ತುಂಬಿ ಹರಿದ ದಕ್ಷಿಣ ಪಿನಾಕಿನಿ ನದಿ
Team Udayavani, Oct 13, 2017, 12:17 PM IST
ಎಸ್.ಮಹೇಶ್
ದೇವನಹಳ್ಳಿ: ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಸೂಲಿಬೆಲೆ ರಸ್ತೆಯ ರಾಷ್ಟ್ರೀಯ ಹೆದ್ದಾರಿ 207ರ ಬಾಲೇಪುರ
ಗ್ರಾಮದ ಸಮೀಪದಲ್ಲಿರುವ ದಕ್ಷಿಣ ಪಿನಾಕಿನಿ ನದಿ ತುಂಬಿ ಹರಿಯುತ್ತಿದೆ. ಸುಮಾರು 25 ವರ್ಷಗಳ ನಂತರ ತುಂಬಿ
ಹರಿದ ದಕ್ಷಿಣ ಪಿನಾಕಿನಿ ನದಿ ಈ ಭಾಗದ ಜನರಿಗೆ ಮತ್ತು ರೈತರಿಗೆ ಈ ನೀರನ್ನು ನೋಡಿ ಸಂತಸ ಪಡುತ್ತಿದ್ದಾರೆ.
ರೈತಾಪಿ ವರ್ಗದವರಲ್ಲಿ ಸಂತಸದ ವಾತಾವರಣ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೆ ಹರಿಯುವ ಏಕೈಕ ನದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಕ್ಷಿಣ ಪಿನಾಕಿನಿ ನದಿ ಸೂಲಿಬೆಲೆಯ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾದು ಹೋಗಿದೆ. ಸರಿಸುಮಾರು 25 ವರ್ಷಗಳ ಬಳಿಕ ತುಂಬಿ ಹರಿದ ದಾಖಲೆ ನಿರ್ಮಾಣ ಮಾಡುವುದರ ಮೂಲಕ ಪ್ರಕೃತಿ ಪ್ರಿಯರನ್ನು ತನ್ನತ್ತ ಆಕರ್ಷಿಸುವುದರ ಜೊತೆಗೆ ರೈತಾಪಿ ವರ್ಗದವರಲ್ಲಿ ಸಂತಸದ ವಾತಾವರಣ ನಿರ್ಮಾಣ ಮಾಡಿತ್ತು.
ಬಂಗಾಳಕೊಲ್ಲಿ ಸೇರುವ ಪಿನಾಕಿನಿ: ಚಿಕ್ಕಬಳ್ಳಾಪುರದ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ ಉಗಮವಾಗಿ, ದೇವನಹಳ್ಳಿ ಮಾರ್ಗವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದಲ್ಲಿರುವ ಬೆಟ್ಟಕೋಟೆ ಕೆರೆ ತುಂಬಿ ನಲ್ಲೂರು ಬಿದಲಪುರ ಮುಖಾಂತರ ಸೂಲಿಬೆಲೆ ಮಾರ್ಗವಾಗಿ ಹೊಸಕೋಟೆ ಕೆರೆ ಸೇರುವ ಮೂಲಕ ಕೋಲಾರ ಮಾರ್ಗವಾಗಿ ತಮಿಳುನಾಡಿನ ಮೂಲಕ ಬಂಗಾಳಕೊಲ್ಲಿ
ಸೇರುವ ಪಿನಾಕಿನಿ ಐತಿಹಾಸಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಪಡೆಯವುದರ ಮೂಲಕ ನದಿ ತಪ್ಪಲಿನ ಕೃಷಿಕರಿಗೆ ವರದಾನವಾಗಿತ್ತು. ಆದರೆ, ಕಳೆದ 25 ವರ್ಷಗಳಿಂದ ಮಳೆ ಅವಕೃಪೆಯಿಂದ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿದ್ದ ವೇಳೆ ನದಿ ನೀರು ಬತ್ತಿಹೋಗಿತ್ತು. ಇತ್ತಿಚೆಗೆ ಮಳೆಯಿಂದ ನೀರು ಬಂದಿದೆ. ತಾಲೂಕಿನಲ್ಲಿಯೇ ಅತೀ ಹೆಚ್ಚು ಮಳೆಯಾಗಿರುವ ಪ್ರದೇಶವೆಂದರೆ ಅದು ಚನ್ನರಾಯಪಟ್ಟಣ ಹೋಬಳಿಯಾಗಿದೆ. ಅಂತರ್ಜಲ ಕುಸಿತದ ಕಾರಣದಿಂದ ಶೇಖರಣೆಯಾಗಿದ್ದ ನೀರೆಲ್ಲಾ ಆವಿಯಾಗಿದ್ದು, ಈ ಮಳೆಯಿಂದಾಗಿ ದಕ್ಷಿಣಾ ಪಿನಾಕಿನಿ ಪುನರ್ ಜೀವನ ನೀಡಿದೆ. ಮಳೆಯಿಂದ ನೀರು ಶೇಖರಣೆಯಾಗಿ ನದಿ ತಪ್ಪಲಿನ ರೈತರು ಕೃಷಿಗೆ ಪೂರಕ ಹಾಗೂ ಉತ್ತಮ ಬೆಳೆಗಳನ್ನು ಬೆಳೆಯಬಹುದೆಂಬ ಸಂತಸ ಮೂಡಿದ್ದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಯಥೇತ್ಛ ನೀರು ಸಿಗುತಿತ್ತು: ಸುಮಾರು 20 ವರ್ಷಗಳ ಹಿಂದೆ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ತುಂಬಿದ ಕೆರೆಗಳು ದೇವನಹಳ್ಳಿ ಮಾರ್ಗವಾಗಿ ಬೆಟ್ಟಕೋಟೆ ಕೆರೆಯಿಂದ ತುಂಬಿ ಹರಿಯುತ್ತಿದ್ದು, ಬೇಸಿಗೆ ಕಾಲದಲ್ಲೂ ಭತ್ತ ಬೆಳೆಯುವ ಕಾಲವಾಗಿತ್ತು. ಎಲ್ಲಾ ಕಾಲದಲ್ಲೂ ನೀರು ಸಿಗುತ್ತಿತ್ತು. ದಕ್ಷಿಣ ಪಿನಾಕಿನಿ ನದಿ ಅಕ್ಟೋಬರ್ ತಿಂಗಳಿನಲ್ಲಿ ಯಥೇತ್ಛವಾಗಿ ಹರಿಯುತ್ತಿತ್ತು. ಆಗ ರಸ್ತೆಗಳ ಸೇತುವೆಗಳು ಇರಲಿಲ್ಲ. ನೀರು ಹರಿದು ಬಂದಾಗ ಸಂಚಾರ ಅಸ್ತವ್ಯಸ್ತವಾಗುತ್ತಿತ್ತು. ಈಗ ಸೇತುವೆಗಳು ನೀರ್ಮಾಣವಾದರೆ ನೀರು ನೋಡುವುದು ಕಷ್ಟಕರವಾಗಿದೆ. ಈ ಬಾರಿ ಸುರಿದ ಮಳೆಯಿಂದ ಸೇತುವೆಗಳ ಕೆಳಗಡೆ ನೀರು ಹರಿಯುತ್ತಿರುವುದನ್ನು ನೋಡಬಹುದು. ಇದರಿಂದ ಅಂತರ್ಜಲಮಟ್ಟ ಹೆಚ್ಚಿ ಕೊಳವೆ ಬಾವಿಗಳಲ್ಲಿ ಸ್ವಲ್ಪಮಟ್ಟಿಗೆ ನೀರು ಹೆಚ್ಚಾಗಿದೆ. ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದು ರೈತ ಹೊಸನಲ್ಲೂರು ನಂಜೇಗೌಡ ಹೇಳುತ್ತಾರೆ.
ಶ್ರೀಮಂತ ಮರಳಿನಿಂದ ಲೂಟಿ : ನದಿ ಮರಳು ನಿರ್ಮಾಣವೂ ಬಹಳ ಪ್ರಭಾವವಾಗಿದ್ದು, ಇದನ್ನು ಹಿಂದೆ ದೊಡ್ಡ ನೀರಿನ ಹರಿವಿನೊಂದಿಗೆ ದೀರ್ಘಕಾಲಿಕ ನದಿಯಾಗಿರಬಹುದು ಎಂಬುವುದನ್ನು ಸೂಚಿಸುತ್ತದೆ. ಈ ನದಿ ಈಗ ಅದರ ಶ್ರೀಮಂತ ಮರಳಿನಿಂದ ಲೂಟಿ ಮಾಡಲಾಗಿದೆ. ಮಾನ್ಸೂನ್ ಋತುಗಳಲ್ಲಿ ಮಾತ್ರ ನೀರಿನ ಹರಿವು ಹೆಚ್ಚಾಗಿರುತ್ತದೆ. ವರ್ಷದಲ್ಲಿ ಉಳಿದ ಭಾಗಗಳಲ್ಲಿ ನದಿ
ಶುಷ್ಕವಾಗಿರುತ್ತದೆ ಎಂದು ಹಿರಿಯ ನಾಗರಿಕ ನಾರಾಯಣಚಾರ್ ಹೇಳುತ್ತಾರೆ.
ದಕ್ಷಿಣ ಪಿನಾಕಿನಿ ನದಿ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಸುಮಾರು 400ಕಿ.ಮೀ. ದೂರ ಹರಿಯುತ್ತಿದೆ. ಕರ್ನಾಟಕದಲ್ಲಿ ದಕ್ಷಿಣ ಪಿನಾಕಿನಿ ಎನ್ನುತ್ತಾರೆ. ತಮಿಳುನಾಡಿನಲ್ಲಿ ಥನ್ಪೆನೈ ಎಂದು ಕರೆಯುತ್ತಾರೆ. ಮುಂದಿನ ಪೀಳಿಗೆಗೆ ಈ ರೀತಿ ಇತ್ತು ಎಂದು ಹೇಳುವ ಪರಿಸ್ಥಿತಿ ಬಂದೊದಗಿದೆ.
ನಾರಾಯಣಚಾರ್, ನಲ್ಲೂರು ಗ್ರಾಮಸ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.