“ಓಳ್ ಮುನ್ಸಾಮಿ’ಯಾಗಿ ಬಂದ್ರು ಕಾಶೀನಾಥ್: ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ
Team Udayavani, Oct 14, 2017, 4:37 PM IST
ಆಸ್ತಿಕ ಮತ್ತು ನಾಸ್ತಿಕನ ನಡುವೆ ನಡೆಯುವ ಕೋಲ್ಡ್ ವಾರ್ ಕುರಿತ ಸಿನಿಮಾ “ಓಳ್ ಮುನ್ಸಾಮಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿ ಕಾಶೀನಾಥ್ ಆಸ್ತಿಕನಾದರೆ, ‘ಜಲ್ಸಾ’ದ ನಿರಂಜನ್ ಒಡೆಯರ್ ನಾಸ್ತಿಕನಾಗಿ ಅಭಿನಯಿಸಿದ್ದಾರೆ. ಇನ್ನು ಅಖೀಲಾ ಪ್ರಕಾಶ್ ಚಿತ್ರದಲ್ಲಿ ಗಂಗಾ ಎಂಬ ಮುಗ್ಧ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆನಂದಪ್ರಿಯ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ರಚಿಸಿದ್ದಾರೆ. ಈ ಚಿತ್ರವನ್ನು ಸಮೂಹ ಟಾಕೀಸ್ ಸಂಸ್ಥೆ ನಿರ್ಮಿಸುತ್ತಿದೆ. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ.