ಸಂಸ್ಕೃತ ಗ್ರಾಮ ನೆನಪಷ್ಟೆ?
Team Udayavani, Oct 13, 2017, 9:30 AM IST
ಭೋಪಾಲ್: ಇಪ್ಪತ್ತು ವರ್ಷಗಳ ಹಿಂದಕ್ಕೆ ಹೊರಳಿಕೊಳ್ಳಬೇಕು. ಮಧ್ಯ ಪ್ರದೇಶದ ನರ ಸಿಂಗಪುರ ಜಿಲ್ಲೆಯ ಮೊಹಾಡ್ ಗ್ರಾಮದಲ್ಲಿ ಸಂಸ್ಕೃತವನ್ನೇ ಮಾತನಾಡಲಾಗುತ್ತಿತ್ತು. ಹೀಗಾಗಿ ಅದು ದೇಶದ “ಮೊದಲ ಸಂಸ್ಕೃತ ಗ್ರಾಮ’ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಈಗ ಆ ಖ್ಯಾತಿ ನಿಧಾನಕ್ಕೆ ಮರೆಯಾಗತೊಡಗಿದೆ.
ಗ್ರಾಮದ ಹಿರಿಯ ಮತ್ತು ನಿವೃತ್ತ ಸರ್ಕಾರಿ ಅಧಿಕಾರಿ ರಾಧೇಶ್ಯಾಮ್ ನರೋಲಿಯಾ ಹೇಳುವಂತೆ 1996ರಲ್ಲಿ ದೇವ ಭಾಷೆಯ ಬೆಳವಣಿಗೆಗೆ ಭಾರೀ ಸಹಕಾರ ಮತ್ತು ಒತ್ತು ನೀಡಲಾ ಯಿತು. ಆರ್ಎಸ್ಎಸ್ನಲ್ಲಿದ್ದ ಇಬ್ಬರು ಕಾರ್ಯಕರ್ತರು ಭಾಷೆಯ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದ್ದರು. ಒಂದು ವರ್ಷದ ಅವಧಿಯಲ್ಲಿ ಗ್ರಾಮದ ಚಿತ್ರಣವೇ ಬದಲಾಗಿ ಸಂಸ್ಕೃತವೇ ಮೊದಲ ಭಾಷೆ ಎಂಬ ಖ್ಯಾತಿಗೆ ಪಾತ್ರವಾಯಿತು. ಜತೆಗೆ ಸಾಕ್ಷರತೆ ಪ್ರಮಾಣವೂ ಶೇ.70ಕ್ಕೆ ಏರಿಕೆಯಾಯಿತು.
ಗ್ರಾಮದ ಎಲ್ಲ ಜನಾಂಗಗಳನ್ನೂ ಈ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿತ್ತು. ಪ್ರಭಾವ ಎಲ್ಲಿಯವರೆಗೆ ಬೀರಿತ್ತು ಎಂದರೆ ಹಿಂದಿ ಭಾಷೆಗೆ ಕೂಡ ಪ್ರಥಮ ಆದ್ಯತೆ ಇರಲಿಲ್ಲ. ಆದರೆ, ಈಗ ಬದಲಾದ ಸನ್ನಿವೇಶದಲ್ಲಿ ಸಂಸ್ಕೃತ ಮಾತನಾಡುವ ಜನರೂ ಕಡಿಮೆಯಾಗಿದ್ದಾರೆ. ವಿಶೇಷವಾಗಿ ದಲಿತ ಮತ್ತು ಹಿಂದುಳಿದ ವರ್ಗದವರು 20 ವರ್ಷಗಳಿಂದ ತಾವು ಸಂಸ್ಕೃತ ಮಾತನಾಡು ತ್ತಿದ್ದರೂ ಮುಖ್ಯವಾಹಿನಿಗೆ ತಮ್ಮನ್ನು ಸೇರಿಸಿ ಲ್ಲವೆಂದು ಅವರೂ ಈಗ ಭಾಷೆಯತ್ತ ಗಮನ ಹರಿಸುತ್ತಿಲ್ಲ. 5 ಸಾವಿರ ಮಂದಿ ಇರುವ ಗ್ರಾಮ ದಲ್ಲಿ 150 ಮಂದಿ ಮಾತ್ರ ಈಗ ಸಂಸ್ಕೃತ ಮಾತಾಡುತ್ತಿದ್ದಾರೆ. 8 ವರ್ಷಗಳ ಹಿಂದೆ ಮಧ್ಯ ಪ್ರದೇಶ ಸರಕಾರ ಶಾಲೆ ನಿರ್ಮಾಣದ ವಾಗ್ಧಾನ ಮಾಡಿತ್ತು. ಅದು ಇನ್ನೂ ಕೈಗೂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.