ಬೆಂಬಿಡದ ಮಳೆ; ನಿತ್ಯ ಜನತೆಗೆ ರಗಳೆ
Team Udayavani, Oct 14, 2017, 5:03 PM IST
ಮೈಸೂರು: ನಗರದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಪಡುವಾರಹಳ್ಳಿ ಸೇರಿದಂತೆ ತಗ್ಗುಪ್ರದೇಶದ ಅನೇಕ ಬಡಾವಣೆಗಳ ಮನೆಗಳಿಗೆ ಮಳೆ ನೀರು ನುಗ್ಗಿ ರಾತ್ರಿಯಿಡೀ ಇಲ್ಲಿನ ನಿವಾಸಿಗಳು ಜಾಗರಣೆ ಮಾಡುವಂತಾಯಿತು.
ಇತ್ತ ದಸರಾ ವಸ್ತುಪ್ರದರ್ಶನ ಬಳಿಯ ದೊಡ್ಡ ಮೋರಿ ಮಳೆ ನೀರಿನಿಂದ ತುಂಬಿ ಹರಿದ ಪರಿಣಾಮ ವಸ್ತುಪ್ರದರ್ಶನ ಪ್ರಾಧಿಕಾರದ ಅಂಗಳದಲ್ಲೂ ಮಂಡಿಯುದ್ದ ನೀರು ನಿಂತು ಮಳಿಗೆ ಪಡೆದಿರುವ ವ್ಯಾಪಾರಸ್ಥರು ಪರಿತಪಿಸುವಂತಾಯಿತು. ವಸ್ತುಪ್ರದರ್ಶನ ಆವರಣದ ದೊಡ್ಡ ಮೋರಿ ತಡೆಗೋಡೆ ಕುಸಿದಿದ್ದರೂ ಅಧಿಕಾರಿಗಳು ದುರಸ್ತಿ ಮಾಡಿಸಿಲ್ಲ. ಬದಲಿಗೆ ಗೋಡೆ ಕುಸಿದು ಬಿದ್ದಿರುವ ಜಾಗಕ್ಕೆ ಮರಳು ಮೂಟೆ ಪೇರಿಸಿದ್ದರಿಂದ ಭಾರೀ ಮಳೆಯಿಂದ ನುಗ್ಗಿದ ಮರಳು ಮೂಟೆಗಳನ್ನು ನೀರು ಹೊತ್ತು ತಂದು ಅಂಗಳಕ್ಕೆ ಭಾರೀ ನೀರು ನುಗ್ಗಿದೆ.
ಸ್ಥಳಕ್ಕೆ ಧಾವಿಸಿದ ಶಾಸಕ ವಾಸು ನೆರವಿಗೆ ನಿಂತರು. ಅಭಯ ತಂಡದ ಸಿಬ್ಬಂದಿ ಮನೆಗಳಿಗೆ ನುಗ್ಗಿದ್ದ ನೀರನ್ನು ಕುಕ್ಕರಹಳ್ಳಿ ಕೆರೆಗೆ ಹರಿಸಲು ಹುಣಸೂರು ರಸ್ತೆ ಅಗೆದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿದ್ದ ಕಿರು ಸೇತುವೆ ಒಡೆದ ಪರಿಣಾಮ ಹುಣಸೂರು ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಹುಣಸೂರು ರಸ್ತೆ ಹಾಗೂ ವಾಲ್ಮೀಕಿ ರಸ್ತೆಗೆ ಹೊಂದಿಕೊಂಡಂತೆ ಇದ್ದ ನಿವೇಶನದಲ್ಲಿ ಮಹಾರಾಣಿ ಕಾಲೇಜಿನ ನೂತನ ಕಟ್ಟಡ ನಿರ್ಮಿಸುತ್ತಿದ್ದು, ಇದಕ್ಕಾಗಿ ಕುಕ್ಕರಹಳ್ಳಿ ಕೆರೆಗೆ ನೀರು ಹರಿಯಲು ಇದ್ದ ದೊಡ್ಡ ಮೋರಿಯನ್ನು ಮುಚ್ಚಲಾಗಿದೆ. ಇದೇ ಹುಣಸೂರು ರಸ್ತೆ ಬಂದ್ ಆಗಲು ಕಾರಣವಾಗಿದೆ.
ಜತೆಗೆ ಶ್ರೀರಾಂಪುರ 2ನೇ ಹಂತ, ಕುವೆಂಪುನಗರ ವಾಟರ್‌ಟ್ಯಾಂಕ್, ರಾಮಕೃಷ್ಣ ನಗರ ವಾಸು ಬಡಾವಣೆ, ಮಧುವನ ಬಡಾವಣೆ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಜನರು ಪರದಾಡುವಂತಾಯಿತು.
ಮೇಯರ್ ಪರಿಶೀಲನೆ: ಭಾರೀ ಮಳೆಯಿಂದ ನಗರದ ಜನ ಜೀವನ ಅಸ್ತವ್ಯಸ್ತಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ನಗರ ಪ್ರದಕ್ಷಿಣೆ ನಡೆಸಿದ ಮೇಯರ್ ಎಂ.ಜೆ.ರವಿಕುಮಾರ್, ನಗರದ ಹಾರ್ಡಿಂಜ್ ವೃತ್ತ, ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಒಂಟಿಕೊಪ್ಪಲ್, ಚಂದ್ರಕಲಾ ಆಸ್ಪತ್ರೆ, ಹುಣಸೂರು ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ನ್ಯೂ ಕಾಂತರಾಜೇ ಅರಸ್ ರಸ್ತೆ, ಆರ್‌ಟಿಒ ವೃತ್ತ, ಗನ್ ಹೌಸ್, ಮೃಗಾಲಯ ಎದುರಿನ ರಸ್ತೆಗಳ ಪರಿಶೀಲನೆ ನಡೆಸಿದರು.
ಇದೇ ವೇಳೆ ರಸ್ತೆಗಳಲ್ಲಿನ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಅಧಿಕಾರಿಗಳಿಗೆ ತಿಳಿಸಿದರು. ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿ ಬಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅನಾಹುತ ಸಂಭವಿಸುವ ಮುನ್ನ ರಸ್ತೆಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.