“ಚೆಕಾವ್‌ ಟು ಶಾಂಪೇನ್‌’ : ಅಭಿನಯದಲ್ಲಿ ಏಕತಾರಿ ಶೃತಿ 


Team Udayavani, Oct 14, 2017, 4:26 PM IST

97.jpg

ಕಥೆಗಳಲ್ಲಿ ಒಂದು ಲೋಕವಿರುತ್ತದೆ; ಬದುಕಿನ ವೈವಿಧ್ಯವಿರುತ್ತದೆ. ಅವು ಲೇಖಕನ ಖಾಸಗಿ ಅನುಭವಗಳೂ ಆಗಿರಬಹುದು ಅಥವಾ ಆತ ಜಗತ್ತ ನ್ನು  ತನ್ನ ಕಾಣ್ಕೆ ಗೆ ಅನುಸಾರವಾಗಿ ಕಾಣುವ ನೋಟಕ್ರಮವೂ ಆಗಿರಬಹುದು. ಕಥೆ ಕಟ್ಟುವ ಅಥವಾ ಹೆಣೆಯುವುದರ ಹಿಂದೆ ಒಂದು ಕೌಶಲ್ಯವಿದ್ದಂತೆ ಅದನ್ನು ಎಲ್ಲ ಕಾಲಕ್ಕೂ ದಾಟಿಸಿ ಹಲವರ ಬದುಕಿನ ಅನುಭವಗಳ‌ ಭಾಗವಾಗಿಸುವ ಲೇಖಕ ಮಾತ್ರ ಬಹಳ ಕಾಲ ಉಳಿಯುತ್ತಾನೆ, ಮತ್ತೆ ಮತ್ತೆ ಮನಸ್ಸುಗಳನ್ನು ಕಲಕುತ್ತಿರುತ್ತಾನೆ.

ರಷ್ಯಾದ ಖ್ಯಾತ ಕಥೆಗಾರ, ನಾಟಕಕಾರ ಆ್ಯಂಟನ್‌ ಚೆಕಾವ್‌ ಕನ್ನಡದ ಸಂವೇದನೆಗೂ ಹೊಸಬನಲ್ಲ. ಆತ ಶ್ರೇಷ್ಠ ನಾಟಕಗಳನ್ನು ಬರೆದು ಅವು ಇಂದಿಗೂ ಪ್ರಯೋಗಗೊಳ್ಳುತ್ತಿದ್ದರೂ ಅವನ ಕಥೆಗಳನ್ನು ಮತ್ತೆ ರಂಗರೂಪಕ್ಕೆ ಅಳವಡಿಸಲಾಗುತ್ತಿದೆ. ನಾಟಕ ಹಾ ಗೂ ಕಥೆಯ ಪ್ರಾಕಾರ ಬೇರೆಬೇರೆಯಾದರೂ ಚೆಕಾವ್‌ ತನ್ನ ಕಥೆಗಳಲ್ಲೂ ನಾಟಕೀಯ ಗುಣವನ್ನು ಹೇರಳವಾಗಿ ಅಡಕಗೊಳಿಸಿರುವುದರಿಂದ ಅವು ದೃಶ್ಯಗಳಾಗಿ ಪಾತ್ರಗಳಾಗಿ ಮೈದಾಳುತ್ತಿವೆ.

ಧಾರವಾಡದ ರಂಗಾಯಣ ರೆಪರ್ಟರಿ ಕಲಾವಿದರು ಈಚೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ “ಚೆಕಾವ್‌ ಟು ಶಾಂಪೇನ್‌’ ಪ್ರದರ್ಶಿಸಿದ ನಾಟಕದಲ್ಲಿ ಮೇಲಿನ ಮಾತುಗಳು ಮತ್ತೆ ಮನದಟ್ಟಾದವು. ಹೇಮಾ ಪ ಟ್ಟಣ ಶೆಟ್ಟಿ ಚೆಕಾವ್‌ನ ಕಥೆಗಳನ್ನು ರಂಗರೂಪಕ್ಕೆ ಅಳವಡಿಸಿದ್ದರು.

ಪ್ರತಿ ಕಥಾ ರಚನೆಯ ಹಿಂದೊಂದು ಕಥೆಯಿರುತ್ತದೆ. ಒಂದು ಸಂದರ್ಭವಿರುತ್ತದೆ. ಒಂದು ದರ್ಶನವಿರುತ್ತದೆ. ಅದು ಕಥೆಯಂತೆಯೇ ಸ್ವಾರಸ್ಯಪೂರ್ಣ ಎಂದೇನಿಲ್ಲ. ಇರಬೇಕೆಂಬ ನಿಯಮವೂ ಇಲ್ಲ. ಶ್ರೇಷ್ಠ ಕಥೆಗಳನ್ನು ಬರೆದ ಕಥೆಗಾರ ಚೆಕಾವ್‌ ಕೂಡ ಇಂಥ ಕಥಾಹಿನ್ನೆಲೆಗಳಿಗೆ ಮತ್ತು ಅವು ಗ  ಳು ಸೃಷ್ಟಿಯಾದ ಸಂದರ್ಭಗಳಿಗೆ ಹೊರತಲ್ಲ. ಈರಂಗ ರೂಪದ ವೈಶಿಷ್ಟéವೆಂದರೆ ಚೆಕಾವ್‌ ತನ್ನ ಕಥೆಗಳು ಸೃಷ್ಟಿಯಾದ ಹಿನ್ನೆಲೆಗಳನ್ನು ಹೇಳುವುದರೊಂದಿಗೆ ಕಥೆಗಳನ್ನು ಆರಂಭಿಸುತ್ತಾನೆ. ಕೆಲವಕ್ಕೆ ಹಿನ್ನೆಲೆ, ಮತ್ತೆ ಕೆಲವಕ್ಕೆ ಕಥೆಯ ಪಾತ್ರಗಳ ಸ್ವಭಾವಗಳಿಗೆ ಸಂಬಂಧಿಸಿದಂತೆ ಮಾತುಗಳ ಧ್ವನಿತವಿದೆ. ಚೆಕಾವ್‌ ಇಲ್ಲಿ ನಿರೂಪಕನೂ ಹೌದು, ಕೆಲವು ಕಥೆಗಳೊಗಿನ ಪಾತ್ರವೂ ಹೌದು. ಕಥೆಗಳ ಹಿನ್ನೆಲೆಗಳಿಗೆ ಸಂಬಂಧಿಸಿದಂತೆ ಚೆಕಾವ್‌ ಖುದ್ದಾಗಿ ಹೇಳಿಕೊಂಡಿರುವುದರ ನಿರೂಪಣೆಗಳನ್ನು ಹೇಮಾ ಪಟ್ಟಣಶೆಟ್ಟಿಯವರು ಎಲ್ಲಿಂದ ಹೆಕ್ಕಿದರು ಎಂಬ ಪ್ರಶ್ನೆಗಳು ಮೂಡಿತು. ನಾಟಕದ ಆರಂಭದಲ್ಲಿ ಚೆಕಾವ್‌ ತನ್ನ ಬಗ್ಗೆ ಪರಿಚಯಿಸಿಕೊಳ್ಳುವ ಮಾತುಗಳನ್ನು ಓದಿದ್ದು ನೆನಪಿದೆ; ಆದರೆ, ಕಥಾ ಹಿನ್ನೆಲೆಗಳಿಗೆ ಸಂಬಂಧಿಸಿದ ಚೆಕಾವ್‌ಗಳ ನಿರೂಪಣೆಗಳನ್ನು ಕೇಳಿರಲಿಲ್ಲ.  ಅವು ಇಲ್ಲಿ ಕೇಳಿ ಬಂದವು. ಇವು ನಿಜಕ್ಕೂ ಚೆಕಾವ್‌ ಹೇಳಿರುವಂಥವೋ ಅಥವಾ ಹೇಮಾರವರು ರಂಗರೂಪದ ಬೆಳವಣಿಗೆಗೆ ಚೆಕಾವ್‌ನ ಕಥೆಗಳ ಆಶಯಗಳನ್ನು ಗ್ರಹಿಸಿ ಪೂರಕವಾಗಿ ಬರೆದಿರುವಂಥವೋ, ಒಟ್ಟಿನಲ್ಲಿ ಸಮಂಜಸ ಅನಿಸಿದವು.

ಇದನ್ನು ರಂಗದ ಮೇಲೆ ತರುವಲ್ಲಿ ವಿನ್ಯಾಸದ್ದೇನೂ ತೊಡಕು ಅನಿಸಲಿಲ್ಲ. ಚಿದಂಬರರಾವ್‌ ಜಂಬೆ ರಂಗವನ್ನು ಬೇರೆ ಬೇರೆ ಬಗೆಗಳಲ್ಲಿ ಮತ್ತು ಪರಿಕರಗಳನ್ನು ಬಳಸಿಕೊಂಡ ಬಗೆಯಲ್ಲಿ ಹೊಸತನವಿತ್ತು. ಆದರೆ, ತೊಡಕು ಅನಿಸಲು ಆರಂಭಿಸಿದ್ದು ಅಭಿನಯದ ಶೈಲಿಯಲ್ಲಿ. ಹೆಂಗಸೊಬ್ಬಳು ಬ್ಯಾಂಕಿಗೆ ಬಂದು ಸಂಬಂಧವೇ ಇಲ್ಲದ ವಿಷಯಕ್ಕೆ ಮ್ಯಾನೇಜರ್‌ನನ್ನು ಬೆಚ್ಚಿಸುವುದು, ಅದಕ್ಕೆ ಮ್ಯಾನೇಜರ್‌ ಪದೇಪದೇ ಚೇರಿನಿಂದ ಉರುಳುತ್ತ ನೆಲದ ಮೇಲೆ ಹುಳುವಿನಂತೆ ತೆವಳುವುದು, ಆ ಹೆಂಗಸು ಮ್ಯಾನೇಜರ್‌ನ ಟೇಬಲ್‌ ಹತ್ತಿ ಕರಾಟೆ ಮಾದರಿಯಲ್ಲಿ ಕಾಲುಗಳನ್ನು ಅಗಲಿಸಿ ನಿಲ್ಲುವುದು ಎಲ್ಲವೂ ಅತಿರೇಕ ಅನಿಸಿದವು. ಬೆಳಕಿನ ತಾಣಗಳನ್ನು ವಿಭಜಿಸಿಕೊಂಡ ಕ್ರಮ ಚೆನ್ನಾಗಿತ್ತು. ಸಂಗೀತದಲ್ಲಿ ಅಬ್ಬರವಿತ್ತು. ಚೆಕಾವ್‌ನ ಸುಂದರ ಕಥೆಗಳು ಇಲ್ಲಿ ಒಂದೇ ಜಾಡಿಗೆ ಸಿಕ್ಕಿಕೊಂಡದ್ದು ವಿಪರ್ಯಾಸದಂತಿತ್ತು. 

– ಎನ್‌.ಸಿ. ಮಹೇಶ್‌

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

156

Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.