ಅಪರಾಧ ಪತ್ತೆ-ತಡೆಗೆ ವಲಸಿಗರ ಮಾಹಿತಿ ಸಂಗ್ರಹ
Team Udayavani, Oct 14, 2017, 12:18 PM IST
ಬಜಪೆ : ಜಿಲ್ಲೆಯಲ್ಲಿ ಅಪರಾಧ ಪತ್ತೆ ಹಚ್ಚಿ, ತಡೆಗಟ್ಟಲು ಹಾಗೂ ಸುರಕ್ಷತೆ ದೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತರ ರಾಜ್ಯಗಳಿಂದ ಬಂದವರು ವಾಸ್ತವ್ಯ ಇರುವ ಬಗ್ಗೆ ದಾಖಲೀಕರಣ ಅಗತ್ಯವಾಗಿ ಮಾಡಬೇಕಿದೆ.
ಈ ಬಗ್ಗೆ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿರುವ ಪೊಲೀಸ್ ಇಲಾಖೆ, ಕಂಪನಿಗಳಲ್ಲಿ ಕೆಲಸ ಮಾಡುವ ಅನ್ಯ ರಾಜ್ಯದ ಜನರ ಮೂಲ ದಾಖಲೆ, ಭಾವಚಿತ್ರ ಸಹಿತ ಮಾಹಿತಿ ಸಂಗ್ರಹಿಸಿದೆ. ಆದರೆ, ಬೇರೆ ಕಡೆಗಳಲ್ಲಿ ದುಡಿಯುವ ವಲಸಿಗರ ದಾಖಲೀಕರಣ ಆಗಿಲ್ಲ. ಇದನ್ನು ಗ್ರಾ.ಪಂ.ಗಳು
ನಿರ್ವಹಿಸಬೇಕಾಗಿದೆ.
ಬಜಪೆ ಠಾಣೆಯಲ್ಲಿ
ಬಜಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಸ್‌ಇಝಡ್ ಕಂಪೆನಿಗಳ ಮತ್ತು ಗಂಜಿಮಠದಲ್ಲಿರುವ ಐಟಿ ಪಾರ್ಕ್‌ನ ಕಂಪೆನಿಗಳಲ್ಲಿ ದುಡಿಯುವ ಅನ್ಯ ರಾಜ್ಯಗಳ ಸುಮಾರು 7000 ಜನರ ದಾಖಲೀಕರಣ ಮಾಡಿದ್ದಾರೆ.
ಅವರ ಮೂಲ ದಾಖಲೆ, ಭಾವಚಿತ್ರ ಹಾಗೂ ಯಾವ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆಂಬ ಬಗ್ಗೆ ಬಜಪೆ ಠಾಣೆಯಲ್ಲಿ ಮಾಹಿತಿ ಸಂಗ್ರಹವಿದೆ.ಪೆರ್ಮುದೆ, ಬಜಪೆ ಮತ್ತು ಗಂಜಿಮಠ ಗ್ರಾಮ ಪಂಚಾಯ ತ್‌ಗಳ ವ್ಯಾಪ್ತಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಅನ್ಯ ರಾಜ್ಯದ ವಲಸಿಗರಿದ್ದಾರೆ.
ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ತೀವ್ರವಾಗಿದ್ದು, ಇತರ ರಾಜ್ಯಗಳ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿ ಬಂದು ದುಡಿಯುತ್ತಿದ್ದಾರೆ. ಹೆಚ್ಚಿನ ಕಾರ್ಖಾನೆ, ಕಟ್ಟಡ ಹಾಗೂ ಇತರ ಕಾಮಗಾರಿಗಳಲ್ಲಿ ವಲಸೆ ಕಾರ್ಮಿಕರೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ.
ಅವರೊಂದಿಗೆ ಸೇರಿಕೊಂಡಿರುವ ಕೆಲವು ಅಪರಿಚಿತರ ಬಗ್ಗೆ ಯಾವ ದಾಖಲೆಗಳೂ ಪೊಲೀಸ್ ಅಥವಾ ಗ್ರಾ.ಪಂ. ಬಳಿ ಇಲ್ಲ. ಅವರು ಎಲ್ಲಿಯವರು ಎಂಬುದೂ ಹೆಚ್ಚಿನವರಿಗೆ ತಿಳಿದಿಲ್ಲ. ಕಳ್ಳತನ, ದರೋಡೆಯಂಥ ಕೃತ್ಯಗಳಲ್ಲೂ ಅವರ ಕೈವಾಡ, ಪಾತ್ರ ಬಯಲಾಗುತ್ತಿದೆ. ಅಪರಾಧ ಕೃತ್ಯಗಳನ್ನೆಸಗಿ ಪರಾರಿಯಾಗುವ ಅವರನ್ನು ಬಂಧಿಸುವುದು ಪೊಲೀಸ್ ಇಲಾಖೆಗೂ ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಎಲ್ಲ ವಲಸಿಗರ ದಾಖಲೀಕರಣ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಗುತ್ತಿಗೆದಾರರೂ ತಮ್ಮಲ್ಲಿರುವ ಕಾರ್ಮಿಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಲವರು ಇನ್ನೂ ಕೊಟ್ಟಿಲ್ಲ. ಹೀಗಾಗಿ, ಈಗ ಲಭ್ಯವಿರುವ ಮಾಹಿತಿ ಪರ್ಯಾಪ್ತವಲ್ಲ. ಗ್ರಾಮ ಪಂಚಾಯತ್ ಗಳೂ ತಮ್ಮ ವ್ಯಾಪ್ತಿಯಲ್ಲಿ ವಲಸಿಗರಿದ್ದರೆ ಅವರ ಭಾವಚಿತ್ರ, ಮಾಹಿತಿ ಸಂಗ್ರಹಿಸುವ ಅಗತ್ಯವಿದೆ.
ಮನೆ ಮಾಲಕರೂ ಮಾಹಿತಿ ಸಂಗ್ರಹಿಸಲಿ
ಅಪರಿಚಿತರಿಗೆ ಮನೆಯನ್ನು ಬಾಡಿಗೆಗೆ ಕೊಡುವ ಮುನ್ನ ಮಾಲಕರು ಅವರ ಪೂರ್ಣ ವಿವರ ತಿಳಿದುಕೊಳ್ಳಬೇಕು ಅಲ್ಲದೆ, ತಮ್ಮಲ್ಲಿ ಬಾಡಿಗೆಗಿರುವ ವ್ಯಕ್ತಿಗಳ ಮಾಹಿತಿಯನ್ನು ಪೊಲೀಸ್ ಠಾಣೆ ಹಾಗೂ ಗ್ರಾಪಂ ಕಚೇರಿಗೆ ಸಲ್ಲಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ದಾಖಲೆ ಒದಗಿಸದೆ ಅಕ್ರಮವಾಗಿ ನೆಲೆಸಿದವರನ್ನು ಪತ್ತೆ ಮಾಡುವುದಕ್ಕೂ ಅಧಿಕಾರಿಗಳು ಮುಂದಾಗಿದ್ದಾರೆ. ಕರಾವಳಿಯ ಸುರಕ್ಷತೆ, ಅಪರಾಧ ಪತ್ತೆ ಹಾಗೂ ತಡೆ ದೃಷ್ಟಿಯಿಂದ ಇತರೆಡೆಯಿಂದ ಬಂದ ವ್ಯಕ್ತಿಗಳಿಗೆ ಕೆಲಸ ಅಥವಾ ಬಾಡಿಗೆಗೆ ಮನೆ ಕೊಡುವ ಮೊದಲು ಅವರ ಮೂಲ ವಿಳಾಸ ದಾಖಲೆ, ಭಾವಚಿತ್ರವಿರುವ ಗುರುತಿನ ಚೀಟಿ ಇತ್ಯಾದಿಗಳನ್ನು ಸಂಗ್ರಹಿಸಬೇಕು.
– ಡಿ.ಟಿ. ನಾಗರಾಜ್
ಬಜಪೆ, ಠಾಣೆ ಇನ್‌ಸ್ಪೆಕ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.