ಐಎಂ ಉಗ್ರರಿಗೆ ಹಣಕಾಸು ನೆರವು: ಮಂಗಳೂರಿನಲ್ಲಿ ಆಸ್ತಿ ಮುಟ್ಟುಗೋಲು
Team Udayavani, Oct 14, 2017, 9:15 AM IST
ಹೊಸದಿಲ್ಲಿ: ಇಂಡಿಯನ್ ಮುಜಾಹಿ ದೀನ್ ಉಗ್ರ ಸಂಘಟನೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಕರ್ನಾಟಕದಲ್ಲಿ ಐದು ಲಕ್ಷ ರೂ. ಗೂ ಹೆಚ್ಚು ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಅಕ್ರಮ ಹಣ ಸಾಗಾಟ ಆರೋಪದ ಮೇಲೆ ಮಂಗಳೂರಿನಲ್ಲಿ ಈ ದಾಳಿ ನಡೆಸಿ ಆಸ್ತಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. ಧೀರಜ್ ಸಾವೋ ಎಂಬಾತನ ಹಣದ ವ್ಯವಹಾರವನ್ನು ಗಮನಿಸಿ, ಈತನಿಗೆ ಸೇರಿದ ಆಸ್ತಿ ಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈತನ ಅಕೌಂಟ್‌ಗೆ ದೇಶದ ವಿವಿಧ ಭಾಗಗಳಿಂದ ಹಣ ಹರಿದುಬಂದಿದೆ. ಈ ಹಣದಲ್ಲಿ ತನ್ನ ಕಮಿಷನ್ ಇರಿಸಿಕೊಳ್ಳುತ್ತಿದ್ದ ಸಾವೋ ಉಳಿದ ಹಣವನ್ನು ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಗೆ ಸೇರಿದ ಜುಬೈರ್ ಹುಸೇನ್, ಅಯೆಶಾ ಬಾನು, ರಾಜು ಖಾನ್ ಮತ್ತು ಇತರರ ಖಾತೆಗೆ ರವಾನಿಸುತ್ತಿದ್ದ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಈತನ ವಹಿವಾಟಿನ ಮೇಲೆ ಸಂದೇಹ ಬಂದಿದ್ದು, ಹೀಗಾಗಿ ಚಲನವಲನ ಗಮನಿಸುತ್ತಿದ್ದೆವು. ಈತನ ಹಣದ ಸಹಾಯದಿಂದಲೇ ಬಾನು ಮತ್ತು ಹುಸೇನ್ ಮಂಗಳೂರಿನ ಪಂಜಿ ಮೊಗರುವಿನಲ್ಲಿ ಖರೀದಿಸಿದ್ದ ವಸತಿಯೋಗ್ಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಎಲ್ಲ ಆರೋಪಿಗಳು ಪಾಕಿಸ್ಥಾನ ನಾಗರಿಕ ಖಾಲಿದ್ ಜತೆ ಸಂಪರ್ಕದಲ್ಲಿದ್ದಾರೆ. ಈತನ ನಿರ್ದೇಶನದ ಮೇರೆಗೆ ಹಲವಾರು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದು ಉಗ್ರರಿಗೆ ಹಣವನ್ನು ಕಳುಹಿಸ ಲಾಗುತ್ತಿತ್ತು. ಜತೆಗೆ ತಮಗೆ ಸೇರಬೇಕಾದ ಕಮಿಷನ್ ಅನ್ನೂ ಪಡೆದುಕೊಳ್ಳುತ್ತಿದ್ದರು. ಈ ಎಲ್ಲ ಖಾತೆಗಳಿಗೆ ದೇಶದ ವಿವಿಧ ಭಾಗಗಳಿಂದ ಅನಾಮಧೇಯ ವ್ಯಕ್ತಿಗಳು ಹಣ ಹಾಕುತ್ತಿದ್ದರು. ಎಲ್ಲಿ ಅಕೌಂಟ್ ಓಪನ್ ಆಗಿರುತ್ತದೆಯೋ ಆ ಬ್ರ್ಯಾಂಚ್ ಬಿಟ್ಟು ಉಳಿದ ಕಡೆಗಳಲ್ಲಿ ತತ್‌ಕ್ಷಣವೇ ಎಟಿಎಂಗಳನ್ನು ಬಳಸಿಕೊಂಡು ಹಣ ತೆಗೆಯುತ್ತಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.