ಮಳೆಗೆ ಮನೆ ಗೋಡೆ, ಸಂಪರ್ಕ ಮೋರಿ ಕುಸಿತ
Team Udayavani, Oct 13, 2017, 11:45 AM IST
ದೇವನಹಳ್ಳಿ: ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಒಂದು ಮನೆ ಕುಸಿದಿದೆ. ಯಾವುದೇ ಹಾನಿ ಸಂಭವಿಸಿಲ್ಲ. ರಾತ್ರಿ ಸುರಿದ ಮಳೆಗೆ ತಾಲೂಕು ಮತ್ತು ನಗರದಲ್ಲಿ ಜನ ಓಡಾಟ ಕಡಿಮೆಯಾಗಿತ್ತು. ತಾಲೂಕಿನ ಹೊಸಕುರುಬರಕುಂಟೆ ಗ್ರಾಮದಲ್ಲಿ ಮನೆ ಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ. ಮತ್ತೂಂದೆಡೆ ತಾಲೂಕಿನ ವಿಶ್ವನಾಥಪುರ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ
ವಿಮಾನ ನಿಲ್ದಾಣದ ಪಕ್ಕದ ಬೆಟ್ಟಕೋಟೆ ಕೆರೆಗೆ ಸ್ವಲ್ಪ.
ಕನ್ನಮಂಗಲ 37ಮಿ.ಮೀ ಮಳೆ: ಪ್ರಮಾಣದಷ್ಟು ನೀರು ಬಂದಿದೆ. ತಾಲೂಕಿನ ಗ್ರಾಮ ಪಂಚಾಯಿತಿವಾರು ಮಳೆ ಪ್ರಮಾಣದ ಅಂಕಿ ಅಂಶ ಹೀಗೆದೆ. ಅಣ್ಣೇಶ್ವರ ಗ್ರಾಪಂ 33ಮಿ.ಮೀ., ಕನ್ನಮಂಗಲ 37ಮಿ.ಮೀ, ನಲ್ಲೂರು 20ಮಿ.ಮೀ, ಗೊಡ್ಲುಮುದ್ದೇನಹಳ್ಳಿ 42ಮಿ.
ಮೀ, ಹಾರೋಹಳ್ಳಿ 50ಮಿ.ಮೀ, ಕೋರಮಂಗಲ 28ಮಿ.ಮೀ, ಬೂದಿಗೆರೆ 16ಮಿ.ಮೀ, ಬಿಜ್ಜವಾರ 50ಮಿ. ಮೀ, ವಿಶ್ವನಾಥಪುರ 27ಮಿ.ಮೀ, ವೆಂಕಟಗಿರಿಕೋಟೆ 42ಮಿ.ಮೀ, ಕೊಯಿರಾ 4ಮಿ.ಮೀ, ಬೆಟ್ಟಕೋಟೆ 17ಮಿ. ಮೀ, ಕಾರಹಳ್ಳಿ 32ಮಿ.ಮೀ, ಆಗಿದೆ. ತಾಲೂಕಿನಲ್ಲಿ 9ಮಿ. ಮೀ ಮಳೆ ಪ್ರಮಾಣವಾಗಿದೆ. ದೇವನಹಳ್ಳಿ ಕಸಬಾ 5ಮಿ. ಮೀ, ಚನ್ನರಾಯಪಟ್ಟಣ 2ಮಿ.ಮೀ, ಕುಂದಾಣ 1ಮಿ.
ಮೀ, ವಿಜಯಪುರ 1ಮಿ.ಮೀ, ಮಳೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಎನ್. ಮಂಜುಳಾ ತಿಳಿಸಿದ್ದಾರೆ.
ಬೆಳೆ ಇಳುವರಿ ಕಡಿಮೆ ಆತಂಕ: ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಂತರ್ಜಲ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಮಳೆ ಸುರಿಯುತ್ತಿರುವುದರಿಂದ ಹಲವು ತಗ್ಗು ಪ್ರದೇಶಗಳಿರುವ
ಜಮೀನುಗಳಲ್ಲಿ ಮಳೆ ನೀರು ನಿಂತಿದೆ. ಮಳೆಯಿಂದಾಗಿ ರಾಗಿ ಪೈರು ಹಳದಿ ಬಣ್ಣದ ರೂಪ ಪಡೆಯುತ್ತಿದೆ ಎಂದು ರೈತ ಚನ್ನರಾಯಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ತರಕಾರಿಗಳಾದ ಆಲೂಗಡ್ಡೆ, ಗಡ್ಡೆಕೋಸು, ಗೆಣಸು, ಕ್ಯಾರೆಟ್, ಮೂಲಂಗಿ ಬೆಳೆಗಳಿಗೆ ಅನಾನುಕೂಲವಾಗಿದ್ದು, ಮಳೆ ಒಂದು ವಾರ ಬಿಡುವು ನೀಡಿದರೆ ಎಲ್ಲಾ ಬೆಳೆಗಳಿಗೆ ಅನುಕೂಲವಾಗಲಿದೆ. ಇದೇ ರೀತಿ ಮಳೆ ಮುಂದುವರಿದರೆ ಬೆಳೆಗಳ ಶೇಕಡವಾರು ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂದು ರೈತ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಮಳೆಗೆ ಕೋಡಿ ಬಿದ್ದಕೆರೆ, ಕುಂಟೆಗಳು: ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆರೆ, ಕುಂಟೆಗಳು ಕೋಡಿ ಬಿದ್ದಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ತಾಲೂಕಿನ ಮಧುರೆ ಹೋಬಳಿಯಲ್ಲಿ 34 ಮಿ.ಮೀ, ಸಾಸಲು ಹೋಬಳಿ 83 ಮಿ.ಮೀ,
ತೂಬಗೆರೆ ಹೋಬಳಿ 69 ಮಿ.ಮೀ, ಕಸಬಾ ಹೋಬಳಿ 46 ಮಿ.ಮೀ, ದೊಡ್ಡಬೆಳವಂಗಲ ಹೋಬಳಿ 66 ಮಿ.ಮೀ ಮಳೆಯಾಗಿದೆ. ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಭಕ್ತರಹಳ್ಳಿ, ಕಸಬಾ ಹೋಬಳಿ ಶ್ರವಣೂರು ಕೆರೆ ಕೋಡಿ ಬಿದ್ದಿವೆ. ಸಾಸಲು
ಹೋಬಳಿಯಲ್ಲಿ ಬುಧವಾರ ರಾತ್ರಿ 83 ಮಿ.ಮೀ ಮಳೆಯಾಗಿರುವುದರಿಂದ ಬಹುತೇಕ ಕೆರೆಗಳಿಗೂ ಮುಕ್ಕಾಲು ಭಾಗದಷ್ಟು ನೀರು ಬಂದಿದೆ. ಗುಂಡಮಗೆರೆ ಕೆರೆ ಕೋಡಿ ಬಿದ್ದಿದ್ದರೆ ಸಣ್ಣ ಪುಟ್ಟ ಕೆರೆ, ಕುಂಟೆಗಳು ತುಂಬಿ ಹರಿಯುತ್ತಿವೆ. ದೊಡ್ಡಬೆಳವಂಗಲ ಹೋಬಳಿಯ ಸೋಣ್ಣೇನಹಳ್ಳಿ ಕೆರೆ ತೂಬು ಕಿತ್ತು ಬಿರುಕು ಬಿಟ್ಟಿರುವುದರಿಂದ ಕೆರೆಯಿಂದ ನೀರು ಹೊರ ಹೋಗುತ್ತಿದ್ದವು. ನೀರು ಹೊರ ಹೋಗದಂತೆ ಕೆರೆ ಸುತ್ತ ಮುತ್ತಲಿನ ಗ್ರಾಮಗಳ ಯುವಕರು ಶ್ರಮದಾನ ಮಾಡುವ ಮೂಲಕ ತೂಬಿನ ಮೂಲಕ ನೀರು ಹೊರ ಹೊಗದಂತೆ
ದುರಸ್ತಿಗೊಳಿಸಿದರು. ಸಣ್ಣ ನೀರಾವರಿ ಇಲಾಖೆಗೆ ಸೇರಿರುವ ಸೋಣ್ಣೇನಹಳ್ಳಿ ಕೆರೆ ತೂಬು ಅತ್ಯಂತ ಶೀಥಿಲವಾಗಿದ್ದು ಸೂಕ್ತ ರೀತಿಯಲ್ಲಿ ದುರಸ್ತಿಗೊಳಿಸಬೇಕು. ಈ ಬಗ್ಗೆ ಹಲವಾರು ಬಾರಿ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ವಿಭಾಗದ ಅಧಿಕಾರಿಗಳಿಗೆ ತಿಳಿಸಿದ್ದರೂ ದುರಸ್ತಿ
ಮಾಡಿಸಿಲ್ಲ. ಇದರಿಂದಾಗಿ ಒಂದು ವಾರದಿಂದ ಕೆರೆಗೆ ಬಂದಿದ್ದು ನೀರು ವ್ಯರ್ಥವಾಗಿ ತೂಬಿನ ಮೂಲಕ ಹೊರ ಹೋಗಿವೆ ಎಂದು ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ತಿಳಿಸಿದ್ದಾರೆ.
ಹದಗೆಟ್ಟ ರಸ್ತೆ ಸಂಚಾರ ಅಸ್ತವ್ಯಸ್ತ: ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ದಾಬಸ್ ಪೇಟೆ-ದೊಡ್ಡಬಳ್ಳಾಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರ ಅಸ್ತವ್ಯಸ್ತಗೊಂಡಿದೆ.
ಒಂದು ವರ್ಷದಿಂದಲೂ ಸ್ಥಗಿತ: ಇತ್ತೀಚೆಗಷ್ಟೇ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚುವ ಮೂಲಕ ತೇಪೆ ಹಾಕಲಾಗಿತ್ತು. ಆದರೆ, ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ತಾಲೂಕಿನ ರಾಮೇಶ್ವರ ಕ್ರಾಸ್, ನಾರನಹಳ್ಳಿ, ಕಾಮನ ಅಗ್ರಹಾರ ಗೇಟ್ ಸೇರಿದಂತೆ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿವೆ. ಬೈಕ್ ಸವಾರರು ಅಪಘಾತಗಳು ಆಗುತ್ತಿದ್ದು ಕೈ ಕಾಲುಗಳನ್ನು ಮುರಿದುಕೊಳ್ಳುವಂತಾಗಿದೆ ಎನ್ನುತ್ತಾರೆ ದೊಡ್ಡಬೆಳವಂಗಲ ಗ್ರಾಮದ ನಿವಾಸಿ ಸಿ.ಎಚ್.ರಾಮಕೃಷ್ಣ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಒಂದು ವರ್ಷದಿಂದಲೂ ಸ್ಥಗಿತಗೊಂಡಿರುವುದರಿಂದ ಡಾಂಬರು ಹಾಕಿರುವ ರಸ್ತೆಯು ಕಿತ್ತುಹೋಗಿದೆ.
ಬಸ್ ಸಂಚಾರ ಬಂದ್: ತಾಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿ ಗ್ರಾಮದ ಮೂಲಕ ಕೊಟ್ಟಿಗೆಮಚ್ಚೇನಹಳ್ಳಿ, ಕುಕ್ಕಲಹಳ್ಳಿ, ಮಲ್ಲಸಂದ್ರ, ಜಕ್ಕೇನಹಳ್ಳಿ, ಕಲ್ಲುಕುಂಟೆ ಸೇರಿದಂತೆ ಐದಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯುಲ್ಲಿನ ಮೋರಿ ಕುಸಿದು ಬಿದ್ದಿರುವುದರಿಂದ ಬಸ್ ಸಂಚಾರ ಸ್ಥಗಿತಕೊಂಡಿದೆ. ಈ ರಸ್ತೆಯಲ್ಲಿ ನಿರ್ಮಿಸಲಾಗಿರುವ ಮೋರಿ ಅತ್ಯಂತ ಹಳೆಯದಾಗಿದ್ದು ಶಿಥಿಲಗೊಂಡಿತ್ತು. ಈ ಮೋರಿಯನ್ನು ದುರಸ್ತಿಗೊಳಿಸುವಂತೆ ಹತ್ತಾರು ಬಾರಿ ಮನವಿ ಮಾಡಿದ್ದರೂ ನಿರ್ಲಕ್ಷ್ಯ ಮಾಡಲಾಗಿತ್ತು. ಈಗ ಮಳೆ ಹೆಚ್ಚಾಗಿದ್ದರಿಂದ ನೀರು ಹರಿದು ಬಂದು ಮೋರಿ ಕುಸಿದು ಬಿದ್ದಿದೆ ಎಂದು ಉಜ್ಜನಿ ಗ್ರಾಮದ ನಿವಾಸಿ ತಿಮ್ಮಗೌಡ
ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.