ಯುವ ಎಂಜಿನಿಯರ್‌ಗಳಲ್ಲಿ ಉದ್ಯಮಶೀಲತೆ
Team Udayavani, Oct 13, 2017, 10:05 AM IST
ಮಹಾನಗರ: ಉದ್ಯಮ ರಂಗದತ್ತ ಮುಖ ಮಾಡಿರುವ ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮತ್ತು ಸಹಭಾಗಿತ್ವದ ಕುರಿತಾದ ಪರಿವರ್ತನೆಯ ಹೊಸ ಎತ್ತರಗಳಿಗೆ ಸಂಬಂಧಿಸಿ ತಜ್ಞರ ಸಹ ಯೋಗದಲ್ಲಿ ಒಂದು ದಿನದ ಸ್ಟೆಪ್ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವು ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜರಗಿತು.
ಬೆಂಗಳೂರಿನ ಐಇಇಇ ಯಂಗ್ ಪ್ರೊಫೆಶನಲ್ಸ್ ಎಫಿನಿಟಿ ಗ್ರೂಪ್ ವತಿಯಿಂದ ಕಾಲೇಜಿನ ಐಇಇಇ ವಿದ್ಯಾರ್ಥಿ ಘಟಕವು ಆಯೋಜಿಸಿದ್ದ ಈ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ 138ಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
ಹ್ಯಾಕರ್ ಅರ್ತ್‌ನ ಇಂಟರ್ ನ್ಯಾಶನಲ್ ಸೇಲ್ಸ್ ಮುಖ್ಯಸ್ಥ ಶಿಶಿರ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಂತ್ರಿಕ ವಲಯದಲ್ಲಿ ಕನಸಿನ ಅವಕಾಶಗಳನ್ನು ಬಾಚಿಕೊಳ್ಳುವ ಮೂಲಕ ಸಾಧಕರಾಗಿ ಬೆಳೆಯಬೇಕು ಎಂದರು.
ಮಾಹಿತಿ ಕಾರ್ಯಾಗಾರ
ಬೆಂಗಳೂರಿನ ಯಂಗ್ ಪ್ರೊಫೆಶನಲ್ಸ್ ಅಧ್ಯಕ್ಷ ಡಾ| ಅಭಿಷೇಕ್ ಅಪ್ಪಾಜಿ ಅವರು ಸ್ಪರ್ಧಾತ್ಮಕತೆ ಮತ್ತು ಉದ್ಯಮಶೀಲತಾ
ಕೌಶಲಗಳ ಕುರಿತು ಚರ್ಚಿಸಿದರು. ಮಂಗಳೂರಿನ ಕನ್ಸಲ್ಟೆಂಟ್ ಅನಿಲ್ ಹೆಗ್ಡೆ ತಾಂತ್ರಿಕ ವಲಯದಲ್ಲಿ ಸವಾಲುಗಳನ್ನು ಎದುರಿಸುವ ಬಗ್ಗೆ ಮಾತನಾಡಿದರು. ಒಮ್ನಿಸೆಸ್ ಇಂಡಿಯಾದ ನಿರ್ದೇಶಕ ಅತುಲ್ ಕುಡ್ವ ಅವರು ಉದ್ಯಮದ ಆಯ್ಕೆ ಮತ್ತು ಸರಿಯಾದ ನಿರ್ಧಾರಗಳ ಕುರಿತು ಅನುಭವಗಳನ್ನು ಹಂಚಿಕೊಂಡರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ ಉದ್ಯಮದಲ್ಲಿ ನೈತಿಕತೆ ಮತ್ತು ಗ್ರಾಹಕರೊಂದಿಗೆ ನೈತಿಕ ಮೌಲ್ಯಗಳ ವ್ಯವಹಾರದ ಕುರಿತು ವಿವರಿಸಿದರು.
ಬೆಂಗಳೂರಿನ ಐಇಇಇ ಯಂಗ್ ಪ್ರೊಫೆಶನಲ್ಸ್ ಬಳಗದ ಡಾ| ಅಶ್ವಿನಿ, ಅನಿ ಕೇತ್ ಕೆ.ಎಸ್., ಸುರತ್ಕಲ್ ಎನ್. ಐ.ಟಿ,ಕೆಯ ಜತಿನ್ ನಾಯಕ್, ಆದಿತ್ಯ ಕುಲಕರ್ಣಿ ಸಂಶೋಧನಾವಕಾಶಗಳು, ಉದ್ಯಮಶೀಲತೆ, ಕೌಶಲಗಳ ಕುರಿತು ಮಾರ್ಗದರ್ಶನ ನೀಡಿದರು.
ಪ್ರಾಂಶುಪಾಲ ಡಾ| ಗಣೇಶ್ ವಿ. ಭಟ್, ಐಇಇಇ ಘಟಕದ ಅಶ್ವಿನಿ ವಿ. ಆರ್, ವಿದ್ಯಾರ್ಥಿ ಘಟಕ ಅಧ್ಯಕ್ಷ ಋಷಿಕೇಶ್ ಭಂಡಾರ್ಕರ್, ಕೀರ್ತನ್ ಡಿ., ಶೈಲಾಪ್ರಭು, ಮಹತಿ ಕಾಮತ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.