆ ಇಲ್ಲದ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಆಗಮಿಸುತ್ತಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿಶೇಷ ಸಂದರ್ಭದಲ್ಲಿ ಅಧಿವೇಶನ ನಡೆಸಲು ವಿಧಾನಸಭೆ ಸಚಿವಾಲಯಕ್ಕೆ ಅಧಿಕಾರ ಇದೆ. ವಿಧಾನಸಭೆ ಸಚಿವಾಲಯ ಮಾಡುವ ವೆಚ್ಚದ ವಿವರವನ್ನು ಕೇಳುವ ಅಧಿಕಾರ ಕಾನೂನು ಸಚಿವರಿಗೆ ಇಲ್ಲ. ಸರ್ಕಾರಕ್ಕೆ ಖರ್ಚು ಮಾಡಲು ಹಣ ನೀಡುವುದೇ ಶಾಸಕಾಂಗ. ಹೀಗಾಗಿ ವಜ್ರಮಹೋತ್ಸವ ಕಾರ್ಯಕ್ರಮದ ಲೆಕ್ಕವನ್ನು ಸರ್ಕಾರ ಕೇಳುವಂತಿಲ್ಲ.
– ಎಸ್. ಮೂರ್ತಿ, ವಿಧಾನಸಭೆ ಕಾರ್ಯದರ್ಶಿ.
ಎರಡು ದಿನದ ಕಾರ್ಯಕ್ರಮ ಪಟ್ಟಿ ಸಿದ್ದ
ಅಕ್ಟೋಬರ್ 25 ಬುಧವಾರ
ಬೆಳಿಗ್ಗೆ 11 ಕ್ಕೆ : ವಿಧಾನ ಮಂಡಲದ ವಿಶೇಷ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ
ಮಧ್ಯಾಹ್ನ 12.30 ಕ್ಕೆ ರಾಷ್ಟ್ರಪತಿಯಿಂದ ಪರಿಷತ್ ಸಭಾಂಗಣ ವೀಕ್ಷಣೆ. ಗಾಂಧಿ ಪ್ರತಿಮೆ ಎದುರು ಶಾಸಕರೊಂದಿಗೆ ಫೋಟೊ ತೆಗೆಸಿಕೊಳ್ಳುವುದು.
ಮಧ್ಯಾಹ್ನ 1.30 ಕ್ಕೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಾಸಕರಿಗೆ ಭೋಜನ.
ಮಧ್ಯಾಹ್ನ 3ರಿಂದ 5 ಗಂಟೆವರೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ “ವಿಧಾನಸೌಧ ಕಟ್ಟಡ ನಿರ್ಮಾಣ’ ಸಾಕ್ಷ್ಯ ಚಿತ್ರ ಪ್ರದರ್ಶನ.
ಟಿ.ಎನ್ ಸೀತಾರಾಮ್ ನಿರ್ದೇಶನ ” ಕರ್ನಾಟಕ ವಿಧಾನ ಮಂಡಲ ಶಾಸನ ಸಭೆ ನಡೆದು ಬಂದ ಹಾದಿ’ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಸ್ಟರ್ ಕಿಶನ್ ನಿರ್ದೇಶನದ 3ಡಿ ವರ್ಚುವಲ್ ರಿಯಾಲಿಟಿ ವಿಡಿಯೋ ಪ್ರದರ್ಶನ.
ಸಾಯಂಕಾಲ 5 ರಿಂದ 6 ಗಂಟೆವರೆಗೆ ವಿಧಾನಸೌಧದ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ.
ಸಂಜೆ 6 ರಿಂದ 6.30 ವರೆಗೆ ಮಾಜಿ ಮುಖ್ಯಮಂತ್ರಿಗಳಾದ ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ ಮಂಜಪ್ಪ ಅವರಿಗೆ ಗೌರವ ಅರ್ಪಣೆ.
ಸಂಜೆ 6.30 ರಿಂದ 8.30 ರ ವರೆಗೆ ಹಂಸಲೇಖ ತಂಡದಿಂದ ರಸ ಮಂಜರಿ ಕಾರ್ಯಕ್ರಮ ಜೊತೆಗೆ 3ಡಿ ಮ್ಯಾಪಿಂಗ್ ಮೂಲಕ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಚಿತ್ರಗಳ ಪ್ರದರ್ಶನ.
ಅಕ್ಟೋಬರ 26 ಗುರುವಾರ
ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಅಧಿವೇಶನ
ಸಂಜೆ 5 ರಿಂದ 6 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ.
ಸಂಜೆ 6 ರಿಂದ 8.30 ರ ವರೆಗೆ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರ ತಂಡದಿಂದ ಕರ್ನಾಟಕದ ವೈವಿದ್ಯತೆ ಕುರಿತು “ಶಾಂತಿ ಸಂಸಾರ ಸಂಗೀತ ಕಾರ್ಯಕ್ರಮ’ ಹಾಗೂ 3ಡಿ ಮ್ಯಾಪ್ ಮೂಲಕ ಸರ್ಕಾರದ ಸಾಧನೆಗಳ ಚಿತ್ರಗಳ ಪ್ರದರ್ಶನ ನಡೆಯಲಿದೆ.
– ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.